Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬೊಂಬಾಟ್ ರುಚಿಯ ಕ್ಯಾಪ್ಸಿಕಂ ಚಿತ್ರಾನ್ನ ಮಾಡಿ..! ಇಲ್ಲಿದೆ ರೆಸಿಪಿ
ಬೆಳಗ್ಗೆ ತಿಂಡಿ ಮಾಡಲು ಗೃಹಿಣಿಯರಿಗೆ ಯೋಚನೆ ಮಾಡೋದೇ ಒಂದು ಸವಾಲು. ಯಾಕಂದ್ರೆ ಬೆಳಗ್ಗೆ ಗಡಿಬಿಡಿಯಲ್ಲಿ ಯಾವ ತಿಂಡಿ ಮಾಡಬೇಕು ಅನ್ನೋದೆ ದೊಡ್ಡ ಯೋಚನೆ. ಹೀಗಿರುವಾಗ ಚಿತ್ರಾನ್ನ ಒಂದು ಆಯ್ಕೆಯಾಗಿರುತ್ತೆ. ಆದ್ರೆ ಚಿತ್ರಾನ್ನ ಅಂದ್ರೆ ಕೆಲವರಿಗೆ ಆಲಸ್ಯ. ಚಿತ್ರಾನ್ನ ಸವಿಯಲು ಇಷ್ಟವಿರುವುದಿಲ್ಲ.
ಮನೆಯಲ್ಲಿ ಚಿತ್ರಾನ್ನ ಮಾಡಿದ ದಿನ ಅವರು ಸ್ವಲ್ಪವೇ ಸೇವಿಸಿ ಹೊರಗೆ ತಿಂಡಿ ತಿನ್ನಲು ಮುಂದಾಗುತ್ತಾರೆ. ಇಲ್ಲವೆ ಬೇರೆ ಏನಾದರು ತಿನ್ನಲು ಬಯಸುತ್ತಾರೆ. ಆದ್ರೆ ಚಿತ್ರಾನ್ನ ರುಚಿಕರವಾಗಿ ಮಾಡಿದ್ರೆ ಎಂತವರು ಸಹ ಇಷ್ಟಪಟ್ಟು ಸವಿಯುತ್ತಾರೆ. ಆದ್ರೆ ಚಿತ್ರಾನ್ನವನ್ನ ರುಚಿ ರುಚಿಯಾಗಿ ಮಾಡೋದು ಹೇಗೆ? ಇಲ್ಲಿದೆ ನೋಡಿ ರೆಸಿಪಿ.

ಮನೆಯಲ್ಲಿ ತಿಂಡಿಗೆ ರುಚಿ ರುಚಿಯಾಗಿ ಕ್ಯಾಪ್ಸಿಕಂ ಚಿತ್ರಾನ್ನ ಮಾಡುವುದು ಹೇಗೆ? ಚಿತ್ರಾನ್ನ ಮಾಡಲು ಬೇಕಾಗುವ ಪದಾರ್ಥವೇನು? ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕ್ಯಾಪ್ಸಿಕಂ ಚಿತ್ರಾನ್ನ ಮಾಡಲು ಬೇಕಾಗುವ ಪದಾರ್ಥಗಳು
- ಅನ್ನ- 250 ಗ್ರಾಂ
- ಕ್ಯಾಪ್ಸಿಕಂ - ತಲಾ 1/2 ಕಪ್
- ಈರುಳ್ಳಿ - 1
- ಕರಿಬೇವು
- ಕಡಲೆ ಬೇಳೆ - 1 tbs
- ಹಸಿರು ಮೆಣಸಿನಕಾಯಿ - 5
- ಕಡಲೆ ಬೀಜ
- ಕೊತ್ತಂಬರಿ ಸೊಪ್ಪು - 1/4 ಕಪ್
- ನಿಂಬೆಹಣ್ಣು-2
- ಸಾಸಿವೆ - 1 ಟೀಸ್ಪೂನ್
- ಅರಿಶಿನ ಪುಡಿ - 1/2 ಟೀಸ್ಪೂನ್
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಕ್ಯಾಪ್ಸಿಕಂ ಚಿತ್ರಾನ್ನ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಎಣ್ಣೆ ಕಾದ ಬಳಿಕ ಸಾಸಿವೆ, ಜೀರಿಗೆ, ಕಡಲೆ ಬೇಳೆ, ಕಡಲೆ ಬೀಜ ಹಾಕಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಹಸಿ ಮೆಣಸಿನಕಾಯಿ, ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ಇದಾದ ಬಳಿಕ ಇದಕ್ಕೆ ಕ್ಯಾಪ್ಸಿಕಂ ಹಾಕಿಕೊಳ್ಳಿ.
ಇದಕ್ಕೆ ಕರಿವೇವು ಹಾಗೂ ಉಪ್ಪು ಹಾಕಿಕೊಂಡು 2 ನಿಮಿಷ ಫ್ರೈ ಮಾಡಿಕೊಳ್ಳಿ, ಚೆನ್ನಾಗಿ ಫ್ರೈ ಆದ ಬಳಿಕ ಇದಕ್ಕೆ ಅರಶಿನ ಪುಡಿ ಹಾಕಿಕೊಂಡು ಚೆನ್ನಾಗಿ ತಿರುಗಿಸಿಕೊಳ್ಳಿ, ಇಷ್ಟಾದ ಮೇಲೆ ಇದಕ್ಕೆ ಅನ್ನ ಹಾಕಿಕೊಂಡು ಚೆನ್ನಾಗಿ ತಿರುಗಿಸಿಕೊಳ್ಳಿ. ಕೊನೆಯದಾಗಿ ಇದಕ್ಕೆ ನಿಂಬೆ ರಸ ಹಾಕಿ ತಿರುಗಿಸಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಕ್ಯಾಪ್ಸಿಕಂ ಚಿತ್ರಾನ್ನ ರೆಡಿಯಾಗುತ್ತದೆ.
ಈ ಚಿತ್ರಾನ್ನ ಎಂತವರಿಗೂ ಇಷ್ಟವಾಗುತ್ತದೆ. ಜೊತೆಗೆ ಸಿಂಪಲ್ ರೆಸಿಪಿ ಆಗಿದ್ದು, ಕಡಿಮೆ ಸಮಯದಲ್ಲಿ ಮಾಡಬಹುದು. ನೀವು ಇದಕ್ಕೆ ಕಲರ್ ಸಹ ಸೇರಿಸಬಹುದು. ಅರಶಿಣ ಹಾಕದಿದ್ದರೆ ಇದು ಬಿಳಿ ಚಿತ್ರಾನ್ನವಾಗಲಿದೆ. ಅಲ್ಲದೆ ಇದಕ್ಕೆ ತೆಂಗಿನ ಕಾಯಿ ಚಟ್ನಿ ಇದ್ದರೆ ಅದರ ರುಚಿ ದ್ವಿಗುಣವಾಗುತ್ತದೆ. ಒಮ್ಮೆ ಮನೆಯಲ್ಲಿ ನೀವು ಟ್ರೈ ಮಾಡಿ ನೋಡಿ. ಬಳಿಕ ಇದರ ರುಚಿಗೆ ಪದೇ ಪದೇ ಮಾಡುತ್ತೀರಿ.



Click it and Unblock the Notifications
