Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ತೆಂಗಿನಕಾಯಿ ಹಾಕದೆ ಬೊಂಬಾಟ್ ರುಚಿಯ ಚಟ್ನಿ ಮಾಡಿ..! 10 ನಿಮಿಷದಲ್ಲಿ ರೆಡಿ!
ಬೆಳಗ್ಗೆ ತಿಂಡಿಗೆ ನೀವು ದೋಸೆ, ಇಡ್ಲಿ ಸೇರಿ ಯಾವುದೇ ಖಾದ್ಯ ಮಾಡಿದರೂ ಅದರನ್ನು ಸವಿಯಲು ಒಂದು ಚಟ್ನಿ ಇರಬೇಕು. ತಿಂಡಿಗೆ ಚಟ್ನಿ ಇದ್ದರೇನೇ ಅದರ ರುಚಿ ಹೆಚ್ಚಾಗುವುದು. ಹಾಗೆ ಈ ಚಟ್ನಿ ಯಾವುದರಿಂದ ಮಾಡಬೇಕು ಅನ್ನೋದು ಹಲವರ ಪ್ರಶ್ನೆಯಾಗಿರುತ್ತೆ. ಯಾಕಂದ್ರ ಯಾವ ತಿಂಡಿಗೆ ಯಾವ ಚಟ್ನಿ ಮಾಡಬೇಕು? ಯಾವುದನ್ನು ಮಾಡಿದರೆ ಸೂಟ್ ಆಗುತ್ತೆ ಅನ್ನೋದು ಸಹ ದೊಡ್ಡ ಸವಾಲು.
ಆದರೆ ಬಹುತೇಕರ ಮನೆಯಲ್ಲಿ ತೆಂಗಿನ ಕಾಯಿಯಿಂದ ಮಾಡುವ ಚಟ್ನಿ ಕಾಮನ್. ಆದ್ಚರೆ ಕಾಯಿಯನ್ನೇ ಬಳಸದೆ ರುಚಿಕರವಾದ ಚಟ್ನಿಯನ್ನ ಮಾಡಬಹುದು. ಹೌದು ಕಾಯಿ ಬಳಸದೆಯೇ ಅದ್ಭುತ ರುಚಿಯ ಕೊತ್ತಂಬರಿ ಸೊಪ್ಪಿನ ಚಟ್ನಿ ಮಾಡಬಹುದು, ಈ ಚಟ್ನಿಯನ್ನ ದೋಸೆ ಮತ್ತು ಇಡ್ಲಿ ಸೇರಿ ಯಾವುದೇ ಖಾದ್ಯದ ಜೊತೆ ಸವಿಯಲು ನೀಡಿದರೆ ಅದರ ರುಚಿ ಬೊಂಬಾಟ್ ಆಗಿರುತ್ತೆ.

ಹಾಗಾದ್ರೆ ನಾವಿಂದು ಕಾಯಿ ಬಳಸದೆ ಕೊತ್ತಂಬರಿ ಸೊಪ್ಪಿನ ಸೂಪರ್ ಚಟ್ನಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಕೊತ್ತಂಬರಿ ಸುಪ್ಪಿನ ಚಟ್ನಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಈ ಚಟ್ನಿ ಮಾಡುವ ವಿಧಾನವೇನು? ಮಾಡುವ ಸರಿಯಾದ ಕ್ರಮವೇನು ಎಂಬುದನ್ನು ನಾವಿಂದು ತಿಳಿಯೋಣ.
