Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಒಂದೇ ಒಂದು ಟೊಮೆಟೋ ಇಲ್ಲದೆ ಈ ಚಟ್ನಿ ಮಾಡಿ..! ಸಿಕ್ಕಾಪಟ್ಟೆ ರುಚಿ..!
ಚಟ್ನಿಯು ಬಹುತೇಕ ಎಲ್ಲಾ ಬಗೆಯ ತಿಂಡಿ ತಿನಿಸುಗಳ ಜೊತೆಯಲ್ಲಿ ಸೇವಿಸಬಹುದಾದ ಖಾದ್ಯವಾಗಿರುತ್ತದೆ. ಭಾರತೀಯ ಚಟ್ನಿಯು ಸಿಹಿ, ಹುಳಿ ಮತ್ತು ಮಸಾಲೆಗಳಿಂದ ಕೂಡಿದ್ದು, ತನ್ನ ವಿಭಿನ್ನ ಶೈಲಿಯ ರುಚಿಗಳ ಮೂಲಕ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಜನರು ಚಟ್ನಿಯನ್ನು ರೋಟಿ, ಅನ್ನ, ಚಾಟ್ ಮತ್ತು ಬಜ್ಜಿ, ವಡೆ ಮುಂತಾದವುಗಳ ಜೊತೆಯಲ್ಲಿ ಸೇವಿಸುತ್ತಾರೆ. ಚಟ್ನಿಯ ಮತ್ತೊಂದು ವಿಶೇಷತೆಯೇನೆಂದರೆ ಇದನ್ನು ಕೆಲವೇ ಕೆಲವು ನಿಮಿಷಗಳಲ್ಲಿ ತಯಾರಿಸಬಹುದು.
ಆದ್ರೆ ನೀವು ಎಂದಾದ್ರು ಟೊಮೆಟೋ ಬಳಸದೆಯೇ ಚಟ್ನಿ ಮಾಡಿದ್ದೀರಾ? ಹೌದು ಒಂದೇ ಒಂದು ಚೂರು ಟೊಮೆಟೋ ಬಳಸದೆ ರುಚಿ ರುಚಿಯ ಚಟ್ನಿ ಮಾಡಬಹುದು.

ಹೆಚ್ಚಾಗಿ ಸಾಂಬಾರ್ ಮತ್ತು ಪಲ್ಯದೊಂದಿಗೆ ನಾವು ಅನ್ನ, ಚಪಾತಿ, ದೋಸೆಯನ್ನು ಸೇವಿಸುತ್ತೇವೆ. ಇಲ್ಲಿ ಸೈಡ್ ಡಿಶ್ ನಮಗೆ ಮೇನ್ ಡಿಶ್ನೊಂದಿಗೆ ಮುಖ್ಯವಾಗಿರುತ್ತದೆ. ಇಂದಿನ ಲೇಖನದಲ್ಲಿ ದೋಸೆ ಮತ್ತು ಚಪಾತಿಯೊಂದಿಗೆ ನೀವು ಸೇವಿಸಬಹುದಾದ ಟೊಮೆಟೋ ಹಾಕದೆ ಮಾಡುವ ಚಟ್ನಿ ಕುರಿತು ತಿಳಿಯೋಣ
ಈ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಈ ಚಟ್ನಿಯ ಪಾಕ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ನೋಡೋಣ.
