Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬಾಯಲ್ಲಿಟ್ಟರೆ ಕರಗುತ್ತೆ ಈ ಬೆಣ್ಣೆ ಚಕ್ಕುಲಿ..! ಇಂತಹ ರುಚಿ ಚಕ್ಕುಲಿ ಟ್ರೈ ಮಾಡಿ!
ಎಲ್ಲರ ಮನೆಯಲ್ಲಿ ಸಂಜೆ ವೇಳೆ ಸವಿಯಲು ಯಾವುದಾದರೊಂದು ಸ್ನ್ಯಾಕ್ಸ್ ಇದ್ದೇ ಇರುತ್ತೆ. ಟೀ-ಕಾಫಿ ಜೊತೆಗೆ ಸವಿಯಲು ಬಿಸ್ಕೇಟ್, ಚಿಪ್ಸ್, ನಿಪ್ಪಟ್ಟು, ವಡೆ, ಬಜ್ಜಿ ಹೀಗೆ ಏನಾದದು ಒಂದು ತಿಂಡಿ ಇದ್ದರೆ ಆ ಸಂಜೆ ಮತ್ತಷ್ಟು ಹಿತವಾಗುತ್ತೆ. ಜೊತೆಗೆ ಹೊಟ್ಟೆಯೂ ತುಂಬುವುದರಿಂದ ವಿಶ್ರಾಂತಿ ಪಡೆದ ಅನುಭವವಾಗುತ್ತೆ.
ಆದ್ರೆ ಬಹುತೇಕ ಮನೆಗಳಲ್ಲಿ ಅಂಗಡಿ ಅಥವಾ ಬೇಕರಿ ತಿಂಡಿಗಳೇ ಇರುತ್ತವೆ. ಆದ್ರೆ ಮನೆಯಲ್ಲಿ ಇಂತಹ ತಿಂಡಿ ಮಾಡಿಟ್ಟರೆ ಯಾರಾದರು ಅತಿಥಿಗಳು, ಸಂಬಂಧಿಕರು, ನೆರೆ ಹೊರೆಯವರು ಬಂದಾಗ ಅವರಿಗೆ ಸವಿಯಲು ನೀಡಬಹುದು. ಆದರೆ ಯಾವ ತಿಂಡಿ ಮಾಡಿಡುವುದು ಎಂಬುದು ಹಲವರ ಪ್ರಶ್ನೆಯಾಗಿರುತ್ತೆ.

ಆದ್ರೆ ನಾವಿಂದು ಸ್ನ್ಯಾಕ್ಸ್ ಗಾಗಿ ಸವಿಯಲು ಚಕ್ಕುಲಿ ಮಾಡುವುದು ಹೇಗೆ ಎಂಬುದನ್ನು ತಿಳಿಸಲಿದ್ದೇವೆ. ಅಂದರೆ ಇದು ಸಾಮಾನ್ಯವಾದ ಚಕ್ಕುಲಿ ಅಲ್ಲ ಬದಲಿಗೆ ಬೆಣ್ಣೆ ಚಕ್ಕುಲಿ ಇದು. ನಾವು ಚಕ್ಕುಲಿ ಎಂದರೆ ವೃತ್ತಾಕಾರವಾಗಿರುತ್ತೆ ಆದರೆ ಉದ್ದುದ್ದ ಕಡ್ಡಿಯಾಕಾರದ ಚಕ್ಕುಲಿ ಸವಿದರೆ ಮತ್ತೆ ಮತ್ತೆ ಸವಿಯುತ್ತೀರಿ.
ಬೆಣ್ಣೆ ಚಕ್ಕುಲಿ ಅಥವಾ ಬೆಣ್ಣೆ ಮುರುಕು ಎಂದು ಕರೆಯಲ್ಪಡುವ ಈ ತಿಂಡಿ ಮಕ್ಕಳಿಂದ ಹಿಡಿದು ಹಿರಿಯರು ಸಹ ಇಷ್ಟಪಟ್ಟು ಸವಿಯುತ್ತಾರೆ, ಸಾಮಾನ್ಯ ಚಕ್ಕುಲಿಗಿಂತ ಈ ಬೆಣ್ಣೆ ಚಕ್ಕುಲಿ ಮೃದುವಾಗಿರುವ ಕಾರಣ ಎಲ್ಲರು ಸವಿಯುತ್ತಾರೆ. ಟೀ-ಕಾಫಿ ಜೊತೆ ಸವಿಯಲು ಇದು ಬೆಸ್ಟ್ ಸ್ನ್ಯಾಕ್ಸ್ ಆಗಿದೆ. ಹಾಗಾದ್ರೆ ಮನೆಯಲ್ಲಿಯೇ ಈ ಬೆಣ್ಣೆ ಸ್ನ್ಯಾಕ್ಸ್ ಮಾಡುವುದು ಹೇಗೆ? ಬೆಣ್ಣೆ ಚಕ್ಕುಲಿ ಮಾಡಲು ಬೇಕಾಗುವ ಪದಾರ್ಥ ಏನು? ಮಾಡಲು ಎಷ್ಟು ಸಮಯ ಬೇಕು? ಈ ಚಕ್ಕುಲಿ ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೆಣ್ಣೆ ಚಕ್ಕುಲಿ ಮಾಡಲು ಬೇಕಾಗುವ ಪದಾರ್ಥಗಳು
- ಹುರಿಗಡಲೆ - 1 ಕಪ್
- ಅಕ್ಕಿ ಹಿಟ್ಟು - 1ಕಪ್
- ಕಡಲೆ ಹಿಟ್ಟು - ಕಾಲು ಕಪ್
- ಇಂಗು
- ಅರಶಿಣ - 2 ಚಿಟಿಕೆ
- ಉಪ್ಪು
- ಜೀರಿಗೆ
- ಬೆಣ್ಣೆ -2 ದೊಡ್ಡ ಸ್ಪೂನ್
- ನೀರು
- ಎಣ್ಣೆ
- ಚಕ್ಕುಲಿ ಅಚ್ಚು
ಬೆಣ್ಣೆ ಚಕ್ಕುಲಿ ಮಾಡುವುದು ಹೇಗೆ?
ಮೊದಲು ಒಂದು ಕಪ್ನಲ್ಲಿ ಹುರಿಗಡಲೆ ತೆಗೆದುಕೊಂಡು ಅದನ್ನು ಮಿಕ್ಸಿ ಜಾರ್ಗೆ ಹಾಕಿ ಪುಡಿ ಮಾಡಿ ಇಟ್ಟುಕೊಳ್ಳಿ. ಈಗ ಒಂದು ಬೌಲ್ ತೆಗೆದುಕೊಂಡು ಅದಕ್ಕೆ 1 ಕಪ್ ಅಕ್ಕಿ ಹಿಟ್ಟು, ಕಾಲು ಕಪ್ ಕಡಲೆ ಹಿಟ್ಟು, ಕಾಲು ಕಪ್ ಹುರಿಗಡೆಲೆ ಪುಡಿಯನ್ನು ಹಾಕಿ. ನಂತರ ಇದಕ್ಕೆ ಇಂಗು, ಅರಶಿಣ, ಉಪ್ಪು, ಜಿರಿಗೆ ಜಾಕಿಕೊಂಡು ಕಲಸಿಕೊಳ್ಳಿ. ಎಲ್ಲಾ ಚೆನ್ನಾಗಿ ಮಿಕ್ಸ್ ಮಾಡಿ.
ಬಳಿಕ ಇದಕ್ಕೆ ಒಂದು ಸ್ಪೂನ್ ಬೆಣ್ಣೆ ಹಾಕಿ ಕೊಂಡಿ ಹಿಟ್ಟಿನಲ್ಲಿ ಮರೆಯಾಗುವಂತೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟು ಹದ ಮಾಡಿಕೊಳ್ಳಿ. ಈ ಹಿಟ್ಟು ಗಟ್ಟಿಯಾಗಿರುವಂತೆ ಮಾಡಿಕೊಳ್ಳಿ. ಉಂಡೆ ಕಟ್ಟುವಷ್ಟು ಹದಕ್ಕೆ ಮಾಡಬೇಕು ಆದರೆ ನೀರಿನ ಅಂಶ ಇರಬಾರದು. ನಂತರ ದೊಡ್ಡ ಹಿಟ್ಟಿನ ಭಾಗ ತೆಗೆದುಕೊಂಡು ಸಿಲಿಂಡರ್ ರೀತಿಯಲ್ಲಿ ಹಿಟ್ಟು ಉಂಡೆ ಮಾಡಿಕೊಳ್ಳಿ.
ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಈಗ ಚಕ್ಕುಲಿ ಅಚ್ಚು ತೆಗೆದುಕೊಂಡು ರೆಡಿ ಮಾಡಿಕೊಂಡಿರುವ ಹಿಟ್ಟನ್ನು ಅದರ ಒಳಗೆ ಹಾಕಿ ನೇರವಾಗಿ ಎಣ್ಣೆಯೊಳಗೆ ಬಿಡಿ. ಚಕ್ಕುಲಿ ಎಷ್ಟು ಉದ್ದವಾದರು ಬರಲಿ ಅಥವಾ ಸಣ್ಣದಾಗಿ ಕಟ್ ಆದರೂ ಸಮಸ್ಯೆಯಿಲ್ಲ. ಬಳಿಕ ಚೆನ್ನಾಗಿ ಕರಿಯಲು ಬಿಡಿ. ಸಣ್ಣ ಉರಿಯಲ್ಲಿ ಕರಿದರೆ ಚಕ್ಕುಲಿ ಮತ್ತಷ್ಟು ಮೃದುವಾಗಿ ಬರುತ್ತದೆ.
ಸುಮಾರು 10 ನಿಮಿಷದ ವರೆಗೂ ಕರಿದರೆ ನಿಮ್ಮ ಮುಂದೆ ಮೃದುವಾದ ಬೆಣ್ಣೆ ಚಕ್ಕುಲಿ ರೆಡಿಯಾಗುತ್ತೆ. ಮನೆಯ ವಸ್ತುಗಳ ಬಳಸಿ ಕಡಿಮೆ ಸಮಯದಲ್ಲಿ ಇದನ್ನು ಮಾಡಬಹುದು. ಹೀಗಾಗಿ ನೀವು ಸಹ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
