Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಚಪಾತಿ, ದೋಸೆ, ಅನ್ನಕ್ಕೆ ಸೀಮೆ ಬದನೆ ಪಲ್ಯ..! ಈ ರುಚಿಯ ಪಲ್ಯ ಇನ್ನೊಂದಿಲ್ಲ.!
ಸೋರೆಕಾಯಿ ಜಾತಿಯ ಸೀಮೆ ಬದನೆಕಾಯಿ ನಿಮ್ಮ ಫೇವರಿಟ್ ತರಕಾರಿ ಆಗಿರಬಹುದು, ಈ ಸೀಮೆ ಬದನೆಕಾಯಿಯಿಂದ ಹತ್ತಾರು ಬಗೆಯ ಖಾದ್ಯ ಮಾಡುತ್ತಾರೆ. ನೀವು ಮದುವೆ ಮನೆಯಲ್ಲಿ ಆಥವಾ ಯಾವುದಾದರು ಶುಭ ಸಮಾರಂಭಗಳಲ್ಲಿ ಈ ಸೀಮೆ ಬದನೆಕಾಯಿಯಿಂದ ಮಾಡಿರುವ ಪಲ್ಯವನ್ನ ಸಾಮಾನ್ಯವಾಗಿ ನಾವು ನೋಡಬಹುದು. ಈ ಪಲ್ಯ ಎಷ್ಟು ರುಚಿಕರವಾಗಿರುತ್ತೆ ಅಂದ್ರೆ ನೀವು ಇದು ಯಾವ ತರಕಾರಿ ಎಂದು ಒಮ್ಮೆ ಯೋಚಿಸುತ್ತೀರಿ.
ಹಾಗೆ ಈ ಸೀಮೆ ಬದನೆಕಾಯಿಯಲ್ಲಿ ಹತ್ತಾರು ಆರೋಗ್ಯಕರ ಅಂಶಗಳಿವೆ. ಸೀಮೆಬದನೆಕಾಯಿಯಲ್ಲಿರುವ ಫೈಟೊಕೆಮಿಕಲ್ಗಳು ರಕ್ತದ ಹರಿವನ್ನು ಸುಧಾರಿಸುವುದಲ್ಲದೇ, ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಯಾವ ವಯಸ್ಸಿನವರು ಯಾವುದೇ ಸಮಸ್ಯೆ ಇರುವವರು ಕೂಡ ಈ ಸೀಮೆ ಬದನೆಕಾಯಿಯನ್ನು ಸವಿಯಬಹುದು. ಹಾಗೆ ಸೀಮೆ ಬದನೆಯು ಸಪೋನಿನ್ ಮತ್ತು ಫ್ಲೇವನಾಯ್ಡ್ ಎಂಬ ಎರಡು ಆಂಟಿ ಆಕ್ಸಿಡೆಂಟ್ಗಳನ್ನು ಹೊಂದಿರುತ್ತದೆ.

ಇನ್ನು ಈ ಸೀಮೆ ಬದನೆಕಾಯಿಯಲ್ಲಿ ಬಹಳಷ್ಟು ಆರೋಗ್ಯಕರ ಲಾಭಗಳಿವೆ ಹಾಗೆ ಇದರಿಂದ ಅದ್ಭುತ ರುಚಿಯ ಪಲ್ಯವನ್ನು ಮಾಡಬಹುದು. ನಾವಿಂದು ಈ ಸೀಮೆ ಬದನೆಕಾಯಿಯಲ್ಲಿ ಪಲ್ಯ ಮಾಡುವುದನ್ನು ನಾವಿಂದು ತಿಳಿದುಕೋಳ್ಳೋಣ. ಈ ಸೀಮೆ ಬದನೆಕಾಯಿಯಲ್ಲಿ ರುಚಿ ರುಚಿಯ ಪಲ್ಯ ಮಾಡಬಹುದು. ಮದುವೆ ಮನೆಯಲ್ಲಿ ನೀವು ಸವಿದಿರುವ ಪಲ್ಯದಂತೆ ರುಚಿ ನೀಡಲಿದೆ.