ಕೊತ್ತಂಬರಿ ಸೊಪ್ಪಿನ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ತುಪ್ಪ - 2 ಚಮಚ
- ಉದ್ದಿನ ಬೇಳೆ - 2 ಟೀಸ್ಪೂನ್
- ಕಡಲೆ - 1 tbsp
- ಮೆಣಸು - 3
- ಬೆಳ್ಳುಳ್ಳಿ
- ದೊಡ್ಡ ಈರುಳ್ಳಿ - 2
- ಹಸಿರು ಮೆಣಸಿನಕಾಯಿ - 1
- ಉಪ್ಪು
- ಇಂಗು
- ಹುಣಸೆಹಣ್ಣು
- ಕಡಲೆಕಾಯಿ
- ಕೊತ್ತಂಬರಿ ಸೊಪ್ಪು
- ಸಾಸಿವೆ
- ಕರಿಬೇವು
ಕೊತ್ತಂಬರಿ ಸೊಪ್ಪಿನ ಚಟ್ನಿ ಮಾಡುವ ವಿಧಾನ
ಮೊದಲು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದರಲ್ಲಿ ತುಪ್ಪ ಹಾಕಿ ಬಿಸಿಯಾದಾಗ ಉದ್ದಿನಬೇಳೆ ಮತ್ತು ಕಡಲೆ ಬೇಳೆಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಅದಕ್ಕೆ ಒಣಮೆಣಸು, ಬೆಳ್ಳುಳ್ಳಿ, ಈರುಳ್ಳಿ, ಹಸಿರು ಮೆಣಸು, ಸ್ವಲ್ಲ ಉಪ್ಪು ಹಾಕಿ ಹುರಿಯಿರಿ. 2 ನಿಮಿಷ ಹುರಿದ ಬಳಿಕ ಇಂಗು, ಹುಣಸೆ ಹುಳಿ, ಕಡಲೆ ಹಾಕಿಕೊಂಡು ಮತ್ತೆ ಫ್ರೈ ಮಾಡಿ. ಇದಕ್ಕೆ ಕೊತ್ತಂಬರಿ ಸೊಪ್ಪು ಸೇರಿಸಿ ಒಲೆ ಆಫ್ ಮಾಡಿ.
ನಂತರ ಈ ಮಸಾಲೆಗಳು ತಣ್ಣಗಾಗಲು ಇಡಿ. ಈ ಮಸಾಲೆಗಳು ತಣ್ಣಗಾದ ಬಳಿಕ ಇದನ್ನು ಒಂದು ಮಿಕ್ಸಿ ಜಾರ್ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬಿಕೊಳ್ಳುವ ವೇಳೆ ಸ್ವಲ್ಪ ಸ್ವಲ್ಪ ನೀರನ್ನು ಹಾಕಿಕೊಳ್ಳುತ್ತಾ ನುಣ್ಣಗೆ ರುಬ್ಬಿಕೊಳ್ಳಿ. ನಂತರ ರುಬ್ಬಿದ ಚಟ್ನಿಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದಕ್ಕೆ ಬೇಕಾದಷ್ಟು ನೀರು ಹಾಕಿ ಮಿಕ್ಸ್ ಮಾಡಿ.
ಕೊನೆಗೆ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ, ಈರುಳ್ಳಿ, ಜೀರಿಗೆ, ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಿಕೊಂಡು ಅದನ್ನು ಚಟ್ನಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಈ ಕೊತ್ತಂಬರಿ ಚಟ್ನಿ ರೆಡಿಯಾಗುತ್ತದೆ. ಇದನ್ನು ಸುಲಭವಾಗಿ ಮನೆಯಲ್ಲಿ ಕಡಿಮೆ ಸಮಯದಲ್ಲಿ ಮಾಡಬಹುದು. ಇದಕ್ಕೆ ಕಾಯಿ ಹಾಕುವ ಅಗತ್ಯವಿರುವುದಿಲ್ಲ. ನೀವು ಸಹ ಒಮ್ಮೆ ಈ ಚಟ್ನಿಯನ್ನು ಮನೆಯಲ್ಲೇ ಮಾಡಿ ನೋಡಿ.
ಇನ್ನು ಈ ಚಟ್ನಿ ಮಾಡುವಾಗ ಕೊತ್ತಂಬರಿ ಸೊಪ್ಪಿನ ಬದಲು ಪುದಿನ ಸೊಪ್ಪನ್ನು ಮಿಕ್ಸಿಗೆ ಹಾಕಿ ರುಬ್ಬಿದರೆ ಅದು ಪುದಿನ ಚಟ್ನಿಯಾಗಲಿದೆ. ಆದರೆ ಪುದಿನ ಚಟ್ನಿ ಮಾಡುವಾಗ ಬೇರೆ ವಸ್ತುಗಳನ್ನು ಸಹ ಸೇರಿಸಲಾಗುತ್ತದೆ.



Click it and Unblock the Notifications
