Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ದೇಹ ತಂಪು ತಂಪಾಗಿಸುವ ಹೊಸ ರೀತಿಯ ಮಸಾಲ ಮಜ್ಜಿಗೆ! ಮಾಡಿ ಸವಿದು ನೋಡಿ!
ಮಳೆಯ ನಡುವೆಯೂ ಈಗ ಬಿಸಿಲು ಹೆಚ್ಚಾಗುತ್ತಿದೆ. ಹಾಗೆ ದೇಹದ ಉಷ್ಣತೆ ಕೂಡ ಹೆಚ್ಚಾಗುವುದು ನೋಡಬಹುದು. ದೇಹ ವಿಪರೀತ ಉಷ್ಣಕ್ಕೆ ಒಳಗಾದಾಗ ಎಲ್ಲರ ಆರೋಗ್ಯದಲ್ಲಿ ಏರುಪೇರು ಉಂಟಾಗುವುದು ನೋಡಬಹುದು. ಅದ್ರಲ್ಲೂ ಈ ರೀತಿ ವಾತಾವರಣದಲ್ಲಿ ನಿಮ್ಮ ದೇಹವು ಅಸಮತೋಲನದಿಂದ ಕೂಡುವುದು ಸಹ ನೋಡಬಹುದು.
ಹಾಗೆ ದೇಹದ ಸಮತೋಲನಕ್ಕೆ ನೀವು ದೇಹವನ್ನು ಯಾವಾಗಲು ತಂಪಾಗಿಡುವುದು ಉತ್ತಮ. ಹಾಗೆ ದೇಹವು ತಂಪಾಗಿಸುವ ಮಾರ್ಗವೆಂದರೆ ಹೆಚ್ಚು ನೀರು ಕುಡಿಯುವುದು. ಹಾಗೆ ದ್ರವದಿಂದ ಕೂಡಿರುವ ಆಹಾರ ಹೆಚ್ಚಾಗಿ ಸೇವಿಸುವುದು. ದೇಹದ ಉಷ್ಣತೆ ಹೆಚ್ಚಾದರೆ ಹಲವು ರೀತಿ ಸಮಸ್ಯೆಗಳು ಎದುರಾಗುವುದು ನೋಡಬಹುದು.

ದೇಹದ ಉಷ್ಣತೆ ಹೆಚ್ಚಾದರೆ ಬಾಯಿಯಲ್ಲಿ ಹುಣ್ಣಾಗುವುದು, ಉಗುರುಗಳಲ್ಲಿ ಉರಿ, ಜೀರ್ಣಕ್ರಿಯೆ ಸಮಸ್ಯೆ, ಉರಿ ಶೀತ, ಕೂದಲು ಉದುರುವುದು, ತಲೆ ನೋವು, ಆಯಾಸ ಹೆಚ್ಚಾಗುವುದು ಹೀಗೆ ಹಲವು ರೀತಿಯ ಅಡೆತಡೆಗಳ ನೋಡಬಹುದು. ಈ ರೀತಿ ದೇಹದ ಉಷ್ಣತೆ ಹೆಚ್ಚಾಗದಂತೆ ತಡೆಯಲು ದ್ರಾವಣಗಳನ್ನು ಹೆಚ್ಚು ಸೇವಿಸುವುದು ಉತ್ತಮ.
ಅದ್ರಲ್ಲೂ ಹೆಚ್ಚು ನೀರು ಸೇವಿಸುವುದು, ಮಜ್ಜಿಗೆ ಊಟ, ಮಸಾಲೆ ಕಡಿಮೆ ಸೇವಿಸುವುದು ಹೀಗೆ ಹಲವು ರೀತಿಯಾಗಿ ಪರಿಹಾರ ಮಾಡುವುದು ನೋಡಬಹುದು. ಆದ್ರೆ ನಾವಿಂದು ಮನೆಯಲ್ಲಿ ಸುಲಭವಾಗಿ ಮಸಾಲ ಮಜ್ಜಿಗೆ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ. ನೀವು ಅಂಗಡಿಗಳಲ್ಲಿ ಸಿಗುವಂತಹ ನಂದಿನಿ ಮಸಾಲ ಮಜ್ಜಿಗೆ ಸೇವಿಸಿರುತ್ತೀರಿ.
