Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಅದ್ಭುತ ರುಚಿಯ ಬನ್ ದೋಸೆ ಮಾಡುವುದು ಹೇಗೆ? ಹತ್ತಿಯಂತೆ ಮೃದುವಾದ ದೋಸೆ ಇದು!!
ನೀವು ಬೆಳಗ್ಗೆ ತಿಂಡಿಗೆ ವಿಶೇಷವಾಗಿ ದೋಸೆ ಮಾಡಿ ಸವಿಯುವುದು ಅಂದರೆ ಇಷ್ಟಪಡಬಹುದು. ದೋಸೆ ಎಲ್ಲರಿಗೂ ಇಷ್ಟವಾಗುವ ಖಾದ್ಯ. ಹೋಟೆಲ್‌ಗಳಲ್ಲಿ ಬಿಸಿ ಬಿಸಿ ದೋಸೆ ಸವಿಯೋದು ಅಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಅದರಲ್ಲೂ ಮಸಾಲೆ, ದೋಸೆ, ಬೆಣ್ಣೆ ದೋಸೆ, ರಾಮೇಶ್ವರಂ ಕೆಫೆಯ ರೀತಿಯ ತುಪ್ಪದ ದೋಸೆ, ಈರುಳ್ಳಿ ದೋಸೆ, ರವೆ ದೋಸೆ ಹೀಗೆ ಹತ್ತಾರು ಬಗೆಯ ದೋಸೆ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರು ಬರುತ್ತದೆ.
ಹಾಗೆ ಕೆಲವೊಂದು ವಿಶೇಷ ರೀತಿಯ ದೋಸೆಗಳು ನಿಮ್ಮ ಬಾಯಿ ರುಚಿ ಹೆಚ್ಚಿಸಲಿವೆ. ಈ ರೀತಿಯ ವಿಶೇಷ ದೋಸೆ ರೆಸಿಪಿಗಳ ಸಾಲಿನಲ್ಲಿ ನಾವಿಂದು ಬನ್ ದೋಸೆ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ಬನ್ ದೋಸೆಯು ಬಹಳ ಮೃದುವಾಗಿ ರುಚಿ ರುಚಿಯಾಗಿ ಮಾಡಬಹುದು. ಹತ್ತಿಯಂತಹ ದೋಸೆ ಸವಿಯಬೇಕು ಎನ್ನುವವರು ಈ ಬನ್ ದೋಸೆ ಒಮ್ಮೆ ಟ್ರೈ ಮಾಡಿ ನೋಡಿ.

ಹಾಗಾದ್ರೆ ಈ ಬನ್ ದೋಸೆ ಮಾಡುವ ಕುರಿತಾಗಿ ಇಂದು ತಿಳಿದುಕೊಳ್ಳೋಣ ಅದರಲ್ಲೂ ಈ ಹೊಸ ರೀತಿಯ ಬನ್ ದೋಸೆ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬನ್ ದೋಸೆ ಮಾಡಲು ಬೇಕಾಗುವ ವಸ್ತುಗಳು
- ರವೆ - 1 ಕಪ್
- ಮೊಸರು
- ಅಕ್ಕಿ ಹಿಟ್ಟು
- ಈನೋ
- ಈರುಳ್ಳಿ
- ಶುಂಠಿ
- ಜೀರಿಗೆ
- ಸಾಸಿವೆ
- ಕರಿಬೇವು
