Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಉಳಿದ ಅನ್ನದಿಂದ ಥಟ್ ಅಂತ ಚಕ್ಕುಲಿ ಮಾಡಿ..! ಎಷ್ಟೊಂದು ಸುಲಭದ ತಿಂಡಿ ಗೊತ್ತಾ?
ಮನೆಯಲ್ಲಿ ಊಟಕ್ಕೆ ಮಾಡಿರುವ ಅನ್ನ ಉಳಿದರೆ ಏನು ಮಾಡುತ್ತೀರಿ. ಬಹುತೇಕ ಮಂದಿ ಇತ್ರಾನ್ನ ಮಾಡುತ್ತಾರೆ. ಇಲ್ಲವೆ ಅನ್ನದಿಂದ ಕೆಲವೊಂದು ಖಾದ್ಯ ಮಾಡಿ ಸವಿಯೋದು ನೋಡಬಹುದು. ಅದರಲ್ಲೂ ಸಂಡಿಗೆ, ಹಪ್ಪಳದಂತಹ ಖಾದ್ಯ ಕೂಡ ರೆಡಿಯಾಗುತ್ತೆ. ಅದರಲ್ಲು ಈ ಉಳಿದ ಅನ್ನದಿಂದ ನಾವು ಅದ್ಭುತ ರುಚಿಯಲ್ಲಿ ವಡೆ, ಬೋಂಡಾ ಕೂಡ ಮಾಡಬಹುದು ಎಂಬುದು ಕೂಡ ನೀವು ಕೇಳಿರಬಹುದು.
ಆದ್ರೆ ಇದೇ ಉಳಿದ ಅನ್ನದಿಂದ ಗರಿ ಗರಿಯಾದ ಚಕ್ಕುಲಿ ಮಾಡೋದು ಹೇಗೆ ಅನ್ನೋದು ನಿಮಗೆ ಗೊತ್ತಾ? ಹೌದು ಈ ಉಳಿದ ಅನ್ನದಲ್ಲಿ ನಿವೆಂದು ಮಾಡಿರದ ರುಚಿ ರುಚಿ ಚಕ್ಕುಲಿ ಮಾಡಬಹುದು. ಹಾಗಾದ್ರೆ ಮಾಡೋದು ಹೇಗೆ? ಈ ಚಕ್ಕುಲಿ ಎಲ್ಲರಿಗೂ ಇಷ್ಟವಾಗೋದು ಖಚಿತ. ಹಾಗೆ ಕಡಿಮೆ ಸಮಯಲ್ಲಿ ಕಡಿಮೆ ವಸ್ತುಗಳನ್ನು ಬಳಸಿಕೊಂಡು ಮಾಡಬಹುದು.

ಹಾಗಾದ್ರೆ ಉಳಿದ ಅನ್ನದಲ್ಲಿ ಚಕ್ಕುಲಿಯನ್ನು ಮಾಡುವುದು ಹೇಗೆ? ಈ ಚಕ್ಕುಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಉಳಿದ ಅನ್ನದಿಂದ ಚಕ್ಕುಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅನ್ನ - 1 ಕಪ್
- ಹುರಿಗಡಲೆ - ಮುಕ್ಕಾಲು ಕಪ್
- ಜೀರಿಗೆ
- ಬಿಳಿ ಎಳ್ಳು - 1 ಟೀಸ್ಪೂನ್
- ಓಂಕಾಳು
- ಇಂಗು - 1/2 ಟೀಸ್ಪೂನ್
- ಕೆಂಪು ಮೆಣಸಿನ ಪುಡಿ - 2 ಟೀಸ್ಪೂನ್
- ರುಚಿಗೆ ತಕ್ಕಷ್ಟು ಉಪ್ಪು
- ಅಡುಗೆ ಎಣ್ಣೆ
ಉಳಿದ ಅನ್ನದಿಂದ ಚಕ್ಕುಲಿನ ಮಾಡುವುದು ಹೇಗೆ?