ಅದರ ರುಚಿಗೆ ನೀವು ಕೂಡ ಮನಸೋತಿರುತ್ತೀರಿ. ಆದ್ರೆ ಮನೆಯಲ್ಲಿ ಮಾಡಲು ಮುಂದಾದರೆ ಆ ರುಚಿ ಬಾರದೆ ಇರಬಹುದು. ಆದ್ರೆ ನಾವಿಂದು ಹೇಳುವಂತಹ ವಿಧಾನದಲ್ಲಿ ನೀವು ಮಸಾಲ ಮಜ್ಜಿಗೆ ಮಾಡಿದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ಮನೆಯಲ್ಲಿ ಮಸಾಲ ಮಜ್ಜಿಗೆ ಮಾಡೋದು ಹೇಗೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಸರಿಯಾದ ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮಸಾಲ ಮಜ್ಜಿಗೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಮೊಸರು
- ಬೆಳ್ಳುಳ್ಳಿ
- ಶುಂಠಿ
- ಪುದೀನ ಎಲೆಗಳು
- ಉಪ್ಪು
- ಇಂಗು
- ಜೀರಿಗೆ ಪುಡಿ
- ಕೊತ್ತಂಬರಿ ಸೊಪ್ಪು
- ಸಾಸಿವೆ
- ಈರುಳ್ಳಿ
- ಕರಿಬೇವು
- ಹಸಿರು ಮೆಣಸಿನಕಾಯಿ
- ಎಣ್ಣೆ
ಮಸಾಲ ಮಜ್ಜಿಗೆ ಮಾಡುವ ಸುಲಭದ ವಿಧಾನವೇನು?
ಮೊದಲು ಮಿಕ್ಸಿ ಜಾರ್‌ಗೆ ಅಥವಾ ಕುಟಾಣಿಯಲ್ಲಿ ಎಸಳು ಬೆಳ್ಳುಳ್ಳಿ, ಪುದಿನ ಎಲೆ, ಶುಂಠಿ, ಉಪ್ಪು ಹಾಕಿಕೊಂಡು ಕುಟ್ಟಿ ಪುಡಿ ಮಾಡಿ, ಇಲ್ಲವೆ ರುಬ್ಬಿ ಪುಡಿ ಮಾಡಿ. ಅದಕ್ಕೆ ನೀರು ಹಾಕಿಕೊಂಡು ಎಲ್ಲಾ ಮಸಾಲೆಗಳ ತೆಗೆದು ಒಂದು ಪಾತ್ರೆಗೆ ಹಾಕಿಕೊಳ್ಳಿ. ಈಗ ಇದಕ್ಕೆ ಕಾಲು ಸ್ಪೂನ್ ಇಂಗು, ಜೀರಿಗೆ ಪುಡಿ ಸಹ ಹಾಕಿಕೊಂಡು ಮಿಕ್ಸ್ ಮಾಡಿ.
ಅನಂತರ ಇದಕ್ಕೆ ಮೊಸರು ಹಾಕಿಕೊಳ್ಳಿ ಹಾಗೆ ಎಷ್ಟು ತೆಳುವಾಗಿ ಬೇಕೋ ಅಷ್ಟು ನೀರು ಸಹ ಹಾಕಿಕೊಳ್ಳಿ. ಈಗ ಮೊಸರು ಕಡೆಯುವ ಬ್ಲೆಂಡರ್ ಇದ್ದರೆ ಅದರಿಂದ ಮಿಶ್ರಣ ಮಾಡಿ ಇಲ್ಲದಿದ್ದರೆ ಮತ್ತೆ ದೊಡ್ಡ ಮಿಕ್ಸಿ ಜಾರ್‌ಗೆ ಹಾಕಿಕೊಂಡು ಮಿಕ್ಸ್ ಮಾಡಿ. 2ರಿಂದ 3 ನಿಮಿಷ ಮಿಕ್ಸ್ ಮಾಡಿದ್ರೆ ಸಾಕು.
ಈಗ ಇದನ್ನು ಜರಡಿ ಹಿಡಿದು ತೆಗೆದುಕೊಳ್ಳಿ. ನಂತರ ಇದಕ್ಕೆ ಸಣ್ಣದಾಗಿ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪು, ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಹಾಕಿ. ಈರುಳ್ಳಿ ಬೇಡವೆಂದರೆ ಹಾಕದೆಯೂ ಇಡಬಹುದು. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಸಾಸಿವೆ, ಹಸಿ ಮೆಣಸು ಕರಿಬೇವು ಹಾಕಿ ಅದನ್ನು ತಣ್ಣಗಾದ ಬಳಿಕ ಈ ಮಜ್ಜಿಗೆಗೆ ಹಾಕಿ ಕುಡಿಯಬಹುದು. ಈ ಒಗ್ಗರಣೆ ಹಾಕದೆಯೂ ಮಸಾಲ ಮಜ್ಜಿಗೆ ಸವಿಯಬಹುದು.
ನೀವು ಕೂಡ ಈ ಮಸಾಲ ಮಜ್ಜಿಗೆ ಮನೆಯಲ್ಲಿ ಮಾಡಿ ಕುಡಿದು ನೋಡಿ. ಇದರ ರುಚಿಗೆ ನೀವು ಮನಸೋಲೋದು ಖಚಿತ. ಹಾಗೆ ಒಮ್ಮೆ ಈ ವಿಧಾನ ಬಳಸಿ ಮಾಡಿದ್ದೆ ಯಾವಾಗಲು ಮಾಡಿ ಸವಿಯಲು ಮುಂದಾಗುತ್ತೀರಿ, ದೇಹಕ್ಕೂ ಇದು ಬಹಳ ತಂಪು ನೀಡಲಿದೆ.



Click it and Unblock the Notifications