Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹಬ್ಬಕ್ಕೆ ಇಲ್ಲವೆ ಗೆಸ್ಟ್ ಬಂದರೆ ಈ ಕಡಲೆಬೇಳೆ ಪಾಯಸ ಮಾಡಿ..! ಈ ರುಚಿ ಒಮ್ಮೆ ಸವಿದು ನೋಡಿ..!
ನೀವು ಹಬ್ಬದ ಸಂದರ್ಭದಲ್ಲಿ ಅಥವಾ ಮನೆಯಲ್ಲಿ ಏನಾದರು ಶುಭ ಕಾರ್ಯವಿದ್ದಾಗ ಇಲ್ಲವೆ ಯಾರಾದರು ಅತಿಥಿಗಳು ಬಂದಾಗ ಅವರಿಗೆ ಸ್ವೀಟ್ ಮಾಡಿ ನೀಡುವುದು ಸಾಮಾನ್ಯ. ಅದರಲ್ಲೂ ಪಾಯಸ ಮಾಡಿ ನೀಡುವುದು ಎಲ್ಲರಿಗೂ ಬಹಳ ಇಷ್ಟವಾಗುವ ಹಾಗೆ ಕಡಿಮೆ ಸಮಯದಲ್ಲಿ ಮಾಡಬಹುದಾದ ಒಂದು ಸ್ವೀಟ್. ಹಾಗೆ ನೀವು ಈ ಪಾಯಸದಲ್ಲೂ ಹತ್ತು ಹಲವು ವಿಧಗಳ ನೋಡಿರುತ್ತಿರಿ.
ಪಾಯಸದಲ್ಲಿ ನೀವು ಶಾವಿಗೆ ಪಾಯಸ, ಸಾಬುದಾನಿ, ಅಕ್ಕಿ, ಗೋಧಿ, ಪಾಸ್ತಾದಿಂದ ಮಾಡುವಂತಹ ರುಚಿ ರುಚಿಯ ಪಾಯಸ ಮಾಡಿ ಸವಿದಿರುತ್ತೀರಿ. ಇದಲ್ಲದಕ್ಕಿಂತ ರುಚಿಯಾದ ಪಾಯಸ ಯಾವುದು ಎಂಬುದು ನಿಮಗೆ ಗೊತ್ತಾ? ಈ ಪಾಯಸಗಳಿಗಿಂತ ರುಚಿಕರ ಪಾಯಸ ಅಂದ್ರೆ ಅದು ಕಡಲೆ ಬೇಳೆ ಪಾಯಸ, ಹಾಗಾದ್ರೆ ಈ ಪಾಯಸ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.

ನೀವು ಕೂಡ ಮನೆಯಲ್ಲಿ ಹಲವು ಬಾರಿ ಈ ಕಡಲೆ ಬೇಳೆ ಪಾಯಸ ಮಾಡಿರಬಹುದು. ಅಥವಾ ಮದುವೆಯಂತಹ ಸಮಾರಂಬದಲ್ಲಿ ಸವಿದಿರಬಹುದು. ಇದಕ್ಕಿಂತ ಅದ್ಭುತ ರುಚಿಯ ಪಾಯಸ ಮತ್ತೆ ನೀವು ಸವಿಯಲು ಸಾಧ್ಯವೇ ಇಲ್ಲ. ಹೀಗಾಗಿ ಇದೊಂದು ವಿಶೇಷ ಹಾಗೂ ವಿಭಿನ್ನ ರುಚಿಯ ಪಾಯಸ ಎನ್ನಬಹುದು. ಹಾಗೆ ಈ ಪಾಯಸ ಮಾಡೋದು ಸುಲಭವಲ್ಲ.
ಕಡಲೆ ಬೇಳೆ ಪಾಯಸ ಮಾಡುವುದು ಹೇಗೆ? ಈ ಪಾಯಸ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ಇಲ್ಲಿ ತಿಳಿದುಕೊಳ್ಳೋಣ.
ಕಡಲೆ ಬೇಳೆ ಪಾಯಸ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಕಡಲೆ ಬೇಳೆ - 1/2 ಕಪ್
- ಅಕ್ಕಿ - 1/4 ಕಪ್
- ಪುಡಿ ಮಾಡಿದ ಬೆಲ್ಲ - ಅರ್ಧ ಕಪ್
- ಗಸಗಸೆ - 1 ಚಮಚ
- ಏಲಕ್ಕಿ - 2
- ತೆಂಗಿನಕಾಯಿ ತುರಿ - 1/4 ಕಪ್
- ಹಾಲು -1/2 ಕಪ್
- ಒಣ ದ್ರಾಕ್ಷಿ
- ಗೋಡಂಬಿ
- ತುಪ್ಪ
ಕಡಲೆ ಬೇಳೆ ಪಾಯಸ ಮಾಡುವುದು ಹೇಗೆ?
