Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಚಕಡಿ ಕಾಯಿ ಬೇಳೆ ಸಾರು ಮಾಡೋದು ಹೇಗೆ? ಅದೆಷ್ಟು ರುಚಿ ಇರುತ್ತೆ ಗೊತ್ತಾ?
ಊಟದ ಜೊತೆಗೆ ಸವಿಯಲು ನಾವು ಹಲವು ಬಗೆಯ ಪಲ್ಯ ಮಾಡುತ್ತೇವೆ. ಆದ್ರೆ ಪಲ್ಯ ಒಂದೇ ಇದ್ದರೆ ಸಾಲಲ್ಲ. ಇದಕ್ಕೆ ರುಚಿ ರುಚಿಯ ಸಾರು ಇರಬೇಕಾಗುತ್ತೆ. ಹಾಗೆ ಈ ಸಾರಿನ ಜೊತೆಗೆ ಊಟ ಸವಿಯಲು ಚಟ್ನಿ, ಬೋಂಡಾ, ಬಜ್ಜಿ, ಹಪ್ಪಳ ಹೀಗೆ ಯಾವುದಾದರೊಂದು ಖಾದ್ಯ ಮಾಡುತ್ತಾರೆ, ಇನ್ನು ಪಲ್ಯಗಳಲ್ಲಿ ಊಟದ ಜೊತೆಗೆ ಸವಿಯಲು ಚಕ್ಕಡಿ ಕಾಯಿ ಆಥವಾ ಗೋರಿಕಾಯಿ ಪಲ್ಯ ಸವಿದಿರುತ್ತೀರಿ.
ಚಕಡಿ ಕಾಯಿಯ ಸಾರು ಮಾಡಿದರೆ ಊಟಕ್ಕೆ ಒಳ್ಳೆಯ ರುಚಿ ನೀಡಲಿದೆ. ನೀವು ಈ ಗೋರಿಕಾಯಿ ಪಲ್ಯ ಇಷ್ಟಪಡುವವರಾಗಿದ್ದರೆ ಅದರ ಸಾರು ಕೂಡ ಇಷ್ಟವಾಗುತ್ತದೆ. ಹಾಗೆ ಈ ಚಕ್ಕಡಿ ಕಾಯಿ ಆರೋಗ್ಯಕ್ಕೂ ಬಹಳ ಒಳ್ಳೆಯದು. ಇದನ್ನು ಚೌಳಿಕಾಯಿ ಅಂತಲೂ ಕರೆಯುತ್ತಾರೆ. ಇದರಲ್ಲಿ ಅತ್ಯುತ್ತಮ ಫೈಬರ್ ಅಂಶ ಇರುವ ಕಾರಣ ಇದು ನಮ್ಮ ಜೀರ್ಣಕ್ರಿಯೆಗೆ ಅತ್ಯುತ್ತಮ ತರಕಾರಿಯಾಗಿದೆ.

ಗೋರಿಯಲ್ಲಿರುವ ಫಾಸ್ಪರಸ್ ಮತ್ತು ಕ್ಯಾಲ್ಸಿಯಂ ನಮ್ಮ ಮೂಲೆಗಳ ಬೆಳವಣಿಗೆಗೆ ಹಾಗೂ ಆರೋಗ್ಯಕ್ಕೆ ಬಹಳ ಉತ್ತಮ. ಗೋರಿಕಾಯಿಯಲ್ಲಿ ಫೈಬರ್, ಪೊಟ್ಯಾಷಿಯಂ, ಫೋಲೇಟ್ ಹೆಚ್ಚಾಗಿರುವ ಕಾರಣ ಇದು ನಮ್ಮ ಹೃದಯ ಸಂಬಂಧಿ ಆರೋಗ್ಯ ಕಾಪಾಡಲು ಕೂಡ ಸಹಕಾರಿಯಾಗಿದೆ. ಹಾಗಾದ್ರೆ ಇಷ್ಟೊಂದು ಉಪಯುಕ್ತವಾದ ಈ ಗೋರಿಕಾಯಿ ಸಾರು ಮಾಡುವ ಕುರಿತು ಇಂದು ತಿಳಿದುಕೊಳ್ಳೋಣ.
