Latest Updates
-
IND vs NZ ಪಂದ್ಯದ ವೇಳೆ ಜಗಳ ಬೇಡ: ದಂಪತಿಗಳಿಗಾಗಿ ಇಲ್ಲಿದೆ 12 ನಿಮಿಷಗಳ ಮ್ಯಾಜಿಕ್ ಒಪ್ಪಂದ! -
ದೆಹಲಿ ಮಾಲಿನ್ಯದ ಭೀತಿ: ₹1,500 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಮಾಡಿ 'DIY' ಏರ್ ಪ್ಯೂರಿಫೈಯರ್! -
ಕೇವಲ 40 ರೂಪಾಯಿಯಲ್ಲಿ ಪೌಷ್ಟಿಕ ಊಟ: ಪ್ರೋಟೀನ್ ಮತ್ತು ಐರನ್ ಹೆಚ್ಚಿಸುವ ಬೆಸ್ಟ್ ಡಯಟ್ ಪ್ಲಾನ್ ಇಲ್ಲಿದೆ! -
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ರೀಲೋಡೆಡ್: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಭರ್ಜರಿ ಡಿಸ್ಕೌಂಟ್! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ -
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ! -
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ
ಮಜ್ಜಿಗೆ ದೋಸೆ ಎಂಬ ಮ್ಯಾಜಿಕ್ ರೆಸಿಪಿ..! ಒಮ್ಮೆ ಟ್ರೈ ಮಾಡಿ
ನೀವು ದೋಸೆಯಲ್ಲಿ ಎಷ್ಟು ವಿಧವಾದ ದೋಸೆ ನೋಡಿರುತ್ತೀರಿ. ಅದ್ರಲ್ಲೂ ವಿಶೇಷ ದೋಸೆ ರೆಸಿಪಿ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಸಾಮಾನ್ಯವಾಗಿ ನಾವು ನೀವು ಮನೆಯಲ್ಲಿ ಉದ್ದು ಹಾಕಿ ದೋಸೆ ಮಾಡುತ್ತೇವೆ. ಒಂದಿಷ್ಟು ವೆರೈಟಿ ದೋಸೆಯನ್ನ ನಾವು ಸಹ ಪ್ರಯೋಗ ಮಾಡಿರುತ್ತೇವೆ. ಆದ್ರೆ ಹೋಟೆಲ್ಗಳಲ್ಲಿ ಎಷ್ಟು ವಿಧದ ದೋಸೆ ಸಿಗುತ್ತೆ ಅನ್ನೋದನ್ನ ಲೆಕ್ಕ ಹಾಕೋದು ಸಹ ಕಷ್ಟ.
ಅದ್ರಲ್ಲೂ ಮಸಾಲ ದೋಸೆ ಎಲ್ಲರಿಗೂ ಇಷ್ಟವಾಗುವ ದೋಸೆ, ಇದನ್ನು ಬಿಟ್ಟು ಬೆಣ್ಣೆ ದೋಸೆ, ಈರುಳ್ಳಿ ದೋಸೆ, ಖಾಲಿ ದೋಸೆ, ರವಾ ದೋಸೆ, ಹೀಗೆ ನಾನಾ ರೀತಿಯ ಬಾಯಲ್ಲಿ ನೀರು ತರಿಸುವ ದೋಸೆಗಳಿವೆ. ಅದ್ರೆ ನೀವು ಎಂದಾದ್ರು ಈ ಮಜ್ಜಿಗೆ ದೋಸೆ ಸವಿದಿದ್ದೀರಾ?

ಹೌದು ನೀವು ಕೇಳಿದ್ದು ಮಜ್ಜಿಗೆ ದೋಸೆ ಹೆಸರು. ಕೆಲವರು ಈ ಹೆಸರನ್ನೇ ಹೊಸದಾಗಿ ಕೇಳಿರಬಹುದು. ಆದ್ರೆ ಈ ರೀತಿ ಮಜ್ಜಿಗೆ ದೋಸೆ ಎಂಬ ದೋಸೆಯ ರೆಸಿಪಿ ಒಂದಿದೆ. ಸಿಕ್ಕಾಪಟ್ಟೆ ರುಚಿಯ, ಮೃದುವಾದ ದೋಸೆ ಇದಾಗಿದೆ. ಬೆಳಗ್ಗೆಯ ತಿಂಡಿಗೆ ಮೃದುವಾಗಿ ರುಚಿಕರ ದೋಸೆ ಮಾಡಬೇಕು, ದೋಸೆಯಲ್ಲಿ ವೆರೈಟಿ ಏನಾದರು ಟ್ರೈ ಮಾಡಬೇಕು ಎಂದುಕೊಂಡಿದ್ದರೆ ಈ ದೋಸೆ ನಿಮಗಾಗಿ ಇಲ್ಲಿದೆ.
