Latest Updates
-
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ!
ಯುಗಾದಿ ಸ್ಪೆಷಲ್ ಮನೆಯಲ್ಲೇ ಮಾಡಿ ಕ್ಯಾರೆಟ್ ಹೋಳಿಗೆ!
ಯುಗಾದಿ ಹಬ್ಬ ಹತ್ತಿರವಾಗುತ್ತಿದೆ. ಹೀಗಾಗಿ ಹಬ್ಬದಲ್ಲಿ ವಿಭಿನ್ನ ಸಿಹಿ ಮಾಡುವುದು ನೋಡಬಹುದು. ಅದರಲ್ಲೂ ಯುಗಾದಿ ಅಂದ ಮೇಲೆ ಅಲ್ಲಿ ಸಿಹಿ ಇರಲೇಬೇಕು. ಯುಗಾದಿ ಸಿಹಿ ಅಂದರೆ ಅಲ್ಲಿ ಹೋಳಿಗೆ ಇರಲೇಬೇಕು. ಈ ಹೋಳಿಗೆ ಎಲ್ಲರ ಮನೆಯ ಖಾದ್ಯ ಆಗಿರುವುದು ಈ ದಿನ ಮಾತ್ರವೇ. ಯುಗಾದಿಯಲ್ಲಿ ಹೋಳಿಗೆ ಮಾಡುವುದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಅದರಲ್ಲೂ ಬಗೆ ಬಗೆಯ ಹೋಳಿಗೆಗಳು ಎಲ್ಲರ ಬಾಯಲ್ಲಿ ನೀರು ತರಿಸುವುದು ನೋಡಬಹುದು.
ಹಾಗೆ ಈ ಹೋಳಿಗೆಗಳಲ್ಲಿ ಹಲವು ಬಗೆ ಇರುವುದು ನಾವು ನೋಡಬಹುದು. ಅದರಲ್ಲಿ ಕಾಯಿ ಹೋಳಿಗೆ ಹಾಗೆ ಬೇಳೆ ಹೋಳಿಗೆಯನ್ನು ನೀವು ಕೂಡ ಸವಿದಿರುತ್ತೀರಿ. ರುಚಿ ರುಚಿಯಾಗಿ ಈ ಎರಡು ಹೋಳಿಗೆ ಮಾಡಿದ್ರೆ ಮನೆಯಲ್ಲಿ ಎಲ್ಲರು ಕುಳಿತು ಸವಿಯುತ್ತಾರೆ, ಹಾಗೆ ಈ ರುಚಿಯಲ್ಲಿ ಬೇರೆ ಯಾವುದೇ ಹೋಳಿಗೆ ಮಾಡಲಾಗದು, ಆದ್ರೆ ಇದರ ಜೊತೆಗೆ ಕ್ಯಾರೆಟ್ ಹೋಳಿಗೆ ಮಾತ್ರ ಬಾಯಲ್ಲಿ ನೀರು ತರಿಸುತ್ತದೆ.

ಕ್ಯಾರೆಟ್ ತುರಿದು ಮಾಡುವ ಈ ಹೋಳಿಗೆಯು ಅದ್ಭುತ ರುಚಿ ನೀಡಲಿದೆ. ಹೀಗಾಗಿ ಉಳಿದೆಲ್ಲಾ ಕ್ಯಾರೆಟ್‌ಗಿಂತಲೂ ಈ ಕ್ಯಾರೆಟ್ ಹಲ್ವಾ ದುಬಾರಿಯಾಗಿರಲಿದೆ. ಕ್ಯಾರೆಟ್‌ನಿಂದ ಮಾಡುವ ಹಲ್ವಾ, ಹಾಗೆ ಹೋಳಿಗೆ ಎರಡೂ ಕೂಡ ಅದ್ಭುತ ರುಚಿ ನೀಡಲಿವೆ. ಹಾಗೆ ಯುಗಾದಿಗಾಗಿ ನೀವು ಕೂಡ ಈ ಕ್ಯಾರೆಟ್ ಹೋಳಿಗೆ ಮಾಡುವ ಕುರಿತು ನಾವಿಂದು ತಿಳಿಯೋಣ.
ಕ್ಯಾರೆಟ್ ಹೋಳಿಗೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕ್ಯಾರೆಟ್ ಹೋಳಿಗೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮೈದಾ ಹಿಟ್ಟು
- ಕೊಬ್ಬರಿ ತುರಿ
- ಎಣ್ಣೆ
- ಚಿರೋಟಿ ರವೆ
- ಅರಶಿಣ
- ತುಪ್ಪ
- ಏಲಕ್ಕಿ ಪುಡಿ
- ಸಕ್ಕರೆ
ಕ್ಯಾರೆಟ್ ಹೋಳಿಗೆ ಮಾಡುವ ವಿಧಾನವೇನು?
