Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
10 ನಿಮಿಷದಲ್ಲಿ ಕ್ಯಾರೆಟ್ ಪಾಯಸ ಮಾಡಿ ಸವಿಯಿರಿ..! ಆಹಾ ಅನ್ನೋ ರುಚಿ ನೀಡೋದು ಇದೊಂದೆ!
ನೀವು ಮದುವೆ ಮನೆ ಅಥವಾ ಯಾವುದಾದರು ಶುಭ ಸಮಾರಂಭದಲ್ಲಿ ವಿಶೇಷ ಬಗೆಯ ಪಾಯಸ ಸವಿದಿರಬಹುದು. ಅದರಲ್ಲು ಹೆಚ್ಚಾಗಿ ನೀವು ಕ್ಯಾರೆಟ್ನಿಂದ ಮಾಡುವಂತಹ ಅದ್ಭುತ ರುಚಿಯ ಪಾಯಸ ಸವಿದು ಅದರ ರುಚಿಗೆ ಮಾರು ಹೋಗಿರಬಹುದು. ಅಂತಹ ರುಚಿಯನ್ನು ಮತ್ತೆಂದು ನೀವು ಸವಿದಿರದೆ ಇರಬಹುದು. ಹಾಗೆ ನೀವು ಈ ಪಾಯಸವನ್ನ ಮನೆಯಲ್ಲೂ ಮಾಡಿ ಸವಿಯಲು ಇಚ್ಛಿಸಿರಬಹುದು.
ಮನೆಯಲ್ಲಿ ಶುಭ ಕಾರ್ಯವಿದ್ದರೆ ಅಥವಾ ಯಾರಾದರು ಅತಿಥಿಗಳು ಆಗಮಿಸುವ ಸೂಚನೆ ಇದ್ದಾಗ ಈ ಕ್ಯಾರೆಟ್ ಪಾಯಸ ಮಾಡಿ ಸವಿದು ನೋಡಿ. ನೀವು ಕ್ಯಾರೆಟ್ನಿಂದ ಮಾಡುವಂತಹ ಹಲ್ವಾ ಯಾವಾಗಲು ಮಾಡಿ ಸವಿದಿರಬಹುದು, ಆದ್ರೆ ಈ ರೀತಿ ಕ್ಯಾರೆಟ್ ಪಾಯಸ ನೀವು ಒಮ್ಮೆ ಮಾಡಿದರೆ ಪದೇ ಪದೇ ಇದೇ ಸಿಹಿಯನ್ನು ಸವಿಯಲು ಮುಂದಾಗುತ್ತೀರಿ.

ಹಾಗೆ ನಾವಿಂದು ಮನೆಯಲ್ಲೇ ಈ ಕ್ಯಾರೆಟ್ ಪಾಯಸ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಅದರಲ್ಲೂ ವಿಶೇಷವಾಗಿ ಗೋಡಂಬಿ, ದ್ರಾಕ್ಷಿಯಿಂದ ಸೇರಿದ ಆರೋಗ್ಯಕರ ಅಂಶಗಳ ಹೊಂದಿರುವಂತಹ ಈ ಕ್ಯಾರೆಟ್ ಪಾಯಸ ಮಾಡುವುದು ಹೇಗೆ ಅನ್ನೋದನ್ನು ತಿಳಿಯಿರಿ. ಕ್ಯಾರೆಟ್ ಪಾಯಸ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕ್ಯಾರೆಟ್ ಪಾಯಸ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಕ್ಯಾರೆಟ್ - ಕಾಲು ಜೆ.ಜಿ
- ಹಾಲು - ಕಾಲು ಲೀಟರ್
- ಸಕ್ಕರೆ -ರುಚಿಗೆ ತಕ್ಕಷ್ಟು
- ಬಾದಾಮಿ
- ತುಪ್ಪ
- ಗೋಡಂಬಿ
- ದ್ರಾಕ್ಷಿ
ಕ್ಯಾರೆಟ್ ಪಾಯಸ ಮಾಡುವುದು ಹೇಗೆ?
