Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಊಟ, ತಿಂಡಿ ಎಲ್ಲಾ ಖಾದ್ಯಕ್ಕೂ ಕ್ಯಾಪ್ಸಿಕಂ ಚಿಕನ್ ಫ್ರೈ! ನೀವೂ ಸಹ ಮಾಡಿ ನೋಡಿ..!
ಬೆಳಗ್ಗೆ ಚಪಾತಿ, ಪರೋಠ, ರೊಟ್ಟಿ ಹಾಗೆ ಹಲವು ರೀತಿಯ ತಿಂಡಿಗಳ ಮಾಡಿದಾಗ ಅದನ್ನು ಸವಿಯಲು ಕೂಡ ಒಂದೊಳ್ಳೆ ರುಚಿಯ ಖಾದ್ಯಗಳ ಮಾಡಬೇಕಾಗುತ್ತದೆ. ಹಾಗೆ ಊಟದೊಂದಿಗೆ ಸವಿಯುವ ಹಲವು ರುಚಿಯ ಖಾದ್ಯವಿದೆ. ಅದ್ರಲ್ಲೂ ನಾನ್ವೆಜ್ ಪ್ರಿಯರಿಗೆ ಹಲವು ರೀತಿಯ ರುಚಿ ರುಚಿಯ ಖಾದ್ಯಗಳ ಮಾಡಿ ಸವಿಯೋದು ಕಾಮನ್.
ನಾನ್ವೆನ್ ಅಡುಗೆಗಳಲ್ಲಿ ಚಿಕನ್ ಖಾದ್ಯಗಳು ಬಹಳ ರುಚಿ ತರಲಿವೆ. ಹಾಗೆ ಎಲ್ಲಾ ತಿಂಡಿ, ಊಟದೊಂದಿಗೆ ಚಿಕನ್ ಕ್ಯಾಪ್ಸಿಕಂ ಫ್ರೈ ಬಹಳ ರುಚಿ ನೀಡಲಿದೆ. ಕ್ಯಾಪ್ಸಿಕಂ ಬಳಸಿಕೊಂಡು ಮಾಡುವ ಈ ಚಿಕನ್ ಫ್ರೈ ಎಲ್ಲಾ ಊಟದೊಂದಿಗೆ ಹಾಗೆ ತಿಂಡಿಯೊಂದಿಗೆ ಬಹಳ ರುಚಿ ನೀಡಲಿದೆ. ಹಾಗೆ ಇದನ್ನು ಮಾಡೋದು ಕೂಡ ಬಹಳ ಸುಲಭ.

ಚಿಕನ್ ಖಾದ್ಯಗಳಲ್ಲಿ ಬಹುತೇಕ ಎಲ್ಲ ಅಡುಗೆಗಳು ರುಚಿಯಾಗಿರಲಿವೆ. ಕ್ಯಾಪ್ಸಿಕಂ ಬಳಸಿಕೊಂಡು ಮಾಡುವ ಈ ರುಚಿಯ ಅಡುಗೆ ನೀವು ಒಮ್ಮೆ ಮಾಡಿದ್ರೆ ಊಟದ ರುಚಿ ದುಪ್ಪಟ್ಟಾಗಲಿದೆ. ಹಾಗೆ ತಿಂಡಿಯೊಂದಿಗೂ ಕೂಡ ಈ ಚಿಕನ್ ಕ್ಯಾಪ್ಸಿಕಂ ಫ್ರೈ ಬಹಳ ರುಚಿ ನೀಡಲಿದೆ. ನಾವಿಂದು ಈ ಕ್ಯಾಪ್ಸಿಕಂ ಚಿಕನ್ ಫ್ರೈ ಮಾಡುವ ಕುರಿತು ತಿಳಿಯೋಣ.
