Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಹಾಲು ಸಕ್ಕರೆ ಬಳಸಿ ಮನೆಯಲ್ಲೇ ಮಾಡಿ ಬಟರ್ ಸ್ಕಾಚ್ ಐಸ್‌ಕ್ರೀಮ್!
ಬೇಸಿಗೆಯ ಸಮಯದಲ್ಲಿ ನೀವು ದೇಹವನ್ನು ತಂಪಾಗಿಡುವ ಜೊತೆಗೆ ಬಾಯಿ ರುಚಿ ಹೆಚ್ಚಿಸಬೇಕು ಎಂದು ಜ್ಯೂಸ್ ಐಸ್ ಕ್ರೀಮ್ ಸವಿಯೋದು ಕಾಮನ್. ಅದ್ರಲ್ಲೂ ಮನೆಯಿಂದ ಹೊರಹೋದಾಗ ಬಿಸಿಲಿನ ತಾಪಕ್ಕೆ ನೀವು ಜ್ಯೂಸ್, ಐಸ್ ಕ್ರೀಮ್ ಬಯಸುತ್ತೀರಿ. ಮಕ್ಕಳು ಸಹ ಜ್ಯೂಸ್ ಅಥವಾ ಐಸ್ ಕ್ರೀಮ್ ಸವಿಯೋಕೆ ಯಾವಾಗಲು ಇಷ್ಟಪಡುತ್ತಾರೆ.
ಹಾಗೆ ಮನೆಯಲ್ಲಿಯೇ ಐಸ್ ಕ್ರೀಮ್ ಮಾಡಿ ಸವಿಯುವ ಹಲವು ರೀತಿಯ ವಿಧಾನಗಳಿವೆ. ಕೆಲವು ಐಸ್ ಕ್ರೀಮ್ ಅನ್ನು ಕೆಲವೇ ನಿಮಿಷದಲ್ಲಿ ಮನೆಯಲ್ಲಿಯೇ ಮಾಡಿ ಸವಿಯಬಹುದು. ಕ್ಯಾಂಡಿಗಳನ್ನು ಕೂಡ ಮನೆಯಲ್ಲಿ ಮಾಡಬಹುದು. ಹಣ್ಣುಗಳ ಬಳಸಿ, ಹಾಲು ಬಳಸಿ ಮನೆಯಲ್ಲಿ ಐಸ್ ಕ್ರೀಮ್ ಸಿದ್ದ ಮಾಡುವ ವಿಧಾನ ಬಹಳ ಸುಲಭವಾಗಿರಲಿದೆ. ಹೀಗೆ ನಾವಿಂದು ಬೇಸಿಗೆಯ ಸಮಯದಲ್ಲಿ ಮನೆಯಲ್ಲೇ ಸುಲಭವಾಗಿ ಈ ಐಸ್ ಕ್ರೀಮ್ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ.
ಹಾಗಾದ್ರೆ ಮನೆಯಲ್ಲಿ ಬಟರ್ ಸ್ಕಾಚ್ ಸವಿಯ ಐಸ್ ಕ್ರೀಮ್ ಮಾಡಿ ಸವಿಯುವ ಕುರಿತಾಗಿ ಇಂದು ತಿಳಿದುಕೊಳ್ಳೋಣ. ನೀವು ಕೂಡ ಅಂಗಡಿಗಳಲ್ಲಿ ಈ ಬಟರ್ ಸ್ಕಾಚ್ ಬಗೆಯ ಹಲವು ಐಸ್ ಕ್ರೀಮ್ ಸವಿದಿರುತ್ತೀರಿ. ಆದ್ರೆ ಮನೆಯಲ್ಲೇ ಮಾಡಿಕೊಳ್ಳೋದು ಹೇಗೆ ಅನ್ನೋದು ನಿಮಗೆ ಗೊತ್ತಾ? ಮನೆಯಲ್ಲಿ ಹಾಲು ಸಕ್ಕರೆ ಬಳಸಿಕೊಂಡು ಈ ಬಟರ್ ಸ್ಕಾಚ್ ರುಚಿಯ ಐಸ್ ಕ್ರೀಮ್ ಮಾಡಿಕೊಳ್ಳಬಹುದು.
