Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹಬ್ಬದೂಟಕ್ಕೆ ಮಾಡಿ ಎಲೆಕೋಸಿನ ಅದ್ಭುತ ಪಲ್ಯ..! ಇಲ್ಲಿದೆ ವಿಧಾನ
ಹಬ್ಬದ ಸಮಯದಲ್ಲಿ ಪೂಜೆ ಒಂದು ಕಡೆಯಾದರೆ ಹಬ್ಬದ ಸಂಭ್ರಮ ಹೆಚ್ಚುವಂತೆ ಮಾಡುವುದೇ ಹಬ್ಬದ ಊಟ. ಹಬ್ಬದ ಊಟದ ಅಂದ್ರೆ ಬಗೆ ಬಗೆಯ ತಿನಿಸುಗಳು ಇರಲೇ ಬೇಕು. ಈ ಊಟ ಸಾಮಾನ್ಯ ದಿನದ ಊಟಕ್ಕಿಂತ ಭಿನ್ನ ಆಗಿರಲೇಬೇಕು. ಹೀಗಾಗಿ ಹಬ್ಬದ ಊಟಕ್ಕೆ ಬಹಳ ಪ್ರಾಶಸ್ತ್ಯ ಇದೆ. ಎಲ್ಲರಿಗೂ ಹಬ್ಬದ ಊಟ ಸವಿಯೋದು ಅದ್ರೆ ಬಹಳ ಇಷ್ಟವಾಗುತ್ತೆ. ಹಾಗೆ ಸಿಹಿ ತಿಂಡಿಗಳ ಜೊತೆಗೆ ಒಂದಿಷ್ಟು ಖಾದ್ಯಗಳು ನೆನೆದರೆ ಬಾಯಲ್ಲಿ ನೀರು ತರಿಸಲಿದೆ.
ಹಾಗೆ ಹಬ್ಬದ ಊಟದಲ್ಲಿ ಎಲ್ಲರಿಗೂ ಅನ್ನದ ಜೊತೆಗೆ ಸವಿಯಲು ಬಗೆ ಬಗೆಯ ಪಲ್ಯ ಮಾಡುವುದು ನೋಡಬಹುದು. ನಾವಿಂದು ಮದುವೆ ಮನೆ ರುಚಿಯಲ್ಲಿ ಮಾಡಲಾಗುವ ಎಲೆಕೋಸಿನ ಪಲ್ಯ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಪಲ್ಯ ಎಲ್ಲರಿಗೂ ಬಹಳ ಇಷ್ಟವಾಗುತ್ತೆ. ಅನ್ನದ ಜೊತೆಗೆ ಅದ್ರಲ್ಲೂ ಹಬ್ಬದೂಟದ ರುಚಿ ಹೆಚ್ಚಿಸಲು ಈ ಪಲ್ಯ ಇದ್ದರೆ ಸಾಕು.

ಹಾಗಾದ್ರೆ ಎಲೆ ಕೋಸಿನಿಂದ ರುಚಿ ರುಚಿಯ ಈ ಪಲ್ಯ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಎಲೆ ಕೋಸಿನ ಪಲ್ಯ ಮಾಡಲು ಬೇಕಾಗುವ ವಸ್ತುಗಳು?
- ಎಲೆಕೋಸು
- ಉಪ್ಪು
- ತೆಂಗಿನಕಾಯಿ ತುರಿ
- ಅರಶಿಣ
- ಇಂಗು
- ಎಣ್ಣೆ
- ಉದ್ದಿನ ಬೇಳೆ
- ಕಡಲೆ ಬೇಳೆ
- ಜೀರಿಗೆ
- ಸಾಸಿವೆ
- ಕೊತ್ತಂಬರಿ ಸೊಪ್ಪು
- ಈರುಳ್ಳಿ
- ಶುಂಠಿ
ಎಲೆ ಕೋಸಿನ ಪಲ್ಯ ಮಾಡುವ ಸರಿಯಾದ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಉದ್ದಿನ ಬೇಳೆ, ಜೀರಿಗೆ, ಕಡಲೆ ಬೇಳೆ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಇಂಗು, ಹಸಿ ಮೆಣಸು, ಶುಂಠಿ, ಕರಿಬೇವು ಸಹ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 2 ಈರುಳ್ಳಿ ಇದಕ್ಕೆ ಹಾಕಿ ಕೆಂಪಗೆ ಆಗುವವರೆಗೂ ಹುರಿದುಕೊಳ್ಳಬೇಕು. ತದನಂತರ ಇದಕ್ಕೆ ಕತ್ತರಿಸಿದ ಎಲೆಕೋಸು ಹಾಕಿ.
