Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಬಾಯಲ್ಲಿ ನೀರೂರಿಸುವ ಚಂಪಾಕಲಿ ತಿಂಡಿ ಮನೆಯಲ್ಲೇ ಮಾಡಿ..!!
ಸಿಹಿ ತಿಂಡಿ ಅಂದ್ರೆ ಹಲವರಿಗೆ ಹತ್ತಾರು ರೀತಿಯ ತಿಂಡಿಗಳು ನೆನಪಿಗೆ ಬರುತ್ತವೆ. ನಿಮಗೆ ಚಂಪಾಕಲಿ ತಿಂಡಿ ಸವಿಯೋದು ಅಂದ್ರೆ ಇಷ್ಟ ಅಲ್ವಾ. ಚಂಪಾಕಲಿ ಬೇಕರಿಯಲ್ಲಿ ನೋಡಿದ್ರೆ ಬಾಯಲ್ಲಿ ನೀರು ಬರುತ್ತೆ. ಮಕ್ಕಳಿಗೆ ಚಂಪಾಕಲಿ ಅಂದ್ರೆ ಪಂಚಪ್ರಾಣ. ಚಂಪಾಕಲಿ ಮೇಲಿನ ಚರಿ ಹಣ್ಣು ಮೊದಲು ಕಿತ್ತು ತಿಂದು ಇಡಿಯಾಗಿ ಚಂಪಾಕಲಿ ಸವಿಯುತ್ತಾರೆ.
ಚಂಪಾಕಲಿಯ ಪಾಕವೇ ಅದರ ರುಚಿ ಹೆಚ್ಚಿಸುತ್ತೆ. ಎಲ್ಲಾ ಬೇಕರಿಯಲ್ಲೂ ಈ ಚಂಪಾಕಲಿ ಹೆಚ್ಚಾಗಿ ಮಾರಾಟ ಆಗುವ ಸಿಹಿ ತಿಂಡಿ. ಆದ್ರೆ ಈ ಸಿಹಿತಿಂಡಿಯನ್ನ ಕೆಲವರು ಮನೆಯಲ್ಲೇ ಮಾಡಿ ಸವಿಯಲು ಇಷ್ಟಪಡುತ್ತಾರೆ. ಬೇಕರಿಯಲ್ಲಿ ಈ ತಿಂಡಿ ಹೇಗೆಲ್ಲಾ ಮಾಡಿರುತ್ತಾರೆ ಎಂಬ ಅನುಮಾನ ಅವರಲ್ಲಿರುತ್ತೆ.

ಹಾಗಾದ್ರೆ ನಾವೂ ಸಹ ಇಂದು ಈ ಚಂಪಾಕಲಿಯನ್ನ ಮನೆಯಲ್ಲೇ ಮಾಡುವುದು ಹೇಗೆ? ಚಂಪಾಕಲಿ ಮಾಡಲು ಯಾವೆಲ್ಲಾ ವಸ್ತು ಬೇಕು? ಮಾಡುವ ವಿಧಾನವೇನು?, ಮಾಡುವ ಕ್ರಮ ಏನು ನೋಡೋಣ.
ಚಂಪಾಕಲಿ ಮಾಡಲು ಬೇಕಾಗುವ ವಸ್ತುಗಳು
- ಹಾಲು - ಒಂದೂವರೆ ಲೀಟರ್
- ನಿಂಬೆ ಹಣ್ಣು - 2
- ಬೇಕಿಂಗ್ ಸೋಡಾ
- ಕಾರ್ನ್ ಫ್ಲೋರ್
- ತುಪ್ಪ
- ಹಳದಿ ಬಣ್ಣ
- ಸಕ್ಕರೆ - 1 ಕೆ.ಜಿ
- ಹಾಲಿನ ಪುಡಿ
- ಚರಿ ಹಣ್ಣ
- ನೀರು
ಚಂಪಾಕಲಿ ಸಿಹಿ ತಿಂಡಿ ಮಾಡುವುದು ಹೇಗೆ?
ಮೊದಲು ಒಂದೂವರೆ ಲೀಟರ್ ಹಾಲನ್ನು ಒಲೆ ಮೇಲಿಟ್ಟು ಕುದಿಯಲು ಬಿಡಿ. ಕುದಿಯಲು ಆರಂಭಿಸುವಾಗ ಎರಡು ನಿಂಬೆ ರಸ ಹಿಂಡಿಕೊಂಡು ಸ್ವಲ್ಪ ಸ್ವಲ್ಪವೇ ಹಾಕಿಕೊಳುತ್ತಾ ತಿರುಗಿಸಿಕೊಳ್ಳಿ. ಹಾಲು ಪಡೆದ ನಂತರ ಅದನ್ನು ಒಂದು ತೆಳು ಬಟ್ಟೆಗೆ ಹಾಕಿ ಚೆನ್ನಾಗಿ ಹಿಂಡಿಕೊಳ್ಳಬೇಕು.
