Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮಕ್ಕಳ ಪಾಲಿನ ಅದ್ಭುತ ರುಚಿಯ ಸ್ವೀಟ್..! 5 ನಿಮಿಷದಲ್ಲಿ ಮಾಡಿ ಈ ಕ್ಯಾರೆಟ್ ಹಲ್ವಾ..!
ಮನೆಯಲ್ಲಿ ಮಕ್ಕಳಿದ್ದರೆ ಆಗಾಗ ಅವರಿಗೆ ಸಿಹಿ ತಿಂಡಿ ಮಾಡಿ ಕೊಟ್ಟರೆ ಸಂತೋಷದಲ್ಲಿ ಕುಣಿದಾಡುತ್ತಾರೆ. ಹಾಗೆ ಮಕ್ಕಳಿಗೆ ಇಷ್ಟವಾಗೋ ಅದೆಷ್ಟೋ ಸಿಹಿ ತಿಂಡಿಗಳನ್ನು ನಾವು ಮಾಡಿ ಸವಿಯಬಹುದು ಅದರಲ್ಲು ಹಲ್ವಾ ಅಂದರೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ಹಾಗೆ ಸಿಹಿ ತಿಂಡಿ ಮಾಡಿದ್ರೆ ಮನೆಯಲ್ಲಿ ಎಲ್ಲರಿಗೂ ಇಷ್ಟವಾಗುತ್ತೆ.
ಹಾಗೆ ಏನಾದರು ವಿಶೇಷ ದಿನಗಳಿದ್ದರೆ, ಅತಿಥಿಗಳು ಬರುವವರಿದ್ದರೆ ಆ ಸಮಯದಲ್ಲೂ ಈ ಕ್ಯಾರೆಟ್ ಹಲ್ವಾ ಮಾಡಬಹುದು. ಮಕ್ಕಳಿಗಂತಲೇ ಅತ್ಯಂತ ಸುಲಭವಾಗಿ ಕಡಿಮೆ ವಸ್ತುಗಳ ಬಳಸಿಕೊಂಡು ಈ ಕ್ಯಾರೆಟ್ ಹಲ್ವಾ ಮಾಡಬಹುದು. ಅದರಲ್ಲೂ ಈ ಹಲ್ವಾದಲ್ಲಿ ಹತ್ತಾರು ವಿಧಗಳಿವೆ. ಎಲ್ಲಾ ವಿಧಗಳಿಗಿಂತ ಹೆಚ್ಚು ಸಿಹಿಯಾಗಿರುವ ಕ್ಯಾರೆಟ್ ಹಲ್ವಾ ಬಹಳ ರುಚಿ ಇರುತ್ತೆ.

ಈ ಸಿಹಿಯನ್ನು ಅತ್ಯಂತ ಸುಲಭವಾಗಿ ಕೇವಲ 4ರಿಂದ 5 ನಿಮಿಷದಲ್ಲಿ ಮಾಡಬಹುದು. ಹೀಗಾಗಿ ಈ ಸಿಹಿಯನ್ನು ಮಾಡಲು ಎಲ್ಲರು ಬಯಸುತ್ತಾರೆ. ಹಾಗಾದ್ರೆ ನಾವಿಂದು ಮಕ್ಕಳ ಬಾಯಲ್ಲಿ ನೀರು ತರಿಸುವಂತೆ ಈ ಕ್ಯಾರೆಟ್ ಹಲ್ವಾ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಈ ಕ್ಯಾರೆಟ್ ಹಲ್ವಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಂದು ತಿಳಿದುಕೊಳ್ಳೋಣ.
ಕ್ಯಾರೆಟ್ ಹಲ್ವಾ ಮಾಡುವುದು ಹೇಗೆ?