ಮನೆಯಲ್ಲಿ ಬಟರ್ ಸ್ಕಾಚ್ ಐಸ್ ಕ್ರೀಮ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಬಟರ್ ಸ್ಕಾಚ್ ಐಸ್ ಕ್ರೀಮ್ ಮಾಡಲು ಬೇಕಾಗುವ ವಸ್ತುಗಳು
- ಹಾಲು
- ಸಕ್ಕರೆ
- ಬಾದಾಮಿ
- ಗೋಡಂಬಿ
- ಕಾರ್ನ್ ಫ್ಲೋರ್
ಬಟರ್ ಸ್ಕಾಚ್ ಐಸ್ ಕ್ರೀಮ್ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಕಾಲು ಕಪ್ ಸಕ್ಕರೆ ಹಾಕಿಕೊಂಡು ಕರಗಿಸಿಕೊಳ್ಳಿ. ಇದು ಕೆಂಪು ಬಣ್ಣದ ನೀರಿನಂತೆ ಕರಗುತ್ತದೆ. ನಂತರ ಇದಕ್ಕೆ ಒಂದು ಸ್ಪೂನ್ ಬೆಣ್ಣೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ತುಪ್ಪ ಕೂಡ ಬಳಸಬಹುದು. ಈಗ ಇದಕ್ಕೆ ಒಂದು ಸ್ಪೂನ್ ಕತ್ತರಿಸಿದ ಗೋಡಂಬಿ ಸಹ ಹಾಕಿ ಫ್ರೈ ಮಾಡಿ.
ನಂತರ ಈ ಪೇಸ್ಟ್ ಅನ್ನು ಒಂದು ಪ್ಲೇಟ್‌ಗೆ ಹಾಕಬೇಕು. ಸ್ಟೀಲ್ ತಟ್ಟೆಗೆ ತುಪ್ಪ ಸವರಿಕೊಂಡು ಅದರ ಮೇಲೆ ಈ ಪೇಸ್ಟ್ ಅನ್ನು ಹಾಕಿ. ಬಟರ್ ಪೇಪರ್ ಮೇಲೆ ಹಾಕಿಕೊಂಡರು ಆಗುತ್ತದೆ. ಇದನ್ನು ತಣ್ಣಗಾಗಲು ಬಿಡಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಅರ್ಧ ಲೀಟರ್ ಹಾಲು ಹಾಕಿ ಕುದಿಯಲು ಬಿಡಬೇಕು. ಹಾಲು ಒಲೆ ಮೇಲೆ ಇರುವಾಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಬಾದಾಮಿ, ಗೋಡಂಬಿ, ಹಾಕಿ ಪುಡಿ ಪುಡಿಯಾಗಿ ರುಬ್ಬಿಕೊಂಡು ಇಟ್ಟುಕೊಳ್ಳಿ.
ಈಗ ಒಂದು ಬೌಲ್‌ಗೆ ಕಾರ್ನ್ ಫ್ಲೋರ್‌ಗೆ ಹಾಕಿ ಕಾಯಿಸಿದ್ದ ಹಾಲು ಹಾಕಿ ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಮೇಲೆ ಕುದಿಬರುತ್ತಿರುವ ಹಾಲಿಗೆ ಕಾಲು ಕಪ್ ಸಕ್ಕರೆ, ಗೋಡಂಬಿ, ಬಾದಾಮಿ ಪುಡಿ ಹಾಕಿ ಮಿಕ್ಸ್ ಮಾಡುತ್ತಾ ಇರಿ.
1 ನಿಮಿಷದ ಬಳಿಕ ಕಾರ್ನ್ ಫ್ಲೋರ್ ಹಾಲಿನ ಮಿಶ್ರಣ ಕೂಡ ಹಾಕಿ ಮಿಕ್ಸ್ ಮಾಡಿ. 2 ನಿಮಿಷದಲ್ಲಿ ಇದು ಗಟ್ಟಿಯಾಗಲು ಆರಂಭಿಸುತ್ತದೆ. ಈ ಸಮಯದಲ್ಲಿ ಒಲೆ ಆಫ್ ಮಾಡಿಕೊಂಡು ಇಟ್ಟುಕೊಳ್ಳಿ ಇದನ್ನು ತಣ್ಣಗಾಗಲು ಬಿಡಿ.
ಮೊದಲು ತಟ್ಟೆಯ ಮೇಲೆ ಹಾಕಿದ್ದ ಸಕ್ಕರೆ ದ್ರಾವಣ ಗಟ್ಟಿಯಾಗಿದ್ದರೆ ಅದನ್ನು ಸಣ್ಣದಾಗಿ ಕತ್ತರಿಸಿಕೊಂಡು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ. ಇದನ್ನು ಪುಡಿ ಮಾಡಿಕೊಂಡು ತಣ್ಣಗಾಗಿರುವ ಹಾಲಿಗೆ ಇದನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ ಇದನ್ನು ಒಂದು ಪ್ಲಾಸ್ಟಿಕ್ ಅಥವಾ ಸ್ಟೀಲ್ ಬಾಕ್ಸ್‌ಗೆ ಹಾಕಿ ಮುಚ್ಚಳ ಮುಚ್ಚಿ ಫ್ರಿಡ್ಜ್‌ನಲ್ಲಿ ಒಂದು ರಾತ್ರಿ ಬಿಡಬೇಕು. ಇದು ಗಟ್ಟಿಯಾಗಿರುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಈ ರುಚಿ ರುಚಿಯ ಐಸ್ ಕ್ರೀಮ್ ಸಿದ್ದವಾಗುತ್ತೆ.



Click it and Unblock the Notifications
