Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಗರಿಗರಿಯಾದ ಚಕ್ಲಿ ಮನೆಯಲ್ಲೇ ಮಾಡಬಹುದು..! ಇಲ್ಲಿದೆ ಸಿಂಪಲ್ ರೆಸಿಪಿ
ಮಾರ್ಚ್ ಮುಗಿಯುತ್ತಿದ್ದಂತೆ ಸಾಲು ಸಾಲು ಹಬ್ಬಗಳು ಬರುತ್ತವೆ. ಏಪ್ರಿಲ್ನಲ್ಲಿ ಯುಗಾದಿಯಿಂದ ಆರಂಭಗೊಂಡು ವರ್ಷ ಮುಗಿಯುವವರೆಗೂ ಒಂದಲ್ಲಾ ಒಂದು ಹಬ್ಬ ಬರುತ್ತವೆ. ಹಬ್ಬ ಎಂದರೆ ತಿಂಡಿಗಳು ನೆನಪಾಗುತ್ತವೆ. ವಿಧ ವಿಧದ ತಿಂಡಿಗಳು ಎಲ್ಲರ ಮನೆಯಲ್ಲೂ ಗಮ ಗಮಿಸುತ್ತವೆ.
ಇನ್ನು ಕರಿದ ತಿಂಡಿಗಳಲ್ಲಿ ಚಕ್ಲಿ ಎಲ್ಲರ ಮೆಚ್ಚಿನ ತಿಂಡಿಯಾಗಿದೆ. ಟೀ, ಕಾಫಿ ಜೊತೆ ಸವಿಯಲು, ಊಟದ ಜೊತೆ ಇದ್ದರಂತು ಮತ್ತಷ್ಟು ರುಚಿ ಹೆಚ್ಚಾಗುತ್ತದೆ. ಹೀಗಾಗಿ ರುಚಿ ರುಚಿಯ ಚಕ್ಲಿಗೆ ಬಹಳ ಬೇಡಿಕೆಯೂ ಇದೆ. ಇತ್ತ ಕಡಿಮೆ ಸಮಯದಲ್ಲಿ, ಕಡಿಮೆ ವಸ್ತುಗಳ ಬಳಸಿ ಮಾಡಬಹುದಾದ ತಿಂಡಿಗಳಲ್ಲಿ ಈ ಚಕ್ಲಿಯೂ ಸಹ ಒಂದಾಗಿದೆ.

ಹಾಗಾದರೆ ರುಚಿ ರುಚಿ ಕರಿದ ಚಕ್ಲಿಯನ್ನು ಮನೆಯಲ್ಲೇ ಮಾಡುವುದು ಹೇಗೆ? ಚಕ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಚಕ್ಲಿ ಮಾಡುವ ಪಾಕವಿಧಾನವೇನು ಎಂಬುದನ್ನು ನಾವಿಂದು ತಿಳಿಯೋಣ.
ಚಕ್ಲಿ ಮಾಡಲು ಬೇಕಾಗುವ ವಸ್ತುಗಳು
- ಹುರಿಗಡಲೆ- ಅರ್ಧ ಕಪ್
- ಅಕ್ಕಿ ಹಿಟ್ಟು- 2 ಕಪ್
- ಇಂಗು
- ಅರಶಿನ ಪುಡಿ
- ಓಂಕಾಳು
- ಖಾರದ ಪುಡಿ
- ಎಳ್ಳು
- ತುಪ್ಪ
- ಉಪ್ಪು
- ಪ್ಲಾಸ್ಟಿಕ್ ಕವರ್
- ಚಕ್ಲಿ ಒತ್ತುವ ಪಾತ್ರೆ
ಚಕ್ಲಿ ಮಾಡುವ ಪಾಕವಿಧಾನ
ಮೊದಲು ಹುರಿಗಡಲೆಯನ್ನು ಮಿಕ್ಸರ್ ಜಾರ್ಗೆ ಹಾಕಿ ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಿ. ಇನ್ನು 2 ಕಪ್ ಅಷ್ಟು ಅಕ್ಕಿ ಹಿಟ್ಟನ್ನು ಜರಡಿ ಹಿಡಿದು ಒಂದು ಪಾತ್ರೆಗೆ ಹಾಕಿಕೊಳ್ಳಿ. ಇದಕ್ಕೆ ಹುರಿಗಡಲೆಯನ್ನೂ ಜರಡಿ ಹಿಡಿದು ಅದೆ ಪಾತ್ರೆಗೆ ಹಾಕಿಕೊಳ್ಳಿ. ಇದಕ್ಕೆ ಇಂಗು, ಅರಶಿನ, ಪುಡಿ ಮಾಡಿರುವ ಓಂಕಾಳು, ಖಾರದ ಪುಡಿ, ಎಳ್ಳು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಮಿಕ್ಸ್ ಮಾಡಿದ ಬಳಿಕ ಇದಕ್ಕೆ ತುಪ್ಪವನ್ನು ಕಾಯಿಸಿ ಅದನ್ನು ಹಾಕಬೇಕು.
