Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಸುಲಭದ ಲಂಚ್ ಬಾಕ್ಸ್ ರೆಸಿಪಿ; ಕ್ಯಾಪ್ಸಿಕಂ ಮಸಾಲ ರೈಸ್!!
ನೀವು ಬೆಳಗ್ಗೆ ತಿಂಡಿ ಸಮಯದಲ್ಲಿ ಸವಿಯಲು ಹಲವು ರೀತಿ ಖಾದ್ಯ ಮಾಡಿರುತ್ತೀರಿ. ಅದ್ರಲ್ಲೂ ರೈಸ್ ಬಳಸಿಕೊಂಡು ಹತ್ತಾರು ರೀತಿ ಖಾದ್ಯಗಳ ಸಿದ್ದ ಮಾಡಬಹುದು. ಬಹುತೇಕರಿಗೆ ರೈಸ್ ಬಾತ್, ಪಲಾವ್, ಪುಳಿಯೋಗರೆ, ಚಿತ್ರಾನ್ನ ಸೇರಿ ಹಲವು ರೀತಿಯ ಅನ್ನದ ರೆಸಿಪಿಗಳು ಇಷ್ಟವಾಗುತ್ತವೆ. ಹಾಗೆ ಬೆಳಗ್ಗೆ ಸವಿದ ಬಳಿಕ ಬಾಕ್ಸ್‌ಗೆ ಹಾಕಿಕೊಂಡು ಮಧ್ಯಾಹ್ನ ಕೂಡ ಸವಿಯುತ್ತಾರೆ.
ಇಂತಹ ರೆಸಿಪಿಗಳ ಸಾಲಿನಲ್ಲಿ ನಾವಿಂದು ಬಹಳ ಸುಲಭವಾಗಿ ಮಾಡಿ ಮುಗಿಸಬಹುದಾದ ಕ್ಯಾಪ್ಸಿಕಂ ರೈಸ್ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ. ನೀವು ಕ್ಯಾಪ್ಸಿಕಂ ಬಳಸಿಕೊಂಡು ಮಾಡುವ ಹಲವು ರೀತಿ ಖಾದ್ಯಗಳನ್ನು ಸವಿದಿರುತ್ತೀರಿ. ಹಾಗೆ ಕ್ಯಾಪ್ಸಿಕಂ ಬಳಸಿ ಮಾಡುವ ಬಹುತೇಕ ಎಲ್ಲಾ ಖಾದ್ಯಗಳು ನಿಮಗೆ ರುಚಿ ತರಲಿವೆ.

ಕ್ಯಾಪ್ಸಿಕಂ ಚಿತ್ರಾನ್ನ, ಕ್ಯಾಪ್ಸಿಕಂ ಗ್ರೇವಿಯಂತಹ ರೆಸಿಪಿಗಳು ಎಲ್ಲರು ಇಷ್ಟಪಡುಂತಹ ಖಾದ್ಯಗಳಲ್ಲಿ ಮುಖ್ಯವಾಗಿದೆ. ಹೀಗಾಗಿ ನಾವಿಂದು ಈ ಕ್ಯಾಪ್ಸಿಕಂ ಬಳಸಿಕೊಂಡು ಹೊಸದಾಗಿ ಕ್ಯಾಪ್ಸಿಕಂ ಮಸಾಲ ರೈಸ್ ಮಾಡುವ ಕುರಿತು ತಿಳಿಯೋಣ. ಇದನ್ನು ನೀವು ಬಹಳ ಸುಲಭವಾಗಿ ಹಾಗೆ ಬಹಳ ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದು.
ಬೆಳಗ್ಗೆ ಸಮಯದಲ್ಲಿ ನೀವು ಬಹಳ ಗಡಿ ಬಿಡಿಯಲ್ಲಿದ್ದಾಗ ಹಾಗೆ ನೀವು ಮಧ್ಯಾಹ್ನಕ್ಕೂ ಯಾವುದಾದರು ಖಾದ್ಯ ಸವಿಯಬೇಕಾಗಿ ಬಂದಾಗ ಇದನ್ನು ಮಾಡಿ ಮುಗಿಸಬಹುದು. ಹಾಗಾದ್ರೆ ಮನೆಯಲ್ಲಿಯೇ ಈ ಕ್ಯಾಪ್ಸಿಕಂ ಮಸಾಲ ರೈಸ್ ಮಾಡುವುದು ಹೇಗೆ? ಮಾಡಲು ಎಷ್ಟೆಲ್ಲಾ ವಸ್ತು ಬೇಕು? ಮಾಡಲು ಎಷ್ಟು ಸಮಯ ತೆಗೆದುಕೊಳ್ಳಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಕ್ಯಾಪ್ಸಿಕಂ ಮಸಾಲ ರೈಸ್ ಮಾಡಲು ಬೇಕಾಗುವ ವಸ್ತುಗಳು
- ರೈಸ್
- ಕ್ಯಾಪ್ಸಿಕಂ
- ಕರಿಬೇವು
- ಎಣ್ಣೆ
- ಉಪ್ಪು
- ಟೊಮೆಟೊ
- ಬೆಳ್ಳುಳ್ಳಿ
- ಈರುಳ್ಳಿ
- ಹಸಿ ಮೆಣಸಿನಕಾಯಿ
- ಅರಿಶಿನ ಪುಡಿ
- ಗರಂ ಮಸಾಲ ಪುಡಿ
- ಖಾರದ ಪುಡಿ
- ಧನಿಯಾ ಪುಡಿ
- ಕೊತ್ತಂಬರಿ ಸೊಪ್ಪು
ಕ್ಯಾಪ್ಸಿಕಂ ಮಸಾಲ ರೈಸ್ ಮಾಡುವುದು ಹೇಗೆ?
