Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಎಲೆಕೋಸಿನ ಪಕೋಡ ಸವಿದು ನೋಡಿ.! ಮಾಡೋದು ಹೇಗೆ?
ಮಳೆಗಾಲದಲ್ಲಿ ಅದ್ರಲ್ಲೂ ಸಂಜೆ ಟೀ-ಕಾಫಿಗೆ ಏನಾದರು ಕರಿದ ತಿಂಡಿ ಇದ್ದರೆ ತುಂಬಾನೆ ಚೆನ್ನಾಗಿರುತ್ತೆ. ಇದಕ್ಕೆ ಅಂಗಡಿ, ಬೇಕರಿ ತಿಂಡಿ ಎಷ್ಟು ದಿನ ಸವಿಯಬಹುದು. ಆದ್ರೆ ಮನೆಯಲ್ಲೇ ಮಾಡಿ ಸವಿಯೋದು ತುಂಬಾನೆ ಸಹಾಯವಾಗುತ್ತೆ. ಅದ್ರಲ್ಲೂ ಮನೆಯಲ್ಲೇ ಮಾಡಿಟ್ಟ ತಿಂಡಿಯನ್ನ ಯಾರಾದರು ಮನೆಗೆ ಬಂದಾಗ ಅವರಿಗೆ ಸವಿಯಲು ನೀಡಬಹುದು.
ಹಾಗಾದ್ರೆ ಇಂತಹ ಸಮಯದಲ್ಲಿ ಸವಿಯಲು ಪಕೋಡ ಮಾಡಿ ಸವಿಯಿರಿ. ಪಕೋಡಾ ನೀವು ರಸ್ತೆ ಬದಿ, ಹೋಡೆಲ್ ಅಷ್ಟೇ ಏಕೆ ಮನೆಯಲ್ಲೂ ಮಾಡಿ ಸವಿದಿರುತ್ತೀರಿ. ಟೀ ಕಾಫಿ ಜೊತೆಗೆ ಪಕೋಡ ಇದ್ದರೆ ಎಂತ ರುಚಿ ನೀಡುತ್ತೆ. ಹಾಗೆ ಮನೆ ಮಂದಿಯಲ್ಲರು ಕುಳಿತು ಟಿವಿ ನೋಡುವಾಗ ಇಲ್ಲವೆ ಮನೆಯಲ್ಲಿ ಇದ್ದಾಗ ಪಕೋಡ ಜೊತೆಗಿದ್ದರೆ ಅದ್ಭುತವಾಗಿರುತ್ತೆ.

ಈ ಎಲೆಕೋಸಿನ ಪಕೋಡ ಮಾಡಿದರೆ ಊಟದ ಜೊತೆಗೂ ಸವಿಯಬಹುದು. ಹಾಗಾದ್ರೆ ಮನೆಯಲ್ಲೇ ಪಕೋಡ ಮಾಡೋದು ಹೇಗೆ? ಪಕೋಡ ಮಾಡಲು ಬೇಕಾಗುವ ವಸ್ತುಗಳೇನು? ಪಕೋಡ ಹಿಟ್ಟು ರೆಡಿ ಮಾಡಿಕೊಳ್ಳುವುದು ಹೇಗೆ? ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಪಕೋಡ ಮಾಡಲು ಬೇಕಾಗುವ ವಸ್ತುಗಳೇನು?
- ಎಲೆಕೋಸು
- ಹಸಿ ಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ಖಾರದ ಪುಡಿ
- ಅರಿಶಿನ ಪುಡಿ
- ಅಕ್ಕಿ ಹಿಟ್ಟು
- ಉಪ್ಪು
- ಎಣ್ಣೆ
ಎಲೆಕೋಸಿನ ಪಕೋಡಾ ಮಾಡುವುದು ಹೇಗೆ?
ಮೊದಲು ಎಲೆಕೋಸನ್ನು ಚೆನ್ನಾಗಿ ತುರಿದುಕೊಂಡು ತೊಳೆದು ಬದಿಗಿಡಿ. ನಂತರ ಒಂದು ಬೌಲ್ಗೆ ಎಲೆಕೋಸು ಹಾಕಿ ಅದಕ್ಕೆ ಉಪ್ಪು ಹಾಕಿ ಚೆನ್ನಾಗಿ ಕಲಸಿ 10 ನಿಮಿಷ ಬಿಡಿ. ನಂತರ ಇದಕ್ಕೆ ರವೆ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಖಾರದ ಪುಡಿ, ಅರಶಿಣ, ಅಕ್ಕಿ ಹಿಟ್ಟು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ.
ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತ ಕಲಸಿಕೊಳ್ಳಿ. ಈ ಹಿಟ್ಟು ಉಂಡೆ ಕಟ್ಟಲು ಬರುವಂತೆ ಮಾಡಿಕೊಳ್ಳಬೇಕು. ಬಳಿಕ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಅದಕ್ಕೆ ಹಿಟ್ಟನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಬಿಡಬೇಕು. ಹೀಗೆ 10 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕರಿದುಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ಗರಿಗರಿಯಾದ ಪಕೋಡ ರೆಡಿಯಾಗುತ್ತದೆ.
ಇಲ್ಲಿ ಎಲೆಕೋಸಿನ ಬದಲಾಗಿ ನೀವು ಈರುಳ್ಳಿ ಹಾಕಿದರೆ ಅದು ಈರುಳ್ಳಿ ಪಕೋಡ ಆಗುತ್ತದೆ. ಈ ಪಕೋಡವನ್ನ ನೀವು ಹಲವು ಕಡೆ ಸವಿದಿರುತ್ತೀರಿ. ಆದರೆ ಎಲೆಕೋಸಿನ ಪಕೋಡ ಈರುಳ್ಳಿ ಪಕೋಡಕ್ಕಿಂತಲೂ ರುಚಿ ಅದ್ಭುತವಾಗಿರುತ್ತೆ. ಹೀಗಾಗಿ ನೀವು ಸಹ ಒಮ್ಮೆ ಮನೆಯಲ್ಲಿ ಇದರಲ್ಲಿ ಯಾವುದಾದರು ಒಂದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
