Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ವಿಭಿನ್ನ ರುಚಿ ನೀಡುವ ಈ ಸ್ಪೆಷಲ್ ಪಲ್ಯ ಮಾಡಿ ನೋಡಿ.! ಹೊಸ ರುಚಿ, ಹೊಸ ಪಲ್ಯ!!
ನೀವು ಊಟ, ತಿಂಡಿ ಜೊತೆಗೆ ಸವಿಯಲು ಎಷ್ಟು ಬಗೆಯ ಪಲ್ಯ, ಸೈಡ್ ಡಿಶ್‌ಗಳ ಮಾಡಿರುತ್ತೀರಿ. ಹಲವು ಬಗೆಯ ಪಲ್ಯಗಳು ನಿಮ್ಮ ಬಾಯಲ್ಲಿ ನೀರು ತರಿಸಿರಬಹುದು. ತರಕಾರಿಗಳ ಬಳಸಿಕೊಂಡು ಬಗೆ ಬಗೆಯ ರುಚಿಯಲ್ಲಿ ಪಲ್ಯ ಮಾಡುವುದು ಸಾಮಾನ್ಯ. ಆದ್ರೆ ನಿತ್ಯವೂ ಒಂದೇ ರೀತಿಯಲ್ಲಿ ಅಥವಾ ಯಾವಾಗಲು ಒಂದೇ ರೀತಿಯಾಗಿ ಪಲ್ಯ ಮಾಡುತ್ತಿದ್ದರೆ ರುಚಿ ಹಿಡಿಸುವುದಿಲ್ಲ. ಹಾಗೆ ಬೇರೆ ಬೇರೆ ಬಗೆಯ ವಿಭಿನ್ನ ರುಚಿ ನೀಡುವಂತಹ ಖಾದ್ಯ ಸವಿಯಲು ನೀವು ಯಾವಾಗಲು ಮುಂದಾಗುವವರಾಗಿದ್ದರೆ ಇಲ್ಲಿ ಹೊಸ ರೀತಿಯ ಪಲ್ಯ ಮಾಡುವುದು ಹೇಗೆ ಅನ್ನೋದನ್ನು ವಿವರಿಸಲಾಗಿದೆ.
ಇಂದು ನಾವು ಕ್ಯಾರೆಟ್ ಬಳಸಿ ಮಾಡುವಂತಹ ಅದ್ಭುತ ರುಚಿಯ ಪಲ್ಯದ ಕುರಿತಂತೆ ತಿಳಿದುಕೊಳ್ಳೋಣ. ಕ್ಯಾರೆಟ್‌ನಿಂದ ರುಚಿ ರುಚಿಯ ಹಲ್ವಾ ಮಾಡಿದಂತೆ, ಕ್ಯಾರೆಟ್ ಸಾಂಬಾರ್, ಕ್ಯಾರೆಟ್ ಕೋಸಂಬರಿ ಕೂಡ ಮಾಡುವುದು ನೋಡಿರುತ್ತೀರಿ, ಅದೇ ರೀತಿ ಇಲ್ಲಿ ನಾವು ಕ್ಯಾರೆಟ್ ಬಳಸಿ ಮಾಡುವ ಪಲ್ಯ ಮಾಡುವುದು ಹೇಗೆ ಅನ್ನೋದನ್ನು ನೋಡೋಣ.

ಕ್ಯಾರೆಟ್ ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮ ತರಕಾರಿ. ಹಾಗೆ ಮಕ್ಕಳಿಗೂ ಕೂಡ ಬಹಳ ಇಷ್ಟವಾಗುವ ತರಕಾರಿ ಇದು. ಹಾಗಾದ್ರೆ ಈ ಕ್ಯಾರೆಟ್‌ನಿಂದ ರುಚಿ ರುಚಿಯ ಪಲ್ಯ ಮಾಡುವುದು ಹೇಗೆ ಅನ್ನೋದನ್ನ ನಾವಿಲ್ಲಿ ತಿಳಿದುಕೊಳ್ಳೋಣ. ಈ ಕ್ಯಾರೆಟ್ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ? ಎಂಬುದನ್ನು ಇಂದು ತಿಳಿಯೋಣ.
