Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಸಿ ಹಾಲಿನಿಂದ ಹೀಗೆ ಬೆಣ್ಣೆ ತೆಗೆದರೆ ಸೂಪರ್ ರುಚಿಯಾಗಿರುತ್ತೆ
Recipes
oi-Reena TK
Posted By: Reena TK
ಹಾಲನ್ನು ಕಾಯಿಸಿ ಅದರಿಂದ ಬಂದ ಕೆನೆ ತೆಗದು ಇಟ್ಟು ಬೆಣ್ಣೆ ಮಾಡಬಹುದು ಅಥವಾ ಹಸಿ ಹಾಲಿನಿಂದಲೂ ಬೆಣ್ಣೆ ತೆಗೆಯಬಹುದು, ಇಲ್ಲಿ ಹಾಲಿನಿಂದ ಬೆಣ್ಣೆ ತೆಗೆಯುವ ಸುಲಭ ವಿಧಾನ ನೀಡಿದ್ದೇವೆ ನೋಡಿ:

2 ಲೀಟರ್ ಹಾಲು
1 ಚಮಚ ಮೊಸರು
ಮಾಡುವುದು ಹೇಗೆ?
- ಹಾಲನ್ನು ತಂದು ಸ್ವಲ್ಪ ಅಗಲಬಾಯಿ ಪಾತ್ರೆಯಲ್ಲಿ ಹಾಕಿ ಮುಚ್ಚಳ ಹಾಕಿ 24 ಗಂಟೆ ಫ್ರಿಡ್ಜ್ನಲ್ಲಿ ಇಡಬೇಕು, ಹೀಗೆ ಮಾಡಿದರೆ ಕೆನೆ ಮೇಲ್ಭಾಗದಲ್ಲಿ ಬರುತ್ತದೆ.
- ನೀವು ಪ್ರತಿದಿನ ಅರ್ಧ ಲೀಟರ್ ಹಸುವಿನ ಹಾಲು ತಂದರೆ ಅದನ್ನು ಹೀಗೆ ಮಾಡಿದರೆ ಕೆನೆ ತೆಗೆದು ಇಟ್ಟು ನಂತರ ಹಾಲನ್ನು ಬಳಸಬಹುದು, ಒಂದು ವಾರಕ್ಕೆಲ್ಲಾ ಕೆನೆ ಒಂದು ಬೌಲ್ ಆಗುತ್ತೆ, ಅದರಿಂದಲೂ ಬೆಣ್ಣೆ ತೆಗೆಯಬಹುದು.
ಡೈರಿ ಹಾಲು ಅಥವಾ ರೈತರಿಂದ ನೇರವಾಗಿ ಪಡೆದ ಹಸುವಿನ ಹಾಲು ಬಳಸುವುದು ಒಳ್ಳೆಯದು.
- ಮೇಲ್ಭಾಗದಲ್ಲಿ ಬಂದ ಕೆನೆಯಂಶವೆಲ್ಲಾ ತೆಗೆದು ಒಂದು ಬೌಲ್ಗೆ ಹಾಕಿ, ನಂತರ ಹಾಲನ್ನು ಮೆಲ್ಲನೆ ಕಾಯಿಸಿ ಅದರ ಮೇಲ್ಬಾಗದಲ್ಲಿ ಬರುವ ಕೆನೆಯೆಲ್ಲಾ ತೆಗೆದು ಬೌಲ್ಗೆ ಹಾಕಿ, ಕೆನೆಯಂಶ ಸಂಪೂರ್ಣವಾಗಿ ತೆಗೆಯುತ್ತಲೇ ಇರಬೇಕು.
- ನಂತರ ಅದನ್ನು ಒಂದು ಸ್ವಚ್ಛವಾದ ಗಾಜಿನ ಬಾಟಲಿಗೆ ಹಾಕಿ, ಗಾಜಿನ ಬಾಟಲಿಗೆ ಬಿಸಿ ನೀರು ಹಾಕಿ ಚೆಲ್ಲಿ ನಂತರ ಇದನ್ನು ಹಾಕಿ, ಈ ಕೆನೆ ಹಾಕುವಾಗ ಬಾಟಲಿ ಬಿಸಿ ಇರಬೇಕು. ನಂತರ ಬಿಸಿ ನೀರಿನಲ್ಲಿ ಬಾಟಲಿ ಹಾಕಿಡಿ, ನೀರು ಸಾಧಾರಣ ಬಿಸಿ ಸಾಕು, ಇಲ್ಲದಿದ್ದರೆ ಗಾಜಿನ ಬಾಟಲಿ ಒಡೆದು ಹೋಗುತ್ತೆ.
