Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಹೂ ಕೋಸಿನ ಚಿಲ್ಲಿ ಇರುವಾಗ ಗೋಬಿ ಮಂಚೂರಿ ಯಾಕೆ..? ಫ್ರೀ ಟೈಮ್ ರೆಸಿಪಿ ಇಲ್ಲಿದೆ..!
ರಾಜ್ಯದಲ್ಲಿ ಕೃತಕ ಬಣ್ಣ ಬಳಸಿ ಮಾಡುವ ಗೋಬಿ ಮಂಚೂರಿಯನ್ನು ನಿಷೇಧ ಮಾಡಲಾಗಿದೆ. ಆದರೆ ಬಣ್ಣ ಬಳಸದೆ ನೈಸರ್ಗಿಕ ಬಣ್ಣ ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಶಿಫಾರಸು ಮಾಡಿರುವ ಬಣ್ಣಗಳ ಬಳಸಿ ಮಾತ್ರ ಮಾಡಬಹುದು. ಆದ್ರೆ ಈ ರೀತಿ ಬೀದಿ ಬದಿಯ ಕರಿದ ತಿಂಡಿಗಳು ಆರೋಗ್ಯಕ್ಕೆ ಉತ್ತಮವಲ್ಲ.
ಈ ಬೀದಿ ಬದಿ ಕರಿದ ತಿಂಡಿಗಳ ಸೇವನೆ ಹಲವು ಅನಾರೋಗ್ಯಕ್ಕೆ ಕಾರಣವಾಗಬಹುದು. ಹಾಗಾದ್ರೆ ನೀವು ಗೋಬಿ ಬದಲು ಅದಕ್ಕಿಂತ ಹೆಚ್ಚು ರುಚಿ ನೀಡುವ ಹೂಕೋಸಿನ ಈ ಖಾದ್ಯ ತಯಾರಿಸಿ ನೋಡಿ. ಒಮ್ಮೆ ಸೇವಿಸಿದರೆ ಪದೇ ಪದೇ ಸೇವಿಸಬೇಕು ಎನಿಸುವ ಖಾದ್ಯ ಇದಾಗಿದೆ. ಹೂಕೋಸಿನಿಂದಲೇ ಗೋಬಿಯನ್ನೂ ತಯಾರಿಸುತ್ತಾರೆ. ಆದ್ರೆ ಇಂದು ನಾವು ಹೇಳುತ್ತಿರುವ ರೆಸಿಪಿ ಗೋಬಿಗಿಂತ ವಿಭಿನ್ನ ರುಚಿ ನೀಡಲಿದೆ.

ಹಲವರಿಗೆ ಸಂಜೆ ವೇಳೆ ಸ್ನ್ಯಾಕ್ಸ್ ತಿನ್ನುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಅವರು ಗೋಬಿ, ಪಾನಿಪೂರಿ, ಬಜ್ಜಿ, ಟೀ ಹೀಗೆ ಒಂದಲ್ಲಾ ಒಂದು ರೀತಿಯ ತಿಂಡಿ ಸೇವಿಸುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಆದ್ರೆ ಈ ಹೂಕೋಸಿನ ಚಿಲ್ಲಿ (ಕಾಲಿ ಫ್ಲವರ್ ಚಿಲ್ಲಿ) ಎಷ್ಟು ರುಚಿಕರ ಹಾಗೂ ಆರೋಗ್ಯಕ್ಕೂ ಉತ್ತಮವಾಗಿದೆ. ಹಾಗಾದ್ರೆ ಈ ಕಾಲಿ ಫ್ಲವರ್‌ನ ಚಿಲ್ಲಿ ಮಾಡೋದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಅದರ ಪಾಕವಿಧಾನ ಏನು ಎಂಬುದನ್ನು ನಾವಿಂದು ಈ ಲೇಖನದಲ್ಲಿ ನೋಡೋಣ.
