Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ವಾರಕ್ಕೆ ಬೇಕಾಗುವಷ್ಟು ಚಟ್ನಿ ಒಂದೇ ಬಾರಿಗೆ! ಈ ಚಟ್ನಿ ಒಮ್ಮೆ ಮಾಡಿದ್ರೆ ಸಾಕು!
ಊಟದೊಂದಿಗೆ ಹಾಗೆ ತಿಂಡಿಯೊಂದಿಗೆ ಯಾವುದಾದರು ಚಟ್ನಿ ಇದ್ದರೆ ಬೆಳಗ್ಗೆ ತಿಂಡಿ ಹಾಗೆ ಮಧ್ಯಾಹ್ನದ ಊಟಕ್ಕೂ ಅದ್ಭುತ ರುಚಿ ನೀಡಲಿದೆ. ಹಾಗೆ ನಿತ್ಯ ಚಟ್ನಿ ಮಾಡುವುದು ಅಂದ್ರೆ ಕೆಲಸದ ಜೊತೆಗೆ ಮತ್ತೊಂದು ಹೊಸ ಕೆಲಸದಂತೆ ಹೀಗಾಗಿ ಎಲ್ಲರೂ ನಿತ್ಯ ಚಟ್ನಿ ಮಾಡೋದು ಅಂದ್ರೆ ದೊಡ್ಡ ಕೆಲಸದಂತೆ.
ಆದ್ರೆ ನಾವಿಂದು ಒಮ್ಮೆ ಮಾಡಿದ್ರೆ ವಾರಗಳ ಕಾಲ ಸವಿಯಲು ಬಳಸಬಹುದಾದ ಚಟ್ನಿ ಮಾಡುವ ಕುರಿತು ತಿಳಿಯೋಣ. ಈ ಚಟ್ನಿಯನ್ನು ನೀವು ಒಮ್ಮೆ ಮಾಡಿದ್ರೆ ಒಂದು ವಾರಗಳ ಕಾಲ ತಿಂಡಿಗೆ ಹಾಗೆ ಊಟದೊಂದಿಗೆ ಸವಿಯಬಹುದು. ಇದು ಬೆಂಡೆಕಾಯಿಯಿಂದ ಮಾಡುವ ಚಟ್ನಿಯಾಗಿದೆ. ಬೆಂಡೆಕಾಯಿಯಿಂದ ಹಲವು ರೀತಿಯ ಖಾದ್ಯ ಕೂಡ ನೀವು ಮಾಡಿ ಸವಿಯಬಹುದು.

ಬೆಂಡೆಕಾಯಿ ಪಲ್ಯ, ಬೆಂಡೆಕಾಯಿ ಗ್ರೇವಿ, ಬೆಂಡೆಕಾಯಿ ಸಾಂಬಾರ್, ಬೆಂಡೆಕಾಯಿ ಮಸಾಲ ಫ್ರೈ ಯಂತಹ ಖಾದ್ಯಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಬೆಂಡೆಕಾಯಿಯಿಂದ ಮಾಡುವಂತಹ ರುಚಿ ರುಚಿಯ ಚಟ್ನಿ ಸಹ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ನಾವಿಂದು ಈ ಬೆಂಡೆಕಾಯಿ ಚಟ್ನಿ ಮಾಡುವ ಕುರಿತು ತಿಳಿದುಕೊಳ್ಳೋಣ.
ಬೆಂಡೆಕಾಯಿ ಚಟ್ನಿ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ತಿಳಿದುಕೊಳ್ಳಿ.
