Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕ್ಯಾಪ್ಸಿಕಂ ರೈಸ್ ಬಾತ್ ಮಾಡಿ ಸವಿದು ನೋಡಿ..! ಇಲ್ಲಿದೆ ರೆಸಿಪಿ
ಬೆಳಗ್ಗೆ ತಿಂಡಿಗೆ ಅದ್ಭುತ ರುಚಿಯ ಖಾದ್ಯ ಸವಿಯುವ ಮನಸ್ಸಾಗಿರುತ್ತೆ, ನಿತ್ಯ ಯಾವುದಾದರು ಒಂದೇ ರೀತಿ ತಿಂಡಿ ಸವಿಯೀಕೆ ಎಲ್ಲರಿಗೂ ಬೇಜಾರು. ಒಂದು ದಿನ ಆದ್ರು ವಿಶೇಷ ರುಚಿಯ ತಿಂಡಿ ಮಾಡಿ ಸವಿಯೋಕೆ ಆಲೋಚಿಸಿರುತ್ತಾರೆ. ಆದ್ರೆ ಯಾವ ತಿಂಡಿ ಮಾಡಬೇಕು ಅನ್ನೋದು ಎಲ್ಲರ ಪ್ರಶ್ನೆಯಾಗಿರುತ್ತೆ.
ಹೀಗೆ ಗಡಿಬಿಡಿಯಲ್ಲೂ ಅದ್ಭುತ ರುಚಿಯ ಖಾದ್ಯ ಅಂದ್ರೆ ರೈಸ್ ಬಾತ್. ಈ ರೈಸ್ ಬಾತ್‌ನಲ್ಲಿ ಹತ್ತಾರು ವಿಧಗಳಿವೆ, ಹತ್ತಾರು ರೀತಿಯಲ್ಲಿ ವಿವಿಧ ರುಚಿಯಲ್ಲಿ ರೈಸ್ ಬಾತ್ ಮಾಡಬಹುದು. ಅದರಲ್ಲಿ ಹೆಚ್ಚಾಗಿ ಬದನೆಕಾಯಿ ಹಾಕಿ ಮಾಡುವ ರೈಸ್ ಬಾತ್ ಬಹಳ ಫೇಮಸ್. ಆದ್ರೆ ನಾವಿಂದು ಕ್ಯಾಪ್ಸಿಕಂ ರೈಸ್ ಬಾತ್ ಕುರಿತು ತಿಳಿಯೋಣ.

ಗಡಿಬಿಡಿಯ ಸಮಯದಲ್ಲಿ ಈ ಕ್ಯಾಪ್ಸಿಕಂ ರೈಸ್ ಬಾತ್ ಅನ್ನು ಅತ್ಯಂತ ಸುಲಭವಾಗಿ ಕಡಿಮೆ ವಸ್ತುಗಳ ಹಾಕಿ ಮಾಡಬಹುದು. ಈ ರೈಸ್ ಮಾಡಲು ಕಡಿಮೆ ಸಮಯ ಹಿಡಿಯುವುದರಿಂದ ನೀವು ಹಲವು ಹೋಟೆಲ್‌ಗಳಲ್ಲಿ ಈ ಕ್ಯಾಪ್ಟಿಕಂ ಹಾಕಿರುವ ರೈಸ್ ನೀಡುತ್ತಾರೆ. ಹಾಗಾದ್ರೆ ಈ ರೈಸ್ ಬಾತ್ ಮಾಡೋದು ಹೇಗೆ?
ಕ್ಯಾಪ್ಸಿಕಂ ರೈಸ್ ಬಾತ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಕ್ಯಾಪ್ಸಿಕಂ ರೈಸ್ ಬಾತ್ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತು ತಿಳಿದುಕೊಳ್ಳೋಣ.
ಕ್ಯಾಪ್ಸಿಕಂ ರೈಸ್ ಬಾತ್ ಮಾಡಲು ಬೇಕಾಗುವ ಪದಾರ್ಥಗಳು
- ಅನ್ನ - 200 ಗ್ರಾಮ್
- ಕ್ಯಾಪ್ಸಿಕಂ - 2
- ಈರುಳ್ಳಿ- 2
- ಟೊಮೆಟೋ - 1
- ಧನಿಯಾ ಪುಡಿ - 2 ಚಮಚ
- ಖಾರದ ಪುಡಿ
- ಸಾಂಬಾರ್ ಪುಡಿ- 2 ಚಮಚ
- ಎಣ್ಣೆ
- ಸಾಸಿವೆ
- ಜೀರಿಗೆ
- ಹುಣಸೆ ಹುಳಿ
- ಕಡಲೆ ಬೇಳೆ
- ಉದ್ದಿನ ಬೇಳೆ
- ಉಪ್ಪು
- ಕೊತ್ತಂಬರಿ ಸೊಪ್ಪು
- ಕರಿಬೇವು
ಕ್ಯಾಪ್ಸಿಕಂ ರೈಸ್ ಬಾತ್ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ, ಬಳಿಕ ಇದಕ್ಕೆ ಸಾಸಿವೆ, ಜೀರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಫ್ರೈ ಮಾಡಿಕೊಳ್ಳಿ. 2 ನಿಮಿಷದ ಬಳಿಕ ಗೋಡಂಬಿ ಹಾಕಿಕೊಂಡಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಬೆಳ್ಳುಳ್ಳಿ, ಕರಿಬೇವು ಸಹ ಹಾಕಿ ನಂತರ ಸಣ್ಣದಾಗಿ ಸ್ಲೈಸ್ ಮಾಡಿಕೊಂಡಿರುವ ಈರುಳ್ಳಿಯನ್ನು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ನಂತರ ಇದಕ್ಕೆ ಹಣ್ಣು ಟೊಮೆಟೋ ಕತ್ತರಿಸಿಕೊಂಡು ಹಾಕಿ. ಇದಾದ ಬಳಿಕ ಎರಡು ಕ್ಯಾಪ್ಸಿಕಂ ಅನ್ನು ಚೆನ್ನಾಗಿ ಸ್ಲೈಸ್ ಮಾಡಿ (ದಪ್ಪವಾಗಿದ್ದರೂ ಪರವಾಗಿಲ್ಲ) ಇದಕ್ಕೆ ಹಾಕಿಕೊಳ್ಳಿ, ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಮುಚ್ಚಳ ಮುಚ್ಚಿ ಬೇಯಲು ಬಿಡಿ. ತಳ ಹಿಡಿಯದಂತೆ ಆಗಾಗ ಕೈ ಆಡಿಸುತ್ತಾ ಇರಿ.
ಸುಮಾರು 4ರಿಂದ 5 ನಿಮಿಷ ಫ್ರೈ ಮಾಡಿದ ಬಳಿಕ ಒಮ್ಮೆ ಮಿಕ್ಸ್ ಮಾಡಿ ಸ್ವಲ್ಪ ಹುಣಸೆ ಹುಳಿಯನ್ನು ಹಿಂಡಿಕೊಳ್ಳಿ. ಈಗ ಸಾಂಬಾರ್ ಪೌಡರ್, ಖಾರದ ಪುಡಿ, ಧನಿಯಾ ಪುಡಿ ಹಾಕಿ ಮಿಕ್ಸ್ ಮಾಡಿಕೊಂಡು ಫ್ರೈ ಮಾಡಿಕೊಳ್ಳಿ. 2 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಒಲೆ ಆಫ್ ಮಾಡಿಕೊಳ್ಳಿ. ಈಗ 200 ಗ್ರಾಮ್ ಅನ್ನವನ್ನ ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಅನ್ನವನ್ನು ಆಗಲೆ ಮಾಡಿಕೊಂದ್ದರೂ ಉತ್ತಮ ಇಲ್ಲದಿದ್ದರೆ ಹಿಂದಿನ ದಿನದ ಅನ್ನವನ್ನೂ ಬಳಸಬಹುದು. ಅನ್ನ ಹಾಕಿದ ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿದರೆ ನಿಮ್ಮ ಮುಂದೆ ಕ್ಯಾಪ್ಸಿಕಂ ರೈಸ್ ಬಾತ್ ರೆಡಿಯಾಗುತ್ತದೆ, ಇದರ ರುಚಿ ಮುಂದೆ ಯಾವ ತಿಂಡಿಯೂ ಸಹ ಸರಿಸಮ ಇರುವುದಿಲ್ಲ. ನೀವು ಸಹ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications
