Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ತಿಂಡಿ ಊಟಕ್ಕೆ ರುಚಿಯಾದ ಖಾದ್ಯ 3 ನಿಮಿಷಕ್ಕೆ ರೆಡಿ ಮಾಡಿ; ಇಲ್ಲಿದೆ ಚೋಲೆ ಮಸಾಲ ರೆಸಿಪಿ
ಬೆಳಗ್ಗೆ ತಿಂಡಿಗೆ ನೀವು ಪೂರಿ, ಚಪಾತಿ ಮಾಡಿದ್ದರೆ ಆ ವೇಳೆ ಅದರ ಜೊತೆಗೆ ಹಲವು ರೀತಿಯ ಖಾದ್ಯಗಳು ಮಾಡಿಯೇ ಮಾಡುತ್ತೀರಿ. ಹಾಗೆ ಊಟದೊಂದಿಗೆ ಸವಿಯಲು ಸಾಂಬಾರ್ ಇದ್ದರೆ ಅದರ ಜೊತೆಗೆ ಯಾವುದಾದರು ಖಾದ್ಯ ಇರಲೇಬೇಕು. ಅದ್ರಲ್ಲೂ ಪೂರಿಯೊಂದಿಗೆ ಸವಿಯೋಕೆ ಚನ್ನಾ ಮಸಾಲ ಬಹಳ ರುಚಿ ನೀಡಲಿದೆ. ಅದ್ರಲ್ಲೂ ಹೋಟೆಲ್ ರೆಸ್ಟೋರೆಂಟ್ ರುಚಿಯಲ್ಲಿ ನೀಡುವಂತಹ ಚನ್ನಾ ಮಸಾಲ ಬಹಳ ರುಚಿಕರ ಆಗಿರಲಿದೆ.
ಹಾಗೆ ಈ ಚನ್ನಾ ಮಸಾಲ ಮಾಡಲು ಹಲವು ವಿಧಾನಗಳಿವೆ. ಒಂದಲ್ಲಾ ಒಂದು ಬಗೆಯಲ್ಲಿ ಇದು ರುಚಿ ದುಪ್ಪಟ್ಟಾಗಿಸಲಿದೆ. ಇನ್ನು ಚೋಲೆ ರೆಸಿಪಿಯಲ್ಲಿ ನಾವು ಬಳಸುವ ಮಸಾಲೆಯಿಂದ ರುಚಿ ಹೆಚ್ಚಾಗುತ್ತದೆ. ಪೂರಿ, ಚಪಾತಿಗೆ ಇದಕ್ಕಿಂತ ರುಚಿಕರ ಸೈಡ್ ಡಿಷ್ ಮತ್ತೊಂದಿಲ್ಲ. ಹಾಗೆ ಇದನ್ನು ಮಾಡೋದು ಕೂಡ ಬಹಳ ಸುಲಭವಾಗಿರಲಿದೆ.

ನೀವು ಗಡಿಬಿಡಿಯಲ್ಲಿ ಇದ್ದಾಗಲೂ ಕೂಡ ಈ ಚೋಲೆ ಅಥವಾ ಚನ್ನಾ ಮಸಾಲ ಮಾಡಬಹುದು. ಕೇವಲ 5 ನಿಮಿಷದೊಳಗೆ ಮಾಡಿ ಮುಗಿಸಬಹುದಾದ ಅದ್ಭುತ ರುಚಿಯ ಖಾದ್ಯ ಇದು. ಹಾಗಾದ್ರೆ ನಾವಿಂದು ಈ ಚಪಾತಿ, ಪೂರಿಯಂತಹ ತಿಂಡಿಯೊಂದಿಗೆ ಹಾಗೆ ಪಲಾಲ್, ರೈಸ್ ಬಾತ್ ನಂತಹ ರೈಸ್ ಖಾದ್ಯವೂ ಸೇರಿ ಊಟದ ರುಚಿ ದುಪ್ಪಟ್ಟಾಗಿಸುವ ಈ ಚೋಲೆ ಮಸಾಲ ಮಾಡುವ ಕುರಿತು ತಿಳಿಯೋಣ.
