Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬೆಳಗ್ಗೆ ಗಡಿಬಿಡಿಯಲ್ಲಿ ಥಟ್ ಅಂತ ತಿಂಡಿ ಮಾಡ್ಬೇಕಾ? ಇಲ್ಲಿದೆ ಸುಲಭದ ಕ್ಯಾರೆಟ್ ರೈಸ್!!
ಬೆಳಗ್ಗೆ ತಿಂಡಿಗೆ ನೀವು ಹಲವು ರೀತಿ ಖಾದ್ಯಗಳ ಮಾಡಿ ಸವಿಯುವುದು ನೋಡಿರುತ್ತೀರಿ. ಅದ್ರಲ್ಲೂ ವಿಶೇಷ ಹಾಗೂ ವಿಭಿನ್ನ ರುಚಿಯ ತಿಂಡಿಗಳ ಮಾಡಿ ಸವಿಯೋದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ನಿಮ್ಮ ಗಡಿಬಿಡಿಯ ಸಮಯದಲ್ಲಿ ಯಾವ ತಿಂಡಿ ಮಾಡಬೇಕು ಎಂದು ಯೋಚಿಸುವಲ್ಲಿಯೇ ಬಹುತೇಕ ಸಮಯ ಕಳೆದುಹೋಗಲಿದೆ. ಹೀಗಾಗಿ ಎಲ್ಲರು ಸುಲಭವಾಗಿ ಕಡಿಮೆ ವಸ್ತುಗಳ ಬಳಸಿ ಮಾಡುವ ಖಾದ್ಯದ ಕಡೆಗೆ ಹೆಚ್ಚು ಗಮನವಿಡುತ್ತಾರೆ.
ಇನ್ನು ನಾವು ಸುಲಭವಾಗಿ ಮಾಡಿ ಮುಗಿಸುವಂತಹ ರೈಸ್ ಖಾದ್ಯಗಳ ಪೈಕಿ ಕ್ಯಾರೆಟ್ ರೈಸ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ಕ್ಯಾರೆಟ್ ರೈಸ್ ಉಳಿದೆಲ್ಲಾ ರೈಸ್ಗಳಿಗಿಂತ ರುಚಿ ದುಪ್ಪಟ್ಟಾಗಿರಲಿದೆ. ರೈಸ್ನಿಂದ ಮಾಡುವಂತಹ ಚಿತ್ರಾನ್ನ, ಪಲಾವ್, ಪುಳಿಯೋಗರೆ ಸೇರಿದಂತೆ ಹಲವು ಖಾದ್ಯಗಳ ಹೆಸರು ಕೇಳಿದ್ರೆ ಎಲ್ಲರ ಬಾಯಲ್ಲೂ ನೀರು ಬರೋದು ಖಚಿತ.

ಇನ್ನು ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡಬಹುದಾದ ತಿಂಡಿಗಳು ಅಂದ್ರೆ ಎಲ್ಲರು ಒಮ್ಮೆ ಪ್ರಯತ್ನಿಸುತ್ತಾರೆ. ಹೀಗಾಗಿ ನಾವಿಂದು ಸುಲಭವಾಗಿ ಕ್ಯಾರೆಟ್ ರೈಸ್ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ. ಈ ರೈಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಕ್ಯಾರೆಟ್ ರೈಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ರೈಸ್
- ಕ್ಯಾರೆಟ್
- ಕರಿಬೇವು
- ಏಲಕ್ಕಿ
- ದಾಲ್ಚಿನ್ನಿ
- ಲವಂಗ
- ಗೋಡಂಬಿ
- ಈರುಳ್ಳಿ
- ಹಸಿಮೆಣಸಿನಕಾಯಿ
- ಕರಿಬೇವು
- ಸಾಂಬಾರ್ ಪುಡಿ
- ಧನಿಯಾ ಪುಡಿ
- ಅರಿಶಿನ ಪುಡಿ
- ತೆಂಗಿನಕಾಯಿ
- ನಿಂಬೆ
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಕ್ಯಾರೆಟ್ ರೈಸ್ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಚಕ್ಕೆ, ಲವಂಗ, ಪಲಾವ್ ಎಲೆ, ಗೋಡಂಬಿ ಹಾಕಿಕೊಂಡು ಬಳಿಕ ಸಣ್ಣದಾಗಿ ಕತ್ತರಿಸಿಕೊಂಡ ಈರುಳ್ಳಿ ಹಾಕಿ 30 ಸೆಕೆಂಡ್ ಫ್ರೈ ಮಾಡಿ ಬಳಿಕ ಹಸಿ ಮೆಣಸು ಸಹ ಹಾಕಿ. ಅನಂತರ ಕರಿಬೇವು ಸಹ ಹಾಕಿಕೊಳ್ಳಿ. 1 ನಿಮಿಷ ಬಿಟ್ಟು ಈಗ ತುರಿದುಕೊಂಡಿರುವ ಕ್ಯಾರೆಟ್ ಅನ್ನು ಇದಕ್ಕೆ ಹಾಕಿಕೊಳ್ಳಿ.
