Latest Updates
-
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ!
ಮಧ್ಯಾಹ್ನದ ಊಟಕ್ಕೆ ಈ ಮಜ್ಜಿಗೆ ಒಗ್ಗರಣೆ ಮಾಡಿ ನೋಡಿ!!
ನೀವು ಬೇಸಿಗೆಯ ಈ ಸಮಯದಲ್ಲಿ ರುಚಿಯ ನಡುವೆ ದೇಹಕ್ಕೆ ತಂಪು ನೀಡುವಂತಹ ಯಾವುದಾದರು ಖಾದ್ಯ ಸವಿಯಲು ಮುಂದಾಗಬಹುದು. ಏಕೆಂದರೆ ಬೇಸಿಗೆಯಲ್ಲಿ ಮಸಾಲೆ ಪದಾರ್ಥಗಳ ಬದಲು ತಂಪಾದ ಹುಳಿ ಮಾಡಿ ಸವ ಸವಿಯಲು ಮುಂದಾಗುವುದು ಹೆಚ್ಚು. ಅದರಲ್ಲೂ ಮಧ್ಯಾಹ್ನದ ಊಟಕ್ಕೆ ತಂಪು ತಂಪಾದ ಯಾವುದಾದರು ಹುಳಿ ಇದ್ದರೇನೆ ಆ ಊಟ ಬಹಳ ರುಚಿ ನೀಡಲಿದೆ. ಹೀಗಾಗಿ ಬಹಳಷ್ಟು ಮಂದಿ ಮಧ್ಯಾಹ್ನದ ಊಟಕ್ಕೆ ಮಜ್ಜಿಗೆಯಿಂದ ಮಾಡುವ ಹಲವು ರೀತಿಯ ಖಾದ್ಯಗಳ ಮಾಡಿ ಸವಿಯುವುದು ನೋಡಬಹುದು.
ಹೀಗೆ ನಾವಿಂದು ಮಜ್ಜಿಗೆ ಬಳಸಿ ಮಾಡುವಂತಹ ಅದ್ಭುತ ರುಚಿಯ ತಂಬುಳಿ ಅಥವಾ ಮಜಿಗೆ ಒಗ್ಗರಣೆ ಅನ್ನದ ಕುರಿತಾಗಿ ತಿಳಿದುಕೊಳ್ಳೋಣ. ಮಧ್ಯಾಹ್ನದ ಊಟದ ಸಮಯದಲ್ಲಿ ಈ ಮಜ್ಜಿಗೆ ಒಗ್ಗರಣೆ ಅನ್ನ ಇದ್ದರೆ ಆ ದಿನ ಅದ್ಭುತವಾಗಿರುತ್ತೆ. ದೇಹಕ್ಕೂ ಕೂಡ ಇದು ತಂಪಾಗಲಿದೆ. ಹಾಗಾದ್ರೆ ನಾವಿಂದು ಈ ಒಗ್ಗರಣೆ ಮಜ್ಜಿಗೆ ಅನ್ನ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಅದರಲ್ಲೂ ಸುಲಭವಾಗಿ ಯಾವುದೇ ಮಸಾಲೆ ಬಳಸದೆ ಕಡಿಮೆ ಸಮಯದಲ್ಲಿ ಊಟದ ರುಚಿ ಹೆಚ್ಚಿಸುವಂತಹ ಖಾದ್ಯ ಇದು. ಮಕ್ಕಳಿಗಂತೂ ಈ ರುಚಿಯ ಮಜ್ಜಿಗೆ ಒಗ್ಗರಣರ ಬಹಳ ಇಷ್ಟವಾಗಬಹುದು.

