Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ಈ ಬಟರ್ ಫ್ರೂಟ್ ಚಟ್ನಿಗೆ 5 ಸಾಮಗ್ರಿ ಸಾಕು, ಪಟ್ ಅಂತ ಮಾಡಬಹುದು, ಟೇಸ್ಟ್ ಸೂಪರ್ ಆಗಿರುತ್ತೆ
ಬಟರ್ ಫ್ರೂಟ್, ಅವಕಾಡೋ ಎಂದು ಕರೆಯಲ್ಪಡುವ ಹಣ್ಣನ್ನು ಕನ್ನಡದಲ್ಲಿ ಬೆಣ್ಣೆಹಣ್ಣು ಎಂದು ಕರೆಯಲಾಗುವುದು.
ಈ ಬಟರ್ ಫ್ರೂಟ್ ಜ್ಯೂಸ್, ಮಿಲ್ಕ್ ಶೇಕ್, ಐಸ್ಕ್ರೀಮ್, ಫ್ರೂಟ್ ಸಲಾಡ್ ಎಲ್ಲಾ ಸವಿದಿರುತ್ತೀರ, ಆದರೆ ಇದರಿಂದ ಚಟ್ನಿ ಟ್ರೈ ಮಾಡಿದ್ದೀರಾ? ನಮ್ಮ ಓದುಗರಾದ ಚೇತನ್ಕುಮಾರ್ ನಮಗೆ ಇದರಿಂದ ತಯಾರಿಸಿದ ಬಟರ್ ಫ್ರೂಟ್ ಚಟ್ನಿ ರೆಸಿಪಿ ನೀಡಿದ್ದಾರೆ. ದೋಸೆಗೆ ಅಂತೂ ಈ ಚಟ್ನಿ ಬೆಸ್ಟ್ ಕಾಂಬಿನೇಷನ್ .

ಬನ್ನಿ ಈ ಚಟ್ನಿ ಮಾಡುವುದು ಹೇಗೆ ಎಂದು ನೋಡೋಣ:
ಬಟರ್ ಫ್ರೂಟ್ 1
ಹಸಿ ಮೆಣಸು 2 (ನಿಮ್ಮ ಖಾರಕ್ಕೆ ತಕ್ಕಷ್ಟು)
1/2 ಕಪ್ ಕರಿಬೇವು
ಉಪ್ಪು(ರುಚಿಗೆ ತಕ್ಕಷ್ಟು)
ನಿಂಬೆರಸ
ಮಾಡುವ ವಿಧಾನ
- ಕರಿಬೇವನ್ನು ಸ್ವಲ್ಪ ಎಣ್ಣೆ ಹಾಕಿ ಫ್ರೈ ಮಾಡಿ
- ಹಸಿ ಮೆಣಸು ಕೂಡ ಅದೇ ಎಣ್ಣೆಯಲ್ಲಿ ಫ್ರೈ ಮಾಡಿ
- ಈಗ ಗ್ರೈಂಡರ್ಗೆ ಕರಿಬೇವು, ಹಸಿ ಮೆಣಸು ಹಾಕಿ ರುಬ್ಬಿ ( ನೀರು ಸೇರಿಸಬೇಡಿ)
- ನಂತರ ಉಪ್ಪು, ಬಟರ್ ಫ್ರೂಟ್ ಹಾಕಿ ಗಟ್ಟಿಯಾಗಿ ರುಬ್ಬಿ, ಬಳಿಕ ಸ್ವಲ್ಪ ನಿಂಬೆರಸ ಸೇರಿಸಿದರೆ ಬಟರ್ ಫ್ರೂಟ್ ಚಟ್ನಿ ರೆಡಿ. ಪಟಾ ಪಟ್ ಅಂತ ಮಾಡಬಹುದು ಈ ಸ್ವಾದಿಷ್ಟಕರ ಚಟ್ನಿ.
ಇದಕ್ಕೆ ತೆಂಗಿನಕಾಯಿ, ನೆಲಗಡಲೆ ಏನೂ ಬೇಕಾಗಿಲ್ಲ ಸೂಪರ್ ಟೇಸ್ಟ್ನ ಚಟ್ನಿ ರೆಡಿಯಾಗಿರುತ್ತದೆ.
ಸಲಹೆ: ಬೇಕಿದ್ದರೆ ನೀವು ಇದಕ್ಕೆ ಒಗ್ಗರಣೆ ಹಾಕಬಹುದು
ಒಗ್ಗರಣೆ: 1 ಚಮಚ ಎಣ್ಣೆ, 2 ಒಣ ಮೆಣಸು, ಸ್ವಲ್ಪ ಕರಿಬೇವು, ಎರಡು ಎಸಳು
ಬೆಳ್ಳುಳ್ಳಿ ಇಷ್ಟು ಸಾಕು ತುಂಬಾ ರುಚಿಯಾಗಿರುತ್ತದೆ.
