Latest Updates
-
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್!
ಚೆನ್ನ ಸಲಾಡ್ ಹೀಗೆ ಮಾಡಿದ್ರೆ ಅದ್ಭುತ ರುಚಿ ನೀಡುತ್ತೆ..! ಆರೋಗ್ಯಕ್ಕೆ ಇದು ಅತ್ಯುತ್ತಮ..!
ನಾವು ಬೆಳಗ್ಗೆ ಸೇವಿಸುವ ಬ್ರೇಕ್ಫಾಸ್ಟ್ ಅತ್ಯಂತ ಲೈಟ್ ಡಿಶ್ ಆಗಿರಬೇಕು ಎಂದು ಹೇಳಲಾಗುತ್ತದೆ. ಹಾಗೆ ಪ್ರೊಟೀನ್, ವಿಟಮಿನ್ ತುಂಬಿರುವ ತಿಂಡಿಯನ್ನ ಸವಿಯಲು ಹೇಳಲಾಗುತ್ತದೆ. ಏಕೆಂದರೆ ಬೆಳಗ್ಗೆ ನಾವು ಆರೋಗ್ಯಯುತ ಆಹಾರ ಸೇವಿಸಿದರೆ ಅದು ಇಡೀ ದಿನದ ನಾವು ಚಟುವಟಿಕೆಯಿಂದ ಇರುವಂತೆ ಮಾಡಲಿದೆ. ಹೀಗಾಗಿ ಬೆಳಗ್ಗೆ ಕಾಳುಗಳು, ಪೌಷ್ಟಿಕ ಆಹಾರ ಸೇವನೆ ಮಾಡುವುದು ಬಹಳ ಉತ್ತಮ.
ಬೆಳಗ್ಗೆ ಆದಷ್ಟು ಎಣ್ಣೆಯಿಂದ ಕರಿದಿರುವ ತಿಂಡಿಗಳನ್ನು ಸೇವಿಸಬಾರದು. ಹೀಗಾಗಿ ನಾವಿಂದು ನಿಮ್ಮ ಬೆಳಗ್ಗೆ ಉತ್ತಮವಾಗಿ ಆರಂಭವಾಗುವಂತೆ ಹೊಸದೊಂದು ಆರೋಗ್ಯಕರ ತಿಂಡಿಯನ್ನು ನಿಮ್ಮ ಮುಂದಿಡಲಿದ್ದೇವೆ. ಅದು ಕೂಡ ಒಂದು ಸಲಾಡ್ ಆಗಿದೆ. ನಾವು ಊಟದ ಬಳಿಕ ಅಥವಾ ಡಯೆಟ್ ಮಾಡುವವರು ಯಾವಾಗಲು ಸಲಾಡ್ ಸವಿಯಲು ಇಷ್ಟಪಡುತ್ತಾರೆ.

ಸಲಾಡ್ ನಮ್ಮ ಜೀರ್ಣಕ್ರಿಯೆಗೆ ಬಹಳ ಸಹಕಾರಿ ಹಾಗೆ ಕಡಿಮೆ ಕ್ಯಾಲೋರಿ ಹೊಂದಿರುವುದರಿಂದ ಆರೋಗ್ಯಕ್ಕೆ ಬಹಳ ಉತ್ತಮ. ಇಂತಹ ಸಲಾಡ್ನಲ್ಲಿ ನಾವಿಂದು ಬೆಳಗ್ಗೆ ಟಿಫನ್ಗೆ ಚೆನ್ನ ಕಾಳಿನ ಸಲಾಡ್ ಮಾಡುವ ಕುರಿತು ಹೇಳಲಿದ್ದೇವೆ. ಕಡಲೆ ಕಾಳು ಅಥವಾ ಈ ಚೆನ್ನ ಕಾಳುಗಳಲ್ಲಿ ಎಷ್ಟೊಂದು ಆರೋಗ್ಯಕರ ಅಂಶವಿದೆ ಎಂಬುದು ನಿಮಗೆ ತಿಳಿದಿರಬಹುದು. ಈ ಕಾಳುಗಳನ್ನು ನೆನೆಸಿಟ್ಟು ಸವಿದರೆ ಉತ್ತಮ.
