Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಈರುಳ್ಳಿ ಟೊಮೆಟೋ ಇಲ್ಲದೆ ಮಾಡಿ ಈ ಕ್ಯಾಪ್ಸಿಕಂ ಚಿತ್ರಾನ್ನ..! ಬೆಸ್ಟ್ ರುಚಿ.!
ನೀವು ಬೆಳಗ್ಗೆ ತಿಂಡಿಗೆ ಎಷ್ಟು ಬಗೆಯಲ್ಲಿ ಚಿತ್ರಾನ್ನ ಮಾಡಿ ಸವಿದಿರುತ್ತೀರಿ. ಯಾಕಂದ್ರೆ ಚಿತ್ರಾನ್ನದಲ್ಲು ಹತ್ತಾರು ಬಗೆ, ರುಚಿಯಲ್ಲಿ ಮಾಡಬಹುದು. ಹಾಗೆ ಚಿತ್ರಾನ್ನವನ್ನು ಇಷ್ಟಪಡದವರು ಕೂಡ ಅದನ್ನು ಇಷ್ಟಪಟ್ಟು ಸವಿಯುವಂತೆ ಮಾಡಬಹುದು. ಬ್ರೇಕ್ ಫಾಸ್ಟ್ ಮಾತ್ರವಲ್ಲ ಲಂಚ್ ಬಾಕ್ಸ್ಗೂ ಕೂಡ ಚಿತ್ರಾನ್ನವೇ ಬೆಸ್ಟ್. ಒಳ್ಳೆಯ ಮಸಾಲೆ ಭರಿತ ಒಗ್ಗರಣೆ ನೀಡಿದರೆ ಇಡೀ ದಿನ ಇದನ್ನೇ ಸವಿಯಬಹುದು.
ಚಿತ್ರಾನ್ನ ಮಾಡುವಾಗ ಅನ್ನ ಹುಡಿ ಹುಡಿಯಾಗಿದ್ದರೆ ಚಿತ್ರಾನ್ನದ ರುಚಿ ಬೊಂಬಾಟ್ ಎನ್ನುವಂತಾಗಿರುತ್ತದೆ. ನಾವು ಈ ಮೊದಲು ಬಿಳಿ ಚಿತ್ರಾನ್ನ ಮಾಡುವ ಕುರಿತು ಹೇಳಿದ್ದೇವೆ, ಹಾಗೆ ಇದರಲ್ಲಿ ಮಸಾಲ ಚಿತ್ರಾನ್ನ, ಮಾವಿನ ಕಾಯಿ ಚಿತ್ರಾನ್ನ, ದೊಡ್ಲಿ ಚಿತ್ರಾನ್ನ, ನಿಂಬೆ ಹುಳಿ ಚಿತ್ರಾನ್ನ, ಹುಣಸೆ ಚಿತ್ರಾನ್ನ ಹೀಗೆ ಹತ್ತಾರು ಬಗೆಯನ್ನು ನಾವು ಈ ಮೊದಲೆ ಹೇಳಿದ್ದೇವೆ.

ಆದ್ರೆ ಇಂದು ಇದೆಲ್ಲದರಕ್ಕಿಂತ ಭಿನ್ನವಾಗಿ ಅತೀ ಕಡಿಮೆ ಸಮಯದಲ್ಲಿ ಅತ್ಯಂತ ರುಚಿಯಾಗಿ ಮಾಡಬಹುದಾದ ಕ್ಯಾಪ್ಸಿಕಂ ಚಿತ್ರಾನ್ನ ಮಾಡುವ ಕುರಿತು ತಿಳಿಸುತ್ತೇವೆ. ಕ್ಯಾಪ್ಸಿಕಂ ಸಾಮಾನ್ಯವಾಗಿ ಇಂತ ರೈಸ್ ಖಾದ್ಯಗಳಿಗೆ ಬಳಸಲಾಗುತ್ತದೆ. ಇಲ್ಲಿ ಕ್ಯಾಪ್ಸಿಕಂ ಅನ್ನೆ ಮುಖ್ಯ ವಸ್ತುವಾಗಿ ಬಳಸಿ ಈ ಚಿತ್ರಾನ್ನ ಮಾಡಲಾಗುತ್ತದೆ. ಹೀಗಾಗಿ ಈ ಚಿತ್ರಾನ್ನದ ರುಚಿ ಭಿನ್ನವಾಗಿರುತ್ತೆ. ಹಾಗೆ ಮಾಡೋದು ಕೂಡ ತುಂಬಾನೆ ಸುಲಭ.
