Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮೂರು ಕ್ಯಾರೆಟ್-ಪುಡಿ ಬೆಲ್ಲ ಇದ್ದರೆ ಈ ಸ್ವೀಟ್ ಸಿದ್ಧ..!! ಮಾಡೋದು ಹೇಗೆ?
ಸಿಹಿ ತಿಂಡಿ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಸಿಹಿ ತಿನ್ನುತ್ತಿದ್ದರೆ ಊಟ ತಿಂಡಿ ಯಾವುದು ಬೇಡ. ಅದ್ರಲ್ಲು ಮಕ್ಕಳಿಗೆ ಸಿಹಿ ತಿಂಡಿ ಅಂದರೆ ಪಂಚಪ್ರಾಣ. ಆದ್ರೆ ಯಾವ ತಿಂಡಿ ಮಾಡಬೇಕು? ಇದು ಎಲ್ಲರಿಗೂ ಕಾಡುವ ಪ್ರಶ್ನೆ ಯಾಕಂದ್ರೆ ಇರುವ ವಸ್ತುಗಳ ಬಳಸಿಕೊಂಡು ತಿಂಡಿ ಮಾಡುವುದೇ ಮೊದಲ ಆಯ್ಕೆಯಾಗಿರುತ್ತೆ.
ಯಾಕಂದ್ರೆ ಮನೆಯಲ್ಲಿ ಸದ್ಯಕ್ಕಿರುವ ವಸ್ತುಗಳನ್ನು ಬಳಸಿ ಸಿಹಿ ತಿಂಡಿ ಮಾಡುವುದು ಗೃಹಿಣಿಯರಿಗೆ ಮೆಚ್ಚು. ಹೀಗಾಗಿ ಅವರು ಫ್ರೀ ಇದ್ದಾಗ ಕೇಸರಿಬಾತು, ಚುರುಮುರಿ, ಬರ್ಫಿ, ಜಾಮೂನ್ ಹೀಗೆ ಸುಲಭವಾಗಿ ಮಾಡುವ ಸಿಹಿ ತಿಂಡಿಗಳ ಮಾಡುತ್ತಾರೆ. ಆದ್ರೆ ಮೂರು ಕ್ಯಾರೆಟ್ ಹಾಗೂ ಬೆಲ್ಲ ಬಳಸಿಕೊಂಡು ಸಿಹಿ ತಿಂಡಿಯೊಂದನ್ನ ನಿಮಿಷದಲ್ಲಿ ಸಿದ್ದಮಾಡಬಹುದು.

ನೀವು ಓದಿದ್ದು ನಿಜ. ಕೇವಲ ಮೂರು ಕ್ಯಾರೆಟ್ ಇದ್ರೆ ಏನು ಮಾಡಬಹುದು? ಅಬ್ಬಬ್ಬಾ ಅಂದ್ರೆ ಪಲಾವ್ಗೆ ಅಥವಾ ಮಿಕ್ಸ್ ತರಕಾರಿಗೆ ಹಾಕಿ ಸಾಂಬಾರ್ ಮಾಡಬಹುದು, ಆದ್ರೆ ಇದೇ ಮೂರು ಕ್ಯಾರೆಟ್ ಬಳಸಿ ಬಾಯಿ ಚಪ್ಪರಿಸಿ ಸವಿಯುವ ಸಿಹಿ ತಿಂಡಿ ಸಹ ಮಾಡಬಹುದು. ಹಾಗಾಧ್ರೆ ಯಾವುದು ಸಿಹಿ ತಿಂಡಿ.
ನಾವಿಂದು ಕ್ಯಾರೆಟ್ ಬಳಸಿ ಸಿಹಿ ತಿಂಡಿ ಮಾಡುವುದು ಹೇಗೆ? ಈ ತಿಂಡಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ಸರಿಯಾದ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕ್ಯಾರೆಟ್ ಬರ್ಫು/ ಕ್ಯಾರೆಟ್ ಪುಡಿಂಗ್ ಮಾಡಲು ಬೇಕಾಗುವ ಪದಾರ್ಥಗಳು
ಕ್ಯಾರೆಟ್ - 3
ತುಪ್ಪ
ಬೆಲ್ಲ
ಏಲಕ್ಕಿ ಪುಡಿ
ಕ್ಯಾರೆಟ್ ಪುಡಿಂಗ್ ಮಾಡುವುದು ಹೇಗೆ?
ಮೊದಲು ಮೂರು ಕ್ಯಾರೆಟ್ ಅನ್ನು ಚೆನ್ನಾಗಿ ತೊಳೆದು ಸಿಪ್ಪೆ ಸ್ವಲ್ಪ ತೆಗೆದುಕೊಳ್ಳಿ. ಬಳಿಕ ಕ್ಯಾರೇಟ್ ಅನ್ನ ಈರುಳ್ಳಿಯಂತೆ ಸ್ಲೈಸ್ ಮಾಡಿಕೊಳ್ಳಿ. ಬಳಿಕ ಇದನ್ನು ಒಂದು ಮಿಕ್ಸಿ ಜಾರ್ಗೆ ಹಾಕಿ ರುಬ್ಬಿಕೊಳ್ಳಿ. ಈ ವೇಳೆ ಸ್ವಲ್ಪವೇ ನೀರು ಹಾಕಿಕೊಂಡು ರುಬ್ಬಿಕೊಳ್ಳಿ.