ಕ್ಯಾಪ್ಸಿಕಂ ಚಿಕನ್ ಫ್ರೈ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಕ್ಯಾಪ್ಸಿಕಂ ಚಿಕನ್ ಫ್ರೈ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಕ್ಯಾಪ್ಸಿಕಂ
- ಚಿಕನ್
- ಹಸಿರು ಮೆಣಸಿನಕಾಯಿ
- ಶುಂಠಿ
- ಬೆಳ್ಳುಳ್ಳಿ
- ಏಲಕ್ಕಿ
- ದಾಲ್ಚಿನ್ನಿ
- ಲವಂಗ
- ಈರುಳ್ಳಿ
- ಟೊಮೆಟೊ
- ಗರಂ ಮಸಾಲ ಪುಡಿ
- ಜೀರಿಗೆ ಪುಡಿ
- ಕರಿಮೆಣಸಿನ ಪುಡಿ
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಕ್ಯಾಪ್ಸಿಕಂ ಚಿಕನ್ ಫ್ರೈ ಮಾಡುವ ವಿಧಾನ
ಮೊದಲು ಚಿಕನ್ ಅನ್ನು ಚೆನ್ನಾಗಿ ತೊಳೆದು ಅರಶಿಣ ಹಾಕಿ ಸ್ವಲ್ಪ ಮಿಕ್ಸ್ ಮಾಡಿ ಇಟ್ಟುಕೊಳ್ಳಿ. ಹಾಗೆ ಚಿಕನ್ಗೆ ಸ್ವಲ್ಪ ಮೊಸರು, ಉಪ್ಪು, ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ ಅದರಲ್ಲಿ ಚಿಕನ್ ಹಾಕಿ ಮಿಶ್ರಣ ಮಾಡಿ ಇಟ್ಟುಕೊಳ್ಳಿ.
ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಪುದಿನ, ಕೊತ್ತಂಬರಿ, ಶುಂಠಿ, ಹಸಿ ಮೆಣಸು, ಬೆಳ್ಳುಳ್ಳಿ ಹಾಕಿ ನೀರು ಹಾಕಿಕೊಂಡು ಪೇಸ್ಟ್ ಮಾಡಿ ಬೌಲ್ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಚಕ್ಕೆ, ಲವಂಗ, ಸೋಂಪು ಕಾಳು, ಏಲಕ್ಕಿ ಹಾಕಿ ಬಿಸಿ ಮಾಡಿ ಅನಂತರ ಇದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ.
2 ನಿಮಿಷದ ಬಳಿಕ ಇದಕ್ಕೆ ಟೊಮೆಟೋ ಕೂಡ ಹಾಕಿ. 1 ನಿಮಿಷ ಬಿಟ್ಟು ರುಬ್ಬಿಕೊಂಡಿದ್ದ ಮಸಾಲ ಪೇಸ್ಟ್ ಇದಕ್ಕೆ ಹಾಕಿಕೊಳ್ಳಿ. ಈಗ ಮಿಶ್ರಣ ಮಾಡಿದ್ದ ಚಿಕನ್ ಅನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ. ಹಾಗೆ ರುಚಿಗೆ ಉಪ್ಪು ಹಾಕಿಕೊಳ್ಳಬಹುದು. ನಂತರ ಸ್ವಲ್ಪ ನೀರು ಸಹ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಹಾಗೆ ಮುಚ್ಚಳ ಮುಚ್ಚಿ 5ರಿಂದ 6 ನಿಮಿಷ ಕುದಿಬರಲು ಬಿಡಿ. ಆಗಾಗ ಮಿಕ್ಸ್ ಮಾಡುತ್ತಾ ಇರಿ. ಈಗ ಕೊನೆಯಲ್ಲಿ ದೊಡ್ಡ ಕ್ಯಾಪ್ಸಿಕಂ ಅನ್ನು ಸಣ್ಣದಾಗಿ ಕತ್ತರಿಸಿಕೊಂಡು ಇದಕ್ಕೆ ಹಾಕಿ. ಹಾಗೆ ಜೀರಿಗೆ ಪುಡಿ, ಗರಂ ಮಸಾಲ, ಉಪ್ಪು, ಕಾಳು ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ ಮತ್ತೆ 2 ನಿಮಿಷ ಬೇಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಕ್ಯಾಪ್ಸಿಕಂ ಚಿಕನ್ ಫ್ರೈ ಸಿದ್ದವಾಗುತ್ತೆ.



Click it and Unblock the Notifications
