Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಬಾಯಲ್ಲಿ ನೀರು ತರಿಸುವ ಕ್ಯಾಪ್ಸಿಕಂ ಬೋಂಡಾ..! ಹೀಗೊಮ್ಮೆ ಮಾಡಿ ನೋಡಿ
ಸಂಜೆ ಟೀ ಟೈಮ್ನಲ್ಲಿ ಸವಿಯಲು ಯಾವುದಾದರು ಕರಿದ ತಿಂಡಿ ಇದ್ದರೆ ಅದರ ರುಚಿಯೇ ಬೇರೆ. ಟೀ ಕುಡಿಯುವ ಮುನ್ನ ಈ ಕರದಿ ತಿಂಡಿಯನ್ನು ಬಾಯಲ್ಲಿ ಹಾಕಿಕೊಂಡು ಅದರ ಸ್ವಾದ ಆಸ್ವಾದಿಸಿದ ಬಳಿಕ ಟೀಯನ್ನು ಹೀರುತ್ತಿದ್ದರೆ ಅದರಲ್ಲಿ ಸಿಗುವ ರುಚಿ ಎಂತಹ 5 ಸ್ಟಾರ್ ಹೋಟೆಲ್ನ ರುಚಿಗೂ ಸಮನಾಗಿರುವುದಿಲ್ಲ. ಹೀಗಾಗಿ ಹಲವರು ರಸ್ತೆ ಬದಿಯ ಸ್ನ್ಯಾನ್ಸ್ಗೆ ಅಷ್ಟೊಂದು ಮುಗಿಬಿದ್ದು ಸವೊಯುತ್ತಾರೆ.
ರಸ್ತೆ ಬದಿಯಲ್ಲಿ ಸಿಗುವ ಕರಿದ ತಿಂಡಿಗಳ ಸವಿಯಲು ಜನರ ಸಾಲು ಬೆಳೆದಿರುತ್ತದೆ. ಕಷ್ಟ ಪಟ್ಟಾದರು ಕರಿದ ತಿಂಡಿ ಸವಿಯುವವರನ್ನ ನೋಡಿದ್ದೇವೆ. ಇನ್ನು ಊಟ ಹಾಗೂ ತಿಂಡಿಯೂ ಜೊತೆಗೂ ಇಂತ ಯಾವುದಾದರು ತಿಂಡಿಯನ್ನು ಬಯಸುವ ಮಂದಿ ಇದ್ದಾರೆ. ಹಾಗೆ ರಸ್ತೆ ಬದಿಯ ಕರಿದ ತಿಂಡಿ ಅದರೆ ನಮಗೆ ಬೋಂಡಾ, ಬಜ್ಜಿ, ಪಕೋಡಾ, ನೆನಪಾಗುತ್ತದೆ.

ಅದರಲ್ಲೂ ಬೋಂಡಾದಲ್ಲಿ ಹತ್ತಾರು ವಿಧದಲ್ಲಿ ಮಾಡಲಾಗುತ್ತದೆ. ಅದಕ್ಕೆ ಮೆಣಸಿನ ಚಟ್ನಿ, ಕ್ಯಾರೆಟ್, ಈರುಳ್ಳಿ, ಸ್ವಲ್ಪ ಕಾಳುಮೆಣಸಿನ ಪುಡಿ, ಖಾರದ ಪುಡಿ ಹಾಕಿ ಕೊಟ್ಟರೆ ಅದನ್ನು ತಿಂದವರಿಗೆ ರುಚಿ ಗೊತ್ತಿರುತ್ತೆ. ಇನ್ನು ಇದೇ ಬೋಂಡಾವನ್ನು ಎಷ್ಟೊಂದು ರೀತಿಯಲ್ಲಿ ಮಾಡುತ್ತಾರೆ ಅನ್ನೋದು ಸಹ ನಿಮಗೆ ಗೊತ್ತಿದೆ. ಅದರಲ್ಲೂ ಮೆಣಸಿನಕಾಯಿಯಲ್ಲೂ ಮತ್ತೊಂದಿಷ್ಟು ವಿಧ ಇದೆ.
ಇಂದು ನಾವು ಕ್ಯಾಪ್ಸಿಕಂ ಅಥವಾ ದೊಣ್ಣೆ ಮೆಣಸಿನಕಾಯಿಂದ ಮಾಡಲಾಗುವ ಅತ್ಯಂತ ರುಚಿಕರ ಬೋಂಡಾದ ಕುರಿತಂತೆ ತಿಳಿದುಕೊಳ್ಳೋಣ.ಕ್ಯಾಪ್ಸಿಕಂ ಬೋಂಡಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಹಿಟ್ಟು ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿಯೋಣ.
