Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ತಿಂಡಿ, ಊಟ ಎರಡಕ್ಕೂ ಈ ಚಪ್ಪರದ ಅವರೆಕಾಳು ಪಲ್ಯ ಬೆಸ್ಟ್..! ಮಾಡೋದು ಹೇಗೆ?
ನೀವು ಊಟಕ್ಕೆ ಹಾಗೆ ತಿಂಡಿಗೆ ಹಲವು ರೀತಿಯ ಪಲ್ಯ ಮಾಡಿ ಸವಿದಿರುತ್ತೀರಿ. ತರಕಾರಿಗಳ ಪಲ್ಯ ಆರೋಗ್ಯಕ್ಕೆ ಬಹಳ ಉತ್ತಮ. ಅದರಲ್ಲೂ ವಿಶಿಷ್ಟ ಬಗೆಯ ತರಕಾರಿ ಪಲ್ಯ ಬಹಳ ರುಚಿಕರವಾಗಿರುತ್ತೆ. ಹಾಗೆ ನಾವು ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನದ ಊಟಕ್ಕೂ ಸೇರಿ ಒಂದೇ ಬಾರಿಗೆ ರುಚಿ ರುಚಿಯ ಪಲ್ಯ ಮಾಡುವುದು ಹೆಚ್ಚು. ಏಕೆಂದರೆ ಸಮಯವು ಉಳಿತಾಯವಾಗುತ್ತೆ.
ಹಾಗಾದ್ರೆ ನಾವಿಂದು ಎರಡು ಹೊತ್ತಿಗೂ ಸರಿಹೊಂದುವಂತಹ ವಿಭಿನ್ನ ರುಚಿಯ ಚಪ್ಪರದ ಅವರೆಕಾಯಿ ಪಲ್ಯ ಮಾಡುವ ಕುರಿತು ತಿಳಿದುಕೊಳ್ಳೋಣ. ನೀವು ಅವರೆಕಾಯಿಯನ್ನು ಸಾಂಬಾರ್, ಚಟ್ನಿ, ಪಲ್ಯ ಮಾಡಿ ಸವಿದು ರುಚಿ ನೋಡಿರುತ್ತೀರಿ. ಹಾಗೆ ಚಪ್ಪರದ ಅವರೆಕಾಯಿ ಕೂಡ ಅದ್ಭುತ ರುಚಿ ನೀಡಲಿದೆ. ನೀವು ಕೂಡ ಈ ಚಪ್ಪರದ ಅವರೆಕಾಯಿಯ ಪಲ್ಯ ಒಮ್ಮೆ ಸವಿದರೆ ಯಾವಾಗಲು ಸವಿಯಲು ನೀವು ಇಷ್ಟಪಡುತ್ತೀರಿ.

ಹಾಗಾದ್ರೆ ಅವರೆಕಾಳಿನ ಈ ರುಚಿ ರುಚಿಯ ಪಲ್ಯ ಮಾಡುವುದು ಹೇಗೆ? ಚಪ್ಪರದ ಅವರೆಕಾಲಿನ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಚಪ್ಪರದ ಅವರೆಕಾಳಿನ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಚಪ್ಪರದ ಅವರೇಕಾಯಿ
- ಈರುಳ್ಳಿ
- ತೆಂಗಿನಕಾಯಿ ತುರಿ
- ಒಣ ಮೆಣಸು
- ಹಸಿ ಮೆಣಸಿನಕಾಯಿ 4
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಎಣ್ಣೆ
- ಸಾಸಿವೆ
- ಜೀರಿಗೆ
- ಹಸಿ ಶುಂಠಿ
- ಅರಿಶಿಣ ಪುಡಿ
- ಉಪ್ಪು
ಚಪ್ಪರದ ಅವರೆಕಾಳಿನ ಪಲ್ಯ ಮಾಡುವುದು ಹೇಗೆ?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಸಿ ಮೆಣಸು, ಕರಿಬೇವು, ಜೀರಿಗೆ, ಶುಂಠಿ, ಅರಶಿಣ, ತೆಂಗಿನ ಕಾಯಿ ತುರಿ ಹಾಕಿಕೊಂಡು ಹಾಗೆ ತರಿತರಿಯಾಗಿ ಪುಡಿ ರುಬ್ಬಿಕೊಳ್ಳಬೇಕು. ಹುಡಿ ಹುಡಿಯಾಗಿದ್ದರೆ ಸಾಕು. ಇದನ್ನು ತೆಗೆದು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಾಸಿವೆ, ಒಣ ಮೆಣಸು, ಈರುಳ್ಳಿ ಹಾಕಿಕೊಂಡು 2 ನಿಮಿಷ ಫ್ರೈ ಮಾಡಿಕೊಳ್ಳಿ. ಅನಂತರ ಈ ಚಪ್ಪರದ ಅವರೆಕಾಳನ್ನು ಇಕ್ಕದಾಗಿ ಕತ್ತರಿಸಿಕೊಂಡು ಇದನ್ನು ಪಾತ್ರೆಗೆ ಹಾಕಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷಗಳ ಕಾಲ ಮಿಕ್ಸ್ ಮಾಡಿಕೊಳ್ಳುತ್ತಾ ಬೇಯಿಸಿಕೊಳ್ಳಿ.
ಈಗ ಮಿಕ್ಸಿ ಜಾರ್ನಲ್ಲಿ ರುಬ್ಬಿಕೊಂಡಿರುವ ಪುಡಿ ಪುಡಿ ಮಸಾಲೆಯನ್ನು ಈ ಬಾಣಲೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷ ಮಿಕ್ಸ್ ಮಾಡಿಕೊಂಡು ಬಳಿಕ 2 ಸ್ಪೂನ್ ನೀರು ಹಾಕಿ ಮಿಕ್ಸ್ ಮಾಡಿ 5 ನಿಮಿಷ ಬೇಯಲು ಬಿಡಬೇಕು. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 5 ನಿಮಿಷ ಬೇಯಲು ಬಿಡಿ. ಆಗಾಗ ಮಿಕ್ಸ್ ಮಾಡಿಕೊಳ್ಳಿ.
ಒಟ್ಟು 5ರಿಂದ 6 ನಿಮಿಷ ಬೇಯಿಸಿಕೊಂಡ ಬಳಿಕ ಮುಚ್ಚಳ ತೆಗೆದು ರುಚಿ ನೋಡಿಕೊಳ್ಳಿ. ಉಪ್ಪು, ಖಾರ ಕಡಿಮೆಯಾಗಿದ್ದರೆ ಮತ್ತೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ, ಅಂತಿಮವಾಗಿ ಸಣ್ಣದಾಗಿ ಹೆಚ್ಚಿರುವ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ತಿಂಡಿ, ಊಟ ಎಲ್ಲದಕ್ಕೂ ಚಪ್ಪರದ ಅವರೆಕಾಳಿನ ಪಲ್ಯ ಸಿದ್ದವಾಗುತ್ತೆ. ನೀವು ಕೂಡ ಮನೆಯಲ್ಲಿ ಟ್ರೈ ಮಾಡಿ ನೋಡಿ. ಈ ಪಲ್ಯ ಮಾಡೋದು ಕೂಡ ತುಂಬಾನೆ ಸುಲಭ, ಹಾಗೆ ಕಡಿಮೆ ಸಮಯದಲ್ಲಿ ಇದನ್ನು ಮಾಡಿ ಮುಗಿಸಬಹುದು.



Click it and Unblock the Notifications