ಕಾಲಿ ಫ್ಲವರ್ ಚಿಲ್ಲಿ ಮಾಡಲು ಬೇಕಾಗುವ ಪದಾರ್ಥಗಳು
ಹೂಕೋಸು- ಒಂದು (ಅರ್ಧ ಕೆ.ಜಿ)
ಮೈದಾ ಹಿಟ್ಟು- ಅರ್ಧ ಕಪ್
ಅಕ್ಕಿ ಹಿಟ್ಟು- ಕಾಲು ಕಪ್
ಅಡುಗೆ ಸೋಡಾ
ಖಾರದ ಪುಡಿ- ಅರ್ಧ ಚಮಚ
ಅರಶಿನ-ಅರ್ಧ ಚಮಚ
ಗರಂ ಮಸಾಲ-1 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಫುಡ್ ಕಲರ್ (ಕೆಂಪು)
ಉಪ್ಪು- ರುಚಿಗೆ ತಕ್ಕಷ್ಟು
ಹೂಕೋಸಿನ ಚಿಲ್ಲಿ ಮಾಡೋದು ಹೇಗೆ
ಮೊದಲು ಹೂಕೋಸನ್ನು ಸಣ್ಣದಾಗಿ ಹೆಚ್ಚಿಕೊಂಡು ನೀರಿಗೆ ಹಾಕಿ, ಈ ನೀರಿಗೆ ಉಪ್ಪು ಮತ್ತು ಅರಶಿನ ಹಾಕಿ ಒಲೆ ಮೇಲೆ ಇಟ್ಟು 2 ನಿಮಿಷ ಕುದಿಸಿ. ಇದರಿಂದ ಹೂಕೋಸು ಮೃದುವಾಗುತ್ತದೆ. ಜೊತೆಗೆ ಬ್ಯಾಕ್ಸೀರಿಯಾ, ಕೀಟನಾಶಕವನ್ನು ತೆಗೆಯಬಹುದು. 2 ನಿಮಿಷದ ಬಳಿಕ ಹೂಕೋಸನ್ನು ಪಾತ್ರೆಯಿಂದ ತೆಗೆದು ಮತ್ತೊಂದು ಪಾತ್ರೆಗೆ ಹಾಕಿಕೊಳ್ಳಿ. 2 ನಿಮಿಷ ಬಿಟ್ಟು ಅದಕ್ಕೆ ಮೈದಾ ಹಿಟ್ಟು, ಅಕ್ಕಿ ಹಿಟ್ಟು, ಖಾರದ ಪುಡಿ, ಗರಂ ಮಸಾಲ, ಕೆಂಪು ಕಲರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಾಗೂ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಈ ಮಸಾಲೆ ಹೂಕೋಸಿಗೆ ಹಿಡಿಯುವವರೆಗೂ ಚೆನ್ನಾಗಿ ಕಲಸಿ, ಇದಾದ ಮೇಲೆ ಒಲೆಯಲ್ಲಿ ಎಣ್ಣೆಯಿಟ್ಟು ಕಾಯಲು ಬಿಡಿ ಬಳಿಕ ಎಣ್ಣೆಗೆ ಹೂಕೋಸುಗಳನ್ನು ಹಾಕಿ. ಕರಿಯುವಾಗ ಮಧ್ಯಮ ಉರಿಯಲ್ಲಿ ಇಟ್ಟು ಕಾಯಿಸಿ, ಕರಿಯುವಾಗ ಹೂಕೋಸು ಕಪ್ಪಾಗದಂತೆ ನೋಡಿಕೊಳ್ಳಿ. ಎಣ್ಣೆಯಲ್ಲಿ ಕರಿಯುವಾಗ ಕೊನೆಯದಾಗ ಕರಿಬೇವಿನ ಸೊಪ್ಪು ಹಾಕಿ ಬಳಿಕ ಪಾತ್ರೆಗೆ ಹಾಕಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸವಿಯಲು ಹೂಕೋಸಿನ ಚಿಲ್ಲಿ ರೆಡಿ.
ನೋಡಲು ಗೋಬಿಯಂತೆಯೇ ಕಂಡರು ಇದರ ರುಚಿ ಭಿನ್ನವಾಗಿರುತ್ತದೆ. ಹೀಗಾಗಿ ಇದರ ಜೊತೆಗೆ ನೀವು ಟೊಮೆಟೋ ಸಾಸ್, ಕಾಯಿ ಚಟ್ನಿ, ಟೀ-ಕಾಫಿ ಹೀಗೆ ನಿಮ್ಮಿಷ್ಟದ ಸೈಡ್ಸ್ ಜೊತೆ ಸವಿಯಬಹುದು. ಈ ರೆಸಿಪಿ ಮಾಡಲು ಹೆಚ್ಚು ಸಮಯ, ವಸ್ತು ಬೇಕಾಗಿಲ್ಲ ಸುಲಭವಾಗಿ ನಿಮ್ಮ ಫ್ರೀ ಟೈಮ್‌ನಲ್ಲಿ ಮಾಡಬಹುದು.



Click it and Unblock the Notifications
