Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಎಲ್ಲಾ ಅಡುಗೆಗೂ ಎಣ್ಣೆ ಬದನೆಕಾಯಿ ಮಸಾಲ ಸೂಪರ್..! ಮತ್ತೆ ಮತ್ತೆ ಮಾಡಿಸುವ ರುಚಿ..!
ನೀವು ಮನೆಯಲ್ಲಿ ಪಲ್ಯ ಹಾಗೂ ಗೊಜ್ಜುಗಳನ್ನು ಅಡುಗೆಯ ರುಚಿ ಹೆಚ್ಚಿಸಲು ಮಾಡುವ ಅಭ್ಯಾಸ ಇಟ್ಟುಕೊಂಡಿದ್ದರೆ ಎಣ್ಣೆ ಬದನೆಕಾಯಿ ಮಸಾಲ ಒಮ್ಮೆ ಮಾಡಿ ನೋಡಿ. ಬದನೆ ಕಾಯಿಯಲ್ಲಿ ಚಟ್ನಿ, ಗೊಜ್ಜು, ಸಾಂಬಾರ್ ಸಹ ಮಾಡುತ್ತಾರೆ. ಆದರೆ ಎಣ್ಣೆ ಬದನೆಕಾಯಿ ಮಸಾಲ ಮಾತ್ರ ಸಿಕ್ಕಾಪಟ್ಟೆ ರುಚಿಯಾಗಿರುತ್ತೆ.
ಎಣ್ಣೆ ಬದನೆಕಾಯಿ ಮಸಾಲವನ್ನು ನೀವು ರೊಟ್ಟಿ, ಚಪಾತಿ, ದೋಸೆ, ಅನ್ನ, ಚಿತ್ರಾನ್ನ ಹೀಗೆ ಎಲ್ಲಾ ತಿಂಡಿಗಳ ಜೊತೆಯ ಸವಿಯಬಹುದು. ಹೆಚ್ಚಾಗಿ ಇದನ್ನು ಒಣ ತಿಂಡಿಗಳ ಜೊತೆ ಸವಿಯಲು ನೀಡುತ್ತಾರೆ. ಇದರಲ್ಲಿ ಮಸಾಲೆ ಸೇರಿಸುವ ಕಾರಣದಿಂದಾಗಿ ಇದರ ರುಚಿ ಹೆಚ್ಚಾಗುತ್ತದೆ. ನೀವು ಮಾರುಕಟ್ಟೆಯಲ್ಲಿ ಸಿಗುವ ಬದನೆಕಾಯಿಯನ್ನು ಚೆನ್ನಾಗಿ ಆರಿಸಿ ತನ್ನಿ. ಏಕೆಂದರೆ ಎಣ್ಣೆ ಬದನೆಕಾಯಿ ಮಸಾಲ ಮಾಡಲು ಒಳ್ಳೆಯ ಕಾಯಿಗಳ ಅಗತ್ಯವಿದೆ.

ಹಾಗಾದರೆ ನಾವಿಂದು ರೊಟ್ಟಿ, ಚಪಾತಿಗೆ ರುಚಿರುಚಿಯಾದ ಎಣ್ಣೆ ಬದನೆಕಾಯಿ ಮಸಾಲ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಎಣ್ಣೆ ಬದನೆಕಾಯಿ ಮಸಾಲ ಮಾಡಲು ಬೇಕಾಗುವ ಪದಾರ್ಥಗಳೇನು? ಇದನ್ನು ಮಾಡುವುದು ಹೇಗೆ? ಎಣ್ಣೆ ಬದನೆಕಾಯಿ ಪಾಕವಿಧಾನ ಎಲ್ಲವನ್ನೂ ನಾವಿಂದು ತಿಳಿಯೋಣ.
ಎಣ್ಣೆ ಬದನೆಕಾಯಿ ಮಸಾಲ ಮಾಡಲು ಬೇಕಾಗುವ ಪದಾರ್ಥಗಳು
- ಬದನೆಕಾಯಿ-5ರಿಂದ 6
- ಏಲಕ್ಕಿ-2
- ಚಕ್ಕೆ
- ಲವಂಗ-4
- ಶುಂಠಿ
- ಬೆಳ್ಳುಳ್ಳಿ-1
- ತೆಂಗಿನಕಾಯಿ-ಅರ್ಧ ಕಪ್
- ಧನಿಯಾ ಕಾಳು
- ಬಿಳಿ ಎಳ್ಳು
- ಕಡಲೇ ನೀಜ
- ಗಸಗಸೆ
- ಗೋಡಂಬಿ
- ಹಸಿಮೆಣಸು
- ಟೊಮೆಟೊ-2
- ಈರುಳ್ಳಿ-1
- ಖಾರದ ಪುಡಿ
- ಅರಶಿನ ಪುಡಿ
- ಎಣ್ಣೆ
- ಕರಿಬೇವು
- ಸಾಸಿವೆ
ಎಣ್ಣೆ ಬದನೆಕಾಯಿ ಮಸಾಲ ಪಾಕವಿಧಾನ
ಮೊದಲು ಎಣ್ಣೆ ಬದನೆಕಾಯಿಯನ್ನು ಕತ್ತರಿಸಿ ನೀರಿನಲ್ಲಿ ಹಾಕಿ ಅದಕ್ಕೆ ಉಪ್ಪು ಹಾಕಿ ನೆನೆಸಿಡಿ. ಇನ್ನೊಂದು ಕಡೆ ಮಿಕ್ಸರ್ ಜಾರ್ ತೆಗೆದುಕೊಂಡು ಅದಕ್ಕೆ ಬೆಳ್ಳುಳ್ಳಿ, ಚಕ್ಕೆ, ಲವಂಗ, ಶುಂಠಿ, ತೆಂಗಿನಕಾಯಿ, ಧನಿಯಾಕಾಳು, ಬಿಳಿ ಎಳ್ಳು, ಕಡಲೆ ಬೀಜ, ಗಸಗಸೆ, ಏಲಕ್ಕಿ, ಗೋಡಂಬಿ (5-6) ಹಾಕಿಕೊಂಡು ತರಿತರಿಯಾಗಿ ರುಬ್ಬಿಕೊಳ್ಳಿ.
