Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ನೀವೊಮ್ಮೆ ರುಚಿ ನೋಡಬೇಕಿದೆ ಈ ಕಡಲೆ ಕಾಳು ದೋಸೆ: ಎಷ್ಟು ಸುಲಭ ಮಾಡೋದು ಗೊತ್ತಾ?
ನೀವು ಬೆಳಗ್ಗೆ ತಿಂಡಿಗೆ ವಿಶೇಷ ಖಾದ್ಯಗಳ ಮಾಡಿ ಸವಿಯುವುದು ಕಾಮನ್. ಅದ್ರಲ್ಲೂ ವಿಶೇಷ ರುಚಿಯಲ್ಲಿ ದೋಸೆಗಳ ಮಾಡುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ದೋಸೆ ಅಂದ್ರೆ ಎಲ್ಲರ ಬಾಯಲ್ಲಿ ನೀರು ತರಿಸುತ್ತವೆ. ನೀವು ಕೂಡ ಮನೆಯಲ್ಲಿ ವಿಶೇಷ ರುಚಿಯ ಖಾದ್ಯಗಳನ್ನು ಮಾಡಿ ಸವಿದಿರುತ್ತೀರಿ. ಅದ್ರೆಲ್ಲೂ ಬಗೆ ಬಗೆಯ ರುಚಿಯಲ್ಲಿ ದೋಸೆ ಮಾಡೋದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ.
ಒಂದೊಂದು ರುಚಿಯು ನಿಮಗೆ ಬಹಳ ಇಷ್ಟವಾಗುತ್ತದೆ. ಮಸಾಲೆ ದೋಸೆ, ಬೆಣ್ಣೆ ದೋಸೆ, ಈರುಳ್ಳಿ ದೋಸೆ, ನೀರ್ ದೋಸೆ, ಸೆಟ್ ದೋಸೆ ಮಾಡುವುದು ನೋಡಿರುತ್ತೀರಿ. ಹಾಗೆ ಇತ್ತೀಚಿಗೆ ಬಗೆ ಬಗೆಯ ದೋಸೆಗಳು ಫೇಮಸ್ ಆಗುತ್ತಿವೆ. ಬೆಳಗ್ಗೆ ಮಾತ್ರವಲ್ಲ ಸಂಜೆ ಸಮಯದಲ್ಲೂ ಜನರು ಈಗ ದೋಸೆಗಳ ಸವಿಯಲು ಇಷ್ಟಪಡುತ್ತಾರೆ.

ದೋಸೆ ಮಾಡುವುದು ಸುಲಭದ ವಿಧಾನ ಅಂತಲೂ ಹೇಳಲಾಗುತ್ತೆ. ಆದ್ರೆ ಉದ್ದು, ಮೆಂತ್ಯಯ ದೋಸೆಯಂತೆ ಮಾಡುವ ದೋಸೆಗಿಂತಲೂ ಬಗೆ ಬಗೆಯ ದೋಸೆಗಳು ಈಗ ಬಹಳ ಫೇಮಸ್. ತರಕಾರಿಗಳ ಬಳಸಿ ಹಾಗೆ ವಿವಿಧ ವಸ್ತುಗಳ ಬಳಸಿಕೊಂಡು ಮಾಡುವ ದೋಸೆಯನ್ನು ಮಕ್ಕಳಿಂದ ಹಿಡಿದು ಹಿರಿಯರು ಕೂಡ ಇಷ್ಟಪಟ್ಟು ಸವಿಯುತ್ತಾರೆ. ಹಾಗೆ ಎಲ್ಲರೂ ಈ ದೋಸೆ ಮಾಡುವ ಕುರಿತಾಗಿಯೂ ಕುತುಹಲ ಮೂಡಿಸುತ್ತಾರೆ.
ಹೀಗಾಗಿ ನಾವಿಂದು ವಿಭಿನ್ನ ರುಚಿ ನೀಡುವಂತಹ ಹಾಗೆ ರುಚಿ ಹೆಚ್ಚಿಸುವಂತಹ ಕಡಲೆ ಕಾಳಿನ ದೋಸೆ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಕಡಲೆ ಕಾಳಿನಿಂದ ಚಟ್ನಿ, ಹಾಗೆ ಸಾಂಬಾರ್ ರುಚಿಯಾಗಲು ಬಳಸುವುದು ನೋಡಿರಬಹುದು. ಆದ್ರೆ ನಾವಿಂದು ಈ ಕಡಲೆ ಕಾಳಿನಿಂದ ಮಾಡುವ ರುಚಿ ರುಚಿಯ ದೋಸೆ ಕುರಿತಾಗಿ ತಿಳಿಯೋಣ.