ಮೊದಲು ಬಾಣಲೆ ಒಲೆ ಮೇಲೆ ಇಟ್ಟು 2 ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ಜಜ್ಜಿದ ಬೆಳ್ಳುಳ್ಳಿ, ಜೀರಿಗೆ ಕರಿಬೇವು, ಹಸಿ ಮೆಣಸು, ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಸಣ್ಣದಾಗಿ ಕತ್ತರಿಸಿಕೊಂಡ ಕ್ಯಾಪ್ಸಿಕಂ ಸಹ ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ. 1 ನಿಮಿಷದ ಬಳಿಕ ಇದಕ್ಕೆ ಟೊಮೆಟೋ ಸಹ ಹಾಕಿ.
ಹಾಗೆ 1 ನಿಮಿಷ ಬಿಟ್ಟು ಇದಕ್ಕೆ ಖಾರದ ಪುಡಿ, ಅರಶಿಣ ಪುಡಿ, ಗರಂ ಮಸಾಲ, ಧನಿಯಾ ಪುಡಿ ಸಹ ಹಾಕಿಕೊಂಡು ಒಮ್ಮೆ ಮಿಕ್ಸ್ ಮಾಡಿ. ಎರಡು ನಿಮಿಷ ಬಿಟ್ಟು ಇದಕ್ಕೆ ಮೊದಲೇ ಮಾಡಿಟ್ಟ ಅನ್ನವನ್ನು ಹಾಕಿಕೊಳ್ಳಿ. ಹಾಗೆ ಚೆನ್ನಾಗಿ ಮಿಕ್ಸ್ ಮಾಡಿ. ಮಸಾಲೆ ಚೆನ್ನಾಗಿ ಹಿಡಿಯುವಂತೆ ಕಲಸಿಕೊಳ್ಳಬೇಕು.
ಪುಳಿಯೋಗರೆ ಮಿಕ್ಸ್ ಮಾಡಿದಂತೆಯೇ ಮಾಡಿಕೊಳ್ಳಿ. 2 ನಿಮಿಷ ಒಲೆ ಮೇಲೆ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈಗ ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಕ್ಯಾಪ್ಸಿಕಂ ಮಸಾಲ ರೈಸ್ ಸಿದ್ದವಾಗುತ್ತೆ. ಇದನ್ನು ನೀವುಯ ಬೆಳಗ್ಗೆ ತಿಂಡಿಗೆ ಸವಿದು ಬಳಿಕ ಹಾಗೆ ಮಧ್ಯಾಹ್ನದ ಊಟಕ್ಕೂ ಕೂಡ ಸವಿಯಬಹುದು. ನೀವು ಸಹ ಇದನ್ನು ಒಮ್ಮೆಯಾದರು ಮನೆಯಲ್ಲಿ ಮಾಡಿ ಸವಿದು ನೋಡಿ.
ಮನೆಯಲ್ಲಿ ಮಕ್ಕಳಿದ್ದರಂತು ಅವರಿಗೆ ಲಂಚ್ ಬಾಕ್ಸ್ ರೆಸಿಪಿಯಾಗಿರಲಿದೆ. ಹಾಗೆ ಬೆಳಗ್ಗೆ ಸವಿದು ಮತ್ತೆ ಮಧ್ಯಾಹ್ನ ಕೂಡ ಸವಿಯಲು ಇದು ರುಚಿ ನೀಡಲಿದೆ. ನೀವು ನಿತ್ಯ ಒಂದೊಂದು ರುಚಿಯಲ್ಲಿ ರೈಸ್ ಮಾಡುವ ಹವ್ಯಾಸ ಇಟ್ಟುಕೊಂಡಿದ್ದರೆ ಈ ರೆಸಿಪಿ ಕೂಡ ನಿಮಗೆ ಇಷ್ಟವಾಗಬಹುದು.



Click it and Unblock the Notifications