ಈಗ ಧನಿಯಾ ಪುಡಿ, ಸಾಂಬಾರ್ ಪುಡಿ, ಅರಶಿಣ ಪುಡಿ ಹಾಕಿ ಅರ್ಧ ನಿಮಿಷ ಮಿಕ್ಸ್ ಮಾಡಿಕೊಳ್ಳುತ್ತಾ ಇರಿ. ಇದು ಗೊಜ್ಜು ರೀತಿ ಬರಬೇಕು. ತಳ ಹಿಡಿಯದಂತೆ ಮಾಡಲು 2 ಸ್ಪೂನ್ ನೀರು ಸಹ ಹಾಕಿಕೊಳ್ಳಬಹುದು. 1 ನಿಮಿಷ ಮಿಕ್ಸ್ ಮಾಡಿದ ಬಳಿಕ ಅಥವಾ ಕ್ಯಾರೆಟ್ ಸ್ವಲ್ಪ ಫ್ರೈ ಆಗಿದೆ ಎನ್ನುವಾಗ ಮೊದಲು ಮಾಡಿಟ್ಟುಕೊಂಡ ಅನ್ನವನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ.
ಈ ಮಸಾಲೆಗಳು ಚೆನ್ನಾಗಿ ಹಿಡಿಯುವಂತೆ ಕಲಸಿಕೊಳ್ಳಿ. ಹಾಗೆ ಮೇಲೆ ತೆಂಗಿನಕಾಯಿ ತುರಿ ಹಾಗೆ ನಿಂಬೆ ರಸ ಕೂಡ ಹಿಂಡಿಕೊಂಡು ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿ ಬಳಿಕ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ಕ್ಯಾರೆಟ್ ರೈಸ್ ಸಿದ್ದವಾಗುತ್ತೆ. ನೀವು ಅಂದುಕೊಂಡಿದ್ದಕ್ಕಿಂತ ಇದರ ರುಚಿ ದುಪ್ಪಟ್ಟಾಗಿರಲಿದೆ. ನೀವು ಸಹ ಮನೆಯಲ್ಲಿ ಈ ಕ್ಯಾರೆಟ್ ರೈಸ್ ಮಾಡಿ ನೋಡಿ. ಒಮ್ಮೆ ಮಾಡಿ ಸವಿದರೆ ಪದೇ ಪದೇ ಇದೇ ರೈಸ್ ಮಾಡಿ ಸವಿಯಲು ಮುಂದಾಗೋದು ಖಚಿತ.
ಹಾಗೆ ಇದನ್ನು ಬೆಳಗ್ಗೆ ತಿಂಡಿಗೆ ಮಾಡಿದ್ರೆ ಮಧ್ಯಾಹ್ನದ ಊಟದ ಸಮಯಕ್ಕೆ ಬಾಕ್ಸ್ಗೂ ಸಹ ಹಾಕಿಕೊಂಡು ಹೋಗಬಹುದು. ಎಲ್ಲರು ಇಷ್ಟಪಟ್ಟು ಸವಿಯುವಂತಹ ತಿಂಡಿ ಇದಾಗಿರಲಿದೆ.



Click it and Unblock the Notifications