ಗೋರಿಕಾಯಿ ಸಾರು ಮಾಡುವುದು ಹೇಗೆ? ಈ ಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗೋರಿಕಾಯಿ ಬೇಳೆ ಸಾರು ಮಾಡಲು ಬೇಕಾಗುವ ಪದಾರ್ಥಗಳು
- ತೊಗರಿ ಬೇಳೆ
- ಗೋರಿಕಾಯಿ
- ಬೆಳ್ಳುಳ್ಳಿ
- ಈರುಳ್ಳಿ
- ಟೊಮೆಟೋ
- ಕರಿಬೇವು
- ಕೊತ್ತಂಬರಿ ಸೊಪ್ಪು
- ಸಾಸಿವೆ
- ಜೀರಿಗೆ
- ಎಣ್ಣೆ
- ಉಪ್ಪು
- ಖಾರದ ಪುಡಿ
- ಗರಂ ಮಸಾಲೆ
- ಸಾಂಬಾರ್ ಪುಡಿ
- ಧನಿಯಾ ಪುಡಿ
ಗೋರಿಕಾಯಿ ಸಾರು ಮಾಡುವ ವಿಧಾನ
ಮೊದಲು ಒಂದು ಕುಕ್ಕರ್‌ಗೆ ತೊಗರಿ ಬೇಳೆಯನ್ನು ತೊಳೆದು ಅದಕ್ಕೆ ಹಾಕಿ ಸ್ವಲ್ಪ ಅರಶಿಣ, ಎಣ್ಣೆ ಹಾಕಿ ಮೂರು ಸೀಟಿ ಹೊಡೆಸಿ ಬದಿಗಿಟ್ಟುಕೊಳ್ಳಿ. ಈಗ ಬಾಣಲೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಎಣ್ಣೆಗೆ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಕರಿಬೇವು ಹಾಕಿ ಮಿಕ್ಸ್ ಮಾಡಿಕೊಳ್ಳಿ. 1 ನಿಮಿಷ ಬಿಟ್ಟು ಇದಕ್ಕೆ ಈರುಳ್ಳಿ ಹಾಕಿ ಮತ್ತೊಂದು ನಿಮಿಷ ಫ್ರೈ ಮಾಡಿ. ಅನಂತರ ಇದಕ್ಕೆ ಸಣ್ಣದಾಗಿ ಹೆಚ್ಚಿರುವ ಟೊಮೆಟೋ ಹಾಗೂ ಸಣ್ಣದಾಗಿ ಬೀನ್ಸ್ ಸಾಂಬಾರ್‌ಗೆ ಹೆಚ್ಚಿರುವಂತೆ ಗೋರಿಕಾಯಿ ಹೆಚ್ಚಿಕೊಂಡು ಇದಕ್ಕೆ ಹಾಕಿ ಮಿಕ್ಸ್ ಮಾಡಿ.
ಹಾಗೆ ಬೇಯಿಸಿಕೊಳ್ಳುತ್ತಾ ಇದಕ್ಕೆ ಅರಶಿಣ, ಖಾರದ ಪುಡಿ, ಧನಿಯಾ ಪುಡಿ, ಸಾಂಬಾರ್ ಪುಡಿ, ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ 1 ಗ್ಲಾಸ್ ನೀರು ಹಾಕಿ 3 ನಿಮಿಷ ಬೇಯಿಸಿಕೊಳ್ಳಿ. ಈಗ ಕುಕ್ಕರ್‌ನಲ್ಲಿ ಬೇಯಿಸಿರುವ ತೊಗರಿ ಬೇಳೆಯನ್ನು ಇದಕ್ಕೆ ಹಾಕಿ ಸೇರಿಸಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಮುಚ್ಚಳ ಮುಚ್ಚಿ ಮತ್ತೆ 3 ನಿಮಿಷ ಬೇಯಿಸಿಕೊಳ್ಳಿ. ಈಗ ಕೊನೆಯದಾಗಿ ತೆಂಗಿನಕಾಯಿ ತುರಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಗೋರಿಕಾಯಿ ಬೇಳೆ ಸಾರು ರೆಡಿಯಾಗುತ್ತದೆ, ನೀವು ಕೂಡ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications
