Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಮನೆಯಲ್ಲೆ 5 ನಿಮಿಷದಲ್ಲಿ ಸ್ಪೆಷಲ್ ಬೆಣ್ಣೆ ದೋಸೆ ಮಾಡಿ..! ಇಲ್ಲಿದೆ ರೆಸಿಪಿ
ಬೆಣ್ಣೆ ದೋಸೆ ಅಂದ್ರೆ ಎಲ್ಲರ ಬಾಯಲ್ಲು ನೀರು ಬರುತ್ತೆ. ಅದರ ರುಚಿಗೆ ಮಾರು ಹೋಗದವರೇ ಇಲ್ಲ. ಯಾಕಂದ್ರೆ ಬೆಣ್ಣೆ ದೋಸೆ ಸವಿಯಲು ಹೋಟೆಲ್‌ಗಳಿಗೆ ಹುಡುಕಿಕೊಂಡು ಗ್ರಾಹಕರು ಹೋಗುತ್ತಾರೆ. ಬೆಳಗ್ಗೆಯ ತಿಂಡಿಗೆ ಬೆಣ್ಣೆ ದೋಸೆ ಪರ್ಫೆಕ್ಟ್ ಖಾದ್ಯ.
ಇನ್ನು ಬೆಣ್ಣೆ ದೋಸೆ ಅಂದ ತಕ್ಷಣ ನಮಗೆ ದಾವಣಗೆರೆ ಬೆಣ್ಣೆ ದೋಸೆ ನೆನಪಾಗೋದು ಸಹ ಸಹಜ. ದಾವಣಗೆರೆ ಬೆಣ್ಣೆ ದೋಸೆ ಅಂದರೆ ಅಷ್ಟು ಫೇಮಸ್, ಇನ್ನು ಹೋಟೆಲ್‌ಗಳಲ್ಲೂ ಈ ದಾವಣಗೆರೆ ಬೆಣ್ಣೆ ದೋಸೆಗೆ ಎಲ್ಲಿಲ್ಲದ ಡಿಮ್ಯಾಂಡ್ ಅಂತು ಇದ್ದೇ ಇರುತ್ತೆ.

ಇನ್ನು ಮನೆಯಲ್ಲೇ ನಾವು ಬೆಣ್ಣೆ ದೋಸೆ ಸವಿಯಬಹುದು. ಅದರಲ್ಲೂ ಈ ವಿಶೇಷ ರೀತಿಯ ಬೆಣ್ಣೆ ದೋಸೆಯನ್ನ ಥಟ್ ಅಂತಲು ಮಾಡಬಹುದು. ಕೇವಲ 5 ನಿಮಿಷದಲ್ಲೇ ಬೆಣ್ಣೆ ದೋಸೆ ಸವಿಯಲು ಮಾಡಬಹುದು. ಹಾಗಾದ್ರೆ ಈ ಬೆಣ್ಣೆ ದೋಸೆ ಮನೆಯಲ್ಲೇ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವುದು ಹೇಗೆ? ಯಾವೆಲ್ಲಾ ಅಂಶದಿಂದ ಹಿಟ್ಟು ರೆಡಿ ಮಾಡಿಕೊಳ್ಳಬೇಕು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ
ಸ್ಪೆಷಲ್ ಬೆಣ್ಣೆ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ ಹಿಟ್ಟು - 1 ಕಪ್
- ಕಡಲೆ ಹಿಟ್ಟು - 1/4 ಕಪ್
- ಮೊಸರು - 1/2 ಕಪ್
- ಆಲೂಗಡ್ಡೆ-1
- ಒಣ ಮೆಣಸಿನಕಾಯಿ - 5
- ಎಣ್ಣೆ
- ಬೆಣ್ಣೆ
- ರುಚಿಗೆ ಉಪ್ಪು
ಈ ವಿಶೇಷ ಬೆಣ್ಣೆ ದೋಸೆ ಮಾಡುವುದು ಹೇಗೆ?
ಮೊದಲು ಮಿಕ್ಸಿ ಜಾರ್‌ಗೆ ಅಕ್ಕಿ ಹಿಟ್ಟು ಹಾಕಿ, ಇದಕ್ಕೆ ಕಡಲೆ ಹಿಟ್ಟು, ಮೊಸರು, ಒಣಮೆಣಸು, ಉಪ್ಪು, ಹಸಿ ಆಲೂಗಡ್ಡೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ರುಬ್ಬಿಕೊಳ್ಳುವಾಗ ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ಹೀಗೆ ಮಾಡುವುದರಿಂದ ದೋಸೆ ಹಿಟ್ಟು ಚೆನ್ನಾಗಿ ಹದ ಬರುತ್ತದೆ.
ಸಾಮಾನ್ಯವಾಗಿ ನೀವು ದೋಸೆ ಹಿಟ್ಟಿಗೆ ರೆಡಿ ಮಾಡುವಂತೆಯೇ ಹಿಟ್ಟು ತಯಾರು ಮಾಡಿಕೊಳ್ಳಿ. ನಂತರ ಕಾವಲಿಯನ್ನು ಒಲೆ ಮೇಲೆ ಇಟ್ಟು ದೋಸೆ ಹಿಟ್ಟನ್ನು ಹಾಕಿಕೊಳ್ಳಿ. ಬಳಿಕ ದೋಸೆ ಮೇಲೆ ಬೆಣ್ಣೆಯನ್ನು ಹಾಕಿಕೊಳ್ಳಿ. ದೋಸೆಯನ್ನು ಎರಡೂ ಭಾಗದಲ್ಲಿ ಫ್ರೈ ಮಾಡಿಕೊಳ್ಳಿ. ಗೋಲ್ಡನ್ ಕಲರ್‌ಗೆ ಬರುವವರೆಗೂ ದೋಸೆ ಫ್ರೈ ಮಾಡಿಕೊಳ್ಳಿ.
ಇದೇ ರೀತಿ ಎಲ್ಲಾ ದೋಸೆಗಳ ಮಾಡಿಕೊಳ್ಳಿ. ಕಾವಲಿಗೆ ಮೊದಲು ಎಣ್ಣೆ ಹಾಕಿಕೊಳ್ಳಿ. ಆದರೆ ದೋಸೆ ಮೇಲೆ ಬೆಣ್ಣೆ ಹಚ್ಚಿನ ಇನ್ನು ಎಣ್ಣೆ ಬಳಸದೆ ಕೇವಲ ಬೆಣ್ಣೆಯನ್ನೇ ಬಳಸಿಯೂ ಈ ದೋಸೆಯನ್ನು ಮಾಡಬಹುದು. ಈ ದೋಸೆ ಮಾಡುವಾಗ ನಾವು ಹಿಂದಿನ ದಿನವೇ ಹಿಟ್ಟು ಮಾಡಿಡಬೇಕು ಎಂದೇನಿಲ್ಲ. ಹಿಟ್ಟಿಗೆ ಮೊಸರು ಹಾಕುವುದರಿಂದ ತಕ್ಷಣವೇ ದೋಸೆ ಮಾಡಬಹುದು.
ಈ ದೋಸೆ ಜೊತೆಗೆ ಚಟ್ನಿ ಇದ್ದರೆ ಇದರ ರುಚಿ ಮತ್ತಷ್ಟು ಹೆಚ್ಚಾಗುತ್ತದೆ. ಅದರಲ್ಲು ಕಾಯಿ ಚಟ್ನಿ ಅಥವಾ ಪುದಿನ ಚಟ್ನಿ ಹಾಕಿದರೆ ರುಚಿ ಮತ್ತಷ್ಟು ರುಚಿಸುತ್ತದೆ. ಈ ದೋಸೆಗೆ ಹಿಟ್ಟನ್ನು ಒಂದು ದಿನ ಮೊದಲು ಸಹ ಮಾಡಿಟ್ಟುಕೊಳ್ಳಬಹುದು. ಇದಲ್ಲದೆ ದೋಸೆ ಮಾಡುವಾಗ ಸುಲಭವಾಗಿ ದೋಸೆ ಮೇಲೆ ಏಳದಿದ್ದರೆ ಹಿಟ್ಟನ್ನು ಸರಿಯಾಗಿ ಹದ ಮಾಡಿಕೊಂಡಿಲ್ಲ ಎಂದಾಗುತ್ತದೆ. ಹೀಗಾಗಿ ಹಿಟ್ಟು ಸರಿಯಾಗಿ ಹದ ಮಾಡಿಕೊಳ್ಳಿ.
ಪುದಿನ ಚಟ್ನಿ ಮಾಡೋದು ಹೇಗೆ?
ಇನ್ನು ಈ ಬೆಣ್ಣೆ ದೋಸೆಗೆ ಪುದಿನ ಚಟ್ನಿ ಇನ್ನು ರುಚಿ ಹೆಚ್ಚಿಸುತ್ತದೆ.
ಪುದಿನ ಚಟ್ನಿ ಮಾಡುವುದು ಸಹ ತುಂಬಾನೆ ಸುಲಭ. ಮೊದಲು ಒಂದು ಪಾತ್ರೆಯಲ್ಲಿ ಕಡಲೆ
ಹಾಕಿಕೊಂಡು ಹುರಿದುಕೊಳ್ಳಿ. ಬಳಿಕ ಮತ್ತೊಂದು ಪಾತ್ರೆಯಲ್ಲಿ ಜೀರಿಗೆ,
ಬೆಳ್ಳುಳ್ಳಿ, ಒಣ ಮೆಣಸು, ಹಸಿ ಮೆಣಸು, ಪುದಿನ, ಕೊತ್ತಂಬರಿ ಸೊಪ್ಪು ಹಾಕಿ ಫ್ರೈ
ಮಾಡಿಕೊಳ್ಳಿ.
ಈ ಫ್ರೈ ಆದ ಬಳಿಕ ಎಲ್ಲವನ್ನು ತೆಗೆದು ಕಡಲೆ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಂಡರೆ
ರುಚಿ ರುಚಿಯ ಪುದಿನ ಚಟ್ನಿ ರೆಡಿಯಾಗುತ್ತದೆ. ಈ ಚಟ್ನಿಯನ್ನು ಸಹ 5 ನಿಮಿಷಲ್ಲಿ
ಮಾಡಬಹುದು.



Click it and Unblock the Notifications
