Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
5 ನಿಮಿಷದಲ್ಲಿ ಕ್ಯಾಪ್ಸಿಕಂ ರೈಸ್ ಮಾಡಿ..! ಇಲ್ಲಿದೆ ಸುಲಭದ ಬ್ರೇಕ್ಫಾಸ್ಟ್!!
ಬ್ರೇಕ್ಫಾಸ್ಟ್ಗೆ ಯಾವ ತಿಂಡಿಯನ್ನು ಮಾಡಬೇಕು ಎಂಬುದು ಬಹುದೊಡ್ಡ ಪ್ರಶ್ನೆಯಾಗಿ ನಿಮಗೆ ಕಾಡಬಹುದು, ನಿತ್ಯವು ಬೇರೆ ಬೇರೆಯಾದ ರುಚಿ ರುಚಿಯ ಖಾದ್ಯ ಮಾಡುವುದು ಸವಾಲಿನಂತೆ ಕಾಣಬಹುದು. ಏಕೆಂದರೆ ನಿತ್ಯವು ಒಂದೇ ರೀತಿಯ ತಿಂಡಿ ಮಾಡಿ ಸವಿಯುವುದು ಅಂದ್ರೆ ಎಲ್ಲರಿಗೂ ಬೇಸರ ತರಿಸುತ್ತದೆ. ಆದ್ರೆ ರೈಸ್ ಐಟಂನಿಂದ ಬಗೆ ಬಗೆಯ ಖಾದ್ಯ ಮಾಡಿ ಸವಿಯಬಹುದು.
ರೈಸ್ ಬಳಸಿ ಸಾಮಾನ್ಯವಾಗಿ ರೈಸ್ ಬಾತ್, ಪಲಾವ್, ಟೊಮೆಟೊ ಬಾತ್, ಪುಳಿಯೋಗರೆ, ಚಿತ್ರಾನ್ನ ಹೀಗೆ ಸುಲಭವಾಗಿ ಮಾಡುವ ಖಾದ್ಯವನ್ನು ಮಾಡಿ ಸವಿಯುವುದು ನೋಡಬಹುದು. ಅದರಲ್ಲೂ ಬೆಳಗ್ಗೆ ಸಮಯದಲ್ಲಿ ರುಚಿ ರುಚಿಯಾಗಿ ಬಾಯಿ ರುಚಿ ಹೆಚ್ಚಿಸುವಂತಹ ಅದ್ಭುತವಾದ ಖಾದ್ಯ ಸಿಕ್ಕರೆ ಎಲ್ಲರು ಬಾಯಿ ಚಪ್ಪರಿಸಿ ಸವಿಯುತ್ತಾರೆ.

ಹೀಗಾಗಿ ನಾವಿಂದು ಈ ರೈಸ್ನಿಂದ ಮಾಡುವಂತಹ ವಿಶೇಷವಾದ ಕ್ಯಾಪ್ಸಿಕಂ ರೈಸ್ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಕ್ಯಾಪ್ಸಿಕಂ ಹಾಕಿ ಮಾಡುವಂತಹ ಎಲ್ಲಾ ಖಾದ್ಯಗಳು ವಿಶೇಷ ರುಚಿಯನ್ನು ನೀಡುತ್ತವೆ. ಅದರಲ್ಲೂ ಈ ಕ್ಯಾಪ್ಸಿಕಂ ರೈಸ್ ಅಂತು ನಿಮ್ಮ ಬಾಯಲ್ಲಿ ನೀರು ತರಿಸುವುದು ಗ್ಯಾರಂಟಿ, ಬಹಳ ಸುಲಭವಾಗಿ ಬೆಳಗಿನ ಗಡಿಬಿಡಿಯ ಸಮಯದಲ್ಲೂ ಇದನ್ನು ಮಾಡಬಹುದು.
ಹಾಗಾದ್ರೆ ಈ ಕ್ಯಾಪ್ಸಿಕಂ ರೈಸ್ ಮಾಡುವುದು ಹೇಗೆ? ಕ್ಯಾಪ್ಸಿಕಂ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕ್ಯಾಪ್ಸಿಕಂ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಬಾಸುಮತಿ ಅಕ್ಕಿಯಿಂದ ಮಾಡಿದ ರೈಸ್
- ಕ್ಯಾಪ್ಸಿಕಂ
- ಎಣ್ಣೆ
- ಉಪ್ಪು
- ಗರಂ ಮಸಾಲೆ
- ಅರಶಿಣ ಪುಡಿ
- ಗೋಡಂಬಿ
- ಕಡಲೆ ಬೀಜ
- ಇಂಗು
- ಜೀರಿಗೆ
- ಸಾಸಿವೆ
- ಉಪ್ಪು
- ಹಸಿ ಮೆಣಸು
- ಕಾಳು ಮೆಣಸಿನ ಪುಡಿ
ಕ್ಯಾಪ್ಸಿಕಂ ರೈಸ್ ಮಾಡುವ ವಿಧಾನವೇನು?
ಕ್ಯಾಪ್ಸಿಕಂ ರೈಸ್ ಮಾಡಲು ಮೊದಲು ಬಾಸುಮತಿ ಅಕ್ಕಿಯಿಂದ ಹುಡಿ ಹುಡಿಯಾದ ಅನ್ನ ಮಾಡಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಜೀರಿಗೆ, ಇಂಗು, ಕಡಲೆ ಬೀಜ, ಗೋಡಂಬಿ, ಹಸಿ ಮೆಣಸು ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಒಂದು ಸ್ಪೂನ್ ಖಾರದ ಪುಡಿ, ಅರಶಿಣ ಪುಡಿ ಹಾಕಿ ಅರ್ಧ ನಿಮಿಷ ಫ್ರೈ ಮಾಡಿ.
ಅನಂತರ ಇದಕ್ಕೆ ಕತ್ತರಿಸಿದ ಕ್ಯಾಪ್ಸಿಕಂ, ಉಪ್ಪು ಹಾಕಿಕೊಂಡು ಬೇಯಿಸಿಕೊಳ್ಳಬೇಕು. ಮೂರರಿಂದ ನಾಲ್ಕು ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಅನಂತರ ಇದಕ್ಕೆ ಮೊದಲು ಮಾಡಿಕೊಂಡ ಬಾಸುಮತಿ ಅಕ್ಕಿಯ ಅನ್ನವನ್ನು ಈ ಬಾಣಲೆಗೆ ಹಾಕಿಕೊಳ್ಳಿ. ನಂತರ ಮೇಲೆ ಗರಂ ಮಸಾಲೆ, ಕಾಳು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಎಲ್ಲಾ ಮಸಾಲೆ ಅನ್ನಕ್ಕೆ ಹಿಡಿಯುವಂತೆ ಚೆನ್ನಾಗಿ ಮಿಕ್ಸ್ ಮಾಡಿ. 2 ನಿಮಿಷ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಕ್ಯಾಪ್ಸಿಕಂ ರೈಸ್ ರೆಡಿಯಾಗುತ್ತದೆ, ಇದಕ್ಕೆ ಬೇರೆ ಯಾವುದೇ ಮಸಾಲೆಗಳ ಅಗತ್ಯವಿಲ್ಲ ಇಷ್ಟಾದರೆ ಬಿಸಿ ಬಿಸಿಯಾಗಿ ಸವಿಯಲು ಅದ್ಭುತವಾಗಿರುತ್ತದೆ. ಮಧ್ಯಾಹ್ನ ಬಾಕ್ಸ್ಗೂ ಕೂಡ ಇದನ್ನು ಸವಿಯಬಹುದು.



Click it and Unblock the Notifications