ಎಲೆಕೋಸನ್ನು ಕತ್ತರಿಸಿಕೊಂಡು ತೊಳೆದು ಬಳಿಕ ಇದಕ್ಕೆ ಹಾಕಬೇಕು. ಅನಂತರ ಉಪ್ಪು, ಅರಶಿಣ ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಅರ್ಧ ಕಪ್ ತೆಂಗಿನಕಾಯಿ ತುರಿ ಹಾಕಿ, ಹಾಗೆ 2 ಸ್ಪೂನ್ ನೀರು ಕೂಡ ಹಾಕಿ ಮತ್ತೆ ಪ್ರೈ ಆಗಲು ಬಿಡಿ. ಈಗ ಮುಚ್ಚಳ ಮುಚ್ಚಿ 5 ನಿಮಿಷ ಬೇಯಲು ಬಿಡಿ. ಆಗಾಗ ಮಿಕ್ಸ್ ಮಾಡುತ್ತಾ ಇರಿ.
5 ನಿಮಿಷದ ಬಳಿಕ ಮುಚ್ಚಳ ತೆಗೆದು ಮತ್ತೆ ಮಿಕ್ಸ್ ಮಾಡಿಕೊಂಡು ಒಮ್ಮೆ ರುಚಿ ನೋಡಿ ಬಳಿಕ ಸಣ್ಣದಾಗಿ ಹೆಚ್ಚಿಕೊಂಡಿರುವ ಕೊತ್ತಂಬರಿ ಸೊಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಎಲೆಕೋಸಿ ಪಲ್ಯ ರೆಡಿಯಾಗುತ್ತದೆ. ಹಬ್ಬದ ಊಟದಲ್ಲಿ ಸವಿಯಲು ಇದು ಬಹಳ ರುಚಿ ನೀಡಲಿದೆ. ನೀವು ಕೂಡ ಹಬ್ಬದ ದಿನದಲ್ಲಿ ಈ ಪಲ್ಯ ಮಾಡಿ ಸವಿದು ನೋಡಿ.
ನೀವು ಈ ಪಲ್ಯಕ್ಕೆ ಇಡಿ ಕಡ್ಲೆ, ಕರಿಬೇವು, ಒಣ ಮೆಣಸು ಕೂಡ ಬಳಸಿಕೊಂಡು ಮಾಡಬಹುದು. ಹಾಗೆ ಹೆಚ್ಚು ಪ್ರಮಾದಲ್ಲಿ ಮಾಡುವಾಗ ಮೊದಲು ಎಲೆ ಕೋಸನ್ನು ಬೇಯಿಸಿಕೊಂಡು ಸಹ ಈ ಪಲ್ಯ ರೆಡಿ ಮಾಡಿಕೊಳ್ಳಬಹುದು. ಹಬ್ಬದ ಊಟದಲ್ಲಿ ಇದನ್ನು ಸವಿಯಲು ಬಹಳ ರುಚಿ ನೀಡಲಿದೆ. ಹಾಗೆ ಮನೆ ಮಂದಿಗೆಲ್ಲಾ ಇದು ಇಷ್ಟವಾಗುವುದರಲ್ಲಿ ಸಂಶಯವಿಲ್ಲ.



Click it and Unblock the Notifications