ಟೊಮೆಟೋ ಬಳಸದೆ ಮಾಡುವ ಚಟ್ನಿಗೆ ಯಾವೆಲ್ಲಾ ಪದಾರ್ಥಗಳು ಬೇಕು
- ಒಣ ಮೆಣಸಿನಕಾಯಿ - 3
- ಈರುಳ್ಳಿ -2
- ಜೀರಿಗೆ - 1 ಟೀಸ್ಪೂನ್
- ಬೆಳ್ಳುಳ್ಳಿ - 10 ಪೀಸ್
- ಹುಣಸೆ ಹುಳಿ - 1 ಟೀಸ್ಪೂನ್
- ತೆಂಗಿನಕಾಯಿ - 2 tbs
- ಕೊತ್ತಂಬರಿ ಸೊಪ್ಪು - 2 tbs
- ಖಾರದ ಪುಡಿ- 2 ಟೀಸ್ಪೂನ್
- ಸಾಸಿವೆ - 1/2 ಟೀಸ್ಪೂನ್
- ಇಂಗು - 1/4 ಟೀಸ್ಪೂನ್
- ಕರಿಬೇವಿನ ಎಲೆಗಳು - 2 tbs
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಟೊಮೆಟೋ ಇಲ್ಲದೆ ಚಟ್ನಿ ಮಾಡುವ ವಿಧಾನ
ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಒಣ ಮೆಣಸನ್ನು ಹಾಕಿಕೊಳ್ಳಿ. ಇದಕ್ಕೆ ಈರುಳ್ಳಿ ಹಾಕಿ, ಜೀರಿಗೆ, ಬೆಳ್ಳುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 2 ನಿಮಿಷದ ಬಳಿಕ ಹುಣಸೆಹುಳಿ ಹಾಕಿ ಜೊತೆಗೆ ತೆಂಗಿನ ಕಾಯಿ ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ.
ಈಗ ಒಲೆ ಆಫ್ ಮಾಡಿ ಖಾರದ ಪುಡಿ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಮಿಶ್ರಣ ಮಾಡಿಕೊಂಡ ಬಳಿಕ ಈ ಮಸಾಲೆ ತಣ್ಣಗಾಗಲು ಬಿಡಿ. ಮಸಾಲೆ ಸಂಪೂರ್ಣ ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಎಲ್ಲಾ ಪದಾರ್ಥಗಳ ಹಾಕಿಕೊಂಡು ರುಬ್ಬಿಕೊಳ್ಳಿ.
ರುಬ್ಬುವಾಗ ಸ್ವಲ್ಪವೇ ನೀರನ್ನು ಹಾಕಿಕೊಂಡು ದಪ್ಪವಾಗಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಚಟ್ನಿಯನ್ನು ಒಂದು ಬೌಲ್ಗೆ ಹಾಕಿಕೊಂಡು ಬದಿಗಿಟ್ಟುಕೊಳ್ಳಿ.
ಈಗ ಚಟ್ನಿಗೆ ಒಗ್ಗರಣೆ ಮಾಡಿಕೊಳ್ಳಿ
ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಇಂಗು ಹಾಕಿಕೊಳ್ಳಿ, ಬಳಿಕ ಇದಕ್ಕೆ ಕರಿಬೇವಿನ ಸೊಪ್ಪು ಹಾಕಿ 1 ನಿಮಿಷ ಪ್ರೈ ಮಾಡಿಕೊಳ್ಳಿ. ಬಳಿಕ ಈ ಒಗ್ಗರಣೆಯನ್ನು ಬೌಲ್ನಲ್ಲಿರುವ ಚಟ್ನಿಗೆ ಹಾಕಿ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಚಟ್ನಿ ರೆಡಿ.
ಇದಕ್ಕೆ ಟೊಮೆಟೋ ಹಾಕದೇ ಇರುವುದರಿಂದ ಈ ಚಟ್ನಿ ತುಂಬಾನೆ ರುಚಿ ನೀಡುತ್ತದೆ. ಇದನ್ನು ಚಪಾತಿ, ದೋಸೆ, ಇಡ್ಲಿ ಸೇರಿ ಎಲ್ಲಾ ರೀತಿಯ ರೈಸ್ ಖಾದ್ಯಗಳ ಜೊತೆ ಸವಿಯಬಹುದು. ಈ ಚಟ್ನಿಯನ್ನು ಬಹಳ ಸಮಯ ಇಟ್ಟು ಸವಿಯಬಹುದು.



Click it and Unblock the Notifications
