Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಒಂದು ಚಟ್ನಿ ಹತ್ತಾರು ಪ್ರಯೋಜನ; ಈ ಚಟ್ನಿ ನಿಮ್ಮ ಕೆಲಸ ಕಡಿಮೆ ಮಾಡುತ್ತೆ!
ಊಟ ಹಾಗೆ ತಿಂಡಿಯೊಂದಿಗೆ ಸವಿಯಲು ನೀವು ಯಾವಾಗಲು ಚಟ್ನಿ ಮಾಡೋದು ಸಹಜ. ಹಾಗೆ ಈ ಚಟ್ನಿಯನ್ನು ಒಂದು ದಿನ ಮಾಡಿಟ್ಟು ಹಲವು ದಿನಗಳ ಕಾಲ ಸವಿಯುವುದು ಸಹ ನೋಡಬಹುದು. ಚಟ್ನಿ ಅಂದ್ರೆ ಬಹುತೇಕರಿಗೆ ಇಷ್ಟವಾಗುತ್ತೆ. ಹಾಗೆ ಎಲ್ಲರು ಬಗೆ ಬಗೆಯ ಚಟ್ನಿ ಮಾಡಿ ಸವಿಯುವ ಕುರಿತು ಆಲೋಚಿಸುತ್ತೀರಿ.
ಹಾಗೆ ಹೊಸ ರೀತಿಯ ಚಟ್ನಿಗಳು, ಹೊಸ ಬಗೆಯ ರುಚಿಯ ಚಟ್ನಿ ಅಂದ್ರೆ ಎಲ್ಲರು ಇಷ್ಟಪಟ್ಟು ಸವಿಯೋದು ಖಚಿತ. ಅದ್ರಲ್ಲೂ ತೆಂಗನಕಾಯಿ ಚಟ್ನಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅಲ್ಲದೆ ದೋಸೆ, ಇಡ್ಲಿ ಸೇರಿ ಊಟದೊಂದಿಗೆ ಕೂಡ ಸವಿಯೋದು ನೋಡಬಹುದು. ಇದೊಂದೇ ಚಟ್ನಿಯನ್ನು ಹಲವು ಖಾದ್ಯಗಳೊಂದಿಗೆ ಸವಿಯಬಹುದು.

ಈ ಚಟ್ನಿ ಮಾಡಿದ್ರೆ ಎಲ್ಲಾ ರೀತಿಯ ಖಾದ್ಯಕ್ಕೂ ಸವಿಯಬಹುದು. ಒಂದು ಚಟ್ನಿ ಇದ್ರೆ ಎಲ್ಲಾ ಕೆಲಸಕ್ಕೂ ಬರುತ್ತೆ. ಹಾಗೆ ಎಲ್ಲರು ಸವಿಯಲು ಇಷ್ಟಪಡಬಹುದು. ಹಲವರು ಈ ಚಟ್ನಿ ಮಾಡಿ ಹಲವು ಖಾದ್ಯದೊಂದಿಗೆ ಸವಿಯಲು ಇಷ್ಟಪಡುತ್ತಾರೆ. ಇನ್ನು ಇದನ್ನು ಮಾಡೋದು ಕೂಡ ಬಹಳ ಸುಲಭ. ಹಾಗಾದ್ರೆ ತೆಂಗಿನಕಾಯಿಯಿಂದ ಮಾಡುವ ಈ ವಿಶೇಷ ಚಟ್ನಿ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತೆಂಗಿನಕಾಯಿ ಚಟ್ನಿಗೆ ಬೇಕಾಗುವ ವಸ್ತುಗಳು
- ತೆಂಗಿನಕಾಯಿ - 1 ಕಪ್
- ಟೊಮೆಟೋ - 2
- ಒಣ ಮೆಣಸಿನಕಾಯಿ
- ಕಡಲೆ ಬೀಜ
- ಮೆಂತ್ಯ - 1/4 ಟೀಸ್ಪೂನ್
- ಜೀರಿಗೆ- 1 ಟೀಸ್ಪೂನ್
- ಬೆಳ್ಳುಳ್ಳಿ
- ಹುಣಸೆ ಹುಳಿ
- ಸಾಸಿವೆ - 1/4 ಟೀಸ್ಪೂನ್
- ಇಂಗು
- ಕರಿಬೇವು - 2 ಚಮಚ
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ತೆಂಗಿನಕಾಯಿ ಚಟ್ನಿ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಿ. ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಮೆಂತ್ಯ ಹಾಗೂ ಒಣ ಮೆಣಸು ಹಾಕಿಕೊಂಡು ಫ್ರೈ ಆಗಲು ಬಿಡಿ. ಗುಂಟೂರು ಮೆಣಸು ಹಾಗೆ ಬ್ಯಾಡಗಿ ಮೆಣಸು ಎರಡನ್ನು ಒಟ್ಟಿಗೆ ಬಳಸಿಕೊಳ್ಳಿ. ಈಗ 2 ಕಪ್ ತೆಂಗಿನಕಾಯಿ ಇದಕ್ಕೆ ಹಾಕಿಕೊಳ್ಳಿ.
