Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರುಚಿ ಇಷ್ಟು ಫ್ಯಾಂಟಾಸ್ಟಿಕ್.. ತಿಂದರೆ ವೆಜ್ ಕಟ್ಲೆಟ್ ಮರೆತು ಬಿಡ್ತೀರಾ! 30 ನಿಮಿಷವೂ ಹಿಡಿಯಲ್ಲ
ಸಂಜೆಯ ಟೀ ಅಥವಾ ಚಹಾ ಟೈಮ್ ಬಹುತೇಕ ಎಲ್ಲರಿಗೂ ಅಚ್ಚುಮೆಚ್ಚು. ಈ ಸಮಯದಲ್ಲಿ ಚಹಾದ ಜೊತೆ ಏನಾದರೂ ಕುರುಕಲು ತಿಂಡಿ ಇದ್ದರೆ ಅದರ ಮಜವೇ ಬೇರೆ. ಆದರೆ, ಪ್ರತಿದಿನ ಅದೇ ಬೋರ್ ಆಗಿರುವ ಸ್ನ್ಯಾಕ್ಸ್ (Evening snacks) ತಿಂದು ನೀವು ಬೇಸರಗೊಂಡಿದ್ದರೆ, ಹೊಸದಾಗಿ ಏನಾದರೂ ಪ್ರಯತ್ನಿಸುವ ಸಮಯ ಬಂದಿದೆ. ಅದರಲ್ಲೂ ಮಾಂಸಾಹಾರಿಗಳಾಗಿದ್ದರೆ, ಕ್ರೀಸ್ಪಿ ಮತ್ತು ಕ್ರಂಚಿ ಚಿಕನ್ ಕಟ್ಲೆಟ್ (Chicken Cutlet) ಒಂದು ಅತ್ಯುತ್ತಮ ಆಯ್ಕೆ. ಇದು ಕೇವಲ ರುಚಿಕರವಾಗಿರುವುದು ಮಾತ್ರವಲ್ಲದೆ, ಆರೋಗ್ಯಕರವೂ ಹೌದು.
ಚಿಕನ್ ಕಟ್ಲೆಟ್ ಅನ್ನು ಕೇವಲ 30 ರಿಂದ 40 ನಿಮಿಷಗಳಲ್ಲಿ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ನೀವು ಸಾಮಾನ್ಯವಾಗಿ ತರಕಾರಿ (ವೆಜ್) ಕಟ್ಲೆಟ್‌ಗಳ ಬಗ್ಗೆ ಕೇಳಿರಬಹುದು. ಆದರೆ, ಚಿಕನ್ ಕಟ್ಲೆಟ್ ಕೂಡ ಅಷ್ಟೇ ರುಚಿಕರವಾಗಿರುತ್ತದೆ. ನೀವು ಇದನ್ನು ಮನೆಯಲ್ಲಿ ತಯಾರಿಸಿದರೆ, ಅದರ ಪರಿಮಳಕ್ಕೆ ನಿಮ್ಮ ನೆರೆಹೊರೆಯವರೂ ಆಕರ್ಷಿತರಾಗಿ ಬರಬಹುದು. ಈ ಕಟ್ಲೆಟ್‌ಗಳನ್ನು (Chicken Cutlet Recipe) ತಯಾರಿಸುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಚಿಕನ್ ಕಟ್ಲೆಟ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಚಿಕನ್ (ಬೋನ್ಲೆಸ್)
• ಆಲೂಗಡ್ಡೆ
• ಈರುಳ್ಳಿ
• ಹಸಿ ಮೆಣಸಿನಕಾಯಿ
• ಶುಂಠಿ-ಬೆಳ್ಳುಳ್ಳಿ ಪೇಸ್ಟ್
• ಗರಂ ಮಸಾಲೆ
• ಕೆಂಪು ಮೆಣಸಿನ ಪುಡಿ
• ಕೊತ್ತಂಬರಿ ಸೊಪ್ಪು
• ರುಚಿಗೆ ತಕ್ಕಷ್ಟು ಉಪ್ಪು
• ಬ್ರೆಡ್ ಕ್ರಂಬ್ಸ್
• ಮೊಟ್ಟೆ
• ಎಣ್ಣೆ