- ಈಗ ನೀವು ಆ ಕೆನೆಗೆ 1 ಚಮಚ ಮೊಸರು ಸೇರಿಸಿ ಮಿಕ್ಸ್ ಮಾಡಿ ( ಇದು ಬೆಣ್ಣೆಗೆ ಸ್ವಲ್ಪ ಹುಳಿ ಟೇಸ್ಟ್ ನೀಡುತ್ತದೆ. ನಿಮಗೆ ಬೇಡ ಎಂದರೆ ಮೊಸರು ಹಾಕಬೇಕಾಗಿಲ್ಲ). insulated cooler ಇದ್ದರೆ ಅದರೊಳಗಡೆ ಬಿಸಿ ನೀರು ಹಾಕಿ ಮುಚ್ಚಿಡಬಹುದು, ಇಲ್ಲದಿದ್ದರೆ ದೊಡ್ಡ ಪ್ಲಾಸ್ಕ್ ರೀತಿ ಬಿಸಿ ನಿಲ್ಲಬೇಕು, ಅದರೊಳಗಡೆ ಬಾಟಲಿ ಇಟ್ಟು ಬಿಸಿ ನೀರು ಹಾಕಿ ಮುಚ್ಚಿಡಬೇಕು, ಮನೆಯಲ್ಲಿ ದೊಡ್ಡ ಹಾಟ್ ಬಾಕ್ಸ್ ಇದ್ದರೂ ನಡೆಯುತ್ತೆ. ಹಿಗೆ 12 ಗಂಟೆ ಇಡಿ.
- ನಂತರ ಅದನ್ನು ಹೊರತೆಗೆದು ತಣ್ಣೀರಿನಲ್ಲಿ 10-15 ನಿಮಿಷ ಇಡಿ.
ಬಳಿಕ ಅದನ್ನು ಮಿಕ್ಸಿ ಜಾರ್ನಲ್ಲಿ ಹಾಕಿ ನಿಲ್ಲಿಸದೆ ತಿರುಗಿಸಿ, 5-7 ನಿಮಿಷ ತಿರುಗಿಸಿ, ಬೆಣ್ಣೆ ಮೇಲ್ಭಾಗದಲ್ಲಿ ಬಂದು ನಿಂತಿರುತ್ತದೆ, ಇದನ್ನು ಒಂದು ಬಟ್ಟೆಯಲ್ಲಿ ಸೋಸಿದರೆ ಮಜ್ಜಿಗೆ ನೀರು ಪಾತ್ರೆಯಲ್ಲಿ ಸಂಗ್ರಹವಾಗುವುದು, ಬೆಣ್ಣೆ ಮಸ್ಲಿನ್ ಬಟ್ಟೆಯಲ್ಲಿ ಇರುತ್ತದೆ, ಅದನ್ನು ತೆಗೆದು ಉಂಡೆ ಕಟ್ಟಿ ತಣ್ಣೀರಿನಲ್ಲಿ ಮುಳುಗಿಸಿ ತೆಗೆದು, ನಂತರ ಡಬ್ಬದಲ್ಲಿ ಹಾಕಿಡಿ, ಸವಿಯಲು ರುಚಿಯಾದ ಬೆಣ್ಣೆ ರೆಡಿ.
ಬೆಣ್ಣೆಗೆ ನಿಮಗೆ ಇಷ್ಟವಾದ ಟೇಸ್ಟ್ ಸೇರಿಸಿ
- ಜೇನು, ಸ್ವಲ್ಪ ನಿಂಬೆರಸ, ಅಥವಾ ಸೋಂಪು, ಅಥಚಾ ಸ್ವಲ್ಪ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಬಹುದು, ಇವೆಲ್ಲಾ ಬೆಣ್ಣೆಗೆ ಭಿನ್ನ ಫ್ಲೇವರ್ ನೀಡುತ್ತೆ.
- 2 ಲೀಟರ್ ಹಾಲಿನಿಂದ ನೀವು 200 ಗ್ರಾಂ ಬೆಣ್ಣೆ ತೆಗೆಯಬಹುದು. ಜೊತೆಗೆ ನಿಮಗೆ ಮಜ್ಜಿಗೆ ಕೂಡ ಸಿಗುತ್ತದೆ. ಹೊರಗಡೆ ಸಿಗುವ ಬೆಣ್ಣೆಗಿಂತ ತುಂಬಾನೇ ರುಚಿಯಾಗಿರುತ್ತದೆ.
Comments
[ of 5 - Users]



Click it and Unblock the Notifications