Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬಾಯಲ್ಲಿ ನೀರು ತರಿಸುವಂತೆ ಮಾಡಿ ಚಿಕನ್ ಚಾಪ್ಸ್..! ರೆಸಿಪಿ ಇಲ್ಲಿದೆ
ನಾನ್ ವೆಜ್ ಪ್ರಿಯರಿಗೆ ಚಿಕನ್, ಮಟನ್ನಿಂದ ಮಾಡುವ ಪ್ರತಿಯೊಂದು ಖಾದ್ಯವೂ ಇಷ್ಟವಾಗುತ್ತೆ. ಅದರಲ್ಲೂ ಚಿಕನ್ನಿಂದ ಮಾಡುವ ಹಲವು ಬಗೆಯ ಖಾದ್ಯಗಳನ್ನು ನೀವು ಬಹಳ ಇಷ್ಟಪಟ್ಟು ಸವಿಯಬಹುದು. ಹಾಗೆ ಭಾನುವಾರದಂದು ವಿಶೇಷ ರೀತಿಯ ಖಾದ್ಯದೊಂದಿಗೆ ಆ ದಿನದ ಆನಂದ ಸವಿಯಬಹುದು. ಹಲವರು ಚಿಕನ್ನಿಂದ ಮಾಡುವ ಎಲ್ಲಾ ಖಾದ್ಯಗಳನ್ನೂ ಕೂಡ ಇಷ್ಟಪಡುತ್ತಾರೆ. ಊಟದೊಂದಿಗೆ ಸವಿಯಲು ಮುಂದಾಗುತ್ತಾರೆ.
ಹಾಗೆ ನಾವಿಂದು ಚಾಪ್ಸ್ ಕುರಿತು ತಿಳಿದುಕೊಳ್ಳೋಣ. ನೀವು ಚಕನ್ ಹಾಗೂ ಮಟನ್ ಚಾಪ್ಸ್ ಮಾಡಲು ಭಾನುವಾರ ಮುಂದಾದರೆ ನಿಮಗಾಗಿ ಇಲ್ಲಿ ಚಿಕನ್ ಚಾಪ್ಸ್ ಮಾಡುವ ಕುರಿತಾದ ಮಾಹಿತಿ ನೀಡಲಿದ್ದೇವೆ. ಊಟದ ಜೊತೆಗೆ ಚಿಕನ್ ಚಾಪ್ಸ್ ಮಾಡಿದ್ರೆ ಅದ್ಭುತ ರುಚಿ ನೀಡಲಿದೆ. ಅದರಲ್ಲೂ ಈ ಚಾಪ್ಸ್ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟ. ಮಸಾಲೆಗಳಿಂದ ತುಂಬಿದ ಚಾಪ್ಸ್ ನೆನೆದರೂ ಬಾಯಲ್ಲಿ ನೀರು ತರಿಸಲಿದೆ.

ಹಾಗಾದ್ರೆ ಚಿಕಪ್ ಚಾಪ್ಸ್ ಮಾಡುವುದು ಹೇಗೆ?, ಈ ಚಾಪ್ಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಚಿಕನ್ ಚಾಪ್ಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಚಿಕನ್ - 1/2 ಕೆಜಿ
- ಟೊಮೆಟೊ
- ಈರುಳ್ಳಿ
- ಹುರಿಗಡಲೆ
- ಹಸಿ ಮೆಣಸಿನಕಾಯಿ
- ಶುಂಠಿ
- ಬೆಳ್ಳುಳ್ಳಿ
- ಕೊತ್ತಂಬರಿ ಸೊಪ್ಪು
- ಪುದೀನ
- ದಾಲ್ಚಿನ್ನಿ
- ಕರಿಮೆಣಸು
- ಏಲಕ್ಕಿ
- ಸೋಂಪು ಕಾಳು
- ಲವಂಗ
- ಧನಿಯ ಪುಡಿ
- ತೆಂಗಿನಕಾಯಿ
- ಅರಿಶಿನ ಪುಡಿ
- ಅಡುಗೆ ಎಣ್ಣೆ
- ಉಪ್ಪು
ಚಿಕನ್ ಚಾಪ್ಸ್ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಅನಂತರ ಇದಕ್ಕೆ ಈರುಳ್ಳಿ, ಹಸಿ ಮೆಣಸು, ಬೆಳ್ಳುಳ್ಳಿ, ಟೊಮೆಟೋ ಹಾಕಿಕೊಂಡು 2ರಿಂದ 3 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಶುಂಠಿ, ಕೊತ್ತಂಬರಿ ಸೊಪ್ಪು, ಪುದಿನ, ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ಹುರಿಗಡಲೆ, ಕಾಳು ಮೆಣಸು, ಚಕ್ಕೆ, ಲವಂಗ, ಏಲಕ್ಕಿ, ಸೋಂಪು ಕಾಳು, ಅರ್ಧ ಮುಷ್ಟಿ ಹೆಚ್ಚಿರುವ ತಂಗಿನಕಾಯಿ ಕಾಯಿಯನ್ನು ಸಹ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ತಣ್ಣಗಾಗಲು ಬಿಡಿ.
