Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಮುದ್ದೆ, ಚಪಾತಿ, ಊಟಕ್ಕೆ ರುಚಿ ರುಚಿ ಚಿಕನ್ ಗ್ರೇವಿ; ಸುಲಭದ ವಿಧಾನವವಿದು!
ಮುದ್ದೆ ಊಟ ಅಂದ್ರೆ ಮೈಸೂರು ಭಾಗದಲ್ಲಿ ಹೆಚ್ಚು ಫೇಮಸ್, ಹಲವರಿಗೆ ಮೂರು ಹೊತ್ತು ಕೂಡ ಮುದ್ದೆ ಊಟ ಮಾಡುವುದು ನೋಡಬಹುದು. ರಾಗಿಯಿಂದ ಮಾಡುವ ಈ ಖಾದ್ಯವು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ರಾಗಿಯಲ್ಲಿ ಫೈಬರ್ ಅಂಶವು ನಿಮ್ಮ ಜೀರ್ಣಕ್ರಿಯೆಗೆ ಬಹಳ ಉತ್ತಮ. ಇದು ನಿಮ್ಮ ತೂಕ ನಿರ್ವಹಣೆಯಲ್ಲಿ ಬಹಳ ಮುಖ್ಯ ಪಾತ್ರವಹಿಸಲಿದೆ. ಹೀಗಾಗಿ ಮುದ್ದೆ ಊಟದ ಮಾಡುವುದು ದೇಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಸಹ ನೆರವಾಗಲಿದೆ.
ಇನ್ನು ಮುದ್ದೆ ಸವಿಯಲು ಅದರ ಜೊತೆಗೆ ರುಚಿಕರ ಖಾದ್ಯಗಳು ಇರಲೇಬೇಕು. ಮುದ್ದೆ ಸೊಪ್ಪಿನ ಸಾರು ಹಾಗೆ ಮುದ್ದೆ ನಾನ್‌ವೆಜ್ ಖಾದ್ಯಗಳು ರುಚಿ ದುಪ್ಪಟ್ಟಾಗಿಸಲಿವೆ. ಅದ್ರಲ್ಲೂ ಚಿಕನ್ ಗ್ರೇವಿ ಹಾಗೆ ಮುದ್ದೆ ಸವಿಯೋದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಚಿಕನ್‌ನಲ್ಲಿ ಹತ್ತಾರು ವಿಧವಾದ ರುಚಿಯ ಅಡುಗೆಗಳ ಮಾಡಿ ಸವಿಯೋದು ನೋಡಬಹುದು.

ಅದ್ರಲ್ಲೂ ಮುದ್ದೆಯ ಜೊತೆಗೆ ಚಿಕನ್ ಗ್ರೇವಿ ಅದ್ಭುತ ರುಚಿಯ ಖಾದ್ಯ. ಹಾಗೆ ಚಪಾತಿಗೆ, ಅನ್ನದೊಂದಿಗೆ ಕೂಡ ಚಿಕನ್ ಗ್ರೇವಿ ರುಚಿ ದುಪ್ಪಟ್ಟಾಗಿಸುವಂತಹ ಖಾದ್ಯ. ಹೀಗಾಗಿ ನಾವಿಂದು ಮುದ್ದೆ ರುಚಿ ಹೆಚ್ಚಿಸುವಂತಹ ಈ ಚಿಕನ್ ಗ್ರೇವಿ ಮಾಡಿ ಸವಿಯುವ ಕುರಿತಾಗಿ ಇಲ್ಲಿ ತಿಳಿದುಕೊಳ್ಳೋಣ. ಹಾಗಾದ್ರೆ ಚಿಕನ್ ಗ್ರೇವಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಚಿಕನ್ ಗ್ರೇವಿ ಮಾಡಲು ಬೇಕಾಗುವ ಪದಾರ್ಥಗಳು
- ಚಿಕನ್
- ಎಣ್ಣೆ
- ಬೆಳ್ಳುಳ್ಳಿ
- ಶುಂಠಿ
- ಪಲಾವ್ ಎಲೆ
- ಹಸಿ ಮೆಣಸು
- ಟೊಮೆಟೋ
- ಈರುಳ್ಳಿ
- ಪುದಿನ
- ಕೊತ್ತಂಬರಿ
- ಉಪ್ಪು
- ಖಾರದ ಪುಡಿ
- ಧನಿಯಾ ಪುಡಿ
- ಅರಶಿಣ
- ಏಲಕ್ಕಿ
- ಚಕ್ಕೆ
- ಪಲಾವ್ ಎಲೆ
- ಕಾಳು ಮೆಣಸು
- ಚಿಕನ್ ಮಸಾಲ
ಚಿಕನ್ ಗ್ರೇವಿ ಮಾಡುವ ವಿಧಾನವೇನು?