ಬಳಿಕ ಈ ಕ್ಯಾರೆಟ್ ಅನ್ನು ಜರಡಿ ಹಿಡಿದು ಚೆನ್ನಾಗಿ ಒತ್ತಿಕೊಂಡು ಕ್ಯಾರೆಟ್ನಿಂದ ನೀರು ಬೇರ್ಪಡಿಸಿ. ಬಳಿಕ ಉಳಿದ ಕ್ಯಾರೆಟ್ ಅನ್ನು ಮತ್ತೆ ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ ಇದಕ್ಕೆ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಬಳಿಕ ಮತ್ತೆ ಅದೇ ರೀತಿ ಜರಡಿ ಹಿಡಿದು ಕ್ಯಾರೆಟ್ನಿಂದ ನೀರು ಬೇರ್ಪಡಿಸಿ. ನಮಗೆ ಈ ಕ್ಯಾರೆಟ್ ಜ್ಯೂಸ್ ಬಹಳ ಮುಖ್ಯವಾಗುತ್ತದೆ.
ಈ ಕ್ಯಾರೆಟ್ ನೀರನ್ನು ಅಳತೆ ಮಾಡಿಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ. ಈಗ ಮತ್ತೊಂದು ಪಾತ್ರೆಗೆ ಅರ್ಧ ಕಪ್ ಪುಡಿ ಬೆಲ್ಲ ಹಾಕಿ ಅದೇ ಕಪ್ನಲ್ಲಿ ಕಾಲು ಕಪ್ ನೀರು ಹಾಕಿ ಒಲೆ ಮೇಲೆ ಕರಗಲು ಬಿಡಿ. ಬೆಲ್ಲ ಕರಗಿದ ತಕ್ಷಣ ಒಲೆ ಆಫ್ ಮಾಡಿಕೊಳ್ಳಿ. ಅದನ್ನು ಜರಡಿ ಹಿಡಿದು ನೇರವಾಗಿ ಕ್ಯಾರೆಟ್ ಜ್ಯೂಸ್ಗೆ ಹಾಕಿ.
ಬಳಿಕ ಕ್ಯಾರೆಟ್ ಜ್ಯೂಸ್ ಇರುವ ಪಾತ್ರೆ ಒಲೆ ಮೇಲೆ ಇಟ್ಟು ಚೆನ್ನಾಗಿ ತಿರುಗಿಸುತ್ತಾ ಇರಿ. ಈಗ ಇನ್ನೊಂದು ಸಣ್ಣ ಬೌಲ್ ತೆಗೆದುಕೊಂಡು ಅದಕ್ಕೆ ಅರ್ಧ ಕಪ್ ಕಾರ್ನ್ ಫ್ಲೋರ್ ಹಾಕಿಕೊಳ್ಳಿ. ಇದಕ್ಕೆ ಕಾಲು ಕಪ್ ನೀರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣ ನೋಡಲು ಹಾಲಿನಂತೆ ಕಂಡುಬರಬೇಕು. ಇದನ್ನು ಒಲೆ ಮೇಲಿರುವ ಕ್ಯಾರೆಟ್ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ತಿರುಗಿಸಿಕೊಳ್ಳಿ. ಈ ಮಿಶ್ರಣ ಗಟ್ಟಿಯಾಗಲು ಆರಂಭಿಸಲಿದೆ. 2 ನಿಮಿಷದಲ್ಲಿ ಬೆಲ್ಲದ ಪಾಕದಂತೆ ಆಗಲಿದೆ. ಈಗ ಅದಕ್ಕೆ 2 ಸ್ಪೂನ್ ತುಪ್ಪ ಹಾಕಿ ಮಿಕ್ಸ್ ಮಾಡಿ.
ನಂತರ ಇದಕ್ಕೆ ಏಲಕ್ಕಿ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ 1 ಸ್ಪೂನ್ ತುಪ್ಪ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಬಳಿಕ ಒಂದು ತಟ್ಟೆಗೆ ತುಪ್ಪ ಸವರಿಕೊಂಡು ಅದರ ಮೇಲೆ ಈ ಮಿಶ್ರಣವನ್ನು ಹಾಕಿ ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಂಡರೆ ನಿಮ್ಮ ಮುಂದೆ ಕ್ಯಾರೆಟ್ ಪುಡಿಂಗ್ ಸಿಹಿ ರೆಡಿಯಾಗುತ್ತದೆ.



Click it and Unblock the Notifications