- ಕ್ಯಾರೆಟ್- ಅರ್ಧ ಕೆ.ಜಿ
- ಸಕ್ಕರೆ
- ಗೋಡಂಬಿ
- ದ್ರಾಕ್ಷಿ
- ಹಾಲು- ಕಾಲು ಲೀಟರ್
- ತುಪ್ಪ
- ಬಾದಾಮಿ
- ಏಲಕ್ಕಿ
ಕ್ಯಾರೆಟ್ ಹಲ್ವಾ ಮಾಡುವ ಸುಲಭದ ವಿಧಾನ ಇಲ್ಲಿದೆ
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಬಿಸಿಯಾಗಲು ಬಿಡಿ. ನಂತರ ಇದಕ್ಕೆ 2 ಸ್ಪೂನ್ ತುಪ್ಪ ಹಾಕಿಕೊಂಡು ಬಿಸಿಯಾದಾಗ ಅದಕ್ಕೆ ಗೋಡಂಬಿ, ಒಣ ದ್ರಾಕ್ಷಿ, ಬಾದಾಮಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಈ ಎಲ್ಲಾ ವಸ್ತುಗಳನ್ನು ಎತ್ತಿ ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ತುರಿದುಕೊಂಡಿರುವ ಕ್ಯಾರೆಟ್ ಅನ್ನು ಅದೇ ಬಾಣಲೆಗೆ ಹಾಕಿಕೊಳ್ಳಬೇಕು. ನಂತರ ಚೆನ್ನಾಗಿ ತುಪ್ಪದಲ್ಲಿ ಫ್ರೈ ಮಾಡಬೇಕು. ಕ್ಯಾರೆಟ್ ಫ್ರೈ ಆದ ಬಳಿಕ ಕಾಲು ಲೀಟರ್ ಹಾಲನ್ನು ಸಹ ಹಾಕಿಕೊಂಡು ತಿರುಗಿಸಿಕೊಳ್ಳಿ. ಈಗ ಸಕ್ಕರೆಯನ್ನು ಕುಡ ಹಾಕಿಕೊಂಡು ಚೆನ್ನಾಗಿ ತಿರುಗಿಸಿಕೊಳ್ಳಿ. ನೀವು ಸಕ್ಕರೆಯನ್ನು ಪುಡಿ ಮಾಡಿ ಕೂಡ ಹಾಕಿಕೊಳ್ಳಬಹುದು.
ಸಕ್ಕರೆ ಹಾಕಿದ ಬಳಿಕ ಚೆನ್ನಾಗಿ ತಿರುಗಿಸುತ್ತಾ ಕರಗುವಂತೆ ಮಾಡಬೇಕು. ಇದಾದ ಬಳಿಕ ಏಲಕ್ಕಿ ಪುಡಿ ಹಾಕಿ. ಅನಂತರ ಮೊದಲು ತುಪ್ಪದಲ್ಲಿ ಫ್ರೈ ಮಾಡಿಕೊಂಡಿರುವ ಗೋಡಂಬಿ, ದ್ರಾಕ್ಷಿ, ಬಾದಾಮಿಯನ್ನು ಹಲ್ವಾದೊಳಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈ ಸಮಯದಲ್ಲಿ ಬೇಕಾದರೆ ಮತ್ತೆ 2 ಸ್ಪೂನ್ ತುಪ್ಪ ಹಾಕಿಕೊಳ್ಳಬಹುದು.
ಹೀಗೆ ಎಲ್ಲಾ ವಸ್ತು ಹಾಕಿದ ಬಳಿಕ ಮತ್ತೆ 2 ನಿಮಿಷ ಸಣ್ಣ ಉರಿಯಲ್ಲಿ ಇಟ್ಟುಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಲು ಗಟ್ಟಿಯಾಗಿದ್ದರೆ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಕ್ಯಾರೆಟ್ ಹಲ್ವಾ ರೆಡಿಯಾಗುತ್ತದೆ. ಇದಲ್ಲದೆ ಹಲವು ವಿಧಾನದಲ್ಲಿ ಈ ಹಲ್ವಾ ಮಾಡಬಹುದು, ಇದೊಂದು ಸುಲಭದ ವಿಧಾನವಾಗಿದೆ. ನೀವು ಕೂಡ ಮನೆಯಲ್ಲಿ ಈ ವಿಧಾನ ಬಳಸಿ ಕ್ಯಾರೆಟ್ ಹಲ್ವಾ ಮಾಡಿ ಮಕ್ಕಳಿಗೆ ನೀಡಿ. ಇದೇ ರೀತಿ ಹಲ್ವಾವನ್ನು ಅತಿಥಿಗಳಿಗೂ ನೀಡಬಹುದು., ಶುಭ ಕಾರ್ಯದಲ್ಲಿ ಬಾಯಿ ಸಿಹಿ ಮಾಡಲು ಕೂಡ ಇದನ್ನು ಮಾಡಿ ಸವಿಯಬಹುದು.



Click it and Unblock the Notifications