ಬೆಂಡೆಕಾಯಿ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಬೆಂಡೆಕಾಯಿ
- ಕರಿಬೇವು
- ಅರಶಿಣ ಪುಡಿ
- ಒಣ ಮೆಣಸು
- ಕೊತ್ತಂಬರಿ ಪುಡಿ
- ಕರಿಬೇವಿನ ಸೊಪ್ಪು
- ಜೀರಿಗೆ
- ಈರುಳ್ಳಿ
- ಟೊಮೆಟೋ
- ಬೆಳ್ಳುಳ್ಳಿ
ಬೆಂಡೆಕಾಯಿ ಚಟ್ನಿ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಕೊತ್ತಂಬರಿ ಕಾಳು, ಒಣ ಮೆಣಸು, ಕರಿಬೇವಿನ ಸೊಪ್ಪು, ಜೀರಿಗೆ, ಬೆಳ್ಳುಳ್ಳಿ ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಬೇಕು. ಹೀಗೆ ಹುರಿದುಕೊಂಡ ಬಳಿಕ ಇದನ್ನು ತೆಗೆದು ಒಂದು ಪ್ಲೇಟ್ಗೆ ಹಾಕಿ ತಣ್ಣಗಾಗಲು ಬಿಡಿ. ಈಗ ಮತ್ತೆ ಅದೇ ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಬೆಂಡೆಕಾಯಿ ಹಾಕಿಕೊಳ್ಳಿ. ಬೆಂಡೆಕಾಯಿಯನ್ನು ತೊಳೆದು ಬಟ್ಟೆಯಿಂದ ಒರೆಸಿಕೊಂಡು ಕತ್ತರಿಸಿ ಇಟ್ಟುಕೊಂಡಿರಬೇಕು.
ಈ ಬೆಂಡೆಕಾಯಿ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಚೆನ್ನಾಗಿ 2 ನಿಮಿಷಗಳ ಕಾಲ ಹುರಿಯಬೇಕು. ಈಗ 2 ಟೊಮೆಟೋ ಚೆನ್ನಾಗಿ ಕತ್ತರಿಸಿ ಇದಕ್ಕೆ ಹಾಕಿ ಉಪ್ಪು ಸಹ ಹಾಕಿಕೊಂಡು, ಅರಶಿಣ ಪುಡಿ ಸೇರಿಸಿ ಮತ್ತೆ 3ರಿಂದ 4 ನಿಮಿಷ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಈಗ ಗ್ಯಾಸ್ ಆಫ್ ಮಾಡಿ ಇದೆಲ್ಲಾ ತಣ್ಣಗಾಗಲು ಬಿಡಿ.
ತಣ್ಣಗಾದ ಬಳಿಕ ಹುರಿದುಕೊಂಡಿದ್ದ ಎಲ್ಲಾ ವಸ್ತುಗಳನ್ನು ಒಂದು ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ. ಹಾಗೆ ಪುಡಿ ಮಾಡಿಕೊಂಡು ಅನಂತರ ಇದಕ್ಕೆ ಹುರಿದುಕೊಂಡ ಬೆಂಡೆಕಾಯಿಯನ್ನು ಹಾಕಿಕೊಳ್ಳಿ. ನೀರು ಹಾಕದೆ ರುಬ್ಬಿಕೊಂಡು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ಇಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಒಗ್ಗರಣೆ ಹಾಕಿಕೊಳ್ಳಿ.
ಇಲ್ಲವೆ ಒಗ್ಗರಣೆ ಇಲ್ಲದೆಯೂ ಸವಿಯಬಹುದು. ಇದಕ್ಕೆ ಸಣ್ಣದಾಗಿ ಹೆಚ್ಚಿದ ಈರುಳ್ಳಿಯನ್ನು ಮೇಲೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಒಗ್ಗರಣೆ ಹಾಕಿದರೆ ಮತ್ತೂ ರುಚಿ ಹೆಚ್ಚಾಗಲಿದೆ. ಇದನ್ನು ನೀವು ವಾರದ ವರೆಗೂ ಇಟ್ಟು ಸವಿಯಬಹುದು. ಬಹುಬೇಗ ಹಾಳಾಗುವುದಿಲ್ಲ. ನೀವು ಕೂಡ ಮನೆಯಲ್ಲಿ ಈ ಚಟ್ನಿಯನ್ನು ಒಮ್ಮೆಯಾದರು ಟ್ರೈ ಮಾಡಿ ನೋಡಿ. ವಾರ್ ಪೂರ್ತಿ ಸವಿದರು ನಿಮಗೆ ಬೇಸರ ಅನಿಸೋದಿಲ್ಲ.



Click it and Unblock the Notifications