ಚನ್ನಾ ಮಸಾಲ ರೆಸಿಪಿ ಮಾಡಲು ಬೇಕಾಗುವ ವಸ್ತುಗಳು
- ಕಡಲೆ ಕಾಳು
- ಮೊಸರು
- ಹಸಿ ಮೆಣಸು
- ಶುಂಠಿ
- ಅರಶಿಣ
- ಖಾರದ ಪುಡಿ
- ಜೀರಿಗೆ
- ರುಚಿಗೆ ತಕ್ಕಷ್ಟು ಉಪ್ಪು
- ಎಣ್ಣೆ
- ಜೀರಿಗೆ
- ಟೊಮೆಟೋ
- ಈರುಳ್ಳಿ
- ಕಸೂರಿ ಮೇಥಿ
- ಇಂಗು
ಚನ್ನಾ ಮಸಾಲ ರೆಸಿಪಿ ಮಾಡುವ ವಿಧಾನವೇನು?
ಮೊದಲು ಒಂದು ಮಿಕ್ಸಿಯಲ್ಲಿ 1 ಕಪ್ ಗಟ್ಟಿ ಮೊಸರು, 2 ಹಸಿ ಮೆಣಸು, ಕಡಲೆ ಹಿಟ್ಟು ಸ್ವಲ್ಪ ಹಾಕಿಕೊಳ್ಳಿ. ಹಾಗೆ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಶಿಣ, ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಉಪ್ಪು ಸಹ ಸೇರಿಸಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ನೀರು ಹಾಕದೆಯೇ ರುಬ್ಬಿಕೊಳ್ಳಿ.
ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾದ ಬಳಿಕ ಜೀರಿಗೆ, ಇಂಗು, ಕಸೂರಿ ಮೇಥಿ ಇದ್ದರೆ ಹಾಕಿಕೊಳ್ಳಿ. ಹಾಗೆ ಇದಕ್ಕೆ ಸಣ್ಣದಾಗಿ ಕತ್ತರಿಸಿಕೊಂಡು ಟೊಮೆಟೋ ಹಾಕಿ ಅರಶಿಣ ಹಾಕಿ ಫ್ರೈ ಮಾಡಿಕೊಳ್ಳಿ. ಟೊಮೆಟೋ ಮೆದುವಾದ ಬಳಿಕ ಈಗ ಮಿಕ್ಸಿಯಲ್ಲಿ ರುಬ್ಬಿದ್ದ ಮಸಾಲೆಯನ್ನು ಹಾಕಿ ಮಿಕ್ಸ್ ಮಾಡಿ.
ಈಗ ಕುದಿಬರುವವರೆಗೂ ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ. 1 ನಿಮಿಷದ ಬಳಿಕ ಮುಚ್ಚಳ ಮುಚ್ಚಿ 3 ನಿಮಿಷ ಹಾಗೆಯೆ ಕುದಿಬರಲು ಬಿಡಿ. ಈಗ ಇದಕ್ಕೆ ಕಡಲೆ ಕಾಳು ಹಾಕಬೇಕು. ಕಡಲೆ ಕಾಳುಗಳನ್ನು ಹಿಂದಿನ ದಿನ ರಾತ್ರಿಯೇ ತೊಳೆದು ಬಳಿಕ ಬೆಳಗ್ಗೆ ಇದನ್ನು ಕುಕ್ಕರ್ನಲ್ಲಿ ಅಥವಾ ನೀರಿನಲ್ಲಿ ಬೇಯಿಸಿಕೊಂಡು ಇಟ್ಟುಕೊಂಡಿರಬೇಕು.
ಈಗ ಕಡಲೆ ಕಾಳುಗಳನ್ನು ಇದಕ್ಕೆ ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಂಡು ಈರುಳ್ಳಿ, ಗರಂ ಮಸಾಲ ಹಾಕಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಲು ಬಿಟ್ಟು ಮತ್ತೆ 3 ನಿಮಿಷ ಕುದಿಬರಲು ಬಿಡಿ. ಸ್ವಲ್ಪ ಗ್ರೇವಿ ಗಟ್ಟಿಯಾಗಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ಚೋಲೆ ಮಸಾಲ ರೆಸಿಪಿ ಸಿದ್ದವಾಗುತ್ತೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