ಕ್ಯಾರೆಟ್ ಸಿಪ್ಪೆ ತೆಗೆದು ಚೆನ್ನಾಗಿ ತುರಿದು ಇಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ಗೆ ನೆನೆಸಿರುವ ಗೋಡಂಬಿ, ಬಾದಾಮಿ ಹಾಕಿ ಪೇಸ್ಟ್ ಮಾಡಿಕೊಂಡು ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿಕೊಳ್ಳಿ. ನಂತರ ಈ ತುಪ್ಪಕ್ಕೆ ಪುಡಿ ಗೋಡಂಬಿ, ಪಿಸ್ತಾ, ದ್ರಾಕ್ಷಿ ಇದ್ದರೆ ಹಾಕಿಕೊಂಡು ಹುರಿದುಕೊಳ್ಳಿ. ಅನಂತರ ತೆಗೆದು ಬೌಲ್ಗೆ ಹಾಕಿಟ್ಟುಕೊಳ್ಳಿ.
ನಂತರ ಮತ್ತೆ 2 ಸ್ಪೂನ್ ತುಪ್ಪ ಹಾಕಿ ಈಗ ತುರಿದುಕೊಂಡಿರುವ ಕ್ಯಾರೆಟ್ ಹಾಕಿ 3 ನಿಮಿಷ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ಉರಿ ಸಣ್ಣದಾಗಿ ಇಟ್ಟುಕೊಳ್ಳಿ. 3 ನಿಮಿಷದ ಬಳಿಕ ಈಗ ಇದಕ್ಕೆ ಕಾಲು ಲೀಟರ್ ಹಾಲು ಸೇರಿಸಿಕೊಳ್ಳಿ. ಹಾಗೆ ಹಾಲನ್ನು 5 ನಿಮಿಷ ಕುದಿಬರಲು ಬಿಡಬೇಕು. ಈಗ ಈ ಹಾಲಿಗೆ ಮೊದಲು ರುಬ್ಬಿಕೊಂಡಿದ್ದ ಬಾದಾಮಿ, ಗೋಡಂಬಿ ಪೇಸ್ಟ್ ಹಾಕಿಕೊಳ್ಳಿ.
ಹಾಗೆ ಇದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ ಕೂಡ ಹಾಕಿ ಮತ್ತೆ 5 ನಿಮಿಷ ಕುದಿಬರಲು ಬಿಡಿ. ಆಗಾಗ ಮಿಕ್ಸ್ ಮಾಡುತ್ತಾ ಇರಿ. ಈಗ ಏಲಕ್ಕಿ ಪುಡಿ, ಹುರಿದುಕೊಂಡಿರುವ ಗೋಡಂಬಿ, ಪಿಸ್ತಾ, ದ್ರಾಕ್ಷಿ ಹಾಕಿಕೊಳ್ಳಿ. ನಂತರ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಕ್ಯಾರೆಟ್ ಪಾಯಸ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಸುಲಭವಾಗಿ ಇದನ್ನು ಮಾಡಿ ಸವಿಯಬಹುದು. ಪಾಯಸದ ಘಮಲು ಎಂತವರ ಬಾಯಲ್ಲೂ ನೀರು ತರಿಸಲಿದೆ.
ಇದನ್ನು ನೀವು ವಿಶೇಷ ದಿನದಲ್ಲಿ, ಹಬ್ಬದಲ್ಲಿ, ಶುಭ ಕಾರ್ಯದಲ್ಲಿ ಅಥವಾ ಮನೆಗೆ ಯಾರಾದರು ಅತಿಥಿಗಳು ಬಂದಾಗ ಮಾಡಿ ಸವಿಯಲು ನೀಡಬಹುದು. ಬಹಳ ಕಡಿಮೆ ಸಮಯದಲ್ಲಿ ಇದನ್ನು ಮಾಡಬಹುದು. ಹಾಗೆ ಅತ್ಯಂತ ರುಚಿಕರವಾಗ ಈ ಪಾಯಸ ಸವಿದವರು ಮತ್ತೆ ಮತ್ತೆ ಸವಿಯಲು ಇಷ್ಟಪಡುತ್ತಾರೆ. ನಿಮಗೆ ಸಕ್ಕರೆ ಬೇಡವಾದರೆ ಬೆಲ್ಲವನ್ನೂ ಸಹ ಹಾಕಿ ಮಾಡಿಕೊಳ್ಳಬಹುದು.



Click it and Unblock the Notifications