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಬನ್ ದೋಸೆ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಎಣ್ಣೆ ಬಿಸಿಯಾದಾಗ ಅದಕ್ಕೆ ಸಾಸಿವೆ, ಜೀರಿಗೆ, ಸಣ್ಣದಾಗಿ ಹೆಚ್ಚಿರುವ ಹಸಿ ಮೆಣಸು, ಒಂದು ಈರುಳ್ಳಿ, ಶುಂಠಿ ಹಾಕಿಕೊಂಡು ಮಿಕ್ಸ್ ಮಾಡುತ್ತಾ ಫ್ರೈ ಮಾಡಿಕೊಳ್ಳಿ. ಹಾಗೆ ಇದಕ್ಕೆ ಕರಿಬೇವು ಹಾಗೂ ಸಬ್ಬಸಿಗೆ ಸೊಪ್ಪು ಇದ್ದರೆ ಹಾಕಿಕೊಳ್ಳಿ ಹಾಕದೆ ಇದ್ದರೂ ನಡೆಯುತ್ತೆ. ಹಾಗೆ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಫ್ರೈ ಮಾಡಿ ಒಲೆ ಆಫ್ ಮಾಡಿಕೊಂಡು ತೆಗೆದಿಟ್ಟುಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಬಾಂಬೆ ರವೆ ಹಾಕಿ ಕಾಲು ಕಪ್ ಮೊಸರು ಹಾಕಿಕೊಳ್ಳಿ. ಹಾಗೆ 2 ಸ್ಪೂನ್ ಅಕ್ಕಿ ಹಿಟ್ಟು ಸಹ ಹಾಕಿಕೊಳ್ಳಿ. ನಂತರ ಅರ್ಧ ಕಪ್ ನೀರು ಹಾಕಿ ರುಬ್ಬಿಕೊಳ್ಳಬೇಕು. ಇಡ್ಲಿ ಇಟ್ಟಿನ ಹದಕ್ಕೆ ನುಣ್ಣಗೆ ಇದನ್ನು ರುಬ್ಬಿಕೊಂಡು ಮಿಕ್ಸಿ ಜಾರ್‌ಗೆ ಸ್ವಲ್ಪ ನೀರು ಹಾಕಿ ಅದನ್ನು ಕೂಡ ಹಿಟ್ಟಿಗೆ ಹಾಕಿ ಮಿಕ್ಸ್ ಮಾಡಿ. ಈಗ ಹಿಟ್ಟಿಗೆ ಉಪ್ಪು ಹಾಕಿಕೊಳ್ಳಿ. ನಂತರ ಮೊದಲು ಬಾಣಲೆಯಲ್ಲಿ ಫ್ರೈ ಮಾಡಿದ ಮಸಾಲೆಯನ್ನು ಈ ಹಿಟ್ಟಿನ ಜೊತೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಹಾಗೆ 10 ನಿಮಿಷ ಹಿಟ್ಟನ್ನು ಬಿಟ್ಟು ನಂತರ ಅದಕ್ಕೆ ಅರ್ಧ ಚಮಚ ಈನೋ ಸಾಲ್ಟ್ ಇಲ್ಲವೆ ಅಡುಗೆ ಸೋಡಾ ಸಹ ಹಾಕಿಕೊಳ್ಳಬಹುದು. ಈಗ ಹಿಟ್ಟನ್ನು ಮತ್ತೆ ಮಿಕ್ಸ್ ಮಾಡಿಕೊಳ್ಳಬೇಕು. ಈಗ ಒಲೆ ಮೇಲೆ ಕಾವಲಿ ಇಟ್ಟು ಮೊದಲು ಕಾಯಲು ಬಿಟ್ಟು ನೀರು ಚಿಮುಕಿಸಿ ನಂತರ ಬಟ್ಟೆಯಿಂದ ಒರೆಸಿಕೊಂಡು ಹಿಟ್ಟನ್ನು ಮಧ್ಯದಲ್ಲಿ ಹಾಕಿ ಬಿಡಿ. ಸೆಟ್ ದೋಸೆಯಂತೆ ಈ ದೋಸೆಯನ್ನು ಸಹ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ಬನ್ ದೋಸೆ ರೆಡಿಯಾಗುತ್ತದೆ, ನೀವು ಕೂಡ ಒಮ್ಮೆ ಮನೆಯಲ್ಲಿ ಈ ರೀತಿಯ ದೋಸೆ ಮಾಡಿ ಸವಿದು ನೋಡಿ.



Click it and Unblock the Notifications
