Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಚಪಾತಿ, ದೋಸೆಗೆ ಅದ್ಭುತ ರುಚಿಯ ಅವರೆ ಕಾಳಿನ ಸಾಗು..! ಬೆಸ್ಟ್ ರೆಸಿಪಿ ಇದು!
ಬೆಳಗ್ಗೆ ಬ್ರೇಕ್ಫಾಸ್ಟ್ಗೆ ನೀವು ಚಪಾತಿ, ದೊಸೆ, ಇಡ್ಲಿ ಮಾಡಿದ್ರೆ ಅದಕ್ಕೊಂದು ಪಲ್ಯ, ಕರಿ, ಚಟ್ನಿ ಇನ್ನೇನಾದ್ರು ಸೈಡ್ ಡಿಷ್ ಇರಬೇಕಾಗುತ್ತೆ. ಹಾಗೆ ನಾವು ಹಲವು ರೀತಿ ಕಾಳುಗಳ ಬಳಸಿ ಮಾಡುವಂತಹ ಹಲವು ಕರಿ, ಸಾಗು, ಚಟ್ನಿ ಎಲ್ಲಾ ರೀತಿ ಖಾದ್ಯ ಮಾಡುತ್ತೇವೆ. ನಾವಿಂದು ತಿಂಡಿಯ ರುಚಿ ಹೆಚ್ಚಿಸಲು ನಾವಿಂದು ಅವರೆ ಕಾಳಿನ ಸಾಗು ಮಾಡುವ ಕುರಿತು ತಿಳಿದುಕೊಳ್ಳೋಣ.
ಅದರಲ್ಲೂ ನೀವು ಬೆಳಗ್ಗೆ ಚಪಾತಿ ಮಾಡಿದರೆ ಅದಕ್ಕೊಂದು ಕಾಳು ಹಾಕಿರುವ ಪಲ್ಯ ಮಾಡಿ. ಅದ್ರಲ್ಲೂ ಈ ರೀತಿ ಅವರೆ ಕಾಳಿನ ಸಾಗು ಮಾಡಿದರೆ ಎಲ್ಲರು ಇಷ್ಟಪಟ್ಟು ಸವಿಯುತ್ತಾರೆ. ಅವರೆ ಕಾಳು ನೋಡಲು ಬಹಳ ರುಚಿಕರ ಹಾಗೂ ಆರೋಗ್ಯಕ್ಕೂ ಉತ್ತಮ. ಆದ್ರೆ ಇದರ ರುಚಿ ನೀವು ಒಮ್ಮೆ ನೋಡಿದ್ರೆ ಪದೇ ಪದೇ ಸವಿಯಲು ಮುಂದಾಗುತ್ತೀರಿ.

ಹಾಗಾದ್ರೆ ಈ ಅವರೆಕಾಳಿನ ಸಾಗು ಮಾಡುವುದಾದ್ರು ಹೇಗೆ? ಚಪಾತಿ ಸವಿಯಲು ಯಾವ ರೀತಿಯ ಸಾಗು ಮಾಡಬೇಕು?, ಈ ಸಾಗು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಬೇಕು? ಮಾಡುವ ಸರಿಯಾದ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಚಪಾತಿಗೆ ಅವರೆಕಾಳಿನ ಸಾಗು ಮಾಡಲು ಬೇಕಾಗುವ ಪದಾರ್ಥಗಳು
- ಅವರೆ ಕಾಳು
- ಕೊತ್ತಂಬರಿ ಕಾಳು
- ಕೊತ್ತಂಬರಿ ಸೊಪ್ಪು
- ಬೆಳ್ಳುಳ್ಳಿ
- ಗಸೆಗಸೆ
- ಹುರಿಗಡಲೆ
- ಶುಂಠಿ
- ತೆಂಗಿನ ತುರಿ
- ಹಸಿ ಮೆಣಸು
- ಸಾಸಿವೆ
- ಜೀರಿಗೆ
- ಅರಶಿಣ
- ಮರಾಠಿ ಮೊಗ್ಗು
- ಲವಂಗ
- ಚಕ್ಕೆ
- ಉದ್ದಿನ ಬೇಳೆ
- ಈರುಳ್ಳಿ
ಚಪಾತಿಗೆ ಅವರೆಕಾಳಿನ ಸಾಗು ಮಾಡುವುದು ಹೇಗೆ?