ಈ ಕಡಲೆ ಕಾಳಿನ ದೋಸೆ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಡಲೆ ಕಾಳಿನ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅಕ್ಕಿ- 1 ಕಪ್
- ಕಡಲೆ ಕಾಳು - ಅರ್ಧ ಕಪ್
- ಅವಲಕ್ಕಿ - ಅರ್ಧ ಕಪ್
- ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಕಡಲೆ ಕಾಳಿನ ದೋಸೆ ಮಾಡುವುದು ಹೇಗೆ?
ಒಂದು ಪಾತ್ರೆ ತೆಗೆದುಕೊಂಡು 1 ಕಪ್ ದೋಸೆ ಅಕ್ಕಿ ಹಾಕಿಕೊಂಡು ಅದಕ್ಕೆ ಅರ್ಧ ಕಪ್ ಕಡಲೆ ಕಾಳುಗಳ ಹಾಕಿ ನೀರು ಹಾಕಿ ನೆನೆಸಿಡಬೇಕು. ಸುಮಾರು 5 ಗಂಟೆಗಳ ಕಾಲ ಆದರೂ ನೆನೆಸಿಡಬೇಕು. ಹಾಗೆ ಅರ್ಧ ಕಪ್ ಅವಲಕ್ಕಿ ಸಹ ನೆನೆಸಿಕೊಳ್ಳಿ. ಇದನ್ನು 10 ನಿಮಿಷ ನೆನೆಸಿದರೆ ಸಾಕು. ಈಗ ಮಿಕ್ಸಿ ಜಾರ್‌ಗೆ ಅಕ್ಕಿ ಹಾಗೂ ಕಡಲೆ ಕಾಳನ್ನು ಒಟ್ಟಿಗೆ ಹಾಕಿಕೊಂಡು ನೀರು ಹಾಕಿ ರುಬ್ಬಿಕೊಳ್ಳಿ.
ನುಣ್ಣಗೆ ರುಬ್ಬಿಕೊಂಡ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ. ಹಾಗೆ ಅವಲಕ್ಕಿಯನ್ನು ಕೂಡ ನುಣ್ಣಗೆ ಹಿಟ್ಟು ಆಗುವಂತೆ ರುಬ್ಬಿಕೊಳ್ಳಬೇಕು. ರುಬ್ಬಿದ ಹಿಟ್ಟನ್ನು ಒಂದು ಬಾರಿ ಕಲಸಿಕೊಂಡು ಮುಚ್ಚಿ ಒಂದು ರಾತ್ರಿ ಹಾಗೆಯೇ ಬಿಡಬೇಕು. ಮಾರನೆ ದಿನ ಬೆಳಗ್ಗೆ ಹುದುಗಿ ಬಂದಾಗ ರುಬಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ.
ಹಾಗೆ ಈ ಹಿಟ್ಟನ್ನು ನೀವು ಉದ್ದಿನ ದೋಸೆ ಮಾಡಲು ಬೇಕಾಗುವ ಹಿಟ್ಟಿನಂತೆಯೇ ಹದ ಮಾಡಿಕೊಳ್ಳಿ. ನಂತರ ಕಾವಲಿ ಮೇಲೆ ಸಾಮಾನ್ಯ ದೋಸೆಯಂತೆಯೇ ಈ ದೋಸೆಯನ್ನೂ ಕೂಡ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಈ ಕಡಲೆ ದೋಸೆ ರೆಡಿಯಾಗುತ್ತದೆ. ಆರೋಗ್ಯದ ದೃಷ್ಟಿಯಲ್ಲೂ ಇದು ಬಹಳ ಉತ್ತಮ ದೋಸೆಯಾಗಿದೆ ನೀವು ಕೂಡ ಇದನ್ನು ಮನೆಯಲ್ಲಿ ಬ್ರೇಕ್‌ಫಾಸ್ಟ್‌ಗೆ ಮಾಡಿ ನೋಡಿ.



Click it and Unblock the Notifications