Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ತೆಂಗಿನಕಾಯಿ ತುರಿ ಇಲ್ಲದೆಯೂ ತೆಂಗಿನಕಾಯಿ ಚಟ್ನಿ ಮಾಡಿ! ಹೇಗೆ ಅನ್ನೋದು ನಿಮಗೆ ಗೊತ್ತಾ?
ತಿಂಡಿಯೊಂದಿಗೆ ಹಾಗೆ ಊಟದೊಂದಿಗೆ ಒಂದಿಷ್ಟು ಬಗೆ ಬಗೆಯ ಖಾದ್ಯಗಳು ಇದ್ದರೇನೆ ಆ ದಿನದ ಊಟ ತಿಂಡಿಯ ರುಚಿ ದುಪ್ಪಟ್ಟಾಗಿರುತ್ತೆ. ಹಾಗೆ ಚಟ್ನಿ ಅಂದಕೂಡಲೆ ನಿಮಗೆ ಹಲವು ಬಗೆಯ ಚಟ್ನಿಗಳು ನೆನಪಿಗೆ ಬರಬಹುದು. ಅಲ್ಲದೆ ಬೆಳಗ್ಗೆ ತಿಂಡಿ ಸವಿಯಲು ಎಲ್ಲರು ಚಟ್ನಿಯನ್ನು ಮಾಡುವುದು ನಾವೆಲ್ಲಾ ನೋಡಿರುತ್ತೇವೆ. ಊಟದೊಂದಿಗೆ ಕೂಡ ಕೆಲವು ಗಟ್ಟಿ ಚಟ್ನಿಗಳು ಬಹಳ ರುಚಿ ನೀಡಲಿವೆ.
ಇನ್ನು ಸುಲಭವಾಗಿ 2 ನಿಮಿಷದಲ್ಲಿ ಮಾಡಿ ಮುಗಿಸುವ ಚಟ್ನಿ ಅಂದ ತಕ್ಷಣ ಎಲ್ಲರಿಗೂ ತೆಂಗಿನಕಾಯಿ ತುರಿ ಬಳಸಿಕೊಂಡು ಮಾಡವ ಚಟ್ನಿ ಥಟ್ ಅಂತ ನೆನಪಾಗುತ್ತೆ. ಈ ಚಟ್ನಿ ಎಲ್ಲಾ ತಿಂಡಿಯೊಂದಿಗೂ ರುಚಿಕರವಾಗಿರಲಿದೆ. ಹಾಗೆ ಸುಲಭವಾಗಿ ಮಾಡಿ ಮುಗಿಸಬಹುದು. ಇನ್ನು ಸುಲಭದ ಚಟ್ಬಿ ಅಂದ್ರೆ ತೆಂಗಿನಕಾಯಿ ಆದ್ರೆ ನಾವಿಂದು ತೆಂಗಿನಕಾಯಿ ಬಳಸದೆಯೇ ತೆಂಗಿನ ಕಾಯಿ ಚಟ್ನಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಹೌದು ತೆಂಗಿನಕಾಯಿಯನ್ನು ಬಳಸೆಯೇ ಈ ತೆಂಗಿನಕಾಯಿ ಚಟ್ನಿ ಮಾಡಬಹುದು. ತೆಂಗಿನಕಾಯಿ ತುರಿಯನ್ನು ಬಳಸದೆಯೇ ಈ ಸುಲಭದ ಚಟ್ನಿಯನ್ನು ಮಾಡಬಹುದು, ಆದ್ರೆ ಸವಿಯಲು ಇದು ತೆಂಗಿನಕಾಯಿ ಚಟ್ನಿಯ ರುಚಿಯನ್ನೇ ನೀಡಲಿದೆ. ಅಲ್ಲದೆ ತೆಂಗಿನಕಾಯಿ ಇಲ್ಲ ಎಂದು ಬೇರೆ ಚಟ್ನಿ ಮಾಡುವ ಅಗತ್ಯವೂ ಇರುವುದಿಲ್ಲ. ಹಾಗಾದ್ರೆ ಈ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ತೆಂಗಿನಕಾಯಿ ಹಾಕದೆ ಚಟ್ನಿ ಮಾಡಲು ಬೇಕಾಗುವ ವಸ್ತುಗಳು
- ಎಣ್ಣೆ - 2 ಚಮಚ
- ಬೆಳ್ಳುಳ್ಳಿ - 5
- ಜೀರಿಗೆ - 1/2 ಚಮಚ
- ಹಸಿರು ಮೆಣಸಿನಕಾಯಿ - 4
- ಈರುಳ್ಳಿ - 2
- ಹುರಿದ ಬೇಳೆ - 50 ಗ್ರಾಂ
- ಹುಣಿಸೆಹಣ್ಣು
- ರುಚಿಗೆ ತಕ್ಕಷ್ಟು ಉಪ್ಪು
- ಸಾಸಿವೆ
- ಉದ್ದಿನ ಬೇಳೆ - 1/2 ಚಮಚ
- ಕರಿಬೇವು
- ಒಣ ಮೆಣಸು
ತೆಂಗಿನಕಾಯಿ ಹಾಕದೆ ಚಟ್ನಿ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಸಾಸಿವೆ, ಬೆ್ಳುಳ್ಳಿ, ಜೀರಿಗೆ, ಹಸಿ ಮೆಣಸು, ಎರಡು ಈರುಳ್ಳಿ ಕತ್ತರಿಸಿಕೊಂಡು ಇದಕ್ಕೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 2 ನಿಮಿಷ ಫ್ರೈ ಮಾಡಿದ ಬಳಿಕ ಒಲೆ ಆಫ್ ಮಾಡಿಕೊಳ್ಳಿ. ಹಾಗೆ ಎಲ್ಲಾ ಪದಾರ್ಥಗಳು ತಣ್ಣಗಾಗಲು ಬಿಡಿ.
ಎಲ್ಲಾ ವಸ್ತು ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ಗೆ ಈ ವಸ್ತುಗಳ ಹಾಕಿಕೊಂಡು ಬಳಿಕ 1 ಕಪ್ ಹುರಿಗಡಲೆಯನ್ನು ಸಹ ಇದಕ್ಕೆ ಹಾಕಿಕೊಳ್ಳಬೇಕು. ನಂತರ ಒಂದು ಸ್ವಲ್ಪ ಹುಣಸೆ ಹುಳಿ, ಉಪ್ಪು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಹಾಗೆ ಮುಚ್ಚಳ ತೆಗೆದು ಕೊತ್ತಂಬರಿ ಸೊಪ್ಪು ಹಾಕಿಕೊಂಡು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ನೀವಿದ್ಕೆ ಪುದಿನ ಎಲೆಗಳನ್ನು ಸಹ ಹಾಕಿಕೊಳ್ಳಬಹುದು. ನಂತರ ಈ ಚಟ್ನಿಯನ್ನು ಒಂದು ಬೌಲ್ಗೆ ಹಾಕಿಕೊಳ್ಳಿ. ನಂತರ ಇದಕ್ಕೊಂದು ಉದ್ದಿನ ಬೇಳೆ, ಸಾಸಿವೆ, ಕರಿಬೇವು, ಒಣ ಮೆಣಸು ಹಾಕಿರುವ ಒಂದು ಒಗ್ಗರಣೆ ಮಾಡಿ ಹಾಕಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ತೆಂಗಿನಕಾಯಿ ಹಾಕದೆಯೇ ಮಾಡಿರುವ ತೆಂಗಿನಕಾಯಿ ಅಂತಹ ರುಚಿಯ ಚಟ್ನಿ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ.



Click it and Unblock the Notifications