ತುಪ್ಪ ಹಾಕಿದ ಬಳಿಕ ಹಿಟ್ಟನ್ನು ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಬೇಕು. ತುಪ್ಪದ ಅಂಶ ಹಿಟ್ಟಿಗೆ ಚೆನ್ನಾಗಿ ಮಿಕ್ಸ್ ಆಗಬೇಕು. ಈ ವೇಲೆ ಹಿಟ್ಟು ದಪ್ಪವಿರಬೇಕು. ಬಳಿಕ ನೀರು ಹಾಕಿ ಚೆನ್ನಾಗಿ ಹಿಟ್ಟನ್ನು ಕಲಸಿಕೊಳ್ಳಬೇಕು. ಚಪಾತಿ ಹಿಟ್ಟಿನಂತೆ ಕಲಸಿಕೊಳ್ಳಬೇಕು. ಕೈಯಲ್ಲಿ ಉಂಡೆ ಕಟ್ಟಿದರೆ ಚೆನ್ನಾಗಿ ಉಂಡೆಯಾಗುವಂತೆ ಹಿಟ್ಟನ್ನು ಹದ ಮಾಡಿಕೊಳ್ಳಬೇಕು.
ಬಳಿಕ ಹಿಟ್ಟನ್ನು ಬದಿಗಿಟ್ಟು, ಚಕ್ಲಿ ಒತ್ತಲು ಪ್ಲಾಸ್ಟಿಕ್ಗೆ ಎಣ್ಣೆ ಹಚ್ಚಿಕೊಳ್ಳಿ, ಜೊತೆಗೆ ಚಕ್ಲಿ ಒತ್ತುವ ಅಚ್ಚು ಪಾತ್ರೆ ತೆಗೆದುಕೊಂಡು ಅದಕ್ಕೆ ಹಿಟ್ಟನ್ನು ತುಂಬಿಸಿಕೊಳ್ಳಬೇಕು. ಅದನ್ನು ಎಣ್ಣೆ ಹಚ್ಚಿರುವ ಪ್ಲಾಸ್ಟಿಕ್ ಮೇಲೆ ನಿಧಾನವಾಗಿ ಒತ್ತಬೇಕು. ಈ ವೇಳೆ ಚಕ್ಲಿ ತುಂಡಾಗಿ ಬೀಳುತ್ತಿದ್ದರೆ ಹಿಟ್ಟು ಹದವಾಗಿಲ್ಲ ಎಂದರ್ಥ ವೇಳೆ ಹಿಟ್ಟಿಗೆ ಸ್ವಲ್ಪ ಮೈದಾಹಿಟ್ಟು ಹಾಕಿ ಮತ್ತೆ ಕಲಸಿಕೊಳ್ಳಿ.
ಇನ್ನು ಎಲ್ಲಾ ಚಕ್ಲಿ ಒತ್ತಿಕೊಂಡ ಬಳಿಕ ಪಾತ್ರೆಯಲ್ಲಿ ಎಣ್ಣೆ ಇಟ್ಟು ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ಚಕ್ಲಿಯನ್ನು ಹಾಕಿ. ಚಕ್ಲಿಯನ್ನು ತುಂಬ ಹೊತ್ತು ಕಾಯಿಸಬೇಡಿ. ಉರಿಯನ್ನು ಸ್ವಲ್ಪ ಹೆಚ್ಚಾಗಿಯೇ ಇಟ್ಟುಕೊಂಡು ಬೇಗ ಕರಿದು ಇಳಿಸಿಬಿಡಿ. ಈಗ ನಿಮ್ಮ ಮುಂದೆ ರುಚಿ ರುಚಿಯಾದ ಕರಿದ ಚಕ್ಲಿ ರೆಡಿಯಾಗಿರುತ್ತೆ.
ಗಮನಿಸಿ: ಚಕ್ಲಿ ಗಟ್ಟಿಯಾಗಬೇಕಾದರೆ ಹುರಿಗಡಲೆಯನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿ ಬಳಿಕ ಮಿಕ್ಸರ್ ಜಾರ್ಗೆ ಹಾಕಿದರೆ ಚಕ್ಲಿ ಮತ್ತಷ್ಟು ಗರಂ ಆಗಲಿದೆ. ಹಿಟ್ಟು ಕಲಸುವಾಗ ಬಿಸಿ ನೀರು ಹಾಕಿದರೆ ಚಕ್ಲಿ ಇನ್ನಷ್ಟು ದಿನ ಇಟ್ಟು ತಿನ್ನಬಹುದು. ಅಲ್ಲದೆ ತುಪ್ಪ ಬಳಸಿದರೆ ಚಕ್ಲಿ ಕಡಿಮೆ ಎಣ್ಣೆ ಕುಡಿಯುತ್ತದೆ.



Click it and Unblock the Notifications