ಚಿಕನ್ ಕಟ್ಲೆಟ್ ಮಾಡುವ ವಿಧಾನ
ಹಂತ 1: ಮಿಶ್ರಣ ತಯಾರಿಸಿ. ಮೊದಲಿಗೆ, ಬೇಯಿಸಿದ ಚಿಕನ್ ಮತ್ತು ಆಲೂಗಡ್ಡೆಯನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮೆತ್ತಗಾಗಿಸಿ. ಯಾವುದೇ ದೊಡ್ಡ ತುಂಡುಗಳು ಉಳಿದಿಲ್ಲ ಎಂದು ಖಚಿತಪಡಿಸಿಕೊಳ್ಳಿ.
ಹಂತ 2: ಮಸಾಲೆಗಳನ್ನು ಸೇರಿಸಿ. ಈಗ, ಈ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲೆ, ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಎಲ್ಲಾ ಸಾಮಗ್ರಿಗಳು ಚೆನ್ನಾಗಿ ಮಿಶ್ರಣವಾಗುವಂತೆ ನಿಮ್ಮ ಕೈಗಳಿಂದ ಚೆನ್ನಾಗಿ ಕಲಸಿ.
ಹಂತ 3: ಕಟ್ಲೆಟ್ ಆಕಾರ ನೀಡಿ. ಈಗ, ತಯಾರಾದ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ತೆಗೆದುಕೊಂಡು ಕಟ್ಲೆಟ್‌ಗಳ ಆಕಾರ ನೀಡಿ. ನೀವು ಅವುಗಳನ್ನು ನಿಮಗೆ ಇಷ್ಟವಾದ ಆಕಾರದಲ್ಲಿ (ಉದಾಹರಣೆಗೆ, ದುಂಡಾಗಿ ಅಥವಾ ಓವಲ್ ಆಕಾರದಲ್ಲಿ) ಮಾಡಬಹುದು.
ಹಂತ 4: ಕರಿಯುವ ಹಂತ. ಒಂದು ಬಾಣಲೆಯಲ್ಲಿ ಕರಿಯಲು ಬೇಕಾದಷ್ಟು ಎಣ್ಣೆಯನ್ನು ಬಿಸಿ ಮಾಡಿ. ಮಧ್ಯಮ ಉರಿಯಲ್ಲಿ ಎಣ್ಣೆ ಬಿಸಿ ಮಾಡುವುದು ಉತ್ತಮ. ಹೆಚ್ಚಾಗಿ ಬಿಸಿ ಮಾಡಿದರೆ ಕಟ್ಲೆಟ್ ಹೊರಗಡೆಯಿಂದ ಬೇಗನೆ ಕಂದು ಬಣ್ಣಕ್ಕೆ ತಿರುಗುತ್ತದೆ, ಆದರೆ ಒಳಗಡೆ ಬೇಯುವುದಿಲ್ಲ.

ಹಂತ 5: ಮೊಟ್ಟೆ ಮತ್ತು ಬ್ರೆಡ್ ಕ್ರಂಬ್ಸ್ ಲೇಪನ. ಕಟ್ಲೆಟ್‌ಗಳನ್ನು ಕರಿಯುವ ಮೊದಲು, ಪ್ರತಿಯೊಂದನ್ನೂ ಮೊದಲು ಚೆನ್ನಾಗಿ ಕಲೆಸಿದ ಮೊಟ್ಟೆಯಲ್ಲಿ ಅದ್ದಿ, ನಂತರ ಬ್ರೆಡ್ ಕ್ರಂಬ್ಸ್‌ನಲ್ಲಿ ಚೆನ್ನಾಗಿ ಸುತ್ತಿ. ಇದು ಕಟ್ಲೆಟ್ ಕರಿಯುವಾಗ ಕ್ರಿಸ್ಪಿ ಮತ್ತು ಕ್ರಂಚಿ ಆಗಲು ಸಹಾಯ ಮಾಡುತ್ತದೆ.
ಹಂತ 6: ಕರಿಯಿರಿ ಮತ್ತು ಸವಿಯಿರಿ. ಎಣ್ಣೆ ಬಿಸಿಯಾದ ನಂತರ, ಕಟ್ಲೆಟ್‌ಗಳನ್ನು ಒಂದೊಂದಾಗಿ ಹಾಕಿ ಮಧ್ಯಮ ಉರಿಯಲ್ಲಿ ಗೋಲ್ಡನ್ ಬ್ರೌನ್ ಬರುವವರೆಗೆ ಕರಿಯಿರಿ. ಎರಡೂ ಬದಿಗಳನ್ನು ಸಮನಾಗಿ ಬೇಯಿಸಲು ಮರೆಯಬೇಡಿ. ಕಟ್ಲೆಟ್‌ಗಳು ಕಂದು ಬಣ್ಣಕ್ಕೆ ತಿರುಗಿದ ನಂತರ, ಅವುಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಇಡಿ. ಹೆಚ್ಚುವರಿ ಎಣ್ಣೆ ಹೀರಿಕೊಳ್ಳುತ್ತದೆ.
ಈ ಕ್ರೀಸ್ಪಿ ಚಿಕನ್ ಕಟ್ಲೆಟ್‌ಗಳನ್ನು ಬಿಸಿ ಬಿಸಿ ಚಹಾ ಅಥವಾ ಟೊಮೆಟೊ ಸಾಸ್ ಜೊತೆಗೆ ಸವಿಯಬಹದು. ಇದು ನಿಮ್ಮ ಸಂಜೆಯ ಸಮಯವನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ. ಜೊತೆಗೆ ನಿಮ್ಮ ನೆಚ್ಚಿನ ಸ್ನ್ಯಾಕ್ಸ್ ಪಟ್ಟಿಯಲ್ಲಿ ಹೊಸದಾಗಿ ಸೇರಿಕೊಳ್ಳುತ್ತದೆ.



Click it and Unblock the Notifications
