Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ದೊಣ್ಣೆ ಮೆಣಸಿನ ಎಣ್ಣೆಗಾಯಿ ಮಾಡಿದ್ದೀರಾ..! ಈ ರುಚಿ ಸವಿದು ನೋಡಿ!
ನೀವು ರೊಟ್ಟಿ, ಪರೋಟ, ಅಕ್ಕಿ ರೊಟ್ಟಿ, ಚಪಾತಿ ಈ ರೀತಿಯ ಖಾದ್ಯ ಮಾಡಿದ್ದೀರಿ ಎಂದುಕೊಳ್ಳಿ. ಆದ್ರೆ ಇದರ ರುಚಿ ಹೆಚ್ಚಾಗಬೇಕು ಅಂದ್ರೆ ಇದಕ್ಕೊಂದು ಚಟ್ನಿ, ಪಲ್ಯ ಇಂತಹ ಯಾವುದಾದರು ರುಚಿಕರ ಖಾದ್ಯ ಇರಬೇಕು. ಆದ್ರೆ ಈ ಯಾವುದಾದರು ಖಾದ್ಯ ಮಾಡಿದ್ರೆ ನೀವು ಖಂಡಿತ ಅದಕ್ಕಾಗಿ ಎಣ್ಣೆಗಾಯಿ ರುಚಿ ಮಾಡಿರುತ್ತೀರಿ. ಈ ಎಣ್ಣೆಗಾಯಿ ಇದ್ದರೆ ರೊಟ್ಟಿ, ಚಪಾಯಿ ಬೊಂಬಾಟ್ ಕಾಂಬಿನೇಷನ್ ಆಗಿರುತ್ತೆ.
ಆದ್ರೆ ಬದನೆಕಾಯಿ ಎಣ್ಣೆಗಾಯಿ ಮಾಡುವ ಕುರಿತು ನಿಮಗೆ ತಿಳಿದಿರುತ್ತೆ. ಇದನ್ನು ಅದ್ಭುತ ರುಚಿಯಲ್ಲಿ ಮಾಡಿ ಅನ್ನದ ಜೊತೆಯೂ ಸವಿಯಬಹುದು. ಆದ್ರೆ ನಾವಿಂದು ಅದ್ಭುತ ರುಚಿಯಲ್ಲಿ ಕ್ಯಾಪ್ಸಿಕಂ ಎಣ್ಣೆಗಾಯಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಕ್ಯಾಪ್ಸಿಕಂ ಬಳಸಿ ಹಲವು ರೀತಿಯ ಖಾದ್ಯ ಮಾಡಬಹುದು. ಹಾಗೆ ಹಲವು ಖಾದ್ಯಗಳಿಗೆ ಈ ಕ್ಯಾಪ್ಟಿಕಂ ಹಾಕುತ್ತೇವೆ.

ಇಂದು ಇದೇ ಕ್ಯಾಪ್ಸಿಕಂ ಬಳಸಿಕೊಂಡು ಎಣ್ಣೆಗಾಯಿ ಮಾಡುವ ಕುರಿತು ತಿಳಿದುಕೊಳ್ಳೋಣ. ಇದೂ ಕೂಡ ಬದನೆಕಾಯಿ ಎಣ್ಣೆಗಾಯಿಯಂತೆಯೇ ರುಚಿ ನೀಡಲಿದೆ ಆದ್ರೆ ಅದಕ್ಕಿಂತ ಸುಲಭವಾಗಿ ಈ ಕ್ಯಾಪ್ಸಿಕಂ ಎಣ್ಣೆಗಾಯಿ ಮಾಡಬಹುದು. ನಾವು ಮೊದಲೇ ಹೇಳಿದಂತೆ ಈ ಕ್ಯಾಪ್ಸಿಕಂ ಎಣ್ಣೆಗಾಯಿಯನ್ನು ರೊಟ್ಟಿ, ಚಪಾತಿ, ದೋಸೆ, ಅನ್ನದ ಜೊತೆಯಲ್ಲೂ ಸವಿಯಬಹುದು.
ಈ ಕ್ಯಾಪ್ಸಿಕಂ ಎಣ್ಣೆಗಾಯಿ ಮಾಡಲು ಬೇಕಾಗುವ ಪದಾರ್ಥಗಳು ಯಾವುದು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಯಾವೆಲ್ಲಾ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕ್ಯಾಪ್ಸಿಕಂ ಎಣ್ಣೆಗಾಯಿ ಮಾಡೋದು ಹೇಗೆ?