ನಂತರ ಈ ಪನೀರ್‌ನಲ್ಲಿ ಇರುವ ಹುಳಿ ಅಂಶ ಹೋಗಬೇಕಾದರೆ ನೀರಿನಿಂದ ತೊಳೆದುಕೊಂಡು ಮತ್ತೆ ಹಿಂಡಿಕೊಳ್ಳಬೇಕು. ನಂತರ ಅದನ್ನು ಒಂದು ಪ್ಲೇಟ್‌ಗೆ ಹಾಕಿ ಪುಡಿ ಪುಡಿ ಮಾಡಿಕೊಳ್ಳಿ. ನಂತರ ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್, ಕಾರ್ನ್ ಫ್ಲೋರ್, ತುಪ್ಪ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ ಹಳದಿ ಬಣ್ಣ ಹಾಕಿ ಕಲಸಿಕೊಳ್ಳಿ.
ಇದು ಚಪಾತಿ ಹಿಟ್ಟಿನಂತೆ ಆಗುವವರೆಗೂ ಕಲಸಿಕೊಳ್ಳಿ. ನಂತರ ಚಂಪಾಕಲಿಗೆ ಯಾವ ಗಾತ್ರದಲ್ಲಿ ಬೇಕೋ ಆ ರೀತಿ ಸಣ್ಣ ಸಣ್ಣ ಹಿಟ್ಟಿನ ಉಂಡೆ ಮಾಡಿಕೊಳ್ಳಿ. ಹೆಬ್ಬೆರಳಿನ ಆಕಾರದಲ್ಲಿರಲಿ. ಈಗ ಒಲೆ ಒಂದು ಪಾತ್ರೆ ಇಟ್ಟು ಅರ್ಧ ಕೆ.ಜಿ ಸಕ್ಕರೆ ಹಾಗು ನೀರು ಹಾಕಿ ಪಾಕ ಮಾಡಿಕೊಳ್ಳಿ.
ಈ ಪಾಕ ಕುದಿಯಲು ಆರಂಭವಾದಾಗ ಚಂಪಾಕಲಿಯನ್ನ ಒಂದೊಂದಾಗಿ ಪಾಕದಲ್ಲಿ ಬಿಡಿ. ಚೆನ್ನಾಗಿ ಬೇಯಲು ಬಿಡಿ. 10 ನಿಮಿಷದ ವರೆಗೂ ಬೇಯಿಸಿ ಬಳಿಕ ಒಲೆ ಆಫ್ ಮಾಡಿ ಒಂದು ಪಾತ್ರೆ ಮುಚ್ಚಿಡಿ.
ಈಗ ಮತ್ತೊಂದು ಪಾತ್ರೆಯಲ್ಲಿ ಕೋವಾ ಮಾಡಿಕೊಳ್ಳಿ. ಇದಕ್ಕಾಗಿ ತುಪ್ಪ, ಸ್ವಲ್ಪ ಹಾಲು, ಹಾಲಿನ ಪುಡಿ ಸಹ ಹಾಕಿ ತಿರುಗಿಸಿಕೊಳ್ಳಿ. ಅದು ಗಟ್ಟಿಯಾಗುವಾಗ ಸಕ್ಕರೆ ಹಾಕಿ ಈ ಮಿಶ್ರಣ ಗಟ್ಟಿಯಾಗುವವರೆಗೂ ತಿರುಗಿಸುತ್ತ ಇರಿ. ಈ ಮಿಶ್ರಣ ಗಟ್ಟಿಯಾಗಿ ಸಿಹಿ ಉಪ್ಪಿಟ್ಟಿನಂತೆ ಆಗುತ್ತದೆ.
ಈಗ ಸಕ್ಕರೆ ಪಾಕದಲ್ಲಿರುವ ಚಂಪಾಕಲಿಯನ್ನು ಒಂದೊಂದಾಗಿ ತೆಗೆದುಕೊಂಡು ಮಧ್ಯದಲ್ಲಿ ಸಣ್ಣದಾಗಿ ಕತ್ತರಿಸಿಕೊಳ್ಳಿ. ಈಗ ಹಾಲಿನಿಂದ ಮಾಡಿಕೊಂಡ ಕೋವಾವನ್ನು ಹಾಕಿಕೊಂಡು ಮೇಲೆ ಚರಿ ಹಣ್ಣು ಇಟ್ಟರೆ ನಿಮ್ಮ ಮುಂದೆ ರುಚಿ ರುಚಿಯ ಚಂಪಾಕಲಿ ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಟ್ರೈ ಮಾಡಿ ನೋಡಿ. ಇದು ಸುಲಭವಾಗಿ ಮಾಡಬಹುದಾದ ತಿಂಡಿಯಾಗಿದೆ. ನಿಮಗೆ ಅಂಗಡಿಯಲ್ಲಿ ರೆಡಿ ಮೇಡ್ ಕೋವಾ ಸಿಗುತ್ತದೆ ಕೇವಲ ಚಂಪಾಕಲಿ ಮಾಡಿಕೊಂಡರೆ ಸಾಕಾಗುತ್ತದೆ.



Click it and Unblock the Notifications