ಹಾಗಾದ್ರೆ ನಾವಿಂದು ಈ ಮಜ್ಜಿಗೆ ದೋಸೆ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಹೇಗೆ ಹಿಟ್ಟು ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಜ್ಜಿಗೆ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ - 1 ಬೌಲ್
- ಮೆಂತ್ಯ - 1 ಚಮಚ
- ಅವಲಕ್ಕಿ - 1/2 ಬೌಲ್
- ಉಪ್ಪು - 1/2 ಚಮಚ
- ಮಜ್ಜಿಗೆ - 1/2 ಲೀಟರ್
- ಎಣ್ಣೆ
ಮಜ್ಜಿಗೆ ದೋಸೆ ಮಾಡುವುದು ಹೇಗೆ?
aಅಕ್ಕಿಯನ್ನು ತೊಳೆದು ನೀರಿನಿಂದ ತೆಗೆದು ಇಡಿ. ಮತ್ತೆ ಸ್ವಲ್ಪವೇ ಮೆಂತ್ಯವನ್ನು ಸಹ ತೊಳೆದು ಅದನ್ನೂ ಕೂಡ ಅಕ್ಕಿ ಜೊತೆ ಇಡಿ. ಬಳಿಕ ಅವಲಕ್ಕಿ ತೊಳೆದು ಹಾಕಿಕೊಳ್ಳಿ. ಈ ಎಲ್ಲಾ ವಸ್ತುವನ್ನು ಮಜ್ಜಿಗೆಯಲ್ಲಿ ನೆನೆಸಿಡಿ. ಸುಮಾರು 8ರಿಂದ 9 ಗಂಟೆ ಮಜ್ಜಿಗೆಯಲ್ಲಿ ನೆನೆಸಿಡಬೇಕು.
ಬಳಿಕ ಇದನ್ನು ತೆಗೆದು ಮಿಕ್ಸಿ ಜಾರ್ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈ ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಿ. ಇದಕ್ಕೆ ಹುಳಿ ಮಜ್ಜಿಗೆ ಹಾಕಬಾರದು. ಅದೇ ದಿನದ ಮಜ್ಜಿಗೆ ಬಳಸಿ. ಬಳಿಕ ಇದನ್ನು ಸಹ ಒಂದು ದಿನ ಬಿಡಬೇಕು. ಈ ಹಿಟ್ಟು ಚೆನ್ನಾಗಿ ಬರಬೇಕು ಅಂದ್ರ ಒಂದು ದಿನ ಬಿಡಬೇಕು.
ಒಂದು ದಿನದ ಬಳಿಕ ಒಂದು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಈಗ ಒಲೆ ಮೇಲೆ ಕಾವಲಿ ಇಟ್ಟು ಎಣ್ಣೆ ಹಚ್ಚಿಕೊಳ್ಳಿ. ಎಣ್ಣೆ ಕಾದ ಬಳಿಕ ಕಾವಲಿ ಮಧ್ಯದಲ್ಲಿ ಈ ಹಿಟ್ಟು ಹಾಕಿ ಸ್ವಲ್ಪ ಹರಡಿಕೊಳ್ಳಿ. 2 ನಿಮಿಷಗಳ ಕಾಲ ಒಂದು ಕಡೆ ಕಾಯಿಸಿಕೊಳ್ಳುವಂತೆ ಎರಡು ಕಡೆಗಳಲ್ಲಿ ಕಾಯಿಸಿಕೊಳ್ಳಿ. ನೀವು ಎಣ್ಣೆ ಬದಲಾಗಿ ತುಪ್ಪ ಸಹ ಬಳಸಬಹುದು.
ಈ ದೋಸೆ ಯಾವುದೇ ಚಟ್ನಿ ಜೊತೆಗೆ ಸವಿಯಬಹುದು. ತುಂಬಾನೆ ಮೃದುವಾದ ದೋಸೆ ಇದಾಗಿದೆ. ಹೀಗಾಗಿ ಎಲ್ಲರಿಗೂ ಇಷ್ಟವಾಗಲಿದೆ. ಈ ದೋಸೆ ತಕ್ಷಣ ಮಾಡಿ ಸವಿಯಲು ಸಾಧ್ಯವಿಲ್ಲ ಹೀಗಾಗಿ ಹಿಂದಿನ ದಿನವೇ ಇದಕ್ಕೆ ಸಿದ್ಧತೆ ನಡೆಸಬೇಕು. ಇನ್ನು ಮಜ್ಜಿಗೆ ಇಲ್ಲದಿದ್ದರೆ ಮೊಸರು ಸಹ ಬಳಸಬಹುದು. ಒಟ್ಟಿನಲ್ಲಿ ಹುಳಿ ಬಾರದಂತೆ ಮಜ್ಜಿಗೆ ದೋಸೆ ಮಾಡಿ ಸವಿಯಿರಿ.



Click it and Unblock the Notifications