ಬಳಿಕ ಅದಕ್ಕೆ ಈರುಳ್ಳಿ, ಟೊಮೆಟೋ, ಖಾರದ ಪುಡಿ, ಅರಶಿನ ಪುಡಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಈ ಮಸಾಲೆಯನ್ನು ಬದಿಗಿಡಿ. ನಂತರ ಪಾತ್ರಯಲ್ಲಿ ಎಣ್ಣೆ ಹಾಕಿ ಒಲೆ ಮೇಲೆ ಇಟ್ಟು ಎಣ್ಣೆ ಕಾದ ಬಳಿಕ ಅದಕ್ಕೆ ಹೆಚ್ಚಿಕೊಂಡಿರುವ ಬದನೆಕಾಯಿಯನ್ನು ಹಾಕಿಕೊಂಡು ಮಧ್ಯಮ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ ಒಂದೆರಡು ನಿಮಿಷ ಫ್ರೈ ಮಾಡಿದರೆ ಸಾಕಾಗುತ್ತದೆ. ಬಳಿಕ ಬದನೆಕಾಯಿಯನ್ನು ಪಾತ್ರೆಯಿಂದ ತೆಗೆದು ಬದಿಗಿಟ್ಟುಕೊಳ್ಳಿ.
ನಂತರ ಅದೇ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ ಹಾಕಿ, ಬಳಿಕ ರುಬ್ಬಿಕೊಂಡಿರುವ ಮಸಾಲೆಯನ್ನು ಹಾಕಿ. ಬದನೆಕಾಯಿಯೊಳಗೆ ಮಸಾಲೆಯನ್ನು ಹಾಕಬೇಕು ಎಂದೇನಿಲ್ಲ, ಹಾಗೆಯೇ ಮಾಡಬಹುದು. ಪಾತ್ರೆಗೆ ಹಾಕಿದ ಮಸಾಲೆಗೆ ಕರಿಬೇವಿನ ಎಲೆಗಳ ಹಾಕಿ. ಸ್ವಲ್ಪ ನೀರು ಹಾಕಿ ಬಳಿಕ ಹುಣಸೆ ಹುಳಿ ನೀರಿನಲ್ಲಿ ಕರಗಿಸಿ ಹಾಕಿ ಚೆನ್ನಾಗಿ ಫ್ರೈ ಮಾಡಿ, ಸುಮಾರು 6 ನಿಮಿಷ ಫ್ರೈ ಮಾಡಿ. ಬಳಿಕ ಅದಕ್ಕೆ ಫ್ರೈ ಮಾಡಿದ ಬದನೆಕಾಯಿ ಹಾಕಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿ ಮಧ್ಯಮ ಉರಿಯಲ್ಲಿ 5 ನಿಮಿಷದ ವರೆಎಗ ಚೆನ್ನಾಗಿ ಬೇಯಿಸಿ.
ಇಷ್ಟೇ ಈಗ ನಿಮ್ಮ ಮುಂದೆ ಎಣ್ಣೆ ಬದನೆಕಾಯಿ ಮಸಾಲ ಸವಿಯಲು ಸಿದ್ಧವಾಗಿದೆ. ಇದು ಎಲ್ಲಾ ರೀತಿಯ ರೈಸ್ಗೆ, ಚಪಾತಿ, ರೋಟಿ, ಪರೋಟಾಗೂ ರುಚಿ ರುಚಿಯಾಗಿರಲಿದೆ. ಈ ರೆಸಿಪಿ ಮಾಡುವಾಗ ಬದನೆಕಾಯಿಯನ್ನು ಇದೇ ರೀತಿ ಹೆಚ್ಚಿಕೊಳ್ಳಬೇಕು ಎಂಬ ನಿಯಮವಿಲ್ಲ. ಸಾಂಬಾರ್ಗೆ ಹೆಚ್ಚುವಂತೆಯೂ ಹೆಚ್ಚಿಕೊಂಡು ಮಾಡಬಹುದು.



Click it and Unblock the Notifications