ಮಜ್ಜಿಗೆ ಒಗ್ಗರಣೆ ಅನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಜ್ಜಿಗೆ ಒಗ್ಗರಣೆ ಅನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮಜ್ಜಿಗೆ
- ಕರಿಬೇವು
- ಸಾಸಿವೆ
- ಕೊತ್ತಂಬರಿ ಸೊಪ್ಪು
- ಉಪ್ಪು
- ಎಣ್ಣೆ
- ಸಾಸಿವೆ
- ಹಸಿ ಮೆಣಸು
- ಈರುಳ್ಳಿ
ಮಜ್ಜಿಗೆ ಒಗ್ಗರಣೆ ಅನ್ನ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ಗೆ ಅರ್ಧ ಲೀಟರ್ ಮೊಸರು ಹಾಕಿಕೊಂಡು ಅದಕ್ಕೆ ಕಾಲು ಲೀಟರ್ ನೀರು ಹಾಕಿಕೊಳ್ಳಿ. ಅನಂತರ ಇದಕ್ಕೆ ಉಪ್ಪು, ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಬೇಕು. ಉಪ್ಪು ಕರಗುವಂತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಈ ಮಜ್ಜಿಯನ್ನು ಬದಿಗಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ನಂತರ ಸಾಸಿವೆ, ಹಸಿ ಮೆಣಸು, ಕರಿಬೇವು ಹಾಕಿಕೊಂಡು ಅರ್ಧ ನಿಮಿಷಗಳ ಕಾಲ ಬಿಸಿಯಾಗಲು ಬಿಡಿ. ನಂತರ ಈರುಳ್ಳಿ ಸೇರಿಸಿ ಮತ್ತೆ ಅರ್ಧ ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
ಈಗ ಒಲೆ ಆಫ್ ಮಾಡಿಕೊಂಡು ಈ ಒಗ್ಗರಣೆಯನ್ನು ಮೊದಲು ಬೌಲ್ಗೆ ಹಾಕಿಟ್ಟಿರುವ ಮಜ್ಜಿಗೆಗೆ ಹಾಕಿಕೊಳ್ಳಿ. ಹಾಗೆ ಮಿಕ್ಸ್ ಮಾಡಿಕೊಂಡು ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ಮಜ್ಜಿಗೆ ಒಗ್ಗರಣೆ ಅನ್ನ ರೆಡಿಯಾಗುತ್ತದೆ. ನೀವು ಬೆಳಗ್ಗೆ ಮೆತ್ತನೆಯ ಅನ್ನ ಮಾಡಿದ್ದರೆ ಇದರೊಂದಿಗೆ ನೇರವಾಗಿ ಅನ್ನವನ್ನು ಮಿಕ್ಸ್ ಮಾಡಿಕೊಳ್ಳಬಹುದು. ಇಲ್ಲವೆ ಅನ್ನದ ಜೊತೆಗೆ ಈ ಒಗ್ಗರಣೆ ಮಜ್ಜಿಗೆ ಹಾಕಿಕೊಂಡು ಸವಿಯಬಹದು.
ಬೇಸಿಗೆ ಸಮಯದಲ್ಲಿ ಈ ರೀತಿ ತಂಪು ನೀಡುವಂತಹ ಖಾದ್ಯ ಇದ್ದರೆ ಬಹಳ ರುಚಿ ನೀಡಲಿದೆ. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ ಅವರ ದೇಹ ತಂಪಾಗಿಡಲು ಈ ರೀತಿಯ ಮಜ್ಜಿಗೆ ಒಗ್ಗರಣೆ ಸೂಕ್ತವಾಗುತ್ತೆ. ಅದರಲ್ಲೂ ಬೇಸಿಗೆಯ ಈ ಸಮಯದಲ್ಲಿ ತಂಪಾದ ಮಜ್ಜಿಗೆ ಹುಳಿ, ಮಸಾಲ ಮಜ್ಜಿಗೆ, ಮಜ್ಜಿಗೆ ಊಟ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ನೀವು ಸಹ ಈ ರೀತಿಯ ಮಜ್ಜಿಗೆ ಒಗ್ಗರಣೆ ಇಷ್ಟಪಡುವುದದಾದರೆ ಇದನ್ನೊಮ್ಮೆ ಸವಿದು ನೋಡಿ.



Click it and Unblock the Notifications