ಮೊದಲು ಮಿಕ್ಸಿ ಜಾರ್ಗೆ ಮುಕ್ಕಾಲು ಕಪ್ ಹುರಿಗಡಲೆ ಹಾಕಿ ಅದನ್ನು ರುಬ್ಬಿಕೊಂಡು ಹಿಟ್ಟು ಮಾಡಿಕೊಳ್ಳಿ. ಈಗ ಅದೇ ಮಿಕ್ಸಿ ಜಾರ್ಗೆ ಅನ್ನ ಹಾಕಿಕೊಂಡು ರುಬ್ಬಿಕೊಳ್ಳಿ. ಸ್ವಲ್ಪ ನೀರು ಹಾಕಿ ನುಣ್ಣೆಗೆ ರುಬ್ಬಿ. ಇದು ಗಟ್ಟಿ ಹಿಟ್ಟಿನಂತಾಗಬೇಕು. ಇದನ್ನ ಕೂಡ ಒಂದು ಬೌಲ್ಗೆ ಹಾಕಿ ಅದಕ್ಕೆ ಉಪ್ಪು, ಓಂಕಾಳು, ಜೀರಿಗೆ, ಖಾರದ ಪುಡಿ, ಬಿಳಿ ಎಳ್ಳು ಎಲ್ಲಾ ಹಾಕಿ ಒಮ್ಮೆ ಡ್ರೈ ಮಿಕ್ಸ್ ಮಾಡಿಕೊಳ್ಳಿ.
ತದನಂತರ ಇದಕ್ಕೆ ರುಬ್ಬಿಕೊಂಡಿರುವ ಹುರಿಗಡಲೆ ಪುಡಿಯನ್ನು ಇದಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನೀರು ಹಾಕದೆಯೇ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟು ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಬರುವಂತೆ ಮಾಡಿಕೊಳ್ಳಿ. ನಂತರ ಹಿಟ್ಟನ್ನು ಹದ ಮಾಡಲು ಕೊನೆಯಲ್ಲಿ 2 ಸ್ಪೂನ್ ಎಣ್ಣೆ ಹಾಕಿ ಹದ ಮಾಡಿ ಇಟ್ಟುಕೊಳ್ಳಿ.
ಈಗ ಚಕ್ಕುಲಿ ಮಾಡುವ ಅಚ್ಚು ತೆಗೆದುಕೊಂಡು ಅದಕ್ಕೆ ಎಣ್ಣೆ ಸವರಿ ಈ ರೆಡಿ ಮಾಡಿಕೊಂಡ ಹಿಟ್ಟನ್ನು ಅದರ ಒಳಗೆ ಹಾಕಿ ಒಂದು ತಟ್ಟೆ ಅಥವಾ ಪ್ಲಾಸ್ಟಿಕ್ ಮೇಲೆ ಚಕ್ಕುಲ್ಲಿಯನ್ನು ಒತ್ತಿಕೊಳ್ಳಿ. ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಮಾಡಬಹುದು.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಎಣ್ಣೆ ಕಾದಾಗ ಇದಕ್ಕೆ ಚಕ್ಕುಲಿ ಗಳನ್ನು ಬಿಟ್ಟುಕೊಳ್ಳಿ. ಸಣ್ಣ ಉರಿಯಲ್ಲಿ ಚಕ್ಕುಲಿಯನ್ನು ಕರಿದುಕೊಳ್ಳಿ. ಚಕ್ಕುಲಿ ಬ್ರೌನ್ ಕಲರ್ಗೆ ಬರಿವವರೆಗೂ ಕರಿದುಕೊಳ್ಳಿ. ನಂತರ ಎಣ್ಣೆಯಿಂದ ತೆಗೆದುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಅನ್ನದಿಂದ ಮಾಡುವ ಚಕ್ಕುಲಿ ಸಿದ್ಧವಾಗುತ್ತೆ. ನೀವು ಕೂಡ ಮನೆಯಲ್ಲಿ ಅನ್ನ ಉಳಿದರೆ ಈ ರೀತಿ ಚಕ್ಕುಲಿ ಮಾಡಿ ನೋಡಿ.



Click it and Unblock the Notifications