ಹಾಗಾದ್ರೆ ಈ ಸೀಮೆ ಬದನೆಕಾಯಿಯ ಪಲ್ಯ ಮಾಡುವುದು ಹೇಗೆ? ಈ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸೀಮೆ ಬದನೆಕಾಯಿ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು
- ಸೀಮೆ ಬದನೆಕಾಯಿ - ಅರ್ಧ ಕೆಜಿ
- ಈರುಳ್ಳಿ -1
- ತೆಂಗಿನಕಾಯಿ ತುರಿ - 4 ಟೇಬಲ್ ಸ್ಪೂನ್
- ಹಸಿಮೆಣಸಿನ ಕಾಯಿ
- ಹಸಿ ಶುಂಠಿ - ಅರ್ಧ ಇಂಚು
- ಅರಿಶಿಣ
- ಸಾಸಿವೆ
- ಜೀರಿಗೆ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಎಣ್ಣೆ
- ಕಡ್ಲೆಬೇಳೆ
- ಉದ್ದಿನಬೇಳೆ
- ಉಪ್ಪು
ಸೀಮೆ ಬದನೆಕಾಯಿ ಪಲ್ಯ ಮಾಡುವುದು ಹೇಗೆ?
ಸೀನೆ ಬದನೆಯ ಸಿಪ್ಪೆಯನ್ನು ತೆಗೆದುಕೊಂಡು ಕತ್ತರಿಸಿಕೊಳ್ಳಿ. ಹಾಗೆ ಸಣ್ಣದಾಗಿ ಕತ್ತರಿಸಿಕೊಳ್ಳಿ. ಒಳಗಿರುವ ಬೀಜವನ್ನು ತೆಗೆದುಕೊಳ್ಳಿ. ಇದನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಸಾಸಿವೆ, ಜೀರಿಗೆ, ಶುಂಠಿ, ಹಸಿ ಮೆಣಸು, ಅರಶಿಣ ಹಾಕಿ ಎರಡು ಸುತ್ತು ರುಬ್ಬಬೇಕು ಬಳಿಕ ಇದಕ್ಕೆ ಸ್ವಲ್ಪ ನೀರು ಹಾಕಿ ಮತ್ತೆ ರುಬ್ಬಿಕೊಳ್ಳಬೇಕು.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ನಂತರ ಇದಕ್ಕೆ ಕರಿಬೇವು, ಈರುಳ್ಳಿ ಹಾಕಿ 3 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಮಿಕ್ಸಿಯಲ್ಲಿ ಮೊದಲು ರುಬ್ಬಿಕೊಂಡಿದ್ದ ಮಸಾಲೆಯನ್ನು ಇದಕ್ಕೆ ಹಾಕಿಕೊಳ್ಳಿ. ಹಾಗೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಈ ಹೆಚ್ಚಿಕೊಂಡಿರುವ ಸೀಮೆ ಬದನೆಕಾಯಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಒಟ್ಟು 10 ನಿಮಿಷ ಈ ಸೀಮೆ ಬದನೆ ಬೇಯಬೇಕು, ನೀರು ಹಾಕದೆ ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಿ. ಈ ಸೀಮೆ ಬದನೆ ನೀರು ಬಿಟ್ಟುಕೊಳ್ಳುತ್ತದೆ ಹೀಗಾಗಿ ನೀರು ಹಾಕಬೇಡಿ. 10 ನಿಮಿಷದ ಬಳಿಕ ಇದಕ್ಕೆ ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ 1 ನಿಮಿಷ ಬಿಟ್ಟು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸೀಮೆ ಬದನೆಕಾಯಿ ಪಲ್ಯ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಈ ಪಲ್ಯ ಮಾಡಲು ಟ್ರೈ ಮಾಡಿ. ಅದರ ರುಚಿಗೆ ನೀವು ಮತ್ತೆ ಮತ್ತೆ ಮಾಡಲು ಮುಂದಾಗುತ್ತೀರಿ.



Click it and Unblock the Notifications