ಮೊದಲು ಚಿಕನ್ ಅನ್ನು ತೊಳೆದು ಇಟ್ಟುಕೊಳ್ಳಿ. ಈಗ ಮಿಕ್ಸಿ ಜಾರ್‌ಗೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕಾಳು ಮೆಣಸು, ಹಸಿ ಮೆಣಸು, ಟೊಮೆಟೋ, ಪುದಿನ ಸೊಪ್ಪು, ಕೊತ್ತಂಬರಿ ಸೊಪ್ಪು, ನೀರು ಹಾಕಿಕೊಂಡು ನುಣ್ಣಗೆ ರುಬ್ಬಿ ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಇದಕ್ಕೆ ಚಕ್ಕೆ, ಏಲಕ್ಕಿ, ಪಲಾವ್ ಎಲೆ, ಸೋಂಪುಕಾಳು ಹಾಕಿಕೊಂಡು ಬಿಸಿ ಮಾಡಿ ಇದಕ್ಕೆ ರುಬಿದ್ದ ಮಸಾಲೆಗಳಗಳ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
ಹಾಗೆ ಮುಚ್ಚಳ ಮುಚ್ಚಿ 2ರಿಂದ 3 ನಿಮಿಷ ಫ್ರೈ ಮಾಡುತ್ತಾ ಆಗಾಗ ಮಿಕ್ಸ್ ಮಾಡಬೇಕು. ಬಳಿಕ ಇದಕ್ಕೆ ಧನಿಯಾ ಪುಡಿ, ಖಾರದ ಪುಡಿ, ಚಿಕನ್ ಮಸಾಲ ಪುಡಿ ಹಾಕಿಕೊಂಡು ಮಿಶ್ರಣ ಮಾಡಿ. ಹಾಗೆ ಅರಶಿಣ ಕೂಡ ಸೇರಿಸಿಕೊಂಡು ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 2 ನಿಮಿಷ ಬಿಡಿ. ಈಗ ಇದಕ್ಕೆ ತೊಳೆದುಕೊಂಡಿರುವ ಚಿಕನ್ ಅನ್ನು ಇದಕ್ಕೆ ಹಾಕಿಕೊಂಡು, ಉಪ್ಪು ಸಹ ಸೇರಿಸಿಕೊಂಡು ಮಿಕ್ಸ್ ಮಾಡಿ.
ಈಗ ಮುಚ್ಚಳ ಮುಚ್ಚಿ ಬೇಯಿಸಬೇಕು. ಆಗಾಗ ಮಧ್ಯದಲ್ಲಿ ತಿರುಗಿಸುತ್ತಾ ಇರಿ. ಬೇಕಿದ್ದ ಸ್ವಲ್ಪ ನೀರು ಹಾಕಿಕೊಂಡು ಕುದಿಬರಲು ಬಿಡಿ. ಮುಚ್ಚಳ ಮುಚ್ಚಿ 4ರಿಂದ 5 ನಿಮಿಷ ಬೇಯಿಸಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ಚಿಕನ್ ಗ್ರೇವಿ ಸಿದ್ದವಾಗುತ್ತೆ ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ.



Click it and Unblock the Notifications