ಮೊದಲು ಕುಕ್ಕರ್ನಲ್ಲಿ ಅವರೆ ಕಾಳನ್ನು ಹಾಕಿ ಅದಕ್ಕೆ ನೀರು ಹಾಕಿಕೊಂಡು ಸೀಟಿ
ಹೊಡೆಯಲು ಬಿಡಿ. ಈಗ ಇನ್ನೊಂದು ಕಡೆ ಇದಕ್ಕೆ ಮಸಾಲೆಗಳ ರೆಡಿ ಮಾಡಿಕೊಳ್ಳಬೇಕು. ಈಗ
ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಬೆಳ್ಳುಳ್ಳಿ, ಗಸೆಗಸೆ, ಹುರಿಗಡಲೆ,
ಶುಂಠಿ, ಕೊತ್ತಂಬರಿ ಕಾಳು, ಕೊತ್ತಂಬರಿ ಸೊಪ್ಪು
ಲವಂಗ, ಚಕ್ಕೆ, ಮರಾಠಿ ಮೊಗ್ಗು, ತೆಂಗಿನ ತುರಿ, ಜೀರಿಗೆ, ಹಸಿ ಮೆಣಸು
ಇದನ್ನೆಲ್ಲಾ ಹಾಕಿ. ನಂತರ ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು.
ನಂತರ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಕಾದ ಬಳಿಕ ಅದಕ್ಕೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಇಂಗು, ಅರಶಿಣ, ಕರಿಬೇವು, ಒಂದು ಈರುಳ್ಳಿ ಹಾಕಿ ಫ್ರೈ ಮಾಡಿ. 1 ನಿಮಿಷ ಬಳಿಕ ಒಂದು ಟೊಮೆಟೋ ಕೂಡ ಇದಕ್ಕೆ ಹಾಕಿ ಮತ್ತೊಂದು ನಿಮಿಷ ಹುರಿದುಕೊಳ್ಳಿ. ಈಗ ಮಿಕ್ಸಿಯಲ್ಲಿ ರುಬ್ಬಿಕೊಂಡಿರುವ ಮಸಾಲೆ ಪದಾರ್ಥಗಳನ್ನು ಈಗ ಬಾಣಲೆಗೆ ಹಾಕಿಕೊಂಡು ಮಿಕ್ಸ್ ಮಾಡಿ.
ಈಗ ಬೇಯಿಸಿಕೊಂಡಿರುವ ಅವರೆ ಕಾಳನ್ನು ಕೂಡ ಇದಕ್ಕೆ ನೀರಿನ ಸಮೇತ ಹಾಕಿಕೊಳ್ಳಿ. ಅವರೆ ಕಾಳು ಕುಕ್ಕರ್ನಲ್ಲಿ ಒಂದು ಸೀಟಿ ಹೊಡೆದರೆ ಸಾಕಾಗುತ್ತದೆ. ನಂತರ ಇದಕ್ಕೆ ಉಪ್ಪು ಹಾಕಿ ನಿಮಗೆ ನೀರು ಬೇಕಾದರೆ ಹಾಕಿಕೊಳ್ಳಿ. ಹಾಗೆ ಕೊತ್ತಂಬರಿ ಸೊಪ್ಪು ಹಾಕಿ 4 ನಿಮಿಷ ಕುದಿಬರಲು ಬಿಡಿ
ಕುದಿಬರು ಆರಂಭಿಸಿದ ಬಳಿಕ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ಅವರೆ ಕಾಳಿನ ಸಾಗು ರೆಡಿಯಾಗುತ್ತದೆ. ಚಪಾತಿ, ದೋಸೆಗಂತು ಅದ್ಭುತವಾದ ರುಚಿ ನೀಡುತ್ತದೆ, ನೀವು ಕೂಡ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