ಈಗ ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಈರುಳ್ಳಿ ಹಾಕಿ ಫ್ರೈ ಮಾಡಿ. ಹಾಗೆ ಅರಶಿಣ ಹಾಕಿ ತೊಳೆದುಕೊಂಡಿರುವ ಚಿಕನ್ ಅನ್ನು ಸಹ ಹಾಕಿಕೊಳ್ಳಿ. ನಂತರ ಉಪ್ಪು ಹಾಕಿ ಪ್ರೈ ಮಾಡಿಕೊಳ್ಳಬೇಕು. ಇದೇ ಸಮಯದಲ್ಲಿ ಫ್ರೈ ಮಾಡಿಕೊಂಡ ಮಸಾಲೆಯನ್ನು ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು.
ಹೀಗೆ ರುಬ್ಬಿದ ಹಸಿರು ಮಸಾಲೆ ಪೇಸ್ಟ್ ಅನ್ನು ಕುಕ್ಕರ್ನಲ್ಲಿ ಬೇಯುತ್ತಿರುವ ಚಿಕನ್ ಜೊತೆಗೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ತುಂಬಾ ಗಟ್ಟಿಯಾದರೆ ಸ್ವಲ್ಪ ನೀರು ಹಾಕಿ, ಫ್ರೈ ಮಾಡುವಾಗ ಉಪ್ಪು ನೋಡಿಕೊಂಡು ಹಾಕಿಕೊಳ್ಳಿ. ಹಾಗೆ ಮುಚ್ಚಳ ಮುಚ್ಚಿ 4 ಸೀಟಿ ಹೊಡೆಯಲು ಬಿಡಿ. ಬಳಿಕ ತಣ್ಣಗಾಗಲು ಬಿಟ್ಟು ಮುಚ್ಚಳ ತೆಗೆದು ಸವಿಯಲು ನೀಡಬಹುದು.
ಇಷ್ಟಾದರೆ ಚಿಕನ್ ಚಾಪ್ಸ್ ರೆಡಿಯಾಗುತ್ತದೆ. ನೀವು ಯಾವುದೇ ಖಾದ್ಯ ಮಾಡಿದ್ರು ಅದರ ಜೊತೆಗೆ ಈ ಚಿಕನ್ ಚಾಪ್ಸ್ ಸವಿಯಬಹುದು. ಚಪಾತಿ, ಪರೋಟ, ದೋಸೆಯ ಜೊತೆಗೆ ಈ ಚಾಪ್ಸ್ ರುಚಿ ನೋಡಿದ್ರೆ ಮತ್ತೆ ಮತ್ತೆ ನೀವು ಸವಿಯುತ್ತೀರಿ. ಈ ಭಾನುವಾರ ಸುಲಭವಾಗಿ ಈ ನಾನ್ ವೆಜ್ ಖಾದ್ಯ ಮಾಡಿ ನೋಡಿ.



Click it and Unblock the Notifications