ಬಟರ್ ಫ್ರೂಟ್ ಆರೋಗ್ಯಕ್ಕೆ ಅದ್ಭುತವಾದ
ಹಣ್ಣಾಗಿದೆ.
ಈ ಬಟರ್ ಫ್ರೂಟ್ ಹಣ್ಣು ಸೇವನೆಯಿಂದ ಈ ಪ್ರಯೋಜನಗಳಿವೆ
ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು: ಬಟರ್ ಫ್ರೂಟ್ ಹಣ್ಣು ದಿನಾ ತಿಂದರೆ
ಇನ್ನೂ ಒಳ್ಳೆಯದು. ಇದರಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಇರುವುದರಿಂದ ಕೆಟ್ಟ
ಕೊಲೆಸ್ಟ್ರಾಲ್ ಹೋಗಲಾಡಿಸಲು ಸಹಕಾರಿಯಾಗಿದೆ.
ಮೈ ತೂಕ ಕಡಿಮೆ ಮಾಡುತ್ತದೆ
ಡಯಟ್ನಲ್ಲಿರುವವರು ಬಟರ್ ಫ್ರೂಟ್ ಸೇವಿಸಿದರೆ ಸಾಕು ದೇಹಕ್ಕೆ ಅಗ್ಯತವಿರುವ
ಪೋಷಕಾಂಶ ಹೆಚ್ಚಿಸುತ್ತದೆ, ಇದರಲ್ಲಿರುವುದು ಆರೋಗ್ಯಕರ ಕೊಬ್ಬಿನಂಶ, ಹಾಗಾಗಿ ಮೈ
ತೂಕ ಹೆಚ್ಚಾಗುವುದಿಲ್ಲ.
ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು
ಈ ಬಟರ್ಫ್ರೂಟ್ ಜೀರ್ಣಕ್ರಿಯೆಗೂ ತುಂಬಾನೇ ಒಳ್ಳೆಯದು. ಮಲಬದ್ಧತೆ ಸಮಸ್ಯೆ
ಇರುವವರು ಬಟರ್ ಫ್ರೂಟ್ ತಿಂದರೆ ಸಾಕು ಮಲ ಸಲೀಸಾಗಿ ಹೋಗುವುದು, ಹಾಗಾಗಿ
ಪೈಲ್ಸ್ ಇರುವವರು ಇದರ ಸೇವನೆ ಮಾಡುವುದು ಒಳ್ಳೆಯದು.
ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
ಇದರಲ್ಲಿರುವ ಒಮೆಗಾ 3 ಕೊಬ್ಬಿನಂಶ ಕಣ್ಣುಗಳು ಡ್ರೈಯಾಗುವುದನ್ನು
ತಪ್ಪಿಸುತ್ತದೆ.
ತ್ವಚೆಗೂ ತುಂಬಾನೇ ಒಳ್ಳೆಯದು
ತ್ವಚೆ ಸೌಂದರ್ಯ ವೃದ್ಧಿಗೆ ಒಳ್ಳೆಯದು, ಇದು ತ್ವಚೆಯನ್ನು ಆತಂರಿಕವಾಗಿ ಪೋಷಣೆ
ಮಾಡುತ್ತದೆ
ಮಧುಮೇಹಿಗಳಿಗೆ ತುಂಬಾ ಒಳ್ಳೆಯದು: ಮಧುಮೇಹಿಗಳು ಜ್ಯೂಸ್ ಮಾಡಿ ಕುಡಿಯಬೇಡಿ, ಸಲಾಡ್ ಅಥವಾ ಈ ರೀತಿ ಚಟ್ನಿ ಮಾಡಿ ಸೇವಿಸಿ, ಇದರಿಂದ ದೇಹಕ್ಕೆ ಆರೋಗ್ಯಕರವಾದ ಕೊಬ್ಬಿನಂಶ ದೊರೆಯುತ್ತದೆ.
- ಬೆಣ್ಣೆ ಹಣ್ಣಿನಲ್ಲಿರುವ ವಿಟಮಿನ್ಗಳು: ಸಿ, ಇ, ಬಿ, ಕೆ, ಬಿ6, ಫೋಲೆಟ್ಅಂಶವಿದೆ.
- ಇದರಲ್ಲಿ ಮೆಗ್ನಿಷ್ಯಿಯಂ, ಪೊಟಾಷ್ಯಿಯಂ ಖನಿಜಾಂಶವಿದೆ.
- ಬೆಣ್ಣೆಹಣ್ಣಿನಲ್ಲಿ ನಾರಿನಂಶ ಇರುವುದರಿಂದ ಚಯಪಚಯ ಕ್ರಿಯೆಗೆ ತುಂಬಾನೇ ಒಳ್ಳೆಯದು
- ಇದರಲ್ಲಿ ಬೀಟಾ ಕೆರೋಟಿನ್ ಸೇರಿದಂತೆ ಅನೇಕ Antioxidants ಇರುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸಲು ಕೂಡ ಸಹಕಾರಿಯಾಗಿದೆ.



Click it and Unblock the Notifications