Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
2 ನಿಮಿಷದಲ್ಲಿ ಮಾಡಿ ದೊಣ್ಣೆ ಮೆಣಸಿನ ಮಜ್ಜಿಗೆ ಹುಳಿ: ಇಲ್ಲಿದೆ ರುಚಿ ರುಚಿ ಸಾರು
ಊಟದ ಜೊತೆಗೆ ಯಾವುದಾದರು ಹುಳಿ ಇದ್ದರೆ ಅದರ ರುಚಿಗೆ ನೀವು ಮನಸೋಲದೆ ಇರಲು ಸಾಧ್ಯವಿಲ್ಲ. ಕೆಲವರಿಗಂತು, ಮಜ್ಜಿಗೆ, ಮೊಸರು, ಹುಳಿ ಇಲ್ಲದೆ ಯಾವುದೇ ಊಟ ರುಚಿಸೋದಿಲ್ಲ. ಹಾಗೆ ಯಾವಾಗಲು ಅವರು ಮೊಸರು ಹುಳಿಗಳ ಮಾಡಿ ಸವಿಯಲು ಇಷ್ಟಪಡುವುದು ಸಹ ನೋಡಬಹುದು.
ಹಲವು ತರಕಾರಿಗಳ ಬಳಸಿಯೂ ಮಜ್ಜಿಗೆ ಹುಳಿ ಮಾಡಿ ಸವಿಯಬಹುದು. ಅದ್ರಲ್ಲೂ ವಿಶೇಷವಾಗಿ ಕ್ಯಾಪ್ಸಿಕಂ ಅಥವಾ ದೊಣ್ಣೆ ಮೆಣಸನ್ನು ಬಳಸಿ ಮಾಡುವಂತಹ ವಿಶೇಷ ರುಚಿಯ ಹುಳಿಯು ಎಲ್ಲರಿಗೂ ಇಷ್ಟವಾಗುತ್ತೆ. ನೀವು ಕೂಡ ಈ ರೀತಿಯ ಸಾರು ಮಾಡಿ ಸವಿದು ನೋಡಿ. ಇ ದೊಣ್ಣೆ ಮೆಣಸು ಬಳಸಿ ಮಾಡುವ ಹುಳಿ ಊಟದ ಜೊತೆಗಿದ್ದರೆ ಅದ್ಭುತ ರುಚಿ ನೀಡಲಿದೆ.

ದೇಹ ಮಸಾಲೆ ಪದಾರ್ಥಗಳಿಗೆ ಒಗ್ಗಿಕೊಂಡರೆ ಉಷ್ಣಾಂಶ ಹೆಚ್ಚಾಗುತ್ತದೆ. ಇದು ಹಲವು ಸಮಸ್ಯೆಗೂ ಕಾರಣವಾಗಬಹುದು. ಆದ್ರೆ ಮಜ್ಜಿಗೆ ಹುಳಿ ಅಥವಾ ಈ ದೊಣ್ಣೆ ಮೆಣಸು ಬಳಸಿ ಮಾಡುವ ಮಜ್ಜಿಗೆ ಬಹಳ ಉಪಕಾರಿಯಾಗಲಿದೆ. ನೀವು ಕೂಡ ಊಟದೊಂದಿಗೆ ಈ ಸಾರು ಮಾಡಿ ಸವಿದು ನೋಡಿ.
ಹಾಗಾದ್ರೆ ಊಟಕ್ಕೆ ಈ ದೊಣ್ಣೆ ಮೆಣಸಿನ ಮಜ್ಜಿಗೆ ಹುಳಿ ಮಾಡೋದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎನ್ನುವುದನ್ನು ನಾವಿಂದು ತಿಳಿದುಕೊಳ್ಳೋಣ.
ದೊಣ್ಣೆ ಮೆಣಸಿನ ಮಜ್ಜಿಗೆ ಹುಳಿ ಮಾಡಲು ಬೇಕಾಗುವ ವಸ್ತುಗಳು
- ದೊಣ್ಣೆ ಮೆಣಸು- 2ರಿಂದ 3
- ಮೊಸರು
- ತೆಂಗಿನಕಾಯಿ ತುರಿ
- ಉದ್ದಿನ ಬೇಳೆ
- ಒಣ ಮೆಣಸು
- ಹಸಿ ಮೆಣಸು
- ಸಾಸಿವೆ
- ಜೀರಿಗೆ
- ಉಪ್ಪು
ದೊಣ್ಣೆ ಮೆಣಸಿನ ಮಜ್ಜಿಗೆ ಹುಳಿ ಮಾಡುವುದು ಹೇಗೆ?
ಮೊದಲು ದೊಣ್ಣೆ ಮೆಣಸನ್ನು ಸಣ್ಣದಾಗಿ ಕತ್ತರಿಸಿಕೊಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿಕೊಂಡು ಬಳಿಕ ಸಾಸಿವೆ, ಉದ್ದಿನ ಬೇಳೆ, ಒಣ ಮೆಣಸು ಪುಡಿ ಮಾಡಿಕೊಂಡು ಹಾಕಿಕೊಳ್ಳಿ. 2 ನಿಮಿಷ ಫ್ರೈ ಮಾಡಿದ ಬಳಿಕ ಸ್ವಲ್ಪ ಕರಿವೇವು ಹಾಗೆ ಇಂಗು ಹಾಕಿಕೊಳ್ಳಿ.
ಒಮ್ಮೆ ಮಿಕ್ಸ್ ಮಾಡಿಕೊಂಡು ಈಗ ಹೆಚ್ಚಿಕೊಂಡಿರುವ ದೊಣ್ಣೆ ಮೆಣಸನ್ನು ಇದಕ್ಕೆ ಹಾಕಿಕೊಂಡು ಮಿಶ್ರಣ ಮಾಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಹೀಗೆ ಚೆನ್ನಾಗಿ 2ರಿಂದ 3 ನಿಮಿಷ ಹುರಿದು ಒಲೆ ಆಫ್ ಮಾಡಿಕೊಳ್ಳಿ. ಈಗ ಒಂದು ಮಿಕ್ಸ್ ಜಾರ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ತೆಂಗಿನ ತುರಿಯನ್ನು ಹಾಕಿಕೊಳ್ಳಿ. ಹಾಗೆ ಹಸಿ ಮೆಣಸು, ಸಾಸಿವೆ, ಅಗತ್ಯ ಇರುವಷ್ಟು ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಇದು ಚಟ್ನಿಯಂತೆ ನುಣ್ಣಗೆ ರುಬ್ಬಿರಬೇಕು. ಇದನ್ನು ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಈ ಚಟ್ನಿಗೆ ಅರ್ಧ ಕಪ್ ಮೊಸರು ಕೂಡ ಹಾಕಿ ಮಿಕ್ಸ್ ಮಾಡಿ. ಈಗ ಬಾಣಲೆಯಲ್ಲಿ ಹುರಿದುಕೊಂಡಿದ್ದ ದೊಣ್ಣೆ ಮೆಣಸು ಹಾಗೆ ಇತರ ಪದಾರ್ಥಗಳನ್ನು ಕೂಡ ತೆಗೆದು ಈ ಮೊಸರಿಗೆ ಸೇರಿಸಿಕೊಳ್ಳಬೇಕು. ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ದೊಣ್ಣೆ ಮೆಣಸಿನ ಹುಳಿ ರೆಡಿಯಾಗುತ್ತೆ. ನೀವು ಇದಕ್ಕೆ ಹೆಚ್ಚು ನೀರು ಹಾಕಿ ತೆಳುವಾಗಿಯೂ ಮಾಡಬಹುದು. ಹಾಗೆ ಮೊಸರು ಮಾತ್ರ ಬಳಸಿ ದಪ್ಪವಾಗಿಯೂ ಮಾಡಿಕೊಳ್ಳಬಹುದು. ಊಟದ ಜೊತೆಗಂತು ಇದು ಅದ್ಭುತ ರುಚಿ ನೀಡುವ ಖಾದ್ಯ ಆಗಿರಲಿದೆ. ನೀವು ಸಹ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
