Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಬಾಯಲ್ಲಿ ನೀರು ತರಿಸುವ ರುಚಿ ರುಚಿಯ ಕಡಲೆ ಬೇಳೆ ಪಾಯಸ! ಹಬ್ಬಕ್ಕೆ ಮಾಡಿ ಸವಿದು ನೋಡಿ!
ಹಬ್ಬದ ಸಮಯದಲ್ಲಿ ನಾವು ಸಿಹಿ ಮಾಡುವುದು ಕಾಮನ್. ಹಾಗೆ ಹಬ್ಬದಲ್ಲಿ ನಾವು ಯಾವುದಾದರೊಂದು ರುಚಿಯ ಪಾಯಸ ಮಾಡಿ ಸವಿಯುವುದು ನೋಡಬಹುದು. ಪಾಯಸ ಅಂದರೆ ಎಲ್ಲರಿಗೂ ಇಷ್ಟವಾಗುವ ಸಿಹಿ, ಹಾಗೆ ಮಾಡೋದು ಕೂಡ ಬಹಳ ಸುಲಭ. ಇನ್ನು ಪಾಯಸದಲ್ಲಿ ಹತ್ತು ಹಲವು ಬಗೆಗಳಿವೆ. ಹಲವು ವಸ್ತುಗಳಿಂದ ಪಾಯಸ ಮಾಡುವುದು ನೋಡಬಹುದು.
ಅದ್ರಲ್ಲೂ ನಾವಿಂದು ವಿಶೇಷ ರುಚಿಯಲ್ಲಿ ಮಾಡುವಂತಹ ಹಾಗೆ ಎಲ್ಲರಿಗೂ ಇಷ್ಟವಾಗುವಂತಹ ರೀತಿಯಲ್ಲಿ ಪಾಯಸ ಮಾಡುವ ಕುರಿತು ತಿಳಿದುಕೊಳ್ಳೋಣ. ಅದ್ರಲ್ಲೂ ನಾವಿಂದು ಕಡಲೆ ಬೇಳೆಯಿಂದ ಮಾಡುವಂತಹ ರುಚಿ ರುಚಿಯ ಪಾಯಸದ ಕುರಿತು ತಿಳಿದುಕೊಳ್ಳೋಣ. ಕಡಲೆ ಬೇಳೆಯ ಪಾಸಯದ ಹೆಸರು ಕೇಳಿದ್ರೆ ಹಲವರಿಗೆ ಬಾಯಲ್ಲಿ ನೀರಬಹುದು.

ಬೆಲ್ಲದ ಹಾಗೂ ಈ ಕಡಲೆ ಬೇಳೆ ಬಳಸಿ ಮಾಡುವಂತಹ ಪಾಯಸ ರುಚಿ ರುಚಿಯಾಗಿರಲಿದೆ. ಹಾಗೆ ಹಬ್ಬದಲ್ಲಿ ಇದನ್ನು ಎಲ್ಲರು ಇಷ್ಟಪಟ್ಟು ಸವಿಯಲು ಮುಂದಾಗುತ್ತಾರೆ. ಹಾಗಾದ್ರೆ ನಾವುಂದು ಈ ಕಡಲೆ ಬೇಳೆಯಿಂದ ಹೇಗೆ ರುಚಿ ರುಚಿಯಾದ, ಬಾಯಲ್ಲಿ ನೀರುತರಿಸುವಂತಹ ಪಾಯಸ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಕಡಲೆ ಬೇಳೆ ಪಾಯಸ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಡಲೆ ಬೇಳೆ ಪಾಯಸ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಕಡಲೆ ಬೇಳೆ
- ಅಕ್ಕಿ
- ಬೆಲ್ಲ
- ಗೋಡಂಬಿ
- ಗಸೆಗಸೆ
- ಏಲಕ್ಕಿ
- ಹಸಿ ತೆಂಗಿನಕಾಯಿ
- ಹಾಲು
- ದ್ರಾಕ್ಷಿ
- ತುಪ್ಪ
ಕಡಲೆ ಬೇಳೆ ಪಾಯಸ ಮಾಡುವ ವಿಧಾನವೇನು?
