Latest Updates
-
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ?
ಆಹಾ! ಕ್ಯಾರಾಮಲ್ ಹಲ್ವಾ ರುಚಿಗೆ ನೀವು ಫುಲ್ ಸರೆಂಡರ್ ಆಗುವಿರಿ, ರೆಸಿಪಿ ಕೂಡ ತುಂಬಾ ಸಿಂಪಲ್
ಕೇಸರಿಬಾತ್ ನೀವು ಹಲವು ರುಚಿಯಲ್ಲಿ ಮಾಡಿರಬಹುದು, ಆದರೆ ಕ್ಯಾರಾಮಲ್ ಕೇಸರಿಬಾತ್ ಟ್ರೈ ಮಾಡಿದ್ದೀರಾ? ಇದೇನು ಕ್ಯಾರಾಮಲ್ ಅಂತ ಅಚ್ಚರಿ ಪಡಬೇಡಿ, ಸಕ್ಕರೆ ಕಾಯಿಸಿದಾಗ ಸಕ್ಕರೆಯ ಬಣ್ಣ ಬದಲಾಗುತ್ತದೆ ಅಲ್ವಾ ಆ ಸಕ್ಕರೆಯನ್ನು ಕ್ಯಾರಾಮಲ್ ಸಕ್ಕರೆಯೆಂದು ಕರೆಯಲಾಗುವುದು. ಇದನ್ನು ಬಳಸಿ ಮಾಡುವ ಹಲ್ವಾ ಇದಾಗಿದೆ. ಇದರ ರುಚಿ ಇದೆಯಲ್ಲಾ ಕೇಸರಿಬಾತ್ಗಿಂತಲೂ ಒಂದು ಪಟ್ಟು ಹೆಚ್ಚು.

ಇನ್ನು ಇದನ್ನು ಮಾಡುವುದು ಕೂಡ ಸುಲಭವಾಗಿದೆ, ಇದನ್ನು ಮಾಖಂಡಿ ಹಲ್ವಾ ಎಂದು ಕೂಡ ಕರೆಯಲಾಗುವುದು. ಇನ್ನು ಈ ಹಲ್ವಾದ ಬಣ್ಣ ಇದರ ರುಚಿ ಕೂಡ ತುಂಬಾ ಚೆನ್ನಾಗಿರುತ್ತದೆ. ಇದುವರೆಗೆ ಟ್ರೈ ಮಾಡಿಲ್ಲ ಎಂದಾದರೆ ನೀವು ಟ್ರೈ ಮಾಡಲೇಬೇಕಾದ ರೆಸಿಪಿಯಿದು. ಇನ್ನು ಮನೆಯಲ್ಲಿ ಫಂಕ್ಷನ್ಗಳಲ್ಲಿಯೂ ಇದನ್ನು ಮಾಡಬಹುದು, ಇದಕ್ಕೆ ಯಾವ ಕಲರ್ ಪುಡಿ ಬೇಕಾಗಿಲ್ಲ, ಕ್ಯಾರಾಮಲ್ ಶುಗರ್ ಬಣ್ಣವೇ ಆಕರ್ಷಕವಾಗಿರುತ್ತದೆ.