ತೆಂಗಿನಕಾಯಿ ಸಣ್ಣ ಸಣ್ಣದಾಗಿ ಕತ್ತರಿಸಿಕೊಂಡು ಇದಕ್ಕೆ ಹಾಕಿಕೊಳ್ಳಬೇಕು. ಹಾಗೆ ನೆಲ್ಲಿಕಾಯಿ ಗಾತ್ರದಲ್ಲಿ ಹುಣಸೆ ಹುಳಿ ಹಾಗೆ 2 ಟೊಮೆಟೋ ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಬೇಕು.
ಈಗ ಸ್ವಲ್ಪ ಜೀರಿಗೆ ಹಾಗೂ ಬೆಳ್ಳುಳ್ಳಿ ಸಹ ಹಾಕಿಕೊಂಡು ಮತ್ತೆ ಫ್ರೈ ಆಗಲು ಬಿಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಂಡು 1 ಅಥವಾ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಈಗ ಕೊನೆಯಲ್ಲಿ ಇದಕ್ಕೆ ಕಡಲೆ ಬೀಜವನ್ನು ಹಾಕಿಕೊಳ್ಳಿ. ಕಡಲೆ ಬೀಜವನ್ನು ಮೊದಲೇ ಬಾಣಲೆಯಲ್ಲಿ ಹಾಕಿ ಹುರಿದು ಇಟ್ಟುಕೊಂಡಿಬೇಕು.
ಈಗ ಚೆನ್ನಾಗಿ ಹುರಿದುಕೊಂಡು ಒಲೆ ಆಫ್ ಮಾಡಿ ಇಳಿಸಿಕೊಂಡು ತಣ್ಣಗಾಗಲು ಬಿಡಬೇಕು. ಈ ಎಲ್ಲಾ ವಸ್ತುಗಳು ತಣ್ಣಗಾದ ಬಳಿಕ ಮಿಕ್ಸಿ ಜಾರ್‌ಗೆ ಈ ಎಲ್ಲಾ ವಸ್ತುಗಳನ್ನು ಹಾಕಿಕೊಂಡು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ತೆಳುವಾಗಿ ಅಥವಾ ಬಹಳ ದಪ್ಪವಾಗಿಯೂ ರುಬ್ಬಿಕೊಳ್ಳಬೇಡಿ. ಮಧ್ಯಮ ರೀತಿಯಲ್ಲಿ ರುಬ್ಬಿಕೊಂಡು ಕೊನೆಯಲ್ಲಿ ಒಣ ಮೆಣಸು, ಕರಿವೇವು, ಸಾಸಿವೆ ಹಾಕಿ ಸಣ್ಣ ಒಗ್ಗರಣೆ ಹಾಕಿಕೊಂಡರೆ ನಿಮ್ಮ ಮುಂದೆ ಚಟ್ನಿ ಸಿದ್ದವಾಗುತ್ತೆ.
ಈ ಚಟ್ನಿಯನ್ನು ಊಟದೊಂದಿಗೆ, ಎಲ್ಲಾ ತಿಂಡಿಯೊಂದಿಗೂ ಸವಿಯಬಹುದು. ಯಾವುದೇ ಸ್ನ್ಯಾಕ್ಸ್ ಕೂಡ ಮಾಡಿದ್ರೂ ಈ ಚಟ್ನಿಯೊಂದಿಗೆ ಸವಿಯಬಹುದು. ನೀವು ಸಹ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