ಮೊದಲು ಒಂದು ಅಳತೆ ಕಪ್‌ನಲ್ಲಿ ಒಂದು ಕಪ್ ಕಡಲೆ ಬೇಳೆಯನ್ನು ಬೌಲ್‌ಗೆ ಹಾಕಿಕೊಳ್ಳಿ. ನಂತರ 5 ಸ್ಪೂನ್ ಅಕ್ಕಿ ಹಾಕಿ ಅದಕ್ಕೆ ನೀರು ಹಾಕಿ ಚೆನ್ನಾಗಿ ತೊಳೆದುಕೊಳ್ಳಿ. ಈಗ ಒಲೆ ಮೇಲೆ ಕುಕ್ಕರ್ ಇಟ್ಟು ಅದಕ್ಕೆ 1 ಸ್ಪೂನ್ ತುಪ್ಪ, ಹಾಗೆ ತೊಳೆದಿರುವ ಅಕ್ಕಿ ಹಾಗೂ ಕಡಲೆ ಬೇಳೆ ಹಾಕಿಕೊಂಡು 1 ನಿಮಿಷ ಫ್ರೈ ಮಾಡಿ.
ಈಗ ಬೇಳೆ ತೆಗೆದುಕೊಂಡ ಕಪ್‌ನಲ್ಲಿ 3 ಕಪ್ ನೀರು ಹಾಕಿಕೊಳ್ಳಿ. ನಂತರ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 5 ಸೀಟಿ ಹೊಡೆಸಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಗಸೆ ಗಸೆ, ಏಲಕ್ಕಿ ಹಾಕಿ ಫ್ರೈ ಮಾಡಿಕೊಳ್ಳಿ. 1 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಒಂದು ಮಿಕ್ಸಿ ಜಾರ್‌ಗೆ ಈ ಎರಡು ಪದಾರ್ಥ ಹಾಕಿಕೊಂಡು ಬಳಿಕ ಹಸಿ ತೆಂಗಿನಕಾಯಿ ಹಾಗೂ ಸ್ವಲ್ಪ ಹಾಲು ಹಾಕಿ ನುಣ್ಣಗೆ ರುಬ್ಬಿಕೊಂಡು ತೆಗೆದಿಟ್ಟುಕೊಳ್ಳಿ.
ಈಗ ಕುಕ್ಕರ್ ಮುಚ್ಚಳ ತೆಗೆದು ಸ್ವಲ್ಪ ಬೇಳೆಯನ್ನು ಪುಡಿ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಅರ್ಧ ಕಪ್ ಬೆಲ್ಲದ ಪುಡಿಯನ್ನು ಹಾಕಿಕೊಳ್ಳಿ. ಇಲ್ಲವೆ ಮುಕ್ಕಾಲು ಕಪ್ ಬೆಲ್ಲ ಬಳಸಿ. ನಂತರ ಮಿಕ್ಸಿಯಲ್ಲಿ ರುಬ್ಬಿದ ಪೇಸ್ಟ್ ಸಹ ಹಾಕಿಕೊಂಡು ಸ್ವಲ್ಪ ನೀರು ಕೂಡ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಕುದಿಬರಲು ಬಿಡಬೇಕು.
2 ನಿಮಿಷ ಕುದಿ ಬಂದ ಬಳಿಕ ಇದಕ್ಕೆ ತುಪ್ಪದಲ್ಲಿ ಹುರಿದುಕೊಂಡಿರುವ ಗೋಡಂಬಿ, ದ್ರಾಕ್ಷಿಯನ್ನು ಕೂಡ ಹಾಕಿಕೊಂಡು ಅದನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಕಡಲೆ ಬೇಳೆ ಪಾಯಸ ರೆಡಿಯಾಗುತ್ತದೆ. ಊಟದಲ್ಲಿ ಈ ಪಾಸಯ ಇದ್ದರೆ ಎಲ್ಲರಿಗೂ ಇಷ್ಟವಾಗುತ್ತೆ. ನೀವು ಕೂಡ ಇದನ್ನು ಮನೆಯಲ್ಲಿ ಟ್ರೈ ಮಾಡಿ.



Click it and Unblock the Notifications