Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬೆಳಗ್ಗೆ ತಿಂಡಿ ಮಾತ್ರವಲ್ಲ ಮಧ್ಯಾಹ್ನದ ಬಾಕ್ಸ್ಗೂ ಥಟ್ ಅಂತ ಮಾಡಿ ಕ್ಯಾಪ್ಸಿಕಂ ರೈಸ್!
ನೀವು ನಿತ್ಯ ಬೆಳಗ್ಗೆ ತಿಂಡಿಗೆ ವಿಭಿನ್ನ ರುಚಿ ಮಾಡುವ ಆಲೋಚನೆಯಲ್ಲಿರಬಹುದು. ಇಲ್ಲಿವೆ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಹಾಗೆ ನಿಮಗೂ ಮಧ್ಯಾಹ್ನದ ಬಾಕ್ಸ್ಗೂ ಇಂದು ವಿಭಿನ್ನ ತಿಂಡಿ ಮಾಡಬೇಕಾಬಹುದು. ಇಂತಹ ಸಮಯದಲ್ಲಿ ನೀವು ಯಾವುದಾದರು ಮಸಾಲೆ ಭರಿತ ಅದ್ಭುತ ರುಚಿಯ ಖಾದ್ಯ ಮಾಡಲು ಮುಂದಾಗುವುದು ನೋಡಬಹುದು. ಹಾಗೆ ಇಂತಹ ಸಮಯದಲ್ಲಿ ನೀವು ಅನ್ನದಿಂದ ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನದ ಊಟ ಸೇರಿ ಒಂದೇ ಖಾದ್ಯ ಮಾಡಲು ಇಷ್ಟಪಡುತ್ತೀರಿ.
ಆದ್ರೆ ಬೆಳಗ್ಗೆಯ ಗಡಿ ಬಿಡಿಯಲ್ಲಿ ಎರಡು ಹೊತ್ತಿಗೆ ಒಂದೇ ಖಾದ್ಯ ಮಾಡುವುದು ಹೇಗೆ? ಅದರಲ್ಲೂ ಯಾವ ಖಾದ್ಯ ಬಹಳ ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿ ಮಾಡಬಹುದು ಎಂಬುದನ್ನು ಯೋಚಿಸುತ್ತೀರಿ. ಅದರಲ್ಲೂ ನಾವಿಂದು ಸುಲಭವಾಗಿ ಘಮ ಘಮ ಎನ್ನುವಂತಹ ಕ್ಯಾಪ್ಸಿಕಂ ಮಸಾಲ ರೈಸ್ ಅನ್ನು ಥಟ್ ಅಂತ ಮಾಡುವುದು ಹೇಗೆ ಅನ್ನೋದನ್ನು ನೋಡೋಣ.

ಅದರಲ್ಲೂ ಈ ಕ್ಯಾಪ್ಸಿಕಂ ರೈಸ್ ಅನ್ನು ನೀವು ಯಾವಾಗ ಬೇಕಾದರು ಮಾಡಬಹುದು, ಬೆಳಗ್ಗೆ ತಿಂಡಿಗೆ ಹಾಗೆ ಮಧ್ಯಾಹ್ನದ ಬಾಕ್ಸ್ಗೆ ಈ ರೈಸ್ ಅದ್ಭುತ ರುಚಿ ನೀಡಲಿದೆ. ಹಾಗಾದ್ರೆ ಈ ಕ್ಯಾಪ್ಸಿಕಂ ಮಸಾಲ ರೈಸ್ ಮಾಡೋದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಕ್ಯಾಪ್ಸಿಕಂ ಮಸಾಲೆ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕ್ಯಾಪ್ಸಿಕಂ ಮಸಾಲೆ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಕ್ಯಾಪ್ಸಿಕಂ
- ಅನ್ನ
- ಸಾಸಿವೆ
- ಜೀರಿಗೆ
- ಈರುಳ್ಳಿ
- ಟೊಮೆಟೋ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಖಾರದ ಪುಡಿ
- ದನಿಯಾ ಪುಡಿ ಅರಶಿಣ
- ಉಪ್ಪು
- ಗರಂ ಮಸಾಲೆ
- ಎಣ್ಣೆ
ಕ್ಯಾಪ್ಸಿಕಂ ಮಸಾಲೆ ರೈಸ್ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲಿಟ್ಟು ಎಣ್ಣೆ ಹಾಕಿಕೊಳ್ಳಿ. ಬಳಿಕ ಇದಕ್ಕೆ ಸಾಸಿವೆ, ಜೀರಿಗೆ, ಒಣ ಮೆಣಸು, ಈರುಳ್ಳಿ ಕತ್ತರಿಸಿ ಹಾಕಿ 2 ನಿಮಿಷ ಫ್ರೈ ಮಾಡಿ. ಹಾಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಹ ಹಾಕಿ 2 ನಿಮಿಷ ಫ್ರೈ ಮಾಡಿ. ಈಗ ಒಂದು ಕ್ಯಾಪ್ಸಿಕಂ ಅನ್ನು ಸಹ ಹೆಚ್ಚಿಕೊಂಡು ಇದಕ್ಕೆ ಹಾಕಿ 2 ನಿಮಿಷ ಫ್ರೈ ಮಾಡಿ.