ಬೇಕಾಗಿರುವ ಸಾಮಗ್ರಿ
ಸೂಜಿ ರವೆ 1 ಕಪ್
ಕಾಯಿಸಿ ಆರಿಸಿದ ಹಾಲು 1 ಕಪ್
ತುಪ್ಪ 1/2 ಕಪ್
ಗೋಡಂಬಿ
ದ್ರಾಕ್ಷಿ
1 ಕಪ್ ಸಕ್ಕರೆ
1/ 2 ಚಮಚ ಏಲಕ್ಕಿ ಪುಡಿ
'
ಮಾಡುವ ವಿಧಾನ
- ನೀವು ಸೂಜಿ ರವೆ ಸ್ವಲ್ಪ ರೋಸ್ ಮಾಡಿ ಸ್ವಲ್ಪ ದೊಡ್ಡ ಬೌಲ್ಗೆ ಹಾಕಿ
- ಈಗ ಒಂದು ಕಪ್ ಹಾಲು ಕೂಡ ಸೇರಿಸಿ 10-15 ನಿಮಿಷ ನೆನೆಯಲು ಬಿಡಿ (ಹಸಿ ಹಾಲು ಹಾ ಕಬೇಡಿ, ಕುದಿಸಿ ಆರಿದ ಹಾಲು ಬಳಸಿ)
- ಈಗ ಪ್ಯಾನ್ಗೆ ಅರ್ಧ ಕಪ್ ತುಪ್ಪ ಸೇರಿಸಿ ಬಿಸಿ ಮಾಡಿ
- ಈಗ ಆ ತುಪ್ಪದಲ್ಲಿ ಡ್ರೈ ಫ್ರೂಟ್ಸ್ ಫ್ರೈ ಮಾಡಿ ತೆಗೆದು ಒಂದು ಬೌಲ್ನಲ್ಲಿ ಹಾಕಿಡಿ
- ಈಗ ಅದೇ ತುಪ್ಪಕ್ಕೆ ಒಂದು ಸಕ್ಕರೆ ಹಾಕಿ (ನೀವು ಎಷ್ಟು ರವೆ ಬಳಸುತ್ತೀರೋ ಅಷ್ಟೇ ಪ್ರಮಾಣದ ಸಕ್ಕರೆಯೂ ಬೇಕು)
- ಈಗ ಸಕ್ಕರೆಯ ಬಣ್ಣ ಬದಲಾಗುವಷ್ಟು ಹೊತ್ತು ಕಾಯಿಸಿ
- ಸಕ್ಕರೆ ಬಣ್ಣ ಬದಲಾದಾಗ ತುಂಬಾ ಸುವಾಸನೆ ಬರುತ್ತದೆ, ಸಕ್ಕರೆಯ ಬಣ್ಣ ಕಂದು ಬಣ್ಣಕ್ಕೆ ತಿರುಗುವಾಗ ನೀವು ಹಾಲಿನಲ್ಲಿ ನೆನೆಸಿಟ್ಟ ರವೆಯನ್ನು ಸೇರಿಸಿ ಮಿಕ್ಸ್ ಮಾಡಿ
- ಏಲಕ್ಕಿ ಪುಡಿ ಕೂಡ ಸೇರಿಸಿ, ಮಿಶ್ರಣ ಮಿಕ್ಸ್ ಮಾಡಿ
- ಮಿಶ್ರಣ ಕೇಸರಿ ಬಾತ್ ಹದಕ್ಕೆ ಬರುವಷ್ಟು ಹೊತ್ತು ಮಿಕ್ಸ್ ಮಾಡಿ (5-6 ನಿಮಿಷ ಸಾಕಾಗುತ್ತೆ)
- ನೀವು ಕೇಸರಿಬಾತ್ ತಳ ಹಿಡಿಯಲು ಬಿಡಬಾರದು, ತಿರುಗಿಸುತ್ತಲೇ ಇರಬೇಕು.
- ನಂತರ ಡ್ರೈ ಫ್ರೂಟ್ಸ್ ಹಾಕಿ ಮಿಕ್ಸ್ ಮಾಡಿದರೆ ಕ್ಯಾರಾಮಲ್ ಹಲ್ವಾ ರೆಡಿ.
ಕ್ಯಾರಾಮಲ್ ಸಿರಪ್ ಬಳಸಿ ಮಾಡಿರುವ ಈ ಕೇಸರಿಬಾತ್ಗೆ ಯಾವುದೇ ಕಲರ್ಪುಡಿಯ ಅಗ್ಯತವೂ ಇರಲ್ಲ. ಅಲ್ಲದೆ ಇದನ್ನು ನೀವು ಮಾಡಿ ಒಂದೆರಡು ದಿನವಿಟ್ಟರೂ ಹಾಳಾಗಲ್ಲ. ಇದನ್ನು ಬಿಸಿ ಬಿಸಿಯಾಗಿ ಸವಿಯಲು ಚೆನ್ನಾಗಿರುತ್ತದೆ, ತಣ್ಣಗೆ ಸವಿಯಲು ಕೂಡ ಚೆನ್ನಾಗಿರುತ್ತದೆ.



Click it and Unblock the Notifications