ಕ್ಯಾರೆಟ್ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು
- ಕ್ಯಾರೆಟ್
- ಈರುಳ್ಳಿ
- ತೆಂಗಿನಕಾಯಿ ತುರಿ
- ಒಣ ಮೆಣಸು
- ಕಡ್ಲೆಬೇಳೆ
- ಉದ್ದಿನಬೇಳೆ
- ಇಂಗು
- ಜೀರಿಗೆ
- ಸಾಸಿವೆ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಉಪ್ಪು
- ಎಣ್ಣೆ
ಕ್ಯಾರೆಟ್ ಪಲ್ಯ ಮಾಡುವುದು ಹೇಗೆ?
ಮೊದಲು ಕ್ಯಾರೆಟ್ ಅನ್ನು ತೊಳೆದುಕೊಂಡು ಒರೆಸಿ ಬಳಿಕ ತುರಿದುಕೊಳ್ಳಬೇಕು. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಇದಕ್ಕೆ ಸಾಸಿವೆ, ಜೀರಿಗೆ, ಇಂಗು, ಕಡಲೆ ಬೇಳೆ, ಉದ್ದಿನ ಬೇಳೆ ಸೇರಿ ಅರ್ಧ ನಿಮಿಷ ಫ್ರೈ ಮಾಡಿ. ನಂತರ ಈಗ ಇದಕ್ಕೆ ಒಣ ಮೆಣಸು, ಕರಿಬೇವು ಸೇರಿಸಿ ಮತ್ತೆ ಅರ್ಧ ನಿಮಿಷ ಬಿಸಿ ಮಾಡಿ.
ಈಗ ಚಿಕ್ಕದಾಗಿ ಹೆಚ್ಚಿರುವ ಈರುಳ್ಳಿ ಹಾಕಿಕೊಂಡು 3 ನಿಮಿಷ ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಉಪ್ಪು ಸೇರಿಸಿಕೊಳ್ಳಿ. ಬಳಿಕ ತುರಿದುಕೊಂಡಿರುವ ಕ್ಯಾರೆಟ್ ಅನ್ನು ಇದಕ್ಕೆ ಸೇರಿಸಿಕೊಳ್ಳಿ. ನಂತರ ಒಗ್ಗರಣೆ ಜೊತೆ ಫ್ರೈ ಮಾಡಿಕೊಳ್ಳಿ. ನಂತರ ಈ ಮುಚ್ಚಳ ಮುಚ್ಚಿ 5 ನಿಮಿಷ ಕ್ಯಾರೆಟ್ ಬೇಯಿಸಬೇಕು. ಆಗಾಗ ಮಿಕ್ಸ್ ಮಾಡುತ್ತಾ ಇರಬೇಕು.
ಕ್ಯಾರೆಟ್ ಚೆನ್ನಾಗಿ ಬೇಯುವಂತೆ ಆಗಾಗ ತಿರುಗಿಸಿಕೊಳ್ಳಿ. ಒಟ್ಟು 4ರಿಂದ 5 ನಿಮಿಷ ಬೇಯಿಸಿಕೊಂಡರೆ ಸಕಾಗುತ್ತದೆ. ಈಗ ತೆಂಗಿನಕಾಯಿ ತುರಿಯನ್ನು ಹಾಕಿ ಚೆನ್ನಾಗಿ ಮಿಕ್ಸ ಮಾಡಿ. ನಂತರ ಮತ್ತೆ 2 ನಿಮಿಷ ಬೇಯಿಸಿ. ಇಷ್ಟಾದ ಬಳಿಕ ಕೊನೆಯಲ್ಲಿ ಇದಕ್ಕೆ ಸಣ್ಣದಾಗಿ ಹೆಚ್ಚಿರುವ ಕೊತ್ತಂಬರಿ ಸೊಪ್ಪನ್ನು ಹಾಕಿಕೊಳ್ಳಿ. ನಂತರ 1 ನಿಮಿಷ ಬಿಟ್ಟು ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಕ್ಯಾರೆಟ್ ಪಲ್ಯ ರೆಡಿಯಾಗುತ್ತೆ. ನೀವು ಕೂಡ ಈ ಸಿಂಪಲ್ ರೆಸಿಪಿ ಮಾಡಿ ನೋಡಿ.



Click it and Unblock the Notifications