ಮೊದಲು ಒಂದು ಬೌಲ್‌ಗೆ ಅರ್ಧ ಕಪ್ ಕಡಲೆ ಬೇಳೆಯನ್ನು ಹಾಕಿ ಒಂದು ಮುಷ್ಠಿಗಿಂತ ಕಡಿಮೆ ಅಕ್ಕಿಯನ್ನು ಅದಕ್ಕೆ ಹಾಕಿ ನೀರು ಹಾಕಿಕೊಂಡು ತೊಳೆದುಕೊಳ್ಳಬೇಕು. 2 ಬಾರಿ ಚೆನ್ನಾಗಿ ತೊಳೆದುಕೊಳ್ಳಿ. ಈಗ ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ತುಪ್ಪ ಹಾಕಿ ಬಳಿಕ ತೊಳೆದುಕೊಂಡ ಕಡಲೆ ಬೇಳೆ ಮತ್ತು ಅಕ್ಕಿಯನ್ನು ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಿ.
ಈಗ ಯಾವ ಕಪ್‌ನಲ್ಲಿ ಬೇಳೆ ತೆಗೆದುಕೊಂಡಿದ್ದೀರೋ ಅದೇ ಕಪ್‌ನಲ್ಲಿ ಮೂರು ಕಪ್‌ನಷ್ಟು ನೀರು ಹಾಕಿಕೊಳ್ಳಿ. ಹಾಗೆ ಕುಕ್ಕರ್ ಮುಚ್ಚಳ ಮುಚ್ಚಿ 5 ಸೀಟಿ ಹೊಡೆಯಲು ಬಿಡಬೇಕು. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಗಸೆಗಸೆ, ಏಲಕ್ಕಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ಗಸೆಗಸೆ ತೆಗೆದು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಹೆಚ್ಚಿಕೊಂಡಿರುವ ತೆಂಗಿನಕಾಯಿ ಹಾಕಿ, ಹಾಗೆ ಬಿಸಿ ಮಾಡಿ ತಣ್ಣಗೆ ಮಾಡಿರುವ ಹಾಲು ಹಾಕಿಕೊಂಡು ರುಬ್ಬಿ.
ಇದು ಚಟ್ನಿ ರೀತಿ ತರಿತರಿಯಾಗಿ ಬರಬೇಕು. ಈಗ ಕುಕ್ಕರ್‌ನಲ್ಲಿ ಬೆಂದಿರುವ ಬೇಳೆಯನ್ನು ಕುಕ್ಕರ್ ಮುಚ್ಚಳ ತೆಗೆದು ಸ್ವಲ್ಪ ತಿರುಗಿಸಿ. ನಂತರ ಕುಕ್ಕರ್‌ಗೆ ಅರ್ಧ ಕಪ್ ಬೆಲ್ಲದ ಪುಡಿಯನ್ನು ಹಾಕಿಕೊಳ್ಳಿ. ಹಾಗೆ ರುಬ್ಬಿಕೊಂಡಿರುವ ಗಸೆಗಸೆಯ ಪೇಸ್ಟ್ ಅನ್ನು ಕೂಡ ಇದಕ್ಕೆ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ತಿರುಗಿಸಿಕೊಳ್ಳಿ, ಸಣ್ಣ ಉರಿಯಲ್ಲಿ ಇದನ್ನು ಬೇಯಲು ಬಿಡಿ.
2 ನಿಮಿಷ ಕುದಿ ಬಂದಾಗ ಈಗ ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಅದಕ್ಕೆ ಗೋಡಂಬಿ, ದ್ರಾಕ್ಷಿ ಹಾಕಿ ಫ್ರೈ ಮಾಡಿ ನಂತರ ಪಾಯಸಕ್ಕೆ ಹಾಕಿ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಅದ್ಭುತ ರುಚಿಯ ಕಡಲೆ ಬೇಳೆ ಪಾಯಸ ರೆಡಿಯಾಗುತ್ತೆ.



Click it and Unblock the Notifications