ಹಾಗಾದ್ರೆ ಈ ಕ್ಯಾಪ್ಸಿಕಂ ಚಿತ್ರಾನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತ ಮಾಹಿತಿಯನ್ನು ನಾವಿಂದು ಇಲ್ಲಿ ತಿಳಿದುಕೊಳ್ಳೋಣ.
ಕ್ಯಾಪ್ಸಿಕಂ ಚಿತ್ರಾನ್ನ ಮಾಡಲು ಬೇಕಾಗುವ ಪದಾರ್ಥಗಳು
- ಕ್ಯಾಪ್ಸಿಕಂ
- ಅನ್ನ
- ಜೀರಿಗೆ
- ಸಾಸಿವೆ
- ಅರಶಿಣ
- ಕಡಲೆ ಬೀಜ
- ಕಡಲೆ ಬೇಳೆ
- ಉದ್ದಿನ ಬೇಳೆ
- ಕೊತ್ತಂಬರಿ ಸೊಪ್ಪು
- ಕರಿಬೇವು
- ಉಪ್ಪು
- ಎಣ್ಣೆ
- ಶುಂಠಿ
ಕ್ಯಾಪ್ಸಿಕಂ ಚಿತ್ರಾನ್ನ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು 5 ಸ್ಪೂನ್ ಎಣ್ಣೆ ಹಾಕಿಕೊಂಡು ಅದಕ್ಕೆ ಕಡಲೆ ಬೀಜ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ಫ್ರೈ ಆದ ಕಡಲೆಯನ್ನು ತೆಗೆದಿಟ್ಟುಕೊಳ್ಳಿ. ಈಗ ಇದೇ ಎಣ್ಣೆಗೆ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ಜೀರಿಗೆ ಹಾಕಿ ಫ್ರೈ ಮಾಡಿ. 1 ನಿಮಿಷದ ಬಳಿಕ ಇದಕ್ಕೆ ಕರಿವೇವು, ಹಸಿ ಮೆಣಸು, ತುರಿದುಕೊಂಡಿರುವ ಶುಂಠಿ ಹಾಕಿ 30 ಸೆಕೆಂಡ್ಗಳ ಕಾಲ ಬಿಡಿ.
ನಂತರ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಕ್ಯಾಪ್ಸಿಕಂ ಅನ್ನು ಹಾಕಿಕೊಂಡು ಫ್ರೈ ಮಾಡಿ. ನಂತರ ಇದಕ್ಕೆ ಸ್ವಲ್ಪ ಅರಶಿನ, ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ಚಿತ್ರಾನ್ನದ ಗೊಜ್ಜು ರೆಡಿಯಾಗುತ್ತದೆ.
ಈಗ ಒಂದು ಬೇಸಿನ್ನಲ್ಲಿ ಅನ್ನ ತೆಗೆದುಕೊಂಡು ಹುಡಿ ಮಾಡಿಕೊಳ್ಳಿ ಹಾಗೆ ಈ ರೈಸ್ಗೆ ಸ್ವಲ್ಪ ಸ್ವಲ್ಪವೇ ಗೊಜ್ಜನ್ನು ಹಾಕಿಕೊಳ್ಳಿ, ಮೊದಲೇ ಫ್ರೈ ಮಾಡಿರುವ ಕಡಲೆ ಬೀಜ ಹಾಕಿ, ಹಾಗೆ ಮೇಲೆ ಕೊತ್ತಂಬರಿ ಸೊಪ್ಪು ಕೂಡ ಹಾಕಿಕೊಂಡು ಅನ್ನಕ್ಕೆ ಮಿಕ್ಸ್ ಮಾಡಿಕೊಳ್ಳಿ. ಮಿಕ್ಸ್ ಮಾಡುವಾಗ ಒಲೆ ಮೇಲೆ ಇಡಬೇಕು ಎಂಬುದೇನಿಲ್ಲ. ಹಾಗೆಯೇ ಮಿಕ್ಸ್ ಮಾಡಿ. ಇಷ್ಟಾದರೆ ನಿಮ್ಮ ಮುಂದೆ ಕ್ಯಾಪ್ಸಿಕಂ ಚಿತ್ರಾನ್ನ ರೆಡಿಯಾಗುತ್ತೆ. ನೀವು ಕೂಡ ಮನೆಯಲ್ಲಿ ಈ ವಿಧಾನದಲ್ಲಿ ಚಿತ್ರಾನ್ನ ಮಾಡಿ ನೋಡಿ. ಇದಕ್ಕೆ ಟೊಮೆಟೋ, ಈರುಳ್ಳಿ ಯಾವುದರ ಅವಶ್ಯಕತೆಯೂ ಇಲ್ಲ.



Click it and Unblock the Notifications