- ದೊಣ್ಣೆ ಮೆಣಸು - 5
- ತೆಂಗಿನ ಕಾಯಿ ತುರಿ
- ಬೆಳ್ಳುಳ್ಳು
- ಶುಂಠಿ
- ಚಕ್ಕೆ
- ಲವಂಗ
- ಖಾರದ ಪುಡಿ
- ಧನಿಯಾ ಪುಡಿ
- ಕೊತ್ತಂಬರಿ ಸೊಪ್ಪು
- ಅರಶಿಣ
- ಈರುಳ್ಳಿ
- ಎಣ್ಣೆ
- ಉಪ್ಪು
- ಕರಿಬೇವು
- ಸಾಸಿವೆ
ಕ್ಯಾಪ್ಸಿಕಂ ಎಣ್ಣೆಗಾಯಿ ಮಾಡುವ ವಿಧಾನವೇನು?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಅರ್ಧ ಕಪ್ ತುರಿದ ಕಾಯಿ, ಒಂದು ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಚಕ್ಕೆ, ಲವಂಗ, ಖಾರದ ಪುಡಿ, ಧನಿಯಾ ಪುಡಿ, ಅರಶಿಣ, ಕೊತ್ತಂಬರಿ ಸೊಪ್ಪು, ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ತರಿ ತರಿಯಾಗಿ ರುಬ್ಬಿಕೊಳ್ಳಬೇಕು.
ಈಗ ಈ ದೊಣ್ಣೆ ಮೆಣಸಿನ ಕಾಯಿಯನ್ನು ಕತ್ತರಿಸಿಕೊಳ್ಳಬೇಕು. ಒಂದು ಕ್ಯಾಪ್ಸಿಕಂ ಅನ್ನು 4 ಭಾಗವಾಗಿ ಕತ್ತರಿಸಿಕೊಂಡು ಇಟ್ಟುಕೊಳ್ಳಿ. ಈಗ ರುಬ್ಬಿಕೊಂಡಿರುವ ತರಿತರಿಯಾದ ಮಸಾಲೆಯನ್ನು ಈ ದೊಣ್ಣೆ ಮೆಣಸಿನ ಒಳಗೆ ತುಂಬಬೇಕು. ಮೆಣಸಿನ ಕಾಯಿಯಿಂದ ಮಸಾಲೆ ಆಚೆ ಬಾರದಂತೆ ಮಸಾಲೆ ತುಂಬಿಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಸ್ವಲ್ಪ ಹೆಚ್ಚಾಗಿಯೇ ಹಾಕಿಕೊಳ್ಳಿ. ನಂತರ ಇದಕ್ಕೆ ಅರ್ಧ ಈರುಳ್ಳಿ, ಕರಿಬೇವು, ಸಾಸಿವೆ ಹಾಕಿಕೊಂಡು 1 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಮಸಾಲೆ ತುಂಬಿರುವ ಕ್ಯಾಪ್ಸಿಕಂ ಗಳನ್ನು ಬಾಣಲೆಗೆ ಹಾಕಿಕೊಂಡು 2 ನಿಮಿಷ ಫ್ರೈ ಮಾಡಿಕೊಳ್ಳಬೇಕು. ಅನಂತರ 2 ಟೊಮೆಟೋ ಅನ್ನ ಸಾಂಬಾರ್‌ಗೆ ಹೆಚ್ಚಿಕೊಂಡು ಇದಕ್ಕೆ ಹಾಕಿಕೊಳ್ಳಿ. ಸುಮಾರು 3 ನಿಮಿಷ ನಿಧಾನವಾಗಿ ಫ್ರೈ ಮಾಡಿ.
ಈಗ ಮಿಕ್ಸಿಯಲ್ಲಿ ರುಬ್ಬಿಕೊಂಡು ಮೆಣಸಿಗೆ ಹಾಕಿ ಉಳಿದಿರುವ ಈ ಮಸಾಲೆಯನ್ನು ಬಾಣಲೆಗೆ ಹಾಕಿ ತಿರುಗಿಸಿಕೊಳ್ಳಿ. ಹಾಗೆ ಅರ್ಧ ಗ್ಲಾಸ್ ನೀರು ಸಹ ಹಾಕಿಕೊಳ್ಳಿ. ನಂತರ ಇದಕ್ಕೆ ಉಪ್ಪು ಹಾಕಿಕೊಂಡು 5 ನಿಮಿಷ ಬೇಯಿಸಿಕೊಳ್ಳಿ. ಆಗಾಗ ಕೈ ಆಡಿಸುತ್ತಾ ಇರಿ. ಹಾಗೆ ಒಂದು ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ಬೇಯಲು ಬಿಡಿ.
ಇಷ್ಟಾದರೆ ನಿಮ್ಮ ಮುಂದೆ ಕ್ಯಾಪ್ಸಿಕಂನ ಅದ್ಭುತ ರುಚಿಯ ಎಣ್ಣೆಗಾಯಿ ರೆಡಿಯಾಗುತ್ತದೆ, ಇದರ ರುಚಿ ಒಮ್ಮೆ ಸವಿದರೆ ನೀವು ಮತ್ತೆ ಮತ್ತೆ ಮಾಡಲು ಮುಂದಾಗುತ್ತೀರಿ.



Click it and Unblock the Notifications