ಈ ಕಾಳಿನಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಸೋಡಿಯಂನಂತಹ ಪೋಷಕಾಂಶಗಳು ಸೇರಿ ಫೈಬರ್ ಅಂಶ ಇರುತ್ತದೆ. ಇದು ನಿಮ್ಮ ಕರುಳಿನ ಆರೋಗ್ಯಕ್ಕೂ ಬಹಳ ಉತ್ತಮ. ಹೀಗಾಗಿ ನಾವಿಂದು ಸುಲಭವಾಗಿ ಬೆಳಗ್ಗೆ ತಿಂಡಿಗೆ ಈ ಕಡಲೆ ಕಾಳಿನ ಸಲಾಡ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಕಡಲೆ ಕಾಳಿನ ಸಲಾಡ್ ಮಾಡಲು ಬೇಕಾಗುವ ಪದಾರ್ಥಗಳು
- ಕಡಲೆ ಕಾಳು
- ಬೆಳ್ಳುಳ್ಳಿ
- ಖಾರದ ಪುಡಿ
- ಜೀರಿಗೆ ಪುಡಿ
- ಈರುಳ್ಳಿ
- ಟೊಮೆಟೋ
- ತುರಿದ ಕ್ಯಾರೆಟ್
- ಸೌತೆಕಾಯಿ
- ಕ್ಯಾರೆಟ್
- ಎಣ್ಣೆ
- ಉಪ್ಪು
- ಕಾಳು ಮೆಣಸಿನ ಪುಡಿ
- ಕೊತ್ತಂಬರಿ ಸೊಪ್ಪು
- ನಿಂಬೆ ರಸ
ಕಡಲೆ ಕಾಳಿನ ಸಲಾಡ್ ಮಾಡುವ ವಿಧಾನವೇನು?
ಮೊದಲು ಕುಕ್ಕರ್ ಇಟ್ಟು ಅದಕ್ಕೆ ಹಿಂದಿನ ದಿನ ನೆನೆಸಿಟ್ಟಿದ್ದ ಚೆನ್ನಾ ಕಾಳನ್ನು ಇದಕ್ಕೆ ಹಾಕಿಕೊಳ್ಳಿ. ನಂತರ ಇದಕ್ಕೆ ಕಾಳುಗಳು ಮುಚ್ಚುವಷ್ಟು ನೀರು ಹಾಕಿ ಸ್ವಲ್ಪ ಉಪ್ಪು ಕೂಡ ಹಾಕಿ ಮುಚ್ಚಳ ಮಚ್ಚಿ 3 ಸೀಟಿ ಹೊಡೆಸಿಕೊಳ್ಳಿ. ಈಗ ಕುಕ್ಕರ್ ತಣ್ಣಗಾಗಲು ಬಿಟ್ಟು ನಂತರ ಕಾಳುಗಳನ್ನು ತೆಗೆದು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಅದಕ್ಕೆ ಬೆಳ್ಳುಳ್ಳಿ, ಖಾರದ ಪುಡಿ, ಜೀರಿಗೆ ಪುಡಿ ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಕುಕ್ಕರ್ನಲ್ಲಿ ಬೇಯಿಸಿಕೊಂಡಿರುವ ಚೆನ್ನ ಕಡಲೆಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷ ಮಿಕ್ಸ್ ಮಾಡಿಕೊಂಡ ಬಳಿಕ ಈಗ ಒಲೆ ಆಫ್ ಮಾಡಿಕೊಳ್ಳಿ.
ಈಗ ಒಂದು ಬೌಲ್ಗೆ ಈ ಕಡ್ಲೆ ಹಾಕಿಕೊಂಡು ಇದಕ್ಕೆ ಸಣ್ಣದಾಗಿ ಹೆಚ್ಚಿರುವ ಒಂದು ಈರುಳ್ಳಿ, ಟೊಮೆಟೋ, ತುರಿದ ಕ್ಯಾರೆಟ್, ಸೌತೆಕಾಯಿ ಹಾಕಿಕೊಳ್ಳಿ. ಈಗ ಒಂದು ಬೌಲ್ಗೆ ಎಣ್ಣೆ, ಉಪ್ಪು, ಕಾಳು ಮೆಣಸಿನ ಪುಡಿ ಮಿಕ್ಸ್ ಮಾಡಿಕೊಂಡು ಅದನ್ನು ಕೂಡ ಇದಕ್ಕೆ ಹಾಕಿಕೊಂಡು ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ.
ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಗೂ ನಿಮಗೆ ಬೇಕಿದ್ದರೆ ನಿಂಬೆ ರಸವನ್ನು ಹಿಂಡಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಈ ಕಡಲೆ ಕಾಳಿನ ಸಲಾಡ್ ರೆಡಿಯಾಗುತ್ತದೆ. ಇದು ಆರೋಗ್ಯಕ್ಕೆ ಬಹಳ ಉತ್ತಮ. ಬೆಳಗ್ಗೆ ಸಲಾಡ್ ತಿಂದು ದಿನ ಆರಂಭಿಸಿದರೆ ಅದ್ಭುತವಾಗಿರುತ್ತೆ.



Click it and Unblock the Notifications