ಈಗ ಚಿಕ್ಕದಾಗಿ ಕತ್ತರಿಸಿಕೊಂಡಿರುವ ಟೊಮೆಟೋವನ್ನು ಸಹ ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ, ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಈಗ ಖಾರದ ಪುಡಿ, ಗರ ಮಸಾಲೆ, ಅರಶಿಣ, ಹಾಕಿಕೊಂಡು ಮಿಕ್ಸ್ ಮಾಡಿಕೊಂಡು ಫ್ರೈ ಮಾಡಿಕೊಳ್ಳಿ. ಎಲ್ಲಾ ಮಸಾಲೆ ಫ್ರೈ ಆದ ಬಳಿಕ ಈಗ ಉರಿಯನ್ನು ಸಂಪೂರ್ಣ ಸಣ್ಣಗೆ ಇಟ್ಟುಕೊಳ್ಳಿ.
ಈಗ ಮೊದಲೇ ಮಾಡಿರುವ ಹುಡಿ ಹುಡಿಯಾದ ಅನ್ನವನ್ನು ಬಾಣಲೆಗೆ ಹಾಕಿಕೊಳ್ಳಬೇಕು. ಇದಕ್ಕೆ ನಿಂಬೆ ಹಣ್ಣಿನ ರಸ ಹಾಕಿ ಮಿಕ್ಸ್ ಮಾಡಿಕೊಳ್ಳಿ ಎಲ್ಲಾ ಮಸಾಲೆಗಳು ಚೆನ್ನಾಗಿ ಅನ್ನಕ್ಕೆ ಹಿಡಿಯುವಂತೆ ಕಲಸಿಕೊಳ್ಳಬೇಕು. ಚೆನ್ನಾಗಿ 2 ನಿಮಿಷ ಕಲಸಿಕೊಂಡರೆ ನಿಮ್ಮ ಮುಂದೆ ಕ್ಯಾಪ್ಸಿಕಂ ಮಸಾಲ ರೈಸ್ ರೆಡಿಯಾಗುತ್ತೆ, ನೀವಿದನ್ನು ಬೆಳಗ್ಗೆ ತಿಂಡಿಗೆ ಹಾಗೆ ಮಧ್ಯಾಹ್ನದ ಬಾಕ್ಸ್ಗೆ ಹಾಕಿಕೊಂಡು ಹೋಗಬಹುದು. ರುಚಿಯಲ್ಲೂ ಇದು ಎತ್ತಿದ ಕೈ. ನೀವು ಕೂಡ ಮನೆಯಲ್ಲಿ ಈ ಖಾದ್ಯ ಒಮ್ಮೆ ಸವಿದು ನೋಡಿ. ಸುಲಭವಾಗಿ ಮಾಡಬಹುದಾದ ಕೆಲವೇ ಕೆಲವು ಖಾದ್ಯದಲ್ಲಿ ಇದು ಕೂಡ ಒಂದಾಗಿದೆ.



Click it and Unblock the Notifications