ಮೊದಲು ಒಂದು ಪಾತ್ರೆಗೆ ಮೈದಾ ಹಿಟ್ಟು ಜರಡಿ ಹಿಡಿದು 2 ಕಪ್‌ನಷ್ಟು ಹಾಕಿಕೊಳ್ಳಿ. ಇದಕ್ಕೆ ಅದೇ ಕಪ್‌ನಲ್ಲಿ ಅರ್ಧ ಕಪ್ ಚಿರೋಟಿ ರವೆ, ಸ್ವಲ್ಪ ಅರಶಿಣ ಪುಡಿ ಹಾಕಿಕೊಂಡು ಡ್ರೈ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ನಾದಿಕೊಳ್ಳಬೇಕು. ಮಧ್ಯದಲ್ಲಿ ಎಣ್ಣೆ ಸೇರಿಸಿಕೊಂಡು ಚಪಾತಿ ಹಿಟ್ಟಿನಂತೆ ಹದ ಮಾಡಿಕೊಳ್ಳಿ. ನಂತರ ಹಿಟ್ಟಿನ ಮೇಲೆ ಎಣ್ಣೆ ಸವರಿ 1 ಗಂಟೆ ಹಿಟ್ಟಿನ ಮೇಲೆ ಒದ್ದೆಯಾದ ಕಾಟನ್ ಬಟ್ಟೆ ಮುಚ್ಚಿ ಇಡಬೇಕು.
ಈಗ 4 ಕಪ್ ಕ್ಯಾರೆಟ್ ತುರಿ ತೆಗೆದುಕೊಳ್ಳಿ. ಈ ತುರಿಯನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ನೀರು ಹಾಕದೆಯೇ ರುಬ್ಬಿಕೊಳ್ಳಬೇಕು. ನುಣ್ಣಗೆ ಮೃದುವಾಗಿ ಇದು ಬರಬೇಕು. ಹಾಗೆ 1 ಕಪ್ ಕೊಬ್ಬರಿಯನ್ನು ಪುಡಿ ಮಾಡಿ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿಕೊಂಡು ಬಳಿಕ ರುಬ್ಬಿದ ಕ್ಯಾರೆಟ್ ಹಾಕಿ 5 ನಿಮಿಷ ಹುರಿದುಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ ಕೂಡ ಹಾಕಿಕೊಂಡು ಚೆನ್ನಾಗಿ ಕರಗುವಂತೆ ತಿರುಗಿಸಿಕೊಳ್ಳಿ. ಈ ಕ್ಯಾರೆಟ್ ಹಾಗೂ ಸಕ್ಕರೆ ಸ್ವಲ್ಪ ಗಟ್ಟಿಯಾಗಬೇಕು, ಈಗ ಕೊಬ್ಬರಿ ತುರಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದೇ ವೇಳೆ ಏಲಕ್ಕಿ ಪುಡಿ ಸೇರಿಸಿ ಹುರಿದುಕೊಳ್ಳಿ.
ನಿಧಾನವಾಗಿ ಈ ಹೂರ್ಣ ಗಟ್ಟಿಯಾಗಬೇಕು. 15 ನಿಮಿಷ ಆದರೂ ಕಾಯಿಸಿಕೊಳ್ಳಿ. ಇದು ಉಂಡೆ ಕಟ್ಟಲು ಬರುವಂತೆ ಹದವಾಗಬೇಕು. ಈಗ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಈಗ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಹೂರ್ಣ ಮಾಡಿಕೊಂಡು ಒಂದು ತಟ್ಟೆಗೆ ಹಾಕಿಡಿ. ಈಗ ಮೊದಲು ಹದ ಮಾಡಿರುವ ಹಿಟ್ಟನ್ನು ಮತ್ತೆ ಒಂದು ಸುತ್ತು ಹದ ಮಾಡಿ ಮತ್ತೆ ಉಂಡೆ ಕಟ್ಟಿಕೊಳ್ಳಿ.
ಈ ಉಂಡೆಯನ್ನು ಪೂರಿಯಂತೆ ದಪ್ಪವಾಗಿ ಲಟ್ಟಿಸಿ ಮತ್ತೆ ಮಧ್ಯದಲ್ಲಿ ಹೂರ್ಣ ಇಟ್ಟು ಚೆನ್ನಾಗಿ ಪ್ಯಾಕ್ ಮಾಡಿಕೊಳ್ಳಿ. ಅನಂತರ ಪ್ಲಾಸ್ಟಿಕ್ ಮೇಲೆ ಹಾಕಿಕೊಂಡು ಲಟ್ಟಿಸಿಕೊಳ್ಳಿ. ನಂತರ ಕಾವಲಿ ಮೇಲೆ ಎರಡೂ ಕಡೆಗಳಲ್ಲಿ ಚೆನ್ನಾಗಿ ಕಾಯಿಸಿಕೊಳ್ಳಿ. ಇಷ್ಟಾದರೆ ರುಚಿ ರುಚಿಯ ಕ್ಯಾರೆಟ್ ಹೋಳಿಗೆ ಸಿದ್ದವಾಗುತ್ತದೆ. ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ ನೋಡಿ. ಹಬ್ಬದ ಸಂಭ್ರಮ ಹೆಚ್ಚಿಸುವಂತಹ ಖಾದ್ಯ ಇದಾಗಿರಲಿದೆ.



Click it and Unblock the Notifications