ಕ್ಯಾಪ್ಸಿಕಂ ಬೋಂಡಾ ಮಾಡಲ ಬೇಕಾಗುವ ಪದಾರ್ಥಗಳು
- ಕ್ಯಾಪ್ಸಿಕಂ : 3
- ಕಡಲೆ ಹಿಟ್ಟು - 1 ಕಪ್
- ಅಕ್ಕಿ ಹಿಟ್ಟು - 1/4 ಕಪ್
- ಮೆಣಸಿನ ಪುಡಿ - 1 ಟೀಸ್ಪೂನ್
- ಅರಿಶಿನ ಪುಡಿ - 1/4 ಚಮಚ
- ರುಚಿಗೆ ಉಪ್ಪು
- ಅಡಿಗೆ ಸೋಡಾ
- ಅಜ್ವೈನ - 1 ಚಮಚ
- ಎಣ್ಣೆ
- ಈರುಳ್ಳಿ - 1
- ಕ್ಯಾರೆಟ್ - 1
- ಕೊತ್ತಂಬರಿ ಸೊಪ್ಪು
- ಮೆಣಸಿನ ಪುಡಿ
- ಚಾಟ್ ಮಸಾಲಾ (ಇದ್ದರೆ)
ಕ್ಯಾಪ್ಸಿಕಂ ಬೋಂಡಾ ಮಾಡುವುದು ಹೇಗೆ?
ಈಗ ಮಧ್ಯಮ ಗಾತ್ರದ ದೊಣ್ಣೆ ಮೆಣಸು ತೆಗೆದುಕೊಂಡು ಅದರ ಕೊನೆಯಲ್ಲಿ ಸಣ್ಣ ತೂತು ಅಥವಾ ಕತ್ತರಿಸಿಕೊಳ್ಳಿ. ಏಕೆಂದರೆ ಇದನ್ನು ಹಿಟ್ಟಿನಲ್ಲಿ ಸದ್ದಿ ಎಣ್ಣೆಯಲ್ಲಿ ಬಿಟ್ಟಾಗ ಸಿಡಿಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಅದನ್ನು ತೂತು ಮಾಡಿಕೊಳ್ಳಿ. ಈಗ ಹಿಟ್ಟು ರೆಡಿ ಮಾಡಿಕೊಳ್ಳಿ.
ಮೊದಲು ಒಂದು ಬೌಲ್ನಲ್ಲಿ ಕಡಲೆ ಹಿಟ್ಟು ಹಾಕಿಕೊಂಡು ಅದರ ಕಾಲು ಭಾಗ ಅಕ್ಕಿ ಹಿಟ್ಟು ಹಾಕಿ, ಅದಕ್ಕೆ ಖಾರದ ಪುಡಿ, ಉಪ್ಪು, ಅರಶಿನ, ಅಜ್ವೈನ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಇಡ್ಲಿ, ದೋಸೆ ಹಿಟ್ಟಿನ ಹದಕ್ಕೆ ಹಿಟ್ಟು ರೆಡಿ ಮಾಡಿಕೊಳ್ಳಿ. ಈ ಹಿಟ್ಟು ಸ್ವಲ್ಪ ದಪ್ಪವಾಗಿದ್ದರೆ ಉತ್ತಮ.
ಕೊನೆಯದಾಗಿ ಈ ಹಿಟ್ಟಿಗೆ ಅಡುಗೆ ಸೋಡಾ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಿಟ್ಟು ತೆಳು ಆಗದಂತೆ ನೋಡಿಕೊಳ್ಳಿ. ಇಷ್ಟಾದರೆ ಹಿಟ್ಟು ರೆಡಿಯಾಗುತ್ತದೆ. ಈಗ ಕ್ಯಾಪ್ಸಿಕಂ ಅನ್ನು ತೆಗೆದುಕೊಂಡು ಹಿಟ್ಟಿನಲ್ಲಿ ಅದ್ದಿಕೊಳ್ಳಬೇಕು. ಈ ನಡುವೆ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿ ಕಾಯಲು ಬಿಡಿ, ಈ ಎಣ್ಣೆ ಚೆನ್ನಾಗಿ ಕಾದಿರಬೇಕು. ಬಳಿಕ ಒಂದೊಂದೆ ಕ್ಯಾಪ್ಸಿಕಂ ಅನ್ನು ಹಿಟ್ಟಿನಲ್ಲಿ ಹಾಕಿಕೊಳ್ಳಿ.
ಬಳಿಕ ಎಣ್ಣೆಯಲ್ಲಿ ಬೋಂಡಾ ಚೆನ್ನಾಗಿ ಬೇಯಲು ಬಿಡಿ ಆಗಾಗ ಕೈ ಆಡಿಸುತ್ತಾ ಇರಿ. ಇಷ್ಟಾದರೆ ರುಚಿ ರುಚಿಯ ಬೋಂಡಾ ರೆಡಿಯಾಗುತ್ತದೆ. ಇನ್ನು ಇದಕ್ಕೆ ನೀವು ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಈರುಳ್ಳಿ ನಿಮ್ಮಿಷ್ಟದ ಮಸಾಲೆಗಳ ಹಾಕಿ ಸವಿಯಬಹುದು. ಹಸಿ ಮೆಣಸಿನಕಾಯಿ ಚಟ್ನಿ ಜೊತೆಗೂ ಸಹ ಒಳ್ಳೆಯ ರುಚಿ ನೀಡಲಿದೆ.



Click it and Unblock